Kidney Failure : ಮೂತ್ರಪಿಂಡದ ವೈಫಲ್ಯವನ್ನು ಮೂತ್ರದ ಬಣ್ಣದಿಂದ ಗುರುತಿಸಿ
ಮೂತ್ರಪಿಂಡದ ವೈಫಲ್ಯ ಪ್ರಣಾಪಾಯಕ್ಕೂ ಕಾರಣವಾಗಬಹುದು. ಮೂತ್ರದ ಬಣ್ಣ ಗಮನಿಸಿ ಮೂತ್ರಪಿಂಡ ವೈಫಲ್ಯ ಇದೆಯಾ ಅನ್ನೋದನ್ನು ಗುರುತಿಸಬಹುದು.
ಮೂತ್ರಪಿಂಡದ (Kidney) ಕೆಲವು ಸಮಸ್ಯೆಗಳು ಮೂತ್ರಪಿಂಡದ ವೈಫಲ್ಯ (Failure)ಕ್ಕೆ ಕಾರಣವಾಗಬಹುದು. ಆದರೆ ಮೂತ್ರಪಿಂಡದ ವೈಫಲ್ಯವನ್ನು ಮೂತ್ರದ ಬಣ್ಣದ ಮೂಲಕ ಗ್ರಹಿಸಬಹುದು. ಹಾಗಿದ್ದರೆ ಮೂತ್ರಪಿಂಡ ಸಮಸ್ಯೆಗೆ ತುತ್ತಾದ ವ್ಯಕ್ತಿಯ ಮೂತ್ರದ (Urine) ಬಣ್ಣ ಹೇಗಿರುತ್ತದೆ, ಯಾಕೆ ಈ ಸಮಸ್ಯೆ ಉಂಟಾಗುತ್ತದೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ.
ಮೂತ್ರಪಿಂಡದ ವೈಫಲ್ಯ ಅಂದ ಕೂಡಲೇ ಹೆಚ್ಚಿನವರು ಅಂದುಕೊಳ್ಳುವುದು ಬಹುಶಃ ಈ ವ್ಯಕ್ತಿ ವಿಪರೀತ ಕುಡಿತದ ಚಟಕ್ಕೆ ಬಿದ್ದಿರಬೇಕು ಎಂದು. ಮದ್ಯಪಾನದಿಂದ (Alchoholic) ಮೂತ್ರಪಿಂಡದ ಸಮಸ್ಯೆ ಉಂಟಾಗುವುದು ನಿಜ. ಆದರೆ ಅದೊಂದೇ ಮೂತ್ರಪಿಂಡ ಸಮಸ್ಯೆಗೆ, ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಲ್ಲ. ಆದರೆ ಮೂತ್ರಪಿಂಡದ ಸಮಸ್ಯೆ ಶುರುವಾದರೆ ಅದರಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳಾಗುತ್ತವೆ. ಮೂತ್ರಪಿಂಡದ ಸಮಸ್ಯೆಯನ್ನು ಹಾಗೇ ಬಿಟ್ಟರೆ ಈ ಮುಖ್ಯ ಅಂಗ ಕ್ರಮೇಣ ದುರ್ಬಲಗೊಳ್ಳುತ್ತಾ ಹೋಗುತ್ತದೆ. ಅಂತಿಮವಾಗಿ ಇದು ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸಬಹುದು. ಇದು ಪ್ರಾಣಾಪಾಯಕ್ಕೇ (Life risk) ಕಾರಣವಾಗಬಹುದು.ಮೂತ್ರಪಿಂಡ ವೈಫಲ್ಯದಿಂದ ನಿಮ್ಮ ಮೂತ್ರದ ಬಣ್ಣ ಬದಲಾಗುತ್ತದೆ. ಇದು ಮೂತ್ರಪಿಂಡ ವೈಫಲ್ಯದ (Kidney Failure) ಪ್ರಮುಖ ಲಕ್ಷಣವಾಗಿದೆ.
ಮಕ್ಕಳಿಗೆ ನಿರ್ಜಲೀಕರಣದ ಸಮಸ್ಯೆಯಿದ್ದರೆ ಗೊತ್ತಾಗೋದು ಹೇಗೆ ?
ಇದಲ್ಲದೆ, ಮೂತ್ರದ ಬಣ್ಣ ಮೂತ್ರಪಿಂಡ ವೈಫಲ್ಯದ ಬಗ್ಗೆ ಹಲವು ಸಂಕೇತಗಳನ್ನೂ ನೀಡುತ್ತವೆ. ಮದ್ಯಪಾನ,ಅಧಿಕ ರಕ್ತದೊತ್ತಡ, (Blood preasure) ಮಧುಮೇಹ ಅಥವಾ ಕೆಲವು ಔಷಧಿಗಳ ಸೇವನೆ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಮೂತ್ರಪಿಂಡವು ಸಾಕಷ್ಟು ಹಾನಿಯಾದ ನಂತರ ಮೂತ್ರಪಿಂಡದ ಕಾಯಿಲೆಯ (Kidney Disease) ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದಾಗ್ಯೂ, ಕೆಲವು ಸಮಸ್ಯೆಗಳನ್ನು ಅದರ ಆರಂಭಿಕ ಲಕ್ಷಣಗಳಾಗಿ ಕಾಣಬಹುದು. ಅದರಲ್ಲಿ ಮೊದಲ ಲಕ್ಷಣ ಅಂದರೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು. ಮೂತ್ರ ಸರಿಯಾಗಿ ವಿಸರ್ಜನೆಯಾಗದೇ ನೀರು ತುಂಬುವುದರಿಂದ ಕೀಲುಗಳಲ್ಲಿ ನೋವು (Pain) ಕಾಣಿಸಿಕೊಳ್ಳಬಹುದು. ಈ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.
ಮಲಗುವ ಮುನ್ನ ನೀರು ಕುಡಿಯೋದು ಒಳ್ಳೇದೋ ಅಲ್ವೋ?
ಮೂತ್ರಪಿಂಡ ವೈಫಲ್ಯದಲ್ಲಿ ಉಂಟಾದಾಗ ಇನ್ನೂ ಕೆಲವು ಲಕ್ಷಣ ಕಂಡು ಬರಬಹುದು. ಆಗಾಗ್ಗೆ ಕಾಣಿಸಿಕೊಳ್ಳುವ ವಿಪರೀತ ತಲೆನೋವು (Severe Headache) ಕಂಡುಬರಬಹುದು. ಮೈ ಕೈಯಲ್ಲಿ ತುರಿಕೆ ಶುರುವಾಗಬಹುದು. ಕೆಲಸ ಮಾಡಿ, ಬಿಡಿ ದಿನವಿಡೀ ಆಯಾಸದಿಂದ ಇರುವುದು. ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರದಿರುವುದು, ಇದ್ದಕ್ಕಿದ್ದಂತೆ ತೂಕ ಅಥವಾ ಹಸಿವು ಕಡಿಮೆಯಾಗುವುದು. ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಏಕಾಗ್ರತೆಯ ಕೊರತೆ ಉಂಟಾಗಬಹುದು. ಈ ಲಕ್ಷಣ (Symptom)ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇನ್ನು ಮೂತ್ರಪಿಂಡದ ಆರೋಗ್ಯವನ್ನು ಮೂತ್ರದ ಬಣ್ಣದಿಂದ ಗುರುತಿಸಬಹುದು. ಇದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ, ಇದು ಮೂತ್ರಪಿಂಡ ವೈಫಲ್ಯದ ದೊಡ್ಡ ಸಂಕೇತವಾಗಿದೆ. ಹಾಗಾಗಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ.
ಮೂತ್ರದ ಬಣ್ಣ ತಿಳಿಯಾಗಿ ಅಥವಾ ತಿಳಿ ಹಳದಿ ಬಣ್ಣದಲ್ಲಿದ್ದರೆ ಹೈಡ್ರೇಟ್ (Hydrate)ಆಗಿರುವ ಆರೋಗ್ಯವಂತ ಶರೀರ ನಿಮ್ಮದು ಅಂದುಕೊಳ್ಳಬಹುದು. ಗಾಢ ಹಳದಿ ಬಣ್ಣದಲ್ಲಿದ್ದರೆ ದೇಹದಲ್ಲಿ ನೀರಿನ ಕೊರತೆ ಎಂದರೆ ನಿರ್ಜಲೀಕರಣ ಉಂಟಾಗಿದೆ ಎಂದು ಅರ್ಥೈಸಬಹುದು. ಕಿತ್ತಳೆ ಬಣ್ಣದಲ್ಲಿದ್ದರೆ ದೇಹದಲ್ಲಿ ತೀವ್ರವಾದ ನೀರಿನ ನಷ್ಟ ಅಥವಾ ಪಿತ್ತರಸದ ಚಿಹ್ನೆ. ಮೂತ್ರದ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣ ಇದ್ದರೆ ಮೂತ್ರದಲ್ಲಿ ರಕ್ತ ಅಥವಾ ಬೀಟ್ರೂಟ್ ರೀತಿಯ ಆಹಾರ ಸೇವನೆಯ ಕಾರಣ. ಆದರೆ ಮೂತ್ರದಲ್ಲಿ ನೊರೆ ಕಂಡು ಬಂದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದು ಮೂತ್ರಪಿಂಡ ವೈಫಲ್ಯದ ಸೂಚನೆ ಆಗಿರಬಹುದು.
Liver ತೊಂದ್ರೆಗೊಳಗಾದ್ರೆ ಏನಾಗುತ್ತೆ?
ಮೂತ್ರಪಿಂಡ ಅಥವಾ ಕಿಡ್ನಿ ಆರೋಗ್ಯ ಚೆನ್ನಾಗಿರಬೇಕಾದರೆ ಜಂಕ್ ಫುಡ್, ಕರಿದ ಪದಾರ್ಥ, ಮದ್ಯಪಾನ ಇತ್ಯಾದಿಗಳನ್ನು ತ್ಯಜಿಸೋದು ಅನಿವಾರ್ಯ. ಮೂತ್ರಪಿಂಡದ ಸಮಸ್ಯೆ ಇರುವವರು ಚೆನ್ನಾಗಿ ಬೇಯಿಸದ ಪದಾರ್ಥಗಳನ್ನು ತಿನ್ನಬಹುದು. ಮೂತ್ರಪಿಂಡದ ಸಮಸ್ಯೆಗೆ ಆಯುರ್ವೇದದಲ್ಲಿರುವ ಬೆಸ್ಟ್ ಪರಿಹಾರ ಎಂದರೆ ಪ್ರತೀ ದಿನ ಬೆಳಗ್ಗೆ ಸಂಜೆ ತುಳಸಿ ರಸಕ್ಕೆ ಜೇನು ಸೇರಿಸಿ ತಿನ್ನುವುದು. ಬಾಳೆ ಹಣ್ಣಿನ ಸೇವನೆ, ನೆಲ್ಲಿಕಾಯಿ ರಸ ಕಿಡ್ನಿ ಸಮಸ್ಯೆಗೆ ಪರಿಹಾರ ನೀಡಬಲ್ಲದು. ನಿತ್ಯ ಆಹಾರದಲ್ಲಿ ಹೂಕೋಸು, ಬ್ಲೂಬೆರ್ರಿ, ಎಂಬಣ್ಣದ ದ್ರಾಕ್ಷಿ, ಎಗ್‌ವೈಟ್, ಬೆಳ್ಳುಳ್ಳಿ ಇತ್ಯಾದಿ ಸಹಕಾರಿ.