ದಿಟ್ಟ ಹೆಜ್ಜೆ, ಜೋಮ್ಯಾಟೊದಿಂದ ಮಹಿಳೆಯರಿಗೆ ವರ್ಷಕ್ಕೆ 10 ದಿನ ಮುಟ್ಟಿನ ರಜೆ

ಆಹಾರ ಸರಬರಾಜು ಕಂಪನಿ ಜೋಮ್ಯಾಟೊದಿಂದ ಹೊಸ ಹೆಜ್ಜೆ/ ಮಹಿಳೆಯರಿಗೆ ವರ್ಷದಲ್ಲಿ ಹತ್ತು ದಿನ ಮುಟ್ಟಿನ ರಜೆ/ ರಜೆ ಪಡೆದುಕೊಳ್ಳಲು ಯಾವ ಹಿಂಜರಿಕೆ ಇಟ್ಟುಕೊಳ್ಳಬೇಡಿ

Indian food delivery company Zomato offers 'period leave' to women employees

ನವದೆಹಲಿ(ಆ.  09)  ಜೋಮ್ಯಾಟೊ ಒಂದು ಹೊಸ ಹೆಜ್ಜೆ ಇಟ್ಟಿದೆ. ಮಹಿಳಾ ಸಿಬ್ಬಂದಿಗೆ ವರ್ಷದಲ್ಲಿ ಹತ್ತು ದಿನ ಮುಟ್ಟಿನ ರಜೆ ನೀಡುತ್ತೇನೆ ಎಂದು ತಿಳಿಸಿದೆ.

ನಂಬಿಕೆ ಮತ್ತು ಸ್ವೀಕಾರಕ್ಕೆ ನಾವು ಮೊದಲಿನಿಂದಲೂ ಮಹತ್ವ ನೀಡಿಕೊಂಡು ಬಂದಿದ್ದೇವೆ. ಮಹಿಳೆಯರಿಗೆ ಮಾತ್ರವಲ್ಲದೆ  ಲೈಂಗಿಕ ಅಲ್ಪಸಂಖ್ಯಾತರಿಗೂ ಮುಟ್ಟಿನ ರಜೆ ಸೌಲಭ್ಯ ನೀಡುತ್ತಿದ್ದೇವೆ ಎಂದು ಸಿಇಒ ದೀಪಿಂದರ್ ಗೋಯಲ್ ತಿಳಿಸಿದ್ದಾರೆ.

ಗರ್ಭಿಣಿಯರು ಸೆಕ್ಸ್ ಮಾಡಬಹುದಾ?

ಯಾರೂ ಇಲ್ಲಿ ನಾಚಿಕೆ ಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ. ನಿಮ್ಮ ತಂಡದ ಮ್ಯಾನೇಜರ್ ಗೆ ತಿಳಿಸಿ, ಅಥವಾ ಇ ಮೇಲ್ ಮೂಲಕ ಪಡೆದುಕೊಳ್ಳಬಹುದು ಎಂದು ಕಂಪನಿ ಹೇಳಿದೆ.

ಮುಟ್ಟಿನ ರಕಜೆ ಪಡೆದುಕೊಳ್ಳುವುದರ ಬಗ್ಗೆ ಇರೆ ಸಿಬ್ಬಂದಿ ಮುಜುಗರ ಮತ್ತು ಇರಿಸು ಮುರಿಸಾಗುವಂತೆ ಮಾತನಾಡಬಾರದು. ಈ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಅಗತ್ಯ ಇರುತ್ತದೆ ಅವರ ಆರೋಗ್ಯ ಕಾಪಾಡಿಕೊಳ್ಳಬೇಕು  ಎಂದು ಗೋಯಲ್ ತಿಳಿಸಿದ್ದಾರೆ.  2008 ರಲ್ಲಿ ಆರಂಭವಾದ ಕಂಪನಿ ಮನೆ ಬಾಗಿಲಿಗೆ ಆಹಾರ ಸರಬರಾಜು ಮಾಡುವುದುದರಲ್ಲಿ ಹೆಸರು ಮಾಡಿಕೊಂಡಿದೆ. 

 

Latest Videos
Follow Us:
Download App:
  • android
  • ios