International Joke Day : ಚೆಂದದೊಂದು ಜೋಕ್ ಹೇಳಿದರೂ ನಗು ಬರೋಲ್ಲ ಅಂದ್ರೆ, ಏನೋ ಪ್ರಾಬ್ಲಂ ಇಂದೆ ಎಂಧರ್ಥ

ಸದಾ ತಮಾಷೆ ಮಾಡ್ತಾ ನಗ್ತಿರುವವರ ಮುಖದಲ್ಲೊಂದು ಆಕರ್ಷಣೆಯಿರುತ್ತದೆ. ನೂರಾರು ಜನರನ್ನು ಸೆಳೆಯುವ ಇವರು ಆರೋಗ್ಯವಾಗಿರ್ತಾರೆ. ಮುಖ ಗಂಟು ಹಾಕಿಕೊಂಡಿರುವ ಬದಲು ನಗ್ತಾ ಎಲ್ಲವನ್ನು ಸ್ವೀಕರಿಸೋದ್ರಿಂದ ಲಾಭ ಎಷ್ಟಿದೆ ಗೊತ್ತಾ?
 

International Joke Day July One History Significance roo

ಜನರಿಗೆ ಈಗ ನಗೋದಕ್ಕೂ ಟೈಂ ಇಲ್ಲ. ಒಂದಲ್ಲ ಒಂದು ಒತ್ತಡದಲ್ಲಿ, ಕೆಲಸದಲ್ಲಿ ಬ್ಯೂಸಿಯಾಗಿರುವ ಜನರ ಮುಂದೆ ನೀವು ಜೋಕ್ ಹೇಳಿದ್ರೂ ಅವರು ಆಮೇಲೆ ನಗ್ತೇನೆ, ಈಗ ಪುರುಸೊತ್ತಿಲ್ಲ ಎನ್ನುವಂತಾಗಿದೆ. ಅನೇಕರು ಮನಸ್ಸು ಬಿಚ್ಚಿ ನಗದೆ ಅದೆಷ್ಟೋ ದಿನಗಳು ಕಳೆದಿರುತ್ತವೆ. ಇನ್ನು ಕೆಲವರು ಒತ್ತಾಯಪೂರ್ವಕವಾಗಿ ನಗಲು, ನಗೆ ಕೂಟಗಳಲ್ಲಿ ಪಾಲ್ಗೊಳ್ಳುತ್ತಾರೆ. 

ನಗು (Laught) ಅತ್ಯುತ್ತಮ ಔಷಧಿ (Medicine) ಎನ್ನುವ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ನಮ್ಮ ರೋಗವನ್ನು ಗುಣಪಡಿಸಲು ವೈದ್ಯರು ಮಾತ್ರೆ, ಔಷಧಿ ನೀಡ್ತಾರೆ. ಆದ್ರೆ ಯಾವುದೇ ಮಾತ್ರೆ, ಇಂಜೆಕ್ಷನ್ ಇಲ್ಲದೆ ನಿಮ್ಮ ರೋಗ (Disease) ವನ್ನು ಗುಣಪಡಿಸುವ ಶಕ್ತಿ ನಗುವಿಗಿದೆ. ನಗು, ತಮಾಷೆ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಹಾಸ್ಯ ಮಾಡಿದಾಗ, ಜೋಕ್ ವಿಡಿಯೋಗಳನ್ನು ನೋಡಿದಾಗ ಕೆಲವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕರೆ ಮತ್ತೆ ಕೆಲವರು ಮುಗುಳ್ನಗ್ತಾರೆ. ಈ ನಗು ನಮ್ಮ ಮನಸ್ಸಿನ ಭಾರವನ್ನು ಕಡಿಮೆ ಮಾಡುತ್ತದೆ. ಒತ್ತಡ ಕಡಿಮೆಯಾಗಿ ಸ್ವಲ್ಪ ಸಮಯದವರೆಗೆ ನಾವು ರಿಲ್ಯಾಕ್ಸ್ ಆಗ್ತೇವೆ.  ಹಾಸ್ಯದ ಮಹತ್ವವನ್ನು ತಿಳಿಯಲು ಪ್ರತಿ ವರ್ಷ ಜೋಕ್ ಡೇ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಜುಲೈ ಒಂದರಂದು ಜೋಕ್ ಡೇ ಆಚರಣೆ ಮಾಡಲಾಗುತ್ತದೆ. ನಾವಿಂದು ಜೋಕ್ ಡೇ ಇತಿಹಾಸ ಹಾಗೂ ಜೋಕ್ ನಿಂದಾಗುವ ಲಾಭವನ್ನು ನಿಮಗೆ ಹೇಳ್ತೇವೆ.

Health Tips : ಆರೋಗ್ಯವಾಗಿರರ್ಬೇಕಾ? ಒಂದೇ ಒಂದು ತಿಂಗಳು ಪೂರ್ತಿ ಪೆಗ್ ಹಾಕೋದ ಬಿಟ್ಟು ಬಿಡಿ!

ಜೋಕ್ ಡೇ ಶುರುವಾಗಿದ್ದು ಎಲ್ಲಿಂದ? : ಇಂಟರ್ನ್ಯಾಷನಲ್ ಜೋಕ್ಸ್ ಡೇ 1994 ರಲ್ಲಿ ಅಮೆರಿಕಾದಲ್ಲಿ ಪ್ರಾರಂಭವಾಯಿತು. ಲೇಖಕ ವೇಯ್ನ್ ರಾನಿಗಲ್ ಅವರಿಂದ ಈ ದಿನ ಶುರುವಾಯ್ತು. ಲೇಖಕ ವೇಯ್ನ್, ತಮ್ಮ ಜೋಕ್ ಪುಸ್ತಕವನ್ನು ಪ್ರಚಾರ ಮಾಡಲು ಈ ದಿನವನ್ನು ಬಳಸಿಕೊಡಿದ್ದರು. ಅವರು ಸುಮಾರು 250 ಆಫೀಸ್ ಜೋಕ್‌ಗಳು, ಕಾರ್ಟೂನ್‌ಗಳು, ಮೀಮ್‌ಗಳ ಪ್ರಚಾರ ಮಾಡಿದ್ದರು. ಅವರು ಇದನ್ನು ಪ್ರಚಾರ ಮಾಡುವ ವೇಳೆಗೆ ಅರ್ಧವರ್ಷ ಪೂರ್ಣಗೊಂಡಿದ್ದ ಕಾರಣ ಜುಲೈ ತಿಂಗಳನ್ನು ಜೋಕ್ ಡೇಯಾಗಿ ಆಚರಿಸಲು ಆಯ್ದುಕೊಂಡ್ರು. 

Women Health: ಗರ್ಭಧರಿಸಿದಾಗ ಸೆಕ್ಸ್ ಯಾಕೆ ದೂರ?

ಜೋಕ್ ನಿಂದಾಗುವ ಲಾಭಗಳು :     
ಜೋಕ್ ಗಳು ಮನುಷ್ಯನ ಮುಖದಲ್ಲಿ ನಗು ತರಿಸುತ್ತವೆ. ಈ ನಗುವಿನಿಂದ ನಾನಾ ಲಾಭಗಳಿವೆ. 
• ಯಾವ ವ್ಯಕ್ತಿ ಸದಾ ನಗ್ತಿರುತ್ತಾನೋ ಆತನ ಹಾಸ್ಯ ಪ್ರಜ್ಞೆ  ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ.
• ಹೆಚ್ಚು ಸಂತೋಷವಾಗಿರುವವರು ಹೆಚ್ಚು ನಗ್ತಾರೆ. ಹೆಚ್ಚು ನಗುತ್ತಿದ್ದಂತೆ ನಿಮ್ಮ ಒತ್ತಡ ಕಡಿಮೆಯಾಗುತ್ತದೆ.
• ನಗುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.
• ನಗುವುದ್ರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖಕ್ಕೊಂದು ವಿಶೇಷ ಹೊಳಪು ಬರುತ್ತದೆ. ಮುಕ್ತವಾಗಿ ನಗುವುದು ದೇಹ ಮತ್ತು ಮುಖ ಎರಡಕ್ಕೂ ಒಳ್ಳೆಯದು.
• ನಗು ಶ್ವಾಸಕೋಶಗಳ ಆರೋಗ್ಯಕ್ಕೂ ಒಳ್ಳೆಯದು. 
• ಸಂಶೋಧನೆ ಪ್ರಕಾರ, ನಗುವ ವ್ಯಕ್ತಿಯ ಸುತ್ತ ಯಾವಾಗ್ಲೂ ಒಂದಿಷ್ಟು ಜನರು ಸುತ್ತುವರೆದಿರುತ್ತಾರೆ. ಧನಾತ್ಮಕ ಶಕ್ತಿ ಅವರಲ್ಲಿ ಹೆಚ್ಚಿರುವ ಕಾರಣ ಅವರು ಜನರನ್ನು ಸೆಳೆಯುತ್ತಾರೆ. 
• ನಗುವಿನಿಂದ ಆಯಾಸವಾಗಲು ಸಾಧ್ಯವೇ ಇಲ್ಲ. ನಗು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
• ವಿಜ್ಞಾನದ ಪ್ರಕಾರ, ಹೃದಯ ಮತ್ತು ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಪ್ಪಿಸಲು ನಗು ಉತ್ತಮವಾದ ಔಷಧವಾಗಿದೆ.
• ನೀವು ಮನಸ್ಸು ಬಿಚ್ಚಿ ನಗುವುದ್ರಿಂದ ಯಾವುದೇ ರೋಗ ನಿಮ್ಮ ಬಳಿ ಸುಳಿಯೋದಿಲ್ಲ. ಆದ್ರೆ ಈ ಹಾಸ್ಯ, ತಮಾಷೆ ಬೇರೆ ಯಾರ ಭಾವನೆಗೂ ಧಕ್ಕೆ ತರುವಂತಿರಬಾರದು.
• ಅಧಿಕ ರಕ್ತದೊತ್ತಡದಿಂದ ಬಳಲುವ ರೋಗಿ ಯಾವಾಗ್ಲೂ ಸಂತೋಷವಾಗಿರುವುದು ಮುಖ್ಯ. ಅಧಿಕ ರಕ್ತದೊತ್ತಡದಿಂದಾಗಿ  ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವು ತುಂಬಾ ಹೆಚ್ಚಾಗಿದೆ. ನೀವು ಸಂತೋಷವಾಗಿದ್ದರೆ, ನಗುತ್ತಿದ್ದರೆ  ನಿಮ್ಮೊಳಗಿನ ಒತ್ತಡದ ಹಾರ್ಮೋನುಗಳು ಕಡಿಮೆಯಾಗ್ತಾ ಬರುತ್ತದೆ. ಇದರಿಂದಾಗಿ ನಿಮ್ಮ ರೋಗನಿರೋಧಕ ವ್ಯವಸ್ಥೆಯು ಬಲಗೊಳ್ಳುತ್ತದೆ.  
 

Latest Videos
Follow Us:
Download App:
  • android
  • ios