Asianet Suvarna News Asianet Suvarna News

Skin Care: ಸನ್‌ಸ್ಕ್ರೀನ್ ಬಳಸಿ ತ್ವಚೆ ಕಾಯ್ದುಕೊಳ್ಳಿ!

ಪ್ರತೀ ದಿನ ಮುಖಕ್ಕೆ ಮರೆಯದೆ ಕ್ರೀಮ್ (Cream) ಹಚ್ಚುವುದು ಹೆಣ್ಣು ಮಕ್ಕಳ ರೂಢಿಯಾಗಿದೆ. ಅದು ಮನೆಯ ಒಳಗಿರಲಿ, ಹೊರ ಹೋಗುವಾಗಿರಲಿ. ಒಮ್ಮೆ ಮುಖ ತೊಳೆದು(Face wash) ಫ್ರೇಶ್(Fresh) ಆದ್ರೆ ಸಾಕು ಕ್ರೀಮ್‌ಗೆ ಮೊದಲು ಕೈ ಹೋಗುತ್ತೆ. ಹಾಗಾದರೆ ಯಾವಾಗ? ಹೇಗೆ? ಯಾವ ರೀತಿಯ ಸನ್‌ಸ್ಕಿçÃನ್(Sunscreen) ಬಳಸಬೇಕು? ಇಲ್ಲಿದೆ ಮಾಹಿತಿ.     

How to sunscreen lotion to have healthy and glowing skin during summer
Author
Bangalore, First Published May 31, 2022, 1:30 PM IST

 ಈಗಿನ ಬಿಸಿಲು ನೆನೆಸಿಕೊಂಡರೆ ಮನೆಯಿಂದ ಹೊರ ಹೋಗುವುದೇ ಬೇಡ ಮನೆಯೊಳಗೆ ಇದ್ದುಬಿಡೋಣ ಎಂದೆನಿಸುವುದು ಸಹಜ. ಸುಮಾರು ಬೆಳಗ್ಗೆ(Morning) 9 ಗಂಟೆಗೆ ಚುರು ಚುರು ಬಿಸಿಲು ಆರಂಭವಾದರೆ ಸಂಜೆ(Evening) 5 ಗಂಟೆಯವರೆಗೂ ಇರುತ್ತದೆ. ಬೇಸಿಗೆಯಲ್ಲಿ(Summer) ನೇರವಾಗಿ ಬಿಸಿಲಿಗೆ (Sun) ಮುಖ ಅಥವಾ ಮೈವೊಡ್ಡುವುದು ಸಾಧ್ಯವಿಲ್ಲ. ಮನೆಯಿಂದ ಹೊರಗೆ ಕಾಲಿಡಬೇಕಾದರೆ ಮುಖ ಹಾಗೂ ತಲೆ ಎರಡೂ ಕವರ್ (Cover) ಆಗುವಂತೆ ಬಟ್ಟೆ ಸುತ್ತಿಕೊಂಡು ಕಳ್ಳನಂತೆ ಹೊರಗಡೆ ಕಾಲಿಡುತ್ತಾರೆ. ಸನ್ ಬರ್ನ(Sun burn), ಸ್ಕಿನ್ ಅಲರ್ಜಿ(Skin allergy), ರೆಡ್ ಸರ್ಕ್ಲ್‌ಗಳು(Red circles) ತೀವ್ರ ಬಿಸಿಲಿಗೆ ಮೈ ಸೋಕಿದಾಗ ಸಾಮಾನ್ಯವಾಗಿ ಆಗುತ್ತವೆ. ಹೀಗಿರುವಾಗ ನಮ್ಮ ಸ್ಕಿನ್ ಕೇರ್(Skin care) ಹೇಗೆ ಮಾಡಬೇಕು? ಯಾವ ಸನ್ ಸ್ಕಿçÃನ್(Sunscreen) ಹಚ್ಚಿದರೆ ಉತ್ತಮ? ಅಷ್ಟಕ್ಕು ಸನ್‌ಸ್ಕಿçÃನ್ ಯಾಕೆ ಹಚ್ಚಬೇಕು ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ. 

ಇದನ್ನು ಉಪಯೋಗಿಸಿದ್ರೆ, ಬೇಸಿಗೆಯಲ್ಲಿ Sunburn ಸಮಸ್ಯೆ ಕಾಡೋಲ್ಲ!

1.ಸೂರ್ಯನ ನೇರವಾದ ಅಲ್ಟಾçವೈರಸ್ ಕಿರಣಗಳು(Ultra virus) ಚರ್ಮದ ಮೇಲೆ ಬಿದ್ದರೆ ಹಲವು ತೊಂದರೆಗಳಾಗುತ್ತವೆ. ಅಲರ್ಜಿ, ಸನ್‌ಬರ್ನ್, ಸ್ಕಿನ್ ಕ್ಯಾನ್ಸರ್(Skin cancer), ಟ್ಯಾನ್(Tann), ತುರಿಕೆ ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇದನ್ನು ತಡೆಗಟ್ಟಲು ಮನೆಯಿಂದ ಹೊರ ಹೋಗುವ ಮುನ್ನ ಮಾರ್ಕೆಟ್‌ನಲ್ಲಿ ಸಿಗುವ ಸನ್‌ಸ್ಕಿçÃನ್ ಅನ್ನು ಚರ್ಮದ ಮೇಲೆ ಹಚ್ಚಬೇಕಾಗುತ್ತದೆ. ಹೀಗೆ ಹಚ್ಚಿದರೆ ಸೂರ್ಯನ ಕಿರಣಗಳಿಂದಾಗುವ ಸಮಸ್ಯೆಗಳನ್ನು ತಡೆಗಟ್ಟಬಹುದು.

2. ಮನೆಯಲ್ಲಿ ಎಂಥಹ ಪ್ರೊಟೆಕ್ಟ್ ನೀಡುವ ಗ್ಲಾಸ್ ಬಳಸಿದರೂ ಕಿಟಕಿ(Window) ಸೀಳಿ ಬರುವ ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗಿಯೇ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಯುವಿಎ ರೇಸ್(UVA Rays) ತಡೆದರೂ ಗ್ಲಾಸ್ ಬೇಧಿಸಿ ಮೈ ಮೇಲೆ ಯುವಿಬಿ ರೇಸ್(UVB Rays) ಬೀಳುತ್ತದೆ. ಸ್ಕಿನ್‌ನ ಫೋಟೋ ಡ್ಯಾಮೇಜ್(Photo damage), ಅಲರ್ಜಿ, ಸನ್‌ಬರ್ನ್, ಟ್ಯಾನ್, ಸ್ಕಿನ್ ಕ್ಯಾನ್ಸರ್‌ಗಳು ಬರಬಹುದು. ಇದರಿಂದಾಗಿ ಮನೆಯಲ್ಲಿದ್ದರೂ ಮೊದಲು ಉಪಯೋಗಿಸುತ್ತಿದ್ದ ಕ್ರೀಮ್ ಬಿಟ್ಟು ಬೇರೆ ಕ್ರೀಮ್ ಉಪಯೋಗಿಸುತ್ತಾರೆ. 

3.ಕೇವಲ ಬೇಸಿಗೆಯಲ್ಲಿ ಸನ್‌ಸ್ಕಿçÃನ್ ಬಳಸಲಾಗುತ್ತದೆ. ಆದರೆ ಇದನ್ನು ದಿನವೂ(Daily) ಬಳಸುವುದು ಒಳ್ಳೆಯದು. ಇದರಿಂದ ಬೇಸಿಗೆ ಮಾತ್ರವಲ್ಲದೆ ಬೇರೆಯ ಸಂದರ್ಭದಲ್ಲೂ ಕಾಣಿಸಿಕೊಳ್ಳುವ ಚರ್ಮದ ಸಮಸ್ಯೆಗಳು ದೂರವಾಗಬಹುದು. ಅದು ಅತಿಯಾದ ಬಿಸಿಲಿರಲಿ, ಮೋಡದ ವಾತವಾರಣವಿರಲಿ ಶೇ.80ರಷ್ಟು ಸೂರ್ಯನ ಕಿರಣಗಳು ಮೋಡವನ್ನು ಬೇಧಿಯಾದದರೂ ಚರ್ಮವನ್ನು ಸೋಕುತ್ತದೆ. ಇದರಿಂದ ಸ್ಕಿನ್ ಡ್ಯಾಮೇಜ್ ಮತ್ತಷ್ಟು ಹೆಚ್ಚಗಿ ಸ್ಕಿಸ್ಕಿನ್ ಕ್ಯಾನ್ಸರ್‌ ಬರಬಹುದು. ಹಾಗಾಗಿ ಪ್ರತೀ ದಿನ ಸನ್‌ಸ್ಕಿçÃನ್ ಹಚ್ಚುವುದು ಒಳ್ಳೆಯದೆಂದು ತಜ್ಷರು ಅಭಿಪ್ರಾಯಿಸಿದ್ದಾರೆ.

4.ಹೊರಗಿನ ಕೆಟ್ಟ ವಾತಾವರಣದಿಂದ(Air Pollution) ಚಮ್ಮಕ್ಕೆ ರಕ್ಷಣೆ ಸಿಗುತ್ತದೆ. ಅತಿಯಾದ ಬಿಸಿಲಿಗೆ ಮೈಯ್ಯೊಡ್ಡಿದರೆ ಯುವಿ(UV) ರೇಸ್‌ನಿಂದಾಗಿ ಮೊದಲು ಟ್ಯಾನ್ ಆಗಿ ನಂತರ ಅದು ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆಗಳು ಹೆಚ್ಚು ಇದನ್ನು ಸನ್‌ಸ್ಕಿçÃನ್ ತಪ್ಪಿಸುತ್ತದೆ.

5. ಚರ್ಮಕ್ಕನುಗುಣವಾಗಿ ಸನ್‌ಸ್ಕಿçÃನ್ ಅನ್ನು ಬಳಸಬೇಕಾಗುತ್ತದೆ. ಅದಕ್ಕೆ ಡೈನಕಾಲಜಿಸ್ಟ್(Gynaecologist) ಅನ್ನು ಸಂಪರ್ಕಿಸಿ ಉಪಯೋಗಿಸುವುದು ಒಳ್ಳೆಯದು. 

ಸನ್‌ಸ್ಕ್ರೀನ್ ಕಂಪನಿಗಳು ಹೆದರಿಸುವಷ್ಟು ಸೂರ್ಯರಶ್ಮಿ ಕೆಟ್ಟದ್ದೇ?

ಸನ್‌ಸ್ಕ್ರೀನ್ ಹೇಗಿರಬೇಕು?
ನೀವು ಬಳಸುವ ಕ್ರೀಮ್‌ನಲ್ಲಿ ನೀರಿನಾಂಶವಿರುವ ಜೆಲ್(Water Gel) ಬಳಸಿದರೆ ಉತ್ತಮ. SPFF50++ ಇರುವ ಕ್ರೀಮ್(Cream) ಬಳಸುವುದರಿಂದ ವೈಟ್ (White) ಆಗುವುದು, ಚರ್ಮದ ಸಮಸ್ಯೆ, ಕೆಂಪಾಗುವುದು, ಹೈಪರ್‌ಪಿಂಗ್ಮೆಂಟೇಷನ್ (Hyperpigmentation), ಡ್ರೈ (Dry) ಆಗುವುದು, ಡೀಹೈಡ್ರೇಟ್(Dehydrate),  ವಿಷಮ ಕಿರಣಗಳಿಂದ ಪ್ರೊಟೆಕ್ಷನ್ (Protection), ವಾಯುಮಾಲಿನ್ಯದಿಂದ(Air pollution) ಉಂಟಾಗುವ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ.

ಯಾವಾಗ ಬಳಸಬೇಕು?
ಮನೆಯಿಂದ ಹೊರ ನಡೆಯುವ 30 ನಿಮಿಷಕ್ಕೂ ಮುನ್ನ ಸನ್ ಸ್ಕಿçÃನ್ ಹಚ್ಚಿಕೊಳ್ಳುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಅಲ್ಲದೆ ಪ್ರತೀ 2 ಗಂಟೆಗಳಿಗೊಮ್ಮೆ ಮುಖ ತೊಳೆದು ಮತ್ತೆ ಕ್ರೀಮ್ ಹಚ್ಚಬೇಕು. 

Follow Us:
Download App:
  • android
  • ios