Asianet Suvarna News Asianet Suvarna News

40 ದಿನದ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ, ವೈದ್ಯಲೋಕಕ್ಕೆ ಅಚ್ಚರಿ!

ಭ್ರೂಣದಲ್ಲಿನ ಭ್ರೂಣವು ಅಪರೂಪದ ಸ್ಥಿತಿಯಾಗಿದ್ದು, ಅವಳಿಗಳಲ್ಲಿ ಒಬ್ಬರ ದೇಹದಲ್ಲಿ ಇನ್ನೊಬ್ಬರ ಉಪಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ. ಭ್ರೂಣದಲ್ಲಿ ಭ್ರೂಣವು ತುಂಬಾ ಅಸಾಮಾನ್ಯವಾಗಿದೆ ಕೆಲವೇ ಕೆಲವು ವೈದ್ಯರು ತಮ್ಮ ವೃತ್ತಿಜೀವನದಲ್ಲಿ ಇದನ್ನು ಎದುರಿಸಿದ್ದಾರೆ ಎಂದು ಹೇಳಲಾಗಿದೆ.
 

in a rare medical condition Fetus found growing in a 40 day old infant in Bihar Motihari district san
Author
Bengaluru, First Published May 29, 2022, 2:52 PM IST | Last Updated May 29, 2022, 2:58 PM IST

ಪಾಟ್ನಾ (ಮೇ. 29): ಅಪರೂಪದ ವೈದ್ಯಕೀಯ ಸ್ಥಿತಿಯಲ್ಲಿ (rare medical condition), ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ(Bihar Motihari district) 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು (Fetus found growing) ಬೆಳವಣಿಗೆಯಾಗುತ್ತಿರುವುದು ಕಂಡುಬಂದಿದೆ. ಹೊಟ್ಟೆ ಉಬ್ಬರ ಮತ್ತು ಮೂತ್ರ ವಿಸರ್ಜನೆಯ ವೇಳೆ ಮಗುವಿಗೆ ಸಮಸ್ಯೆ ಆಗುತ್ತಿದ್ದ ಕಾರಣ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಇದು ತಿಳಿದುಬಂದಿದೆ.

ವೈದ್ಯರ ತಂಡವು ಹಲವಾರು ಪರೀಕ್ಷೆಗಳನ್ನು ನಡೆಸಿದ,ಬಳಿಕ ಅವರು ನವಜಾತ ಶಿಶಿವು ‘ಭ್ರೂಣದ ಒಳಗೆ ಭ್ರೂಣ’ ದ (Fetus in fetu) ಸಮಸ್ಯೆಯಿಂದ ಬಳಲುತ್ತಿದೆ ಎಂದು ಕಂಡುಕೊಂಡಿದ್ದಾರೆ. ನವಜಾತ ಶಿಶುವನ್ನು ಶಸ್ತ್ರಚಿಕಿತ್ಸೆಗಾಗಿ ರಹಮಾನಿಯಾ ವೈದ್ಯಕೀಯ ಕೇಂದ್ರಕ್ಕೆ ಕರೆತರಲಾಯಿತು, ಅದು ಯಶಸ್ವಿಯಾಗಿ ಪೂರ್ಣಗೊಂಡಿತು. "ಶಿಶುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಮತ್ತು ಅದರ ಸ್ಥಿತಿ ಈಗ ಸ್ಥಿರವಾಗಿದೆ" ಎಂದು ರಹ್ಮಾನಿಯಾ ವೈದ್ಯಕೀಯ ಕೇಂದ್ರದ ಡಾ ತಬ್ರೇಜ್ ಅಜೀಜ್ ತಿಳಿಸಿದ್ದಾರೆ.

 ಪರೀಕ್ಷೆ ನಡೆಸಿದ ಬಳಿಕ 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವುದು ಕಂಡುಬಂದಿದೆ ಎಂದು ಅವರು ವಿವರಿಸಿದರು. ಈ ಸ್ಥಿತಿಯನ್ನು ಭ್ರೂಣದಲ್ಲಿ ಭ್ರೂಣ ಎಂದು ಕರೆಯಲಾಗುತ್ತದೆ ಅವರು ವಿವರಿಸಿದರು. ವೈದ್ಯರು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ಹೊರ ತೆಗೆದಿದ್ದು, ಇದೀಗ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.

ಭ್ರೂಣದಲ್ಲಿ ಭ್ರೂಣ ಎಂದರೇನು?: ಭ್ರೂಣದಲ್ಲಿನ ಭ್ರೂಣವು ಅಪರೂಪದ ಸ್ಥಿತಿಯಾಗಿದ್ದು, ಅವಳಿಗಳಲ್ಲಿ ಒಬ್ಬರ ದೇಹದಲ್ಲಿ ಇನ್ನೊಬ್ಬರ ಉಪಸ್ಥಿತಿ ಎಂದು ವ್ಯಾಖ್ಯಾನಿಸಲಾಗಿದೆ. ಭ್ರೂಣದಲ್ಲಿ ಭ್ರೂಣವು ತುಂಬಾ ಅಸಾಮಾನ್ಯವಾಗಿದೆ ಕೆಲವೇ ಕೆಲವು  ಕೆಲವು ವೈದ್ಯರು ತಮ್ಮ ವೃತ್ತಿಜೀವನದಲ್ಲಿ ಇದನ್ನು ಎದುರಿಸಿದ್ದಾರೆ ಎಂದು ಹೇಳಲಾಗಿದೆ. ಮೆಡಿಕಲ್ ಜರ್ನಲ್ ನಲ್ಲಿನ ಲೇಖನ ಪ್ರತಿ 500,000 ಜನನಗಳಲ್ಲಿ 1 ರಲ್ಲಿ ಮಾತ್ರ ಸಂಭವಿಸುವ ಸಾಧ್ಯತೆಗಳು ಎಂದು ಅಂದಾಜಿಸಿದೆ. ಅದರ ಅಪರೂಪದ ಕಾರಣದಿಂದಾಗಿ, ಭ್ರೂಣದಲ್ಲಿನ ಭ್ರೂಣ ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ನಿಖರವಾದಂಥ ಶಸ್ತ್ರಚಿಕಿತ್ಸಾ ತಂತ್ರಗಳು ಹಾಗೂ ಅನುಭವಿ ವೈದ್ಯರ ಅಗತ್ಯವಿರುತ್ತದೆ. ತಜ್ಞರು ಹೇಳುವಂತೆ ಇದು ಅಪರೂಪದ ಸಂಗತಿಯಲ್ಲ, ಒಬ್ಬ ಸಾಮಾನ್ಯ ವ್ಯಕ್ತಿಯು ತನ್ನ ಮಗುವಿಗೆ ಇದು ಸಂಭವಿಸುವುದರ ಬಗ್ಗೆ ಚಿಂತಿಸಬಾರದು.

35 ವರ್ಷದಿಂದ ಗರ್ಭಿಣಿ ಈ ಮಹಿಳೆ, ಹೊಟ್ಟೆ ನೋವಾದಾಗ ಬಯಲಾಯ್ತು ರಹಸ್ಯ, ಕಲ್ಲಾದ ಭ್ರೂಣ!

ಭ್ರೂಣದಲ್ಲಿ ಭ್ರೂಣದ ಕೆಲವೇ ಪ್ರಕರಣಗಳು ಜಾಗತಿಕವಾಗಿ ವರದಿಯಾಗಿವೆ. ವರದಿಗಳ ಪ್ರಕಾರ, ಸುಮಾರು 5 ವರ್ಷಗಳ ಹಿಂದೆ ಹಾಂಗ್ ಕಾಂಗ್‌ನಲ್ಲಿ ನವಜಾತ ಶಿಶು ತನ್ನ ಜನನದ ಸಮಯದಲ್ಲಿ ತನ್ನ ಸ್ವಂತ ಒಡಹುಟ್ಟಿದವರ ಭ್ರೂಣವನ್ನು ಹೊಂದಿದ್ದ ಪ್ರಕರಣ ವರದಿಯಾಗಿದೆ. 2019 ರಲ್ಲಿ, ಇಸ್ರೇಲ್‌ನ ಮಹಿಳೆಯೊಬ್ಬಳು ತನ್ನ ಹೊಟ್ಟೆಯಲ್ಲಿ ಅವಳಿ ಭ್ರೂಣವನ್ನು ಹೊಂದಿದ್ದ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿತ್ತು.

ಎರಡು ಶಿಶು ಗರ್ಭದಲ್ಲಿದ್ದಾಗಲೇ ಮೂರನೇ ಭ್ರೂಣ! ಇದೇನೀ ವಿಚಿತ್ರ?

ಇತ್ತಚೆಗೆ ಅಪರೂಪದ ಪ್ರಕರಣದಲ್ಲಿ, ಕೆನಡಾದಲ್ಲಿ 33 ವರ್ಷದ ಮಹಿಳೆಯೊಬ್ಬರ ಯಕೃತ್ತಿನೊಳಗೆ ಭ್ರೂಣವು ಬೆಳೆಯುತ್ತಿರುವುದು ಬಹಿರಂಗಗೊಂಡಿತ್ತು. ಗರ್ಭಿಣಿಯೋ ಅಲ್ಲವೋ ಎಂದು ಪರೀಕ್ಷೆ ನಡೆಸುವ ಸಂದರ್ಭ ಯಕೃತ್ತಿನೊಳಗೆ ಮಗು ಬೆಳೆಯುತ್ತಿರುವುದನ್ನು ಗಮನಿಸಿ ವೈದ್ಯರೇ ಅಚ್ಚರಿಪಟ್ಟಿದ್ದರು. ಕೆನಡಾದ ಮ್ಯಾನಿಟೋಬಾದ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಮಕ್ಕಳ ವೈದ್ಯ ಮೈಕೆಲ್ ನಾರ್ವೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ಬದರು. ಬಳಿಕ 'ನಾನು ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ. ಆದರೆ ಮಹಿಳೆ ಪ್ರೆಗ್ನೆಂಟ್ ಟೆಸ್ಟ್ ಮಾಡಲು ಬಂದಿದ್ದಳು. ಪರೀಕ್ಷೆ ನಡೆಸಿದಾಗ ಮಹಿಳೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಆದರೆ ಮಗು ಹೊಟ್ಟೆಯಲ್ಲಿ ಬೆಳೆಯುವ ಬದಲು ಯಕೃತ್ತಿನಲ್ಲಿ ಬೆಳೆಯುತ್ತಿದೆ. ಇದನ್ನು ಅಪಸ್ಥಾನೀಯ ಗರ್ಭಧಾರಣೆ ಎಂದು ಹೇಳುತ್ತಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios