Liver ತೊಂದ್ರೆಗೊಳಗಾದ್ರೆ ಏನಾಗುತ್ತೆ?

ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು ಲಿವರ್‌ ದಕ್ಷತೆಯಿಂದ ಕಾರ್ಯನಿರ್ವಹಿಸುವುದು ಅಗತ್ಯ. ಲಿವರ್‌ ಹಾಳಾಗಿದ್ದರೆ ಅಥವಾ ಅದರ ಕಾರ್ಯವಿಧಾನದಲ್ಲಿ ವ್ಯತ್ಯಾಸವಾಗುವುದರಿಂದ ದೇಹದ ಒಟ್ಟಾರೆ ಆರೋಗ್ಯ ಕ್ಷೀಣಿಸುತ್ತ ಬರುತ್ತದೆ. ಅದನ್ನು ಕೆಲವು ಲಕ್ಷಣಗಳ ಮೂಲಕ ಗುರುತಿಸಬಹುದು. 
 

liver failure symptoms that you should know

ತಿಂದ ಆಹಾರವನ್ನು ಪಚನಗೊಳಿಸುವಲ್ಲಿ ಯಕೃತ್ತು ಅಥವಾ ಲಿವರ್‌ (Liver) ಪಾತ್ರ ಮಹತ್ವದ್ದು. ಸೇವಿಸುವ ಆಹಾರ(Food)ವನ್ನು ಜೀರ್ಣಗೊಳಿಸುವುದರಿಂದ ಹಿಡಿದು ದೇಹವನ್ನು ಸಮತೋಲನಗೊಳಿಸುವ ಪ್ರಮುಖ ಪಾತ್ರವನ್ನು ಯಕೃತ್ತು ನಿರ್ವಹಿಸುತ್ತದೆ. ಒಂದೊಮ್ಮೆ ಲಿವರ್‌ ಆರೋಗ್ಯ (Health) ಸರಿಯಾಗಿಲ್ಲದಿದ್ದರೆ ಅಥವಾ ಲಿವರ್‌ ಕಾರ್ಯಕ್ಷಮತೆಗೆ ಧಕ್ಕೆಯಾದರೆ ಅದರ ಪರಿಣಾಮ ಇಡೀ ದೇಹದಲ್ಲಿ ಗೋಚರಿಸುತ್ತದೆ. ಇಡೀ ದೇಹದ ಮೇಲೂ ಅದರ ಪರಿಣಾಮವುಂಟಾಗುತ್ತದೆ. ಹಲವಾರು ಸಮಸ್ಯೆಗಳು ತಲೆದೋರಬಹುದು. ಹೀಗಾಗಿ, ಲಿವರ್‌ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. 
ಒಂದೊಮ್ಮೆ ನಿಮ್ಮ ಲಿವರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ಅದನ್ನು ಗುರುತಿಸುವುದು ಅತಿ ಸುಲಭ. ಕೆಲವು ಲಕ್ಷಣಗಳ ಮೂಲಕ ಅದನ್ನು ಅರಿಯಬಹುದು. ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಅದು ಜೀವಕ್ಕೇ ಹಾನಿ ತರಬಲ್ಲದು.

•    ಹಳದಿ ಬಣ್ಣವಾಗುವುದು (Yellow Color)
ಚರ್ಮ (Skin) ಹಳದಿ ಬಣ್ಣವಾಗುವುದು ಹಾಗೂ ಕಣ್ಣುಗಳ (Eyes) ಬಿಳಿಯ ಭಾಗ ಹಳದಿಯಾಗುವುದು ಲಿವರ್‌ ಹಾಳಾಗಿರುವ ಸಂಕೇತ. ಮೂತ್ರ (Urine) ಕೂಡ ಹಳದಿಗೆ ತಿರುಗುತ್ತದೆ. ಲಿವರ್‌ ಕೆಂಪು ರಕ್ತ ಕಣಗಳನ್ನು (Red Blood Cells) ಸರಿಯಾಗಿ ಪರಿಚಲನೆಗೊಳಿಸುವುದರಲ್ಲಿ ವಿಫಲವಾದಾಗ ಈ ಕಾರಣದಿಂದ ಬಿಳಿರಕ್ತಗಳ (White Cells) ಸಂಖ್ಯೆ ಹೆಚ್ಚಾಗುತ್ತದೆ. ಆರೋಗ್ಯವಂತ ಲಿವರ್‌ ನಲ್ಲಿ ಬಿಳಿಕಣಗಳ ಸಂಖ್ಯೆ ಹೀರಿಕೊಳ್ಳಲ್ಪಡುತ್ತದೆ ಹಾಗೂ ಅದು ಪಿತ್ತವಾಗಿ ಬದಲಾಗುತ್ತದೆ, ಇದರಿಂದ ಪಚನಕ್ರಿಯೆಗೆ  (Digestion) ಅನುಕೂಲವಾಗುತ್ತದೆ. ಆದರೆ ಲಿವರ್‌ ದಕ್ಷತೆ ಚೆನ್ನಾಗಿಲ್ಲದಿದ್ದಾಗ ಇದರಲ್ಲಿ ವ್ಯತ್ಯಾಸವಾಗುತ್ತದೆ. ಹಾಗೆಯೇ, ಮಲದ ಬಣ್ಣದಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಮಲ ಸಾಮಾನ್ಯ ಬಣ್ಣ ಕಳೆದುಕೊಂಡು ಬಿಳಿಯಾಗುವುದನ್ನು ಗಮನಿಸಬಹುದು.



•    ಚರ್ಮದಲ್ಲಿ ತುರಿಕೆ (Irritating Skin)
ಮೈಮೇಲೆ ಕಂಡಲ್ಲೆಲ್ಲ ತುರಿಕೆ ಬರುವುದು ಲಿವರ್‌ ಹಾಳಾಗಿರುವುದರ ಸಂಕೇತವಾಗಿರಬಹುದು. ಲಿವರ್‌ ಗೂ ನಮ್ಮ ಚರ್ಮಕ್ಕೂ ಗಾಢವಾದ ಬಂಧವಿದೆ. ಲಿವರ್‌ ನಲ್ಲಿ ಚೂರೇ ಚೂರು ಏರುಪೇರಾದರೂ ಚರ್ಮದ ಮೇಲೆ ಅದರ ಪರಿಣಾಮವುಂಟಾಗುತ್ತದೆ. ಲಿವರ್‌ ನಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ಚರ್ಮದ ಕೆಳಗೆ ಹೆಚ್ಚಿನ ಪ್ರಮಾಣದಲ್ಲಿ ಪಿತ್ತ ಜಮಾವಣೆಯಾಗುತ್ತ ಸಾಗುತ್ತದೆ. ಇದರಿಂದ ತುರಿಕೆ ಉಂಟಾಗುತ್ತದೆ. ಕೆಲವೊಮ್ಮೆ ಚರ್ಮದ ತುರಿಕೆ ಬೇರೆ ಬೇರೆ ಸಮಸ್ಯೆಗಳಿಂದಲೂ ಉಂಟಾಗಬಹುದು.

•    ಹಸಿವಾಗದಿರುವುದು (No Hungry)
ಹಸಿವಾಗದಿರುವುದು ಸಹ ಲಿವರ್‌ ದಕ್ಷತೆ ಕಡಿಮೆಯಾಗಿರುವುದರ ಸಂಕೇತ. ಲಿವರ್‌ ನಲ್ಲಿ ಒಂದು ರೀತಿಯ ಪಿತ್ತರಸ ಉತ್ಪಾದನೆಯಾಗುತ್ತದೆ. ಅದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಲಿವರ್‌ ಹಾಳಾಗಿದ್ದಾಗ ಪಿತ್ತರಸ ಸರಿಯಾಗಿ ಉತ್ಪಾದನೆಯಾಗದೆ ಅಲ್ಲಿನ ಕಾರ್ಯ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ. ಹೀಗಾಗಿ, ಹಸಿವಾಗುವುದಿಲ್ಲ. ಇದರಿಂದಾಗಿ ತೂಕ ಕಡಿಮೆಯಾಗುವುದು, ಹೊಟ್ಟೆನೋವು ಸಹ ಕಾಣಿಸಿಕೊಳ್ಳಬಹುದು.

•    ಬ್ಲೀಡಿಂಗ್‌ ಅಥವಾ ಗಾಯವಾಗುವುದು (Bleeding and Wound)
ನಿಮಗೆ ಒಂದೊಮ್ಮೆ ಪದೇ ಪದೆ ಗಾಯವಾಗುತ್ತಿದ್ದರೆ, ಗಾಯವಾದಾಗ ಬ್ಲೀಡಿಂಗ್‌ ನಿಲ್ಲದೆ ಇದ್ದರೆ ನೀವು ವೈದ್ಯರನ್ನು ಕಾಣಬೇಕು. ಇದು ಲಿವರ್‌ ಸಮಸ್ಯೆ ಆಗಿರಬಹುದು. ಗಾಯವಾದ ಬಳಿಕ ಬ್ಲೀಡಿಂಗ್‌ ನಿಲ್ಲದಿರುವುದು ಒಂದು ಅಗತ್ಯ ಪ್ರೊಟೀನ್‌ (Protein) ಕಡಿಮೆಯಾಗಿರುವುದ ಸಂಕೇತವಾಗಿದೆ. ಈ ಪ್ರೊಟೀನ್‌ ಅನ್ನು ಉತ್ಪಾದಿಸುವ ಅಂಗ ಲಿವರ್‌ ಆಗಿದೆ. ಪ್ರೊಟೀನ್‌ ಸರಿಯಾಗಿ ಉತ್ಪಾದನೆಯಾಗುತ್ತಿಲ್ಲ ಎಂದಾದರೆ ಗಾಯದ ರಕ್ತವನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. 

Ghee Massage: ತುಪ್ಪದಿಂದ ತಲೆ ಮಸಾಜ್‌ ಮಾಡಿಕೊಳ್ಳಿ ಅದ್ಭುತ ಪರಿಣಾಮ ...

•    ಏಕಾಗ್ರತೆಯ ಕೊರತೆ (Concentration Problem)
ಲಿವರ್‌ ಗೂ ಏಕಾಗ್ರತೆಗೂ ಏನು ಸಂಬಂಧ ಎನ್ನಿಸಬಹುದು. ಲಿವರ್‌ ವಿಷಯುಕ್ತ ಪದಾರ್ಥಗಳನ್ನು ಸರಿಯಾಗಿ ಫಿಲ್ಟರ್‌ ಮಾಡಿಲ್ಲ ಎಂದಾದರೆ ದೇಹದ ಇತರ ಕೆಲಸಗಳಿಗೂ ಬಾಧೆಯಾಗುತ್ತದೆ. ಟಾಕ್ಸಿನ್‌ (Toxins) ಅಂಶ ಸರಿಯಾಗಿ ಹೋಗದಿದ್ದರೆ ಅದು ಮಾನಸಿಕ ಸಮಸ್ಯೆಗೂ ಕಾರಣವಾಗಬಲ್ಲದು. ಫಲವಾಗಿ ಏಕಾಗ್ರತೆಯ ಕೊರತೆಯಾಗಬಹುದು. ಮೂಡಿನಲ್ಲಿ ವ್ಯತ್ಯಾಸವಾಗಬಹುದು. ಭ್ರಮೆ, ಸ್ಮರಣೆ ಶಕ್ತಿ ನಾಶ ಸೇರಿದಂತೆ ವ್ಯಕ್ತಿತ್ವದಲ್ಲಿ ಬದಲಾವಣೆ ಉಂಟಾಗಬಹುದು.


 

Latest Videos
Follow Us:
Download App:
  • android
  • ios