35 ವರ್ಷದಿಂದ ಗರ್ಭಿಣಿ ಈ ಮಹಿಳೆ, ಹೊಟ್ಟೆ ನೋವಾದಾಗ ಬಯಲಾಯ್ತು ರಹಸ್ಯ, ಕಲ್ಲಾದ ಭ್ರೂಣ!
ಜಗತ್ತಿನಲ್ಲಿ ಅನೇಕ ವಿಚಿತ್ರ ಪ್ರಕರಣಗಳು ಕೇಳಿಬರುತ್ತವೆ ಮತ್ತು ಕಾಣ ಸಿಗುತ್ತವೆ. ಅದನ್ನು ಕೇಳಿ ಎಲ್ಲರೂ ದಿಗ್ಭ್ರಮೆಗೊಳ್ಳುತ್ತಾರೆ. ಅಲ್ಜೀರಿಯಾದಿಂದ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 73 ವರ್ಷದ ಮಹಿಳೆಯ ಹೊಟ್ಟೆಯಿಂದ 35 ವರ್ಷದ ಹಳೆಯ ಹೊರತೆಗೆಯಲಾಗಿದೆ. ಹೌದು, ಕಳೆದ 35 ವರ್ಷಗಳಿಂದ ಈ ಮಹಿಳೆ ತನ್ನ ಹೊಟ್ಟೆಯಲ್ಲಿ ಮಗುವನ್ನು ಹೊತ್ತುಕೊಂಡಿದ್ದಾಳೆ. ಇದನ್ನು ವೈದ್ಯರು ಬಹಿರಂಗಪಡಿಸಿದಾಗ ಎಲ್ಲರೂ ಬೆಚ್ಚಿಬಿದ್ದರು.

ಘಟನೆಯು ಪೂರ್ವ ಅಲ್ಜೀರಿಯಾದ ಸ್ಕಿಕ್ಡಾ ನಗರದಿಂದ ಬಂದಿದೆ, ಅಲ್ಲಿ ವೈದ್ಯರ ನಿಗಾದಲ್ಲಿರುವ ತಂಡವು 73 ವರ್ಷದ ಮಹಿಳೆಯ ಗರ್ಭದಲ್ಲಿ ಕಳೆದ 35 ವರ್ಷಗಳಿಂದ ಬೆಳೆಯುತ್ತಿದ್ದ ಭ್ರೂಣವನ್ನು ಹೊರತೆಗೆದಿದೆ.
ಅದಕ್ಕೆ ಬೇಬಿ ಸ್ಟೋನ್ ಎಂದು ಹೆಸರಿಡಲಾಗಿದೆ. ಈ ಭ್ರೂಣವು 2 ಕೆಜಿ ತೂಕವಿದ್ದು, 7 ತಿಂಗಳದ್ದಾಗಿದೆ. ಗರ್ಭಾಶಯದ ಬದಲಿಗೆ ಹೊಟ್ಟೆಯಲ್ಲಿ ಗರ್ಭಾವಸ್ಥೆಯನ್ನು ಮಾಡಿದಾಗ ಇಂತಹ ಘಟನೆ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ರಕ್ತದ ಕೊರತೆಯಿಂದ ಭ್ರೂಣವು ಹೊಟ್ಟೆಯಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ ಬಳಿಕ ಈ ಭ್ರೂಣವು ಕಲ್ಲಾಗಿ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನು ಲಿಥೋಪಿಡಿಯನ್ ಎಂದು ಕರೆಯಲಾಗುತ್ತದೆ. ಈ ಮಹಿಳೆಗೂ ಅದೇ ಸಂಭವಿಸಿದ್ದು ಆಕೆಯ ಭ್ರೂಣವೂ ಸತ್ತು ಕಲ್ಲಾಗಿದೆ.
ಈ ಮಹಿಳೆ ತನ್ನ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಾಗ, ವೈದ್ಯರ ಬಳಿಗೆ ಹೋಗಿದ್ದಾಳೆ. ನಂತರ ವೈದ್ಯರು ಮಹಿಳೆಯನ್ನು ಪರೀಕ್ಷಿಸಿದ್ದು, ಎಲ್ಲರೂ ದಿಗ್ಭ್ರಮೆಗೊಂಡರು. ವಯಸ್ಸಾದ ಮಹಿಳೆಯ ಹೊಟ್ಟೆಯಲ್ಲಿ ಏಳು ತಿಂಗಳ ಭ್ರೂಣವು ಹಲವು ವರ್ಷಗಳಿಂದ ಇದೆ ಎಂದು ವೈದ್ಯರು ಹೇಳಿದರು.
ಮಹಿಳೆ ಈ ಹಿಂದೆ ಹಲವು ಬಾರಿ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ್ದರು, ಆದರೆ ಭ್ರೂಣದ ಬಗ್ಗೆ ಆಕೆಗೆ ತಿಳಿದಿರಲಿಲ್ಲ. ಇದು ಬಹಿರಂಗಗೊಂಡಾಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ 7 ತಿಂಗಳ ಭ್ರೂಣವನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ