Health Tips: ಯೋನಿ ಮಾತ್ರವಲ್ಲ ಗುದದ ಸ್ವಚ್ಛತೆಗೂ ಆದ್ಯತೆ ನೀಡಿ
ನಮ್ಮ ದೇಹದ ಪ್ರತಿಯೊಂದೂ ಅಂಗದ ಸ್ವಚ್ಛತೆ ಮುಖ್ಯ. ಕೆಲವೊಂದು ಸೂಕ್ಷ್ಮ ಪ್ರದೇಶವಾಗಿದ್ದರೆ ಮತ್ತೆ ಕೆಲವೊಂದು ಬೇಗ ಬ್ಯಾಕ್ಟೀರಿಯಾ ದಾಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದ್ರಲ್ಲಿ ಗುದ ಕೂಡ ಸೇರಿದೆ. ಅದ್ರ ಆರೈಕೆಗೂ ನಾವು ಹೆಚ್ಚುವರಿ ಗಮನ ಹರಿಸಬೇಕು.
ಯೋನಿ ಆರೋಗ್ಯದ ಬಗ್ಗೆ ಸಾಕಷ್ಟು ಸಲಹೆಗಳನ್ನು ಕೇಳಿರ್ತೀರಿ. ಅದರಂತೆ ಮಹಿಳೆಯರು ಯೋನಿ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡ್ತಿದ್ದಾರೆ. ಇದು ತಪ್ಪಲ್ಲ. ಆದ್ರೆ ಯೋನಿ ಮಾತ್ರವಲ್ಲ ಗುದದ ಆರೋಗ್ಯದ ಬಗ್ಗೆಯೂ ಗಮನ ಹರಿಸೋದು ಬಹಳ ಮುಖ್ಯ. ಗುದವು ದೀರ್ಘಕಾಲ ಬ್ಯಾಕ್ಟೀರಿಯಾ ಸಂಪರ್ಕಕ್ಕೆ ಬರುವ ಕಾರಣ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅನೇಕರಿಗೆ ಗುದದ ಸ್ವಚ್ಛತೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಪ್ರತಿಯೊಬ್ಬರೂ ಯೋನಿ ಜೊತೆ ಗುದದ ಸ್ವಚ್ಛತೆ ಹೇಗೆ ಮಾಡ್ಬೇಕು, ಅದ್ರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು.
ಗುದ (Anu) ದ ಆರೋಗ್ಯ – ಸ್ವಚ್ಛತೆ (Hygiene) ಹೀಗಿರಲಿ :
ಉಗುರು ಬೆಚ್ಚಗಿನ ನೀರನ್ನು ಬಳಸಿ : ಗುದದ ಸ್ವಚ್ಛತೆಗೆ ಬಹುತೇಕರು ತಣ್ಣನೆ ನೀರನ್ನು ಬಳಸುತ್ತಾರೆ. ತಜ್ಞ (Expert) ರ ಪ್ರಕಾರ ಇದು ತಪ್ಪು. ಗುದದ ಸ್ವಚ್ಛತೆಗೆ ನೀವು ಪ್ರತಿ ದಿನ ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಗುದ ಹಾಗೂ ಪುಷ್ಠದ ಭಾಗವನ್ನು ನೀವು ಗಟ್ಟಿಯಾಗಿ ಉಜ್ಜುವ ಅಗತ್ಯವಿಲ್ಲ. ರಾಸಾಯನಿಕ ಸೋಪ್ (soap) ಕೂಡ ಬಳಸಬೇಕಾಗಿಲ್ಲ. ಸೌಮ್ಯವಾದ ಸೋಪಿನಲ್ಲಿ ನೀವು ಪುಷ್ಠವನ್ನು ಸ್ವಚ್ಛಗೊಳಿಸಬೇಕು. ಸೋಪ್ ನಿಮಗೆ ಸಮಸ್ಯೆ ಆಗ್ತಿದೆ, ಅರ್ಜಿಯುಂಟು ಮಾಡ್ತಿದೆ ಎಂದಾದ್ರೆ ನೀವು ಸೋಪ್ ಬಳಕೆಯನ್ನು ಬಿಡಬಹುದು. ಆದ್ರೆ ಉಗುರು ಬೆಚ್ಚಗಿನ ನೀರನ್ನು ಮಾತ್ರ ಬಿಡಬೇಡಿ. ಪ್ರತಿ ದಿನ ಸ್ನಾನ ಮಾಡಿ. ಸ್ನಾನ ಮಾಡುವ ಸಮಯದಲ್ಲಿ ಉಗುರು ಬೆಚ್ಚಗಿನ ನೀರನ್ನು ಪುಷ್ಠಕ್ಕೆ ಹಾಕಿ ಕ್ಲೀನ್ ಮಾಡಿ.
ಕಾಂಡೋಮ್ ಅಲರ್ಜಿ ಆಗ್ತಿದ್ಯಾ? ಬೆಸ್ಟ್ ಪರಿಹಾರೋಪಾಯಗಳು ಇಲ್ಲಿವೆ!
ಟಾಯ್ಲೆಟ್ ನಲ್ಲಿ ಫೋನ್ ಬಳಕೆ ಬೇಡ : ಟಾಯ್ಲೆಟ್ ನಲ್ಲಿ ಫೋನ್ ಬಳಸುವ ಜನರು, ಅಲ್ಲಿ ದೀರ್ಘಕಾಲ ಕುಳಿತುಕೊಳ್ಳುತ್ತಾರೆ. ಹತ್ತು ನಿಮಿಷದಲ್ಲಿ ನಿಮ್ಮ ಮಲ ವಿಸರ್ಜನೆ ಕೆಲಸ ಮುಗಿಯಬೇಕು. ಅರ್ಧ ಗಂಟೆ, ಒಂದು ಗಂಟೆ ನೀವು ಶೌಚಾಲಯದಲ್ಲಿ ಕುಳಿತುಕೊಂಡಾಗ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇರುತ್ತದೆ. ನಿಮ್ಮ ಪುಷ್ಠದ ಆರೋಗ್ಯವನ್ನು ಇದು ಹಾಳು ಮಾಡುತ್ತದೆ.
ಪುಷ್ಠದ ವ್ಯಾಕ್ಸಿಂಗ್ (Waxing) ಬೇಡ : ಅನೇಕರು ಬಿಕನಿ ಧರಿಸುವ ಸಮಯದಲ್ಲಿ ಪುಷ್ಠದ ವ್ಯಾಕ್ಸಿಂಗ್ ಗೆ ಮುಂದಾಗ್ತಾರೆ. ತಜ್ಞರ ಪ್ರಕಾರ ಇದು ಆರೋಗ್ಯಕ್ಕೆ ಹಾನಿಕರ. ಗುದದ್ವಾರ ಸೂಕ್ಷ್ಮವಾಗಿರುತ್ತದೆ. ವ್ಯಾಕ್ಸಿಂಗ್ ವೇಳೆ ಸೋಂಕಿಗೆ ಒಳಗಾದ್ರೆ, ಕತ್ತರಿಸಿದ್ರೆ ಅಥವಾ ಸುಟ್ಟರೆ ತೊಂದರೆ ಅನುಭವಿಸಬೇಕಾಗುತ್ತದೆ. ಗುದದ್ವಾರದಲ್ಲಿರುವ ಹೇರ್ ತನ್ನದೇ ಕೆಲಸವನ್ನು ನಿರ್ವಹಿಸುವ ಕಾರಣ ಅದ್ರ ವ್ಯಾಕ್ಸಿಂಗ್ ಸೂಕ್ತವಲ್ಲ.
ಸಂಭೋಗದ (Sexual Intercourse) ನಂತ್ರ ಸ್ವಚ್ಛತೆ : ಸೆಕ್ಸ್ ನಂತ್ರ ಬಹುತೇಕ ಮಹಿಳೆಯರು ಯೋನಿ ಸ್ವಚ್ಛತೆಗೆ ಮುಂದಾಗ್ತಾರೆ. ಆದ್ರೆ ಗುದದ ಕ್ಲೀನಿಂಗ್ ನಿರ್ಲಕ್ಷ್ಯ ಮಾಡ್ತಾರೆ. ಸೆಕ್ಸ್ ನಂತ್ರ ಗುದದ ಸ್ವಚ್ಛತೆ ಕೂಡ ಮುಖ್ಯ. ಅಲ್ಲಿನ ಸೋಂಕು ಕಾಣಿಸಿಕೊಂಡು, ದುದ್ದು, ಉರಿ ಕಾಣಿಸಿಕೊಳ್ಳಬಹುದು. ಪ್ರತಿ ಬಾರಿಯೂ ಗುದವನ್ನು ಕ್ಲೀನ್ ಮಾಡಿದಾಗ ಸೋಂಕಿನ ಅಪಾಯ ಕಡಿಮೆ ಆಗುತ್ತದೆ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ.
ನಿಮ್ಮ ಮಕ್ಕಳು ಟಿವಿ, ಮೊಬೈಲ್ ನೋಡ್ತಾ ಊಟ ಮಾಡ್ರಾರಾ? ಈ ಅಪಾಯದ ಬಗ್ಗೆ ಅರಿವಿರಲಿ!
ಆಹಾರದ ಬಗ್ಗೆ ಇರಲಿ ಗಮನ : ಗುದದ ಆರೋಗ್ಯ ನೀವು ಸೇವನೆ ಮಾಡುವ ಆಹಾರವನ್ನೂ ಅವಲಂಬಿಸಿದೆ. ಫೈಬರ್ ಇರುವ ಆಹಾರವನ್ನು ನೀವು ಸೇವನೆ ಮಾಡುವುದು ಮುಖ್ಯ. ಮಲಬದ್ಧತೆ, ಉರಿಯೂತ, ಪೈಲ್ಸ್ ಮುಂತಾದವು ಗುದದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಫೈಬರ್ ಭರಿತ ಹಣ್ಣುಗಳು, ತರಕಾರಿ, ಬೀನ್ಸ್ ಮತ್ತು ಧಾನ್ಯಗಳ ಸೇವನೆ ಮಾಡಿ. ಇದು ಜೀರ್ಣಕ್ರಿಯೆಗೆ ಸಹಕಾರಿ. ಈ ಆಹಾರ ಸೇವನೆ ಮಾಡೋದ್ರಿಂದ ನಿಮ್ಮ ಕರುಳು ಆರೋಗ್ಯವಾಗಿರೋದಲ್ಲದೆ ಗುದ ಆರೋಗ್ಯವಾಗಿರುತ್ತದೆ.