Asianet Suvarna News Asianet Suvarna News

Overcome Laziness: ಸೋಮಾರಿತನ ಹೋಗಲಾಡಿಸುವ ಕೈಝನ್

ಅಂದುಕೊಂಡಿದ್ದು ಗುಡ್ಡದಷ್ಟಿರುತ್ತದೆ. ಆದರೆ, ಕಾರ್ಯಪ್ರವೃತ್ತರಾಗಲು ಅದೇನೋ ಸೋಮಾರಿತನ ಕಾಡುತ್ತದೆ. ಅಂತಹ ಮನಸ್ಥಿತಿ ನಿಮ್ಮದೂ ಆಗಿದ್ದರೆ ಸರಳವಾಗಿ 'ಕೈಝನ್’ ಮೊರೆ ಹೋಗಿ. ಕ್ರಿಯಾಶೀಲರಾಗಲು ಅದರಷ್ಟು ಉತ್ತಮ ಮಾರ್ಗ ಬೇರೊಂದಿಲ್ಲ.
 

Kaizen approach to overcome procrastination
Author
Bangalore, First Published Jan 23, 2022, 4:19 PM IST

ಕೈಗೆತ್ತಿಕೊಂಡಿರುವ ಕೆಲಸ ಕಾರ್ಯಗಳಿಗೆ ಕೆಲವೊಮ್ಮೆ ವೇಗ (Fast) ದೊರೆಯುವುದೇ ಇಲ್ಲ. “ಇಂದು ಮಾಡೋಣ, ನಾಳೆ ಮಾಡೋಣ’ ಎಂದುಕೊಳ್ಳುತ್ತ ದಿನಗಳು ಸರಿಯುತ್ತಿರುತ್ತವೆ. ಬಹಳಷ್ಟು ಬಾರಿ ಅಂದುಕೊಂಡಿದ್ದನ್ನು ಮಾಡಿ ಮುಗಿಸುವ ತಾಳ್ಮೆಯೂ ನಮ್ಮಲ್ಲಿರುವುದಿಲ್ಲ. ಆ ಕೆಲಸದ ಬದಲು ಇನ್ನೇನನ್ನೋ ಸಾರ್ಥಕ ಕೆಲಸ ಮಾಡಿರುತ್ತೇವೆ ಎಂದಲ್ಲ. ಆದರೆ, ಏನೋ ಒಂದು ರೀತಿಯ ಸೋಮಾರಿತನ (Lazinss) ಆವರಿಸಿಕೊಂಡು ಚುರುಕಾಗಿ ಕಾರ್ಯ ನಡೆಸದಂತೆ ಕೈಕಟ್ಟಿ ಹಾಕಿಬಿಡುತ್ತದೆ. 
ಹೌದು, ನಾವೆಲ್ಲರೂ ಗುರಿಗಳನ್ನು ಹೊಂದಿರುತ್ತೇವೆ. ಈ ವಾರದಲ್ಲಿ ಇಷ್ಟು ಕೆಲಸ (Work) ಮುಗಿಸಿಬಿಡಬೇಕು ಎಂದುಕೊಳ್ಳುತ್ತೇವೆ. ಆದರೆ, ಅದು ನಮ್ಮದೇ ಜಡ್ಡುಗಟ್ಟಿದ ಮನಸ್ಸಿನಿಂದಾಗಿ ಸಾಧ್ಯವಾಗುವುದಿಲ್ಲ. ಇದು ಕೇವಲ ನಮ್ಮಲ್ಲೊಂದೇ ನಡೆಯುತ್ತದೆ ಎಂದುಕೊಳ್ಳಬೇಡಿ. ಪ್ರಪಂಚದಾದ್ಯಂತ ಇರುವ ಎಲ್ಲ ಮನುಷ್ಯರಲ್ಲೂ ಇಂಥದ್ದೊಂದು ಮನಸ್ಥಿತಿ ಇರುತ್ತದೆ. ಆದರೆ, ಕೆಲವರು ಮಾತ್ರ ಅದಕ್ಕೆ ಕ್ರಿಯಾಶೀಲವಾಗಿರುವ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. 

ತಮ್ಮನ್ನು ಆವರಿಸಿಕೊಳ್ಳುವ ಸೋಮಾರಿತನವನ್ನು ಹೊಡೆದೋಡಿಸಲು ಜಪಾನೀಯರು (Japan People) ಅನುಸರಿಸುವ ಮಾರ್ಗ ಈ ನಿಟ್ಟಿನಲ್ಲಿ ಎಲ್ಲರಿಗೂ ಮಾರ್ಗದರ್ಶಕವಾಗಬಲ್ಲದು. ಹೌದು, ಹೇಳಿಕೇಳಿ ಜಪಾನೀಯರು ಕಷ್ಟಸಹಿಷ್ಣುಗಳು. ಅಪಾರ ದುಡಿಮೆಗೆ ಮತ್ತೊಂದು ಹೆಸರೇ ಜಪಾನ್ ಜನ. ಅಂಥವರು ಸೋಮಾರಿಗಳಾಗಿ ಕುಳಿತುಕೊಳ್ಳಲು ಸಾಧ್ಯವೇ. ಇಲ್ಲ. ಆದರೂ ಮನುಷ್ಯನಲ್ಲಿ ಯಾವಾಗಲಾದರೂ ಸೋಮಾರಿತನ ಆವರಿಸುವುದು ಸಾಮಾನ್ಯ. ಅಂತಹ ಸಮಯದಲ್ಲಿ ಅವರು “ಕೈಝನ್’ (Kaizan) ಎನ್ನುವ ತಂತ್ರವೊಂದನ್ನು ಅನುಸರಿಸುತ್ತಾರೆ. ಕೈಗೆತ್ತಿಕೊಂಡಿರುವ ಯಾವುದೇ ಕಾರ್ಯವನ್ನು ಉತ್ಸಾಹದಿಂದ ಮಾಡಿ ಮುಗಿಸಲು ಅನುಕೂಲವಾಗುವ ಪದ್ಧತಿಯೇ “ಕೈಝನ್’. 

ಏನಿದು ಜಪಾನ್ ತಂತ್ರ (Technique) ?
ಕೈಝನ್ ಎಂದರೆ, ಒಂದು ನಿಮಿಷದ ತತ್ವ (Principle). ಸ್ವಯಂ ಸುಧಾರಣೆಗಾಗಿ, ಮನಸ್ಸು ಹಾಗೂ ದೇಹದ ಜಾಢ್ಯ ತೊಲಗಿಸಲು, ಮತ್ತೆ ಕಾರ್ಯಪ್ರವೃತ್ತರಾಗಲು  ಜಪಾನೀಯರು ಇದನ್ನು ಅನುಸರಿಸುತ್ತಾರೆ. ಇದರ ಪ್ರಕಾರ, ಪ್ರತಿದಿನ ನಿಗದಿತ ಸಮಯಕ್ಕೆ ಒಂದು ನಿಮಿಷ (One Minute) ಅವರು ಯಾವುದಾದರೊಂದು ನಿರ್ದಿಷ್ಟ ಕೆಲಸಕ್ಕೆ ಬದ್ಧ(Dedicate)ರಾಗಿರುತ್ತಾರೆ. ಆ ಸಮಯದಲ್ಲಿ ಅವರು ಅದನ್ನು ಮಾಡಲೇಬೇಕು. ಇಲ್ಲಿ ಕೈ (Kai) ಎಂದರೆ, ಬದಲಾವಣೆ, ಝೆನ್ (Zen) ಎಂದರೆ ಬುದ್ಧಿವಂತಿಕೆ. ಜಪಾನ್ ದೇಶದ ಮ್ಯಾನೇಜ್ ಮೆಂಟ್ ಸಲಹೆಗಾರ ಮಸಾಕಿ ಇಮಾಯ್ (Masaaki Imai) ಎನ್ನುವವರು ಈ ತಂತ್ರವನ್ನು ಆರಂಭಿಸಿದ್ದರು. 

Attraction Theory: ಇಬ್ಬರ ನಡುವೆ ಆಕರ್ಷಣೆ ಹುಟ್ಟೋಕೆ ಇಷ್ಟೆಲ್ಲ ಕಾರಣಗಳು ಬೇಕು..

ನಿಮ್ಮ ಜೀವನದ ಒಂದೇ ಒಂದು ನಿಮಿಷವನ್ನು ಪ್ರತಿದಿನ ಬೇಡುವ ಸರಳ ತಂತ್ರಗಾರಿಕೆ ಇದು. ಉದಾಹರಣೆಗೆ, ನೀವು ಒಂದು ಪುಸ್ತಕವನ್ನು ಓದಬೇಕೆಂದುಕೊಂಡಿದ್ದರೆ ದಿನದ ನಿಗದಿತ ಒಂದು ನಿಮಿಷ ಇದಕ್ಕಾಗಿ ಮೀಸಲಿಡಬೇಕು. ದಿನವೂ ಅದೇ ಸಮಯಕ್ಕೆ ಆ ಕೆಲಸ ಮಾಡಬೇಕು. ಯಾವುದೇ ಸ್ಥಿತಿಯಲ್ಲೂ ಅದನ್ನು ಮಾಡಿ ಮುಗಿಸಬೇಕು. ಆಗ ಸೋಮಾರಿತನ ಎನ್ನುವುದು ಕಾಡುವುದಿಲ್ಲ. ಒಂದೊಮ್ಮೆ ಸೋಮಾರಿತನವಿದ್ದರೂ ಆ ಕೆಲಸವನ್ನು ಮಾಡಿ ಮುಗಿಸುವ ಇರಾದೆಯಲ್ಲಿ ಅದನ್ನು ಮೆಟ್ಟಿ ನಿಲ್ಲಲೇಬೇಕಾಗುತ್ತದೆ. ಸಣ್ಣದಾದರೂ ಸರಿ, ಆ ಅವಧಿಗೆ ನಿಮ್ಮನ್ನು ಕಟ್ಟಿಹಾಕುವ ತಂತ್ರ ಇದು. ಹೀಗೆಯೇ ಹಲವಾರು ಚಟುವಟಿಕೆಗಳಿಗೆ ಪ್ರತಿದಿನ ನಿಮ್ಮನ್ನು ನೀವು ಒಗ್ಗಿಸಿಕೊಳ್ಳಬೇಕು. ಕ್ರಮೇಣ ಸೋಮಾರಿತನ ಎನ್ನುವುದು ಮಾಯವಾಗಿ, ಅತ್ಯಂತ ಕ್ರಿಯಾಶೀಲ(Active)ರಾಗಲು ಇದು ಸಹಕಾರಿಯಾಗುತ್ತದೆ.

Sleep Tips: ನೀವೆಷ್ಟು ಗಂಟೆ ನಿದ್ದೆ ಮಾಡಬೇಕು ಅಂದ್ರೆ..

ಕೈಝನ್ ಪ್ರಕಾರ, ಯಾವುದೋ ಕೆಲಸ ಮುಗಿಸಲು ನೀವು ಏಕಾಏಕಿ ಗಡಿಬಿಡಿ ಮಾಡಬೇಕಿಲ್ಲ. ಗಾಭರಿಯಾಗಬೇಕಿಲ್ಲ. ಇಡೀ ದಿನದಲ್ಲಿ ಕೇವಲ ಒಂದು ನಿಮಿಷ ಇದಕ್ಕಾಗಿ ಮೀಸಲಿಟ್ಟರೆ ಸಾಕು. ಒಮ್ಮೆ ನೀವು ಈ ಪದ್ಧತಿಗೆ ಬದ್ಧರಾದರೋ ನೀವು ಕ್ರಮೇಣ ಸಮಯ(Time)ಕ್ಕೆ ಬೆಲೆ (Value) ನೀಡುವುದನ್ನು ಕಲಿಯುತ್ತೀರಿ. ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗುತ್ತೀರಿ, ಸಮಯದ ಮಿತಿಯನ್ನೂ ಅರಿಯುತ್ತೀರಿ. ಇಷ್ಟಾದರೆ ಸಾಕು, ವ್ಯಕ್ತಿಯೊಬ್ಬ ಕಾರ್ಯಪ್ರವೃತ್ತರಾಗಲು. 
ಯಾವುದೇ ವ್ಯಕ್ತಿ, ಯಾವುದೇ ವಯಸ್ಸಿನಲ್ಲಿ ಈ ತಂತ್ರವನ್ನು ಅಳವಡಿಸಿಕೊಳ್ಳಬಹುದು. ನಿಮ್ಮ ಗುರಿಯೇನು, ನೀವು ಸಾಧಿಸಬೇಕಾಗಿರುವುದೇನು ಎನ್ನುವುದು ಗಮನದಲ್ಲಿರಬೇಕಷ್ಟೆ. 

Follow Us:
Download App:
  • android
  • ios