Health Tips : ಸುಮ್ ಸುಮ್ನೆ ಅಳು ಬರ್ತಿದ್ಯಾ? ಏನು ಮಾಡಬಹುದು?
ದಿನಕ್ಕೆ ಇಷ್ಟು ಗಂಟೆ ಅಳ್ಬೇಕು ಎನ್ನುವ ನಿಯಮವಿಲ್ಲ. ಹಾಗಂತ ಮಾತ್ ಮಾತಿಗೆ ಅತ್ರೆ ಚೆನ್ನಾಗಿರೋದಿಲ್ಲ. ನಮ್ಮ ಭಾವನೆಯನ್ನು ನಿಯಂತ್ರಿಸೋದು ಬಹಳ ಮುಖ್ಯ. ಅಳು ಬರಬಾರದು ಅಂದ್ರೆ ಮನಸ್ಸನ್ನು ಹಿಡಿತದಲ್ಲಿಡೋದು ಗೊತ್ತಿರಬೇಕು.
ಜಗಳವಾಡ್ತಾ ಆಡ್ತಾ ಕೆಲವರ ಕಣ್ಣಲ್ಲಿ ನೀರು ಬರುತ್ತೆ, ಇನ್ನು ಕೆಲವರು ಕೋಪ ಮಾಡಿಕೊಳ್ಳುವ ಬದಲು ಅಳ್ತಾರೆ. ಮತ್ತೆ ಕೆಲವರಿಗೆ ಸ್ವಲ್ಪ ದೊಡ್ಡ ಧ್ವನಿಯಲ್ಲಿ ಗದರಿದ್ರೆ ಸಾಕು ಅಳು ಬಂದ್ಬಿಡುತ್ತದೆ. ಇನ್ನು ಕೆಲವರು ಅತಿಯಾಗಿ ಸುಸ್ತಾಗಿದ್ದಾಗ, ಹಸಿವಾಗಿದ್ದಾಗ, ನನ್ನ ಕೈನಲ್ಲಿ ಸಾಧ್ಯವಿಲ್ಲ ಎಂಬ ಅಸಹಾಯಕ ಸ್ಥಿತಿಯಲ್ಲಿದ್ದಾಗ ಅಳ್ತಾರೆ. ಅಳು ಹೇಳದೆ ಕೇಳದೆ ಬಂದ್ರೆ ಅದು ಮುಜುಗರ ತರಿಸುತ್ತದೆ. ಹಾಗಂತ ಈ ಅಳು ಕೆಟ್ಟದ್ದೇನಲ್ಲ.
ಮನುಷ್ಯ ಎಷ್ಟು ಅಳ್ಬೇಕು ಎನ್ನುವ ನಿಯಮವಿಲ್ಲ. 1980 ರಲ್ಲಿ ಅಳು (Cry) ವಿನ ಬಗ್ಗೆ ಒಂದು ಅಧ್ಯಯನ (Study) ನಡೆದಿತ್ತು. ಈ ಅಧ್ಯಯನದಲ್ಲಿ ಮಹಿಳೆಯರು ತಿಂಗಳಿಗೆ ಸರಾಸರಿ 5.3 ಬಾರಿ ಅಳುತ್ತಾರೆ ಮತ್ತು ಪುರುಷರು ತಿಂಗಳಿಗೆ ಸರಾಸರಿ 1.3 ಬಾರಿ ಅಳುತ್ತಾರೆ ಎಂದು ಹೇಳಲಾಗಿತ್ತು. ಅಳು ಯಾರ ಸ್ವತ್ತೂ ಅಲ್ಲ. ಅಳುವನ್ನು ಮಕ್ಕಳು ಹಾಗೆ ಮಹಿಳೆಗೆ ಸೀಮಿತ ಮಾಡಲಾಗಿದೆ. ಪುರುಷರು ಅತ್ರೆ ನಗೋರು ಹೆಚ್ಚು. ಹಾಗಂತ ಈ ಅಳುವನ್ನು ಅನೇಕ ಬಾರಿ ನಿಯಂತ್ರಿಸಿಕೊಳ್ಳಲು ಸಾಧ್ಯವಾಗೋದಿಲ್ಲ.
ನಿಮಗೂ ಜಾಗವಲ್ಲದ ಜಾಗದಲ್ಲಿ, ಅಳಬಾರದ ಸ್ಥಳದಲ್ಲಿ ಅಳು ಬಂದು ಮುಜುಗರ (Embarrassment) ವಾಗ್ತಿದ್ದರೆ ನಿಮ್ಮನ್ನು ನೀವು ನಿಯಂತ್ರಿಸಲು ಕಲಿತುಕೊಳ್ಳಿ. ಮಾತು ಮಾತಿಗೂ ಅಳು ಬರುತ್ತೆ ಎನ್ನುವವರು ಕೆಲ ಟ್ರಿಕ್ ಫಾಲೋ ಮಾಡ್ಬೇಕು. ಅದ್ರ ಸಹಾಯದಿಂದ ಅಳು ನಿಯಂತ್ರಿಸಲು ಕಲಿಯಬೇಕು. ನಾವಿಂದು ಅಳು ನಿಯಂತ್ರಿಸಲು ಏನೆಲ್ಲ ಮಾಡ್ಬಹುದು ಎಂಬುದನ್ನು ಹೇಳ್ತೆವೆ.
ಮಾರ್ನಿಂಗ್ ವಾಕ್ ಮಾಡುವಾಗ ಹಾರ್ಟ್‌ಅಟ್ಯಾಕ್, ಅಪಾಯ ಮೊದಲೇ ತಿಳಿದುಕೊಳ್ಳೋದು ಹೇಗೆ ?
ಆ ಪರಿಸ್ಥಿತಿಯಿಂದ ದೂರ ಹೋಗಿ : ನಾವಿರುವ ಪರಿಸ್ಥಿತಿ ನಮಗೆ ಅಳು ತರಿಸ್ತಿರಬಹುದು. ಅಂಥ ಸಂದರ್ಭದಲ್ಲಿ ನೀವು ಪರಿಸ್ಥಿತಿಯಿಂದ ಹೊರಗೆ ಬರಬೇಕು. ಆ ಸ್ಥಳ ಬದಲಿಸಿ. ಬೇರೆ ಕೆಲಸಕ್ಕೆ ನಿಮ್ಮನ್ನು ಶಿಫ್ಟ್ ಮಾಡಿ. ನಿಮ್ಮ ಗಮನವನ್ನು ಬೇರೆಡೆ ಹರಿಸಲು ಪ್ರಯತ್ನಿಸಿ. ತುಂಬಾ ಕೋಪ, ಅಸಮಾಧಾನ ಅಥವಾ ಹತಾಶೆ ಅಳಲು ಪ್ರಚೋದಿಸುತ್ತಿದ್ದರೆ ಮೊದಲು ಆ ಪರಿಸರದಿಂದ ಹೊರಗೆ ಬರಲು ಪ್ರಯತ್ನಿಸಿ.
ನಿಮಗೆ ನೀವು ಪಿಂಚ್ ಮಾಡ್ಕೊಳ್ಳಿ : ನಿಮಗೆ ನೀವೇ ಚಿವುಟಿಕೊಳ್ಳಿ ಅಂದ್ರೆ ಗಾಯ, ನೋವು ಮಾಡಿಕೊಳ್ಳಿ ಎಂದಲ್ಲ. ನಿಮ್ಮನ್ನು ನೀವು ಎಚ್ಚರಿಸಿಕೊಳ್ಳುವುದು ಎಂದರ್ಥ. ನೀವು ಅಳಲು ಶುರು ಮಾಡಿದ್ರೆ ಮುಜುಗರಕ್ಕೊಳಗಾಗಬಹುದು. ನಗೆಪಾಟಲಿಗೆ ಒಳಗಾಗಬಹುದು. ಹಾಗಾಗಿ ನಿಮಗೆ ನೀವು ಪಿಂಚ್ ಮಾಡಿಕೊಳ್ಳುವ ಮೂಲಕ ಅಳ್ಬೇಡ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಹೆಬ್ಬೆರಳು ಹಾಗೂ ತೋರು ಬೆರಳಿನ ಮಧ್ಯದ ಭಾಗವನ್ನು ನೀವು ಚಿವುಟಬೇಕು.
ಫಿಜೆಟ್ ಆಟವಾಡಿ : ಇದು ಕೂಡ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ. ನಿಮಗೆ ಅಳು ಬರುತ್ತೆ ಎನ್ನುವ ಸಂದರ್ಭದಲ್ಲಿ ನಿಮ್ಮ ಅಳುವನ್ನು ನಿಯಂತ್ರಿಸಲು ನೀವು ಫಿಜೆಟ್ ಸಹಾಯ ಪಡೆಯಬಹುದು. ಅಥವಾ ನಿಮ್ಮ ಬಳಿ ಇರುವ ಯಾವುದೇ ವಸ್ತುವಿನ ಜೊತೆ ಆಟವಾಡಬಹುದು. ಇದು ನಿಮ್ಮ ಭಾವನೆಯನ್ನು ನಿಯಂತ್ರಿಸಿಕೊಳ್ಳಲು ನೆರವಾಗುತ್ತದೆ.
ತಮಾಷೆ ವಿಷ್ಯ ನೆನಪಿಸಿಕೊಳ್ಳಿ : ಅಳು ಬರುವ ಜಾಗದಲ್ಲಿ ನಗು ಬರ್ಬೇಕೆಂದ್ರೆ ನೀವು ತಮಾಷೆ ವಿಷ್ಯಗಳನ್ನು ನೆನಪಿಸಿಕೊಳ್ಳಬೇಕು. ನಕಾರಾತ್ಮಕ ವಿಷ್ಯದ ಬದಲು ಸಕಾರಾತ್ಮಕ ವಿಷ್ಯ ಆಲೋಚನೆ ಮಾಡ್ಬೇಕು. ನಿಮ್ಮಿಷ್ಟದ ಜೋಕ್ ಅಥವಾ ಕಾರ್ಟೂನ್ ಕೂಡ ನೋಡಿ ಮೂಡ್ ಬದಲಿಸಿಕೊಳ್ಳಬಹುದು.
ದೀರ್ಘವಾಗಿ ಉಸಿರು ತೆಗೆದುಕೊಳ್ಳಿ : ಆಳವಾಗಿ ಉಸಿರನ್ನು ತೆಗೆದುಕೊಳ್ಳುವುದು ಮತ್ತು ನಿಧಾನವಾಗಿ ಮತ್ತು ಶಾಂತವಾಗಿ ಉಸಿರಾಟದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದು ನಿಮ್ಮನ್ನು ನೀವು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮ ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಅಳ ಬರದಂತೆ ತಡೆಯುತ್ತದೆ.
ನಿದ್ರೆ ಬಾರದೇ ರಾತ್ರಿ ಒದ್ದಾಡುತ್ತೀರಾ? ಮಂತ್ರ ಪಠಿಸಿ
ವ್ಯಾಯಾಮ ಹಾಗೂ ನಿದ್ರೆ : ಅಳು ತಡೆಯಲು ಇದು ಕೂಡ ಸಹಕಾರಿ. ನೀವು ವಾಕಿಂಗ್ ಅಥವಾ ಧ್ಯಾನ ಮಾಡಿ ಅಳುವನ್ನು ನಿಯಂತ್ರಿಸಬಹುದು. ಇಲ್ಲವೆ ನಿದ್ರೆ ಮಾಡಬಹುದು.