Asianet Suvarna News Asianet Suvarna News

ಮಕ್ಕಳು ಫೈನ್ ಆ್ಯಂಡ್ ಫಿಟ್ ಆಗಿರಲು upUgo

ಈಗೀಗ ಮಕ್ಕಳ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎಳೆ ಮಕ್ಕಳು ದೈಹಿಕವಾಗಿ ಸದೃಢವಾಗುವಂಥ ಕಾರ್ಯಕ್ರಮಗಳನ್ನು upUgo ಎಂಬ ಸಂಸ್ಥೆ ರೂಪಿಸಿದ್ದು, ಮುಂದಿನ ಜನಾಂಗದ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಒತ್ತು ನೀಡುತ್ತಿದೆ. 

It is time to be fit and fine simple solution is upUgo
Author
Bengaluru, First Published Aug 20, 2020, 1:14 PM IST

ಈಗ ಮಕ್ಕಳೂ ಫಿಟ್‌ನೆಸ್ ಕಡೆ ಗಮನ ಹರಿಸುವುದು ಅನಿವಾರ್ಯವಾಗಿದೆ. ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಒತ್ತು ನೀಡುವಂತೆ ಅಂತಾರಾಷ್ಟ್ರೀಯ ಅಥ್ಲೀಟ್ಸ್, ಫಿಟ್‌ನೆಸ್ ಉತ್ಸಾಹಿಗಳು ಮತ್ತು ಕೆಲವು ಸಮಾನ ಮನಸ್ಕರು ಸೇರಿ ಮಕ್ಕಳಿಗೆ ಕೈಗೆಟುಕುವ ದರದಲ್ಲಿ ಆಟದ ಮೂಲದ ಫಿಟ್‌ನೆಸ್ ಸಾಧಿಸಲು ಅನುವಾಗುವಂಥ ಹೊಸದೊಂದು ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. 

ಬೆಂಗಳೂರಿನಲ್ಲಿ ಜೂನ್ 2019ರಂದು ಆರಂಭವಾದ upUgo ಎಲ್ಲ ವಯಸ್ಸಿನ ಮಕ್ಕಳ ಫಿಟ್‌ನೆಸ್, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಿ, ಅವರನ್ನು ದೈಹಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದೆ. 'ಮಕ್ಕಳು ಅಗತ್ಯದಷ್ಟು ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ. ಕೆಲವು ಕ್ರೀಡಾ ಕೆಂದ್ರಗಳು ಎಲ್ಲ ವರ್ಗದ ಮಕ್ಕಳಿಗೆ ಕೈಗೆಟಕುವ ದರದಲ್ಲಿ ಲಭ್ಯವಿಲ್ಲ. ಅಲ್ಲದೇ ಮಕ್ಕಳ ದೈಹಿಕ ಬೆಳವಣಿಗೆಗೆ ಅನುಗುಣವಾಗುವಂತೆ ತರಬೇತು ನೀಡಲು ಸೂಕ್ತ ವೃತ್ತಿಪರರು ಮತ್ತು ಅಗತ್ಯ ಕಾರ್ಯಕ್ರಮಗಳ ಕೊರತೆ ಎದ್ದು ಕಾಣುತ್ತಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ತಂತ್ರಜ್ಞಾನದ ಸಹಾಯದಿಂದ ಮುಂದಿನ ಜನಾಂಗದ ಮೇಲೆ ಅತ್ಯುತ್ತಮ ಪರಿಣಾಮ ಬೀರುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾದೆವು. ಭಾರತದಲ್ಲಿ ಕ್ರೀಡೆಗೆ ಅಸಮರ್ಪಕ ವಾತವರಣ, ಆಧುನಿಕ ಜೀವನಶೈಲಿಯಿಂದ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವಂತಾಗಿದೆ. ಅದಕ್ಕೆ ಇದುವರೆಗಿಂತ  ದೈಹಿಕ ಚಟುವಟಿಕೆಗಳ ಮೇಲೆ ಮಕ್ಕಳು ಹೆಚ್ಚು ಒತ್ತು ನೀಡುವ ಅಗತ್ಯವಿದೆ. ವಯಸ್ಕರಿಗಿರುವಂತೆ ಒಂದೇ ರೀತಿಯ ವಿಧಾನವನ್ನು ಮಕ್ಕಳಿಗೆ ಪ್ರಯೋಗಿಸಲು ಸಾಧ್ಯವಿಲ್ಲ. ಅದರಿಂದ ಎಳೆ ವಯಸ್ಸಿನವರ ಬೆಳವಣಿಗೆಗೆ ಪೂರಕವಾಗುವಂಥ ಕಾರ್ಯಕ್ಕೆ ಮುನ್ನಡಿ ಇಟ್ಟಿದ್ದೇವೆ,' ಎನ್ನುತ್ತಾರೆ upUgo ಸಿಇಒ ಅಮಿತ್ ಗುಪ್ತಾ. 

ಮೊದಲ ಹಂತದಲ್ಲಿ ಸಂಸ್ಥೆ ಬಿ2ಸಿ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸಿದ್ದು, ಶಾಲೆಗಳಿಗೆ (ಸರಕಾರಿ ಹಾಗೂ ಖಾಸಗಿ ಶಾಲೆಗಳೆರಡಕ್ಕೂ) ಸೇವೆ ನೀಡುತ್ತಿದೆ. ಬೆಂಗಳೂರಿನ ಸುಮಾರು 30ಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಎಲ್ಲ ಫಿಟ್‌ನೆಸ್ ಸೆಂಟರ್‌ನಂತೆ ಕೊರೋನಾ ವೈರಸ್ ಸೋಂಕು upUgo ಕಾರ್ಯಕ್ರಮಗಳಿಗೂ ಕುತ್ತು ತಂದಿದೆ.  upUgo ತನ್ನ ಕಾರ್ಯಕ್ರಮಗಳನ್ನು ದೇಶಾದ್ಯಂತ ವಿಸ್ತಿರಿಕೊಳ್ಳಲು ಇದೊಳ್ಳೆ ಸಮಯವಾಗಿತ್ತು. 'ಹೈದರಾಬಾದ್, ಇಂದೋರ್, ಕಾನ್ಪುರ್, ದಿಲ್ಲಿ-ಎನ್‌ಸಿಆರ್, ಪುಣೆ ಗ್ರಾಹಕರು ಹಾಗೂ ಹಲವು ಕಂಪನಿಗಳು ನಮ್ಮ ಸಂಸ್ಥೆಯ ಸೇವೆಯನ್ನು ಪಡೆದುಕೊಳ್ಳುವ ನಂಬಿಕೆ ಇದೆ,' ಎನ್ನುತ್ತಾರೆ ಚೀಫ್ ಪ್ರೊಡಕ್ಟ್ ಆಫೀಸರ್ ವಿನೋದ್ ಕುಮಾರ್.

ವೈಜ್ಞಾನಿಕ ಪಠ್ಯ:
ಮಕ್ಕಳ ವಯಸ್ಸಿಗನುಗುಣವಾಗಿ, ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿದ ಕಾರ್ಯಕ್ರಮಗಳು ಹಾಗೂ ಅಂತಾರಾಷ್ಟ್ರೀಯ ಪಠ್ಯಕ್ರಮದ ಅನುಗುಣವಾಗಿ ಕ್ರೀಡೆ ಹಾಗೂ ಇತರೆ ದೈಹಿಕ ಚಟುವಟಿಕೆಗಳಿಗೆ ಈ ಸಂಸ್ಥೆಯಲ್ಲಿ ಒತ್ತು ನೀಡಲಾಗುತ್ತದೆ. ಫಿಟ್‌ನೆಸ್, ಕ್ರೀಡೆ, ಪೌಷ್ಠಿಕ ಆಹಾರ, ಯೋಗ ಮತ್ತು ಮನಸ್ಸಿಗೆ ಸಂಬಂಧಿಸಿದ ತರಬೇತಿಗಳನ್ನು ಈ ಸಂಸ್ಥೆಯಲ್ಲಿ ಆಯಾ ಕ್ಷೇತ್ರಗಳ ಪರಿಣತಿ ಸಾಧಿಸಿದವರಿಂದಲೇ ನೀಡಲಾಗುತ್ತದೆ. ದೇಶದ ಯಾವುದೇ ಮೂಲೆಯಲ್ಲಿರುವ ಮಕ್ಕಳು ಈ ದೈಹಿಕ, ಡಿಜಿಟಲ್ ಮತ್ತು  ಹೈಬ್ರಿಡ್ ಮಾಡೆಲ್‌ನ ಉಪಯೋಗ ಪಡೆದುಕೊಳ್ಳಬಹುದು. ಬೇರೆಡೆ ಮಕ್ಕಳಿಗೆ ನೀಡುವ ಫಿಟ್‌ನೆಸ್ ಕಾರ್ಯಕ್ರಮಗಳಿಗಿಂತಲೂ ವಿಭಿನ್ನವಾಗಿ upUgo ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.

ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುವ ಹಾಗೂ ಸೇವೆಯನ್ನು ಸುಲಭವಾಗಿ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ upUgo ಇತ್ತೀಚೆಗೆ ಮೊಬೈಲ್ ಆ್ಯಪ್ ರೂಪಿಸಿದ್ದು, ಇದು ಗೂಗಲ್ ಪ್ಲೇ ಹಾಗೂ ಆ್ಯಪಲ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಮೊದಲ ಹಂತದಲ್ಲಿ ಕ್ರಿಕೆಟ್ ಹಾಗೂ ಫುಟ್‌ಬಾಲ್ ತರಬೇತಿಯೊಂದಿಗೆ upUgo ಹೊಸ ಹೊಸ ಕಾರ್ಯಕ್ರಮಗಳನ್ನು ಆರಂಭಿಸಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕ್ರೀಡಾಳುಗಳಿಂದ ಈ ತರಬೇತಿ ನೀಡಲಾಗುತ್ತಿದೆ.

It is time to be fit and fine simple solution is upUgo

ಸದೃಢ ಭಾರತದ ನಿರ್ಮಾಣಕ್ಕಾಗಿ ಹಾಗೂ ಮಕ್ಕಳನ್ನು ದೈಹಿಕವಾಗಿ ಸದೃಢವಾಗಿಸಲು, upUgo ತನ್ನ ಕಾರ್ಯಕ್ರಮಗಳಿಗೆ ವರ್ಚ್ಯೂಯಲ್ ರೂಪ ನೀಡುತ್ತಿದ್ದು, ತಂತ್ರಜ್ಞಾನವನ್ನು ಬಳಸಿ ಫಿಟ್‌ನೆಸ್ ಹಾಗೂ ಕ್ರೀಡೆ ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗುವಂತೆ ಮಾಡಲು ಮುಂದಾಗಿದೆ. ಮಕ್ಕಳ ಫಿಟ್‌ನೆಸ್ ಸುಧಾರಿಸಿ, ಆರೋಗ್ಯವಂತರಾಗಿಸುವ ನಿಟ್ಟಿನಲ್ಲಿ upUgoಗೆ ಒಂದು ಅವಕಾಶ ನೀಡಿ. 

ಏನಂತಾರೆ ಪೋಷಕರು?
'ಈ ಕ್ಲಾಸಿಗೆ ಸೇರಿದ 15 ದಿನಗಳಲ್ಲಿಯೇ ನನ್ನ ಮಗನಲ್ಲಿ ಆಗಿರುವ ಮಹತ್ವದ ಬದಲಾವಣೆಗಳು ನನ್ನ ಗಮನಕ್ಕೆ ಬಂದಿದೆ. ಅವನ ಶಕ್ತಿ ಹೆಚ್ಚಾಗಿದೆ. ಪ್ರತಿಯೊಂದೂ ತರಗತಿಯಲ್ಲಿ ಪಾಲ್ಗೊಳ್ಳಲು ಅವನು ಅತ್ಯಂತ ಉತ್ಸುಕನಾಗಿರುತ್ತಾನೆ,' ಎಂದು ಲಾಕ್‌ಡೌನ್ ಸಮಯದಲ್ಲಿ upUgo ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳುತ್ತಿರುವ 10 ವರ್ಷದ ಮಗನ ತಾಯಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಮಕ್ಕಳ ಸಹಿಷ್ಣುತೆ ನಮ್ಯತೆ ಮತ್ತು ಶಕ್ತಿಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ತರಬೇತುದಾರರು ಮಕ್ಕಳಿಗೆ ಪ್ರತಿಯೊಂದೂ ಕ್ಷಣವನ್ನೂ ಆಸಕ್ತಿದಾಯಕವಾಗಿರುವಂತೆ ಮಾಡುತ್ತಿದ್ದಾರೆ, ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುತ್ತಾರೆ, ' ಎಂದು ಹೇಳುತ್ತಾರೆ ಸಂಸ್ಥೆಯ ಉಪಯೋಗ ಪಡೆಯುತ್ತಿರುವ ಎರಡು ಎಳೆ ಮಕ್ಕಳ ತಾಯಿ.  

Follow Us:
Download App:
  • android
  • ios