Asianet Suvarna News Asianet Suvarna News

ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಬಳಕೆಗೆ ನಿಷೇಧ ಹೇರಿದ ಕರ್ನಾಟಕ!

ಸ್ಮೋಕಿಂಗ್‌ ಬಿಸ್ಕೆಟ್‌ಗಳು, ಡೆಸಾರ್ಟ್‌ಗಳಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಬಳಕೆಗೆ ಕರ್ನಾಟಕ ಸರ್ಕಾರ ಶುಕ್ರವಾರ ನಿಷೇಧ ಹೇರಿದೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಬೆನ್ನಲ್ಲಿಯೇ ಸರ್ಕಾರ ಈ ಕ್ರಮ ಕೈಗೊಂಡಿದೆ.
 

Karnataka ban liquid nitrogen while serving eatables san
Author
First Published May 31, 2024, 5:16 PM IST

ಬೆಂಗಳೂರು (ಮೇ.31): ಹೊಟೇಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಸ್ಮೋಕಿಂಗ್‌ ಬಿಸ್ಕೆಟ್‌ಗಳು, ಸಿಹಿತಿಂಡಿಗಳು ಮತ್ತು ಇತರ ತಿನ್ನಬಹುದಾದ ಆಹಾರವನ್ನು ನೀಡುವಾಗ ದ್ರವರೂಪದ ಸಾರಜನಕ  ಅಥವಾ ಲಿಕ್ವಿಡ್‌ ನೈಟ್ರೋಜನ್‌ಅನ್ನು ಬಳಕೆ ಮಾಡುವುದಕ್ಕೆ ಕರ್ನಾಟಕ ನಿಷೇಧ ಹೇರಿದೆ. ಲಿಕ್ವಿಡ್‌ ನೈಟ್ರೋಜನ್‌ ಬಳಕೆಯಿಂದ ತೀವ್ರತರವಾದ ಆರೋಗ್ಯ ಸಮಸ್ಯೆಗಳು ಉಂಟಾಗಲಿದೆ. ಆ ಕಾರಣಕ್ಕಾಗಿ ಇದಕ್ಕೆ ನಿಷೇಧ ಹೇರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಆದೇಶವನ್ನು ಉಲ್ಲಂಘಿಸುವವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಅಡಿಯಲ್ಲಿ 10 ಲಕ್ಷ ರೂ.ವರೆಗಿನ ದಂಡದ ಜೊತೆಗೆ ಏಳು ವರ್ಷಗಳ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ಡೈರಿ ಉತ್ಪನ್ನಗಳು ಮತ್ತು ಐಸ್ ಕ್ರೀಮ್‌ಗಳಲ್ಲಿ ಲಿಕ್ವಿಡ್‌ ನೈಟ್ರೋಜನ್‌ಅನ್ನು, ಘನೀಕರಿಸುವ ಮತ್ತು ತಂಪಾಗಿಸುವ ಏಜೆಂಟ್ ಆಗಿ ಬಳಸಲು ಅನುಮತಿ ನೀಡುತ್ತದೆ. ಆದರೆ, ಸ್ಮೋಕಿಂಗ್‌ ಬಿಸ್ಕೆಟ್‌ಗಳು ಮತ್ತು ಸಿಹಿತಿಂಡಿಗಳನ್ನು ನೀಡುವ ವೇಳೆ ಇದನ್ನು ಬಳಸೋದರಿಂದ, ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ.

ಈ ಆಹಾರ ಪದಾರ್ಥಗಳಲ್ಲಿ ದ್ರವರೂಪದ ಸಾರಜನಕವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ತೊಂದರೆಗಳು ಉಂಟಾಗಬಹುದು. ಹೀಗಾಗಿ, ಗ್ರಾಹಕರಿಗೆ ತಿನ್ನಬಹುದಾದ ಪದಾರ್ಥಗಳನ್ನು ನೀಡುವಾಗ ಲಿಕ್ವಿಡ್‌ ನೈಟ್ರೋಜನ್‌ಅನ್ನು ನಿಷೇಧಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದ 12 ವರ್ಷದ ಹುಡುಗಿಯ ಹೊಟ್ಟೆಯಲ್ಲಿ ರಂಧ್ರ!

ಕಳೆದ ತಿಂಗಳು ಮದುವೆಯೊಂದರಲ್ಲಿ ಲಿಕ್ವಿಡ್ ನೈಟ್ರೋಜನ್ (ಸ್ಮೋಕಿ) ಪಾನ್ ತಿಂದ 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ ಇರುವುದು ಪತ್ತೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅದರ ನಂತರ, ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇತ್ತೀಚೆಗಷ್ಟೇ ಈ ಕುರಿತ ವೀಡಿಯೋವೊಂದು ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಅಂತಿಮವಾಗಿ, ರಾಜ್ಯ ಸರ್ಕಾರವು ದ್ರವ ಸಾರಜನಕ (ಸ್ಮೋಕಿ) ಪಾನ್ ಅನ್ನು ನಿಷೇಧಿಸಿತ್ತು.

ಅವಸರದಲ್ಲಿ ಎಣ್ಣೆ ಹೊಡೆದ, ಹೊಟ್ಟೆಯೇ ಹರಿದು ಹೋಯಿತು! ವಾಸ್ತವದಲ್ಲಿ ಆಗಿದ್ದೇನು?

Karnataka ban liquid nitrogen while serving eatables san

Latest Videos
Follow Us:
Download App:
  • android
  • ios