ಅಮೀರ್‌ ಖಾನ್‌ ಮಗಳು ಐರಾ ಖಾನ್‌ಗೂ ಕ್ಲಿನಿಕಲ್ ಡಿಪ್ರೆಶನ್‌ ಕಾಡಿತ್ತಂತೆ. ಮಾನಸಿಕ ಆರೋಗ್ಯದ ದಿನವೆನಿಸಿದ ಅಕ್ಟೋಬರ್‌ ಹತ್ತರಂದು ಅವಳು ತನ್ನ ಕತೆಯನ್ನು ಇನ್‌ಸ್ಟಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.

ನಾನು ಐರಾ. ಅಮೀರ್‌ ಖಾನ್‌ ಮಗಳು. ನಾನೂ ಮಾನಸಿಕ ಡಿಪ್ರೆಶನ್ ಕಾಯಿಲೆ ಹೊಂದಿದ್ದೆ. ಕಳೆದ ನಾಲ್ಕು ವರ್ಷಗಳಿಂದ ಇದರಿಂದ ಪೀಡಿತಳಾಗಿದ್ದೆ. ಡಾಕ್ಟರ್ ಬಳಿ ಹೋಗಿ ಸಲಹೆ ಮತ್ತು ಔಷಧ ಪಡೀತಾ ಇದೇನೆ. ಕಳೆದ ಒಂದು ವರ್ಷದಿಂದ ನನ್ನ ಆರೋಗ್ಯ ಸ್ಥಿತಿ ಪರವಾಗಿಲ್ಲ. ನನ್ನಂತೆಯೇ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರಿಗಾಗಿ ಏನಾದರೂ ಮಾಡಬೇಕು ಎಂಬ ಆಸೆಯಿದೆ.

ಈ ಕಾಯಿಲೆಯ ಕುರಿತ ವಿಚಾರದಲ್ಲಿ ನಿಮ್ಮನ್ನೂ ನನ್ನ ಜೊತೆಗೇ ಒಂದು ಪ್ರಯಾಣದಲ್ಲಿ ಕೊಂಡೊಯ್ಯಲು ನಾನು ನಿರ್ಧರಿಸಿದ್ದೇನೆ. ಅದರ ಮೂಲಕ ನಾವು ಖಿನ್ನತೆಯನ್ನು ಇನ್ನಷ್ಟು ಅರ್ಥ ಮಾಡಿಕೋಬಹುದು. ನನಗೆ ಎಷ್ಟೊಂದು ವಿಷಯಗಳು ಹೇಳೋದಿದೆ. ಎಲ್ಲಿಂಧ ಆರಂಭಿಸಲಿ ಮತ್ತು ಯಾಕೆ ಹೇಳಲಿ ಅಂತಾನೇ ಗೊತ್ತಾಗ್ತಿಲ್ಲ.

ನಟನೆಯಲ್ಲ, ಭಿನ್ನ ಉದ್ಯೋಗ ಆರಿಸ್ಕೊಂಡ ಅಮೀರ್ ಖಾನ್ ಮಗಳು

ನನಗೇಕೆ ಖಿನ್ನತೆ ಕಾಡಿತು? ಖಿನ್ನತೆಯತ್ತ ಜಾರೋಕೆ ನನಗೆ ಸಮಸ್ಯೆಯಾದರೂ ಏನಿದೆ? ನನಗೆ ಲೈಫಿನಲ್ಲಿ ಎಲ್ಲಾ ಇದೆ, ಹೌದು ತಾನೆ? ಮತ್ತೇಕೆ ಈ ಡಿಪ್ರೆಶನ್? ಖಿನ್ನತೆಯ ಬಗ್ಗೆ ಎಷ್ಟೊಂದು ನಡೀತಿದೆ. ಎಷ್ಟೊಂದು ಮಂದಿ ತಮ್ಮ ಕತೆಗಳನ್ನು ಹೇಳ್ಕೋತಾ ಇದಾರೆ. ಎಲ್ಲವೂ ಓಕೆ ಮತ್ತು ನಾಟ್ ಓಕೆ. ಏಕಕಾಲಕ್ಕೆ ಹ್ಯಾಪಿನೆಸ್‌ ಮತ್ತು ಡಿಪ್ರೆಶನ್‌, ಒತ್ತಡಯುಕ್ತ ಮತ್ತು ಗೊಂದಲಕಾರಿ. ಎಲ್ಲವೂ. ಲೈಫೂ ಹಾಗೇ. ಇದೆಲ್ಲವನ್ನೂ ಒಂದೇ ಸಲ ಹೇಳಿಬಿಡೋಕೆ ಸಾಧ್ಯಾನೇ ಇಲ್ಲ. ಬನ್ನಿ ನಂಜೊತೆ. ನನಗೆ ಎಲ್ಲಿಂದ ಅದು ಶುರುವಾಯ್ತು ಅನ್ನೋದನ್ನು ಹೇಳ್ತಾ ನಿಮಗೂ ಅದು ಅರ್ಥ ಆಗಬಹುದು, ನಾನೂ ಇನ್ನಷ್ಟು ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀನಿ.

ಐರಾ ಇಷ್ಟನ್ನು ಹೇಳಿದ್ದಾಳೆ. ಹೇಳಿದ್ದಕ್ಕಿಂತಲೂ ಆಕೆ ಹೇಳದೆ ಉಳಿಸಿದ್ದೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ತಾನು ಎಲ್ಲವನ್ನೂ ಹೇಳುವವಳಿದ್ದೇನೆ ಎಂದು ಹೇಳಿದ್ದಾಳೆ. ಆಕೆಯ ಬದುಕಿನಲ್ಲಿ ಡಿಪ್ರೆಶನ್‌ಗೆ ಕಾರಣ ಆಗುವಂಥದ್ದು ಏನಾದರೂ ಆಯಿತೇ? ಆಕೆ ಹೇಳಿಲ್ಲ. ನಿಗೂಢವಾಗಿಯೇ ಉಳಿಸಿದ್ದಾಳೆ. ಬಹುಶಃ ಮುಂದಿನ ಎಪಿಸೋಡ್‌ಗಳಲ್ಲಿ ಹೇಳಬಹುದು. ಆದರೆ ಡಿಪ್ರೆಶನ್‌ಗೆ ಇಂಥದ್ದೇ ಎಂಬ ನಿಖರ ಕಾರಣಗಳಿರಬೇಕು ಎಂದೇನೂ ಇಲ್ಲ, ಮೇಲ್ನೋಟಕ್ಕೆ ಕಾಣದ ಕಾರಣಗಳ ಮೂಲಕ ಅದು ಟ್ರಿಗರ್ ಆದರೂ ಆಗಬಹುದು.

ಮಲ ತಾಯಿ‌ ಗಿಫ್ಟ್‌ ಕೊಟ್ಟ ಸೀರೆ ಉಟ್ಟು ಫೊಸ್‌ ಕೊಟ್ಟ ಆಮೀರ್‌ ಮಗಳು ಈರಾ 

ಐರಾ ಖಾನ್, ಅಮೀರ್‌ ಖಾನ್‌ ಅವರ ಮೊದಲ ದಾಂಪತ್ಯದ ಫಲ. ಅಮೀರ್‌- ರೀನಾ ಅವರ ಮಗಳು. ಈಕೆಯ ಅಣ್ಣ ಜುನೈದ್ ಖಾನ್, ಅಪ್ಪ ಅಮೀರ್‌ಗೆ ಕೆಲವು ಫಿಲಂ ಮೇಕಿಂಗ್‌ನಲ್ಲಿ ಸಹಾಯ ಮಾಡುತ್ತಾನೆ. ಮಗಳು ಐರಾ, ತನ್ನದೇ ಆದ ಫಿಲಂಗಳನ್ನು ಡೈರೆಕ್ಟ್ ಮಾಡಲು ಮುಂದಾಗಿದ್ದಾಳೆ. ಯೂರಿಪಿಡಿಸ್‌ನ ಮೀಡಿಯಾ ಕೃತಿಯನ್ನು ತೆರೆಗೆ ಇಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ನಟನ ಮಗಳಾದರೂ ನಟನೆಯ ಬದಲು ನಿರ್ದೇಶನದಲ್ಲಿ ಆಸಕ್ತಿ, ಹಾಗೆ ನೋಡಿದರೆ ಬಾಲಿವುಡ್‌ನ ಯಾವುದೇ ಇತರ ನಟಿಯರಿಗಿಂತ ಚೆಲುವೆಯಾಗಿರುವ ಐರಾ, ನಟನೆಯ ಬಗ್ಗೆ ಅಂಥ ಆಸಕ್ತಿಯನ್ನೇನೂ ಇಟ್ಟುಕೊಂಡಿಲ್ಲ. ಈಕೆಯ ಇನ್‌ಸ್ಟಗ್ರಾಮ್‌ ಖಾತೆಯನ್ನು ನೋಡಿದರೆ, ಈಕೆ ಬಹಳ ಚೆನ್ನಾಗಿ ಫಿಗರ್‌ ಮತ್ತು ಬಾಡಿಯ ಸೌಷ್ಟವ ಮೇಂಟೇನ್‌ ಮಾಡಿರುವುದು ಗೊತ್ತಾಗುತ್ತದೆ. ತನ್ನ ವರ್ಕೌಟ್‌ ಹಾಗೂ ಯೋಗಾಭ್ಯಾಸದ ಫೋಟೋ ವಿಡಿಯೋಗಳನ್ನು ಅದರಲ್ಲಿ ಹಾಕುತ್ತಿರುತ್ತಾಳೆ.

ಮಗಳ ಜತೆ ಬಂದು ಅಮಿರ್ ಖಾನ್ ಕೊಟ್ಟ ಲಾಕ್ ಡೌನ್ ಸರ್ಪ್ರೈಸ್ 

ದೊಡ್ಡ ತಾರೆಯರ ಮಕ್ಕಳಿಗೆ ಡಿಪ್ರೆಶನ್ ಕಾಡುವ ಪ್ರಕರಣಗಳಿವೆ. ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್‌ ಪಡುಕೋಣೆ ಅವರ ಮಗಳು ದೀಪಿಕಾ ಪಡುಕೋಣೆಗೆ ಡಿಪ್ರೆಶನ್ ಇತ್ತು. ಪ್ರಮೋದ್ ಮಹಾಜನ್ ಅವರ ಪುತ್ರನಿಗೂ ಡಿಪ್ರೆಶನ್‌ ಇತ್ತು. ಕೆಲವೊಮ್ಮೆ ಜನಪ್ರಿಯತೆ, ಒತ್ತಡಗಳನ್ನು ತಾಳಲಾಗದೆ ಖಿನ್ನತೆ ಅಟಕಾಯಿಸಿಕೊಳ್ಳುವುದೂ ಇದೆ.