Asianet Suvarna News Asianet Suvarna News

International Nurses Day 2022: ದಾದಿಯರ ದಿನದ ಇತಿಹಾಸ ಹಾಗೂ ಮಹತ್ವ ತಿಳಿಯಿರಿ

ಪ್ರಪಂಚದಾದ್ಯಂತ 2022ರ ಮೇ 12ರ ಈ ದಿನವನ್ನು ಅಂತರಾಷ್ಟ್ರೀಯ ದಾದಿಯರ ದಿನ (International Nurses Day)ವನ್ನಾಗಿ ಆಚರಿಸಲಾಗುತ್ತದೆ. ದಾದಿಯರ ಮಾನವೀಯತೆಯ ಸೇವೆಯನ್ನು ಗುರುತಿಸುವ ಹಾಗೂ ಗೌರವಿಸುವ (Respect) ಉದ್ದೇಶದಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.  ಈ ದಿನದ ಇತಿಹಾಸ (History0, ಮಹತ್ವದ (Importance) ಬಗ್ಗೆ ತಿಳಿಯೋಣ.

International Nurses Day Is Celebrated On Florence Nightingales Birth Anniversary Vin
Author
Bengaluru, First Published May 12, 2022, 3:07 PM IST | Last Updated May 12, 2022, 3:11 PM IST

ದಾದಿಯರನ್ನು ಗೌರವಿಸಲು ಮತ್ತು ಸಮಾಜಕ್ಕೆ ಅವರ ಅಸಾಧಾರಣ ಕೊಡುಗೆಯನ್ನು ಪ್ರಶಂಸಿಸಲು ಮೇ 12ರಂದು ಅಂತರರಾಷ್ಟ್ರೀಯ ದಾದಿಯರ ದಿನ (International Nurses Day)ವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ವಲಯದಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. 2020 ರಿಂದ ಸಾಂಕ್ರಾಮಿಕ ರೋಗದ ಮುಂಚೂಣಿಯಲ್ಲಿ ಹೋರಾಡುತ್ತಿರುವ ನಿರ್ಣಾಯಕ ಕೋವಿಡ್ (covid) ಯೋಧರಾಗಿದ್ದಾರೆ. ಆಧುನಿಕ ಶುಶ್ರೂಷೆಯ ಸಂಸ್ಥಾಪಕರಾದ ಫ್ಲಾರೆನ್ಸ್ ನೈಟಿಂಗೇಲ್ ಅವರು ನಡೆಸಿದ ಅದ್ಭುತ ಕಾರ್ಯದಿಂದಾಗಿ ಮೇ 12 ಅನ್ನು ದಾದಿಯರ ಕೊಡುಗೆಯನ್ನು ಸ್ಮರಿಸುವ ದಿನವಾಗಿ ಆಯ್ಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ದಾದಿಯರ ದಿನದ ಇತಿಹಾಸ
ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸ್ 1965 ರಲ್ಲಿ (ICN) ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲು ನಿರ್ಧರಿಸಿ ರೂಢಿ ಪ್ರಾರಂಭಿಸಿತು. ಈ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಹಾನ್ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೇಲ್ (Florence Nightingale) ಅವರ ಜನ್ಮದಿನವು ಮೇ 12ಕ್ಕಿದ್ದು ಅವರ ಗೌರವಾರ್ಥವಾಗಿಯೂ ಈ ದಿನವನ್ನು ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವಳು ಸಂಖ್ಯಾಶಾಸ್ತ್ರಜ್ಞ, ಸಮಾಜ ಸುಧಾರಕ ಮತ್ತು ಇಂಗ್ಲಿಷ್ ನರ್ಸ್ ಆಗಿ ಖ್ಯಾತಿ ಗಳಿಸಿದ್ದರು. 

ನಿಯಮಿತವಾಗಿ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳುವವರು ಮದ್ಯ ಸೇವನೆ ಮಾಡಬಹುದಾ ?

ಯುಎಸ್ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಡೊರೊಥಿ ಸದರ್ಲ್ಯಾಂಡ್ ಈ ದಿನವನ್ನು ಬಹು ಹಿಂದೆಯೇ ಪ್ರಸ್ತಾಪಿಸಿದ್ದರು, ಆದರೆ ಅದನ್ನು ಸ್ವೀಕರಿಸಿರಲಿಲ್ಲ. ಆದರೆ, 20 ವರ್ಷಗಳ ನಂತರ, ಮೇ 12 ಅನ್ನು ಅಂತಿಮವಾಗಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವಾಗಿ ಆಯ್ಕೆ ಮಾಡಿ ಈ ದಿನದ ಆಚರಣೆಯನ್ನು ಚಾಲನೆಗೆ ತರಲಾಯಿತು. ಅಂದಿನಿಂದ ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್), ಅಂತರಾಷ್ಟ್ರೀಯ ದಾದಿಯರ ದಿನದಂದು ಹಲವಾರು ವಿಷಯಗಳನ್ನು, ವಸ್ತುಗಳನ್ನು ಮತ್ತು ಈ ಕ್ಷೇತ್ರದ ಸೇವೆಗಳನ್ನು ಆಧರಿಸಿದ ಹಲವು ಪುರಾವೆಗಳನ್ನು ವಿಶ್ವವ್ಯಾಪಿಯಾಗಿ ಹಂಚಿಕೊಳ್ಳುತ್ತ ಬಂದಿದೆ.

ಅಂತಾರಾಷ್ಟ್ರೀಯ ದಾದಿಯರ ದಿನ 2022ರ ಮಹತ್ವ
ಈಗ, ಸಾಂಕ್ರಾಮಿಕ ರೋಗದಿಂದಾಗಿ, ಅಂತಾರಾಷ್ಟ್ರೀಯ ದಾದಿಯರ ದಿನ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ಹೇಳಬಹುದು. ದಾದಿಯರು ಆಸ್ಪತ್ರೆಗಳಲ್ಲಿನ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ, ರೋಗಿಗಳಿಗೆ ನಿರಂತರ ಆರೈಕೆಯನ್ನು ನೀಡುತ್ತಾರೆ. ಅವರ ಬಹುಮುಖಿ ಕಾರ್ಯವು ಕೆಲಸದಲ್ಲಿ ವಿವಿಧ ಚಟುವಟಿಕೆಗಳನ್ನು ಮಾಡುವುದನ್ನು ಒಳಗೊಂಡಿದೆ. ಬನ್ನಿ ನಾವೆಲ್ಲರೂ ಸೇರಿ ಈ ದಿನದಂದು ದಾದಿಯರು ನೀಡುವ ಸೇವೆಗಳಿಗಾಗಿ ಅವರಿಗೆ ಕೃತಜ್ಞತೆ ಹೇಳುತ್ತ ಅವರಿಗೆ ಧನ್ಯವಾದಗಳನ್ನು ತಿಳಿಸೋಣ.

Health Problem : ಮಹಿಳೆಯರೇ ನಿಮ್ಮನ್ನು ಕಾಡುವ ಹೊಟ್ಟೆ ನೋವಿಗೆ ಇದೆಲ್ಲ ಕಾರಣ

ಕೋವಿಡ್-19 ಕಾಲದಲ್ಲಿ ಯೋಧರಂತೆ ದುಡಿದ ದಾದಿಯರು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಇಡೀ ಜಗತ್ತು ಪರಿತಪಿಸುವ ಸಂದರ್ಭದ ಮಧ್ಯೆಯೂ ಕೊರೊನಾ ಯೋಧರಂತೆ ದುಡಿದ ದಾದಿಯರು ಸಾಕಷ್ಟು ಜೀವಗಳನ್ನು ರಕ್ಷಿಸಿದ್ದಾರೆ. ಸಾರ್ವಜನಿಕರನ್ನು ರಕ್ಷಿಸುವ ಕಾಯಕದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದಾರೆ. ಅದೆಷ್ಟೋ ಸಮಯದಲ್ಲಿ ತಮ್ಮ ಆತ್ಮೀಯರನ್ನೂ ಕಳೆದುಕೊಂಡಿದ್ದಾರೆ.

ಕ್ರಿಮಿಯನ್ ಯುದ್ದದಲ್ಲಿ ಕಣ್ಣಿಗೆ ಕಾಣುವ ವೈರಿಗಳೊಂದಿಗೆ ಹೋರಾಡಿ ಗಾಯಗೊಂಡಿದ್ದ ಸೈನಿಕರಿಗೆ ಶೂಶ್ರುಷೆ ಮಾಡಿದ್ದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಸೇವಾ ಮನೋಭಾವನೆ ಮತ್ತೊಮ್ಮೆ ಮರುಕಳಿಸಿದಂತೆ ಜಗತ್ತಿನಾದ್ಯಂತ ಸುಮಾರು 20 ಮಿಲಿಯನ್‌ಗೂ ಹೆಚ್ಚು ದಾದಿಯರು ಕೊರೊನಾ ವೈರಸ್‌ ವಿರುದ್ದದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

1853ರಲ್ಲಿ ರಷ್ಯಾ ಹಾಗೂ ಬ್ರಿಟನ್‌ ದೇಶಗಳ ಮಧ್ಯೆ ನಡೆದಿದ್ದ ಕ್ರಿಮಿಯನ್ ಯುದ್ದದಲ್ಲಿ ಗಾಯಗೊಂಡಿದ್ದ ಬ್ರಿಟಿಷ್ ಸೈನಿಕರಿಗೆ ಅಕ್ಷರಶಃ ದೇವತೆಯಂತೆ ಕಂಡಿದ್ದು ಫ್ಲಾರೆನ್ಸ್ ನೈಟಿಂಗೇಲ್. ಸ್ವಚ್ಛತೆಗೆ ಆಧ್ಯತೆ ಕೊಡುವ ಮೂಲಕ ಗಣನೀಯವಾಗಿ ಸಾವಿನ ಸಂಖ್ಯೆಯನ್ನು ತಪ್ಪಿಸಿದ್ದು ಫ್ಲಾರೆನ್ಸ್‌ ನೈಟಿಂಗೇಲ್ ಅವರು. ಹೀಗಾಗಿಯೆ ಅವರನ್ನು ಆಧುನಿಕ ನರ್ಸಿಂಗ್ ವ್ಯವಸ್ಥೆಗೆ ಮುನ್ನುಡಿ ಬರೆದವರು ಎಂದೇ ಅವರ ಜನ್ಮದಿನವನ್ನು ವಿಶ್ವ ದಾದಿಯರ ದಿನವೆಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

Latest Videos
Follow Us:
Download App:
  • android
  • ios