Health Tips: ತೂಕವನ್ನಷ್ಟೇ ಇಳಿಸ್ಕೊಳಿ, ದೇಹದ ಎನರ್ಜಿ ಮಟ್ಟವನ್ನಲ್ಲ, ಹೇಗಪ್ಪಾ ಅದು?
ತೂಕ ಇಳಿಸಿಕೊಳ್ಳಲು ಹೋಗಿ ದೇಹದ ಎನರ್ಜಿ ಮಟ್ಟವನ್ನೇ ಇಳಿಸಿಕೊಳ್ಳುವ ಜನರಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಕೊನೆಗೆ ಸುಸ್ತಾಗಿ ತೂಕ ಕಡಿಮೆ ಮಾಡಿಕೊಳ್ಳುವ ಆಸೆಯನ್ನೇ ತೊರೆದವರಿದ್ದಾರೆ. ಅದಕ್ಕೆ ಹಲವು ಕಾರಣಗಳನ್ನು ತಜ್ಞರು ಗುರುತಿಸಿದ್ದಾರೆ.
ತೂಕ ಕಡಿಮೆ ಇಳಿಸಬೇಕೆಂದು ಎಷ್ಟು ಒದ್ದಾಡಿದರೂ ಕೊನೆಕೊನೆಗೆ ಸುಸ್ತೆನಿಸುತ್ತದೆಯೇ ವಿನಾ, ತೂಕ ಮಾತ್ರ ಇಳಿಯುವುದಿಲ್ಲ.. ಎನ್ನುವುದು ಸಾಕಷ್ಟು ಜನರ ಬೇಸರ. ಅದರಲ್ಲೂ ಮಹಿಳೆಯರು ತೂಕ ಕಡಿಮೆ ಮಾಡಿಕೊಳ್ಳಲು ಏನೆಲ್ಲ ಪ್ರಯತ್ನ ಪಡುತ್ತಲೇ ಇರುತ್ತಾರೆ. ವ್ಯಾಯಾಮ, ಯೋಗ, ಜಿಮ್ ಮೊರೆ ಹೋಗುತ್ತಾರೆ. ಟ್ರೈನರ್ ಮೂಲಕ ಏರೋಬಿಕ್ಸ್ ಟ್ರೈನಿಂಗ್ ತೆಗೆದುಕೊಂಡರೂ ತೂಕ ಮಾತ್ರ ಹಾಗೆಯೇ ಇರುತ್ತದೆ. ದೇಹಕ್ಕೆ ಲವಲವಿಕೆ ಎನಿಸಬಹುದೇ ವಿನಾ ತೂಕ ಕಡಿಮೆ ಆಗದ ಸಮಸ್ಯೆ ಹಾಗೆಯೇ ಮುಂದುವರಿಯುತ್ತದೆ. ಹೀಗಾಗಿ, ಈ ಪ್ರಕ್ರಿಯೆ ಕೊನೆಗೆ ಭಾರವೆನಿಸುತ್ತದೆ. ಆಹಾರ ನಿಯಂತ್ರಣ ಮಾಡುತ್ತ ಸುಸ್ತೆನಿಸಲು ಶುರುವಾಗುತ್ತದೆ. ತೂಕ ಇಳಿಸಿಕೊಳ್ಳಬೇಕೆ ವಿನಾ ದೇಹದಲ್ಲಿರುವ ಶಕ್ತಿಯನ್ನಲ್ಲ. ಕೆಲವರು ಸಾಕಷ್ಟು ಪ್ರಯತ್ನ ಪಟ್ಟು ದೇಹದ ನೀರಿನ ತೂಕವನ್ನಷ್ಟೇ ಕಡಿಮೆ ಮಾಡಿಕೊಳ್ಳುತ್ತಾರೆ. ನೀರಿನ ತೂಕವೆಂದರೆ, ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಇದು ತಜ್ಞರು ಶಿಫಾರಸು ಮಾಡುವ ಮಾರ್ಗವಲ್ಲ. ಆದರೂ ಕೆಲವರು ತೆಗೆದುಕೊಳ್ಳುವ ಆಹಾರ, ದ್ರವಾಂಶದ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡುತ್ತಾರೆ. ಆಗ ತೂಕ ಇಳಿದಂತೆ ಭಾಸವಾದರೂ ಹಲವು ಆರೋಗ್ಯದ ಸಮಸ್ಯೆಗಳು ಕಾಣುತ್ತವೆ. ತಜ್ಞರ ಪ್ರಕಾರ, ಈ ಸಮಯದಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಸುಸ್ತಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ.
• ಸೂಕ್ತ ಪ್ರಮಾಣದ ಕ್ಯಾಲರಿ (Calorie) ಕೊರತೆ (Shortage)
ತೂಕ ಕಡಿಮೆ (Weight Loss) ಮಾಡಿಕೊಳ್ಳಲು ಕಡಿಮೆ ಆಹಾರ (Food) ಸೇವಿಸುವ ಮೂಲಕ ಹಲವು ಜನ ದೇಹಕ್ಕೆ ಬೇಕಾದುದಕ್ಕಿಂತ ಕಡಿಮೆ ಪ್ರಮಾಣದ ಕ್ಯಾಲರಿ ಸೇವಿಸುತ್ತಾರೆ. ಬೇರೆ ಬೇರೆ ಆಹಾರದ ಮೂಲಕ ಅಗತ್ಯವಿರುವಷ್ಟು ಕ್ಯಾಲರಿ ತೆಗೆದುಕೊಳ್ಳುವುದನ್ನು ಬಿಟ್ಟಾಗ ಎನರ್ಜಿ ಮಟ್ಟ ಕುಸಿಯುತ್ತದೆ. ಪೌಷ್ಟಿಕಾಂಶ ದೊರೆಯದೇ ಸುಸ್ತು (Fatigue) ಕಾಡುತ್ತದೆ.
Pitta Dosha: ಪಿತ್ತದೋಷ ನಿವಾರಣೆಗೆ ನೆರವಾಗುತ್ತೆ ಈ ಆಸನ
• ನಿರ್ಜಲೀಕರಣ (Dehydration)
ದೇಹದಲ್ಲಿ ನೀರಿನ (Water) ಅಂಶ ಸಾಕಷ್ಟಿಲ್ಲವಾದರೆ ಎನರ್ಜಿ ಮಟ್ಟ ಕಡಿಮೆಯಾಗುವುದು ಸಹಜ.
• ಪ್ರೊಟೀನ್ ಕುಸಿತ (Protein Decrease)
ಪ್ರೊಟೀನ್ ಸೇವನೆ ಕಡಿಮೆಯಾದಾಗ ದೌರ್ಬಲ್ಯ (Weakness) ಉಂಟಾಗುವುದು ಸಹಜ. ದೇಹವನ್ನು ರಿಪೇರಿ ಮಾಡುವ ಕೆಲಸ ಮಾಡುತ್ತಲೇ ಇರುವ ಅಂಶ ಪ್ರೊಟೀನ್. ವ್ಯಾಯಾಮ (Exercise) ಮತ್ತಿತರ ದೈಹಿಕ ಚಟುವಟಿಕೆಯ ನಂತರ ಪ್ರೊಟೀನ್ ಕಾರ್ಯ ಹೆಚ್ಚುತ್ತದೆ. ಸೂಕ್ತ ಮಟ್ಟವಿಲ್ಲದೇ ಇದ್ದಾಗ ದೈಹಿಕ ಸುಸ್ತು ಹೆಚ್ಚುತ್ತದೆ.
ತೂಕವನ್ನಷ್ಟೇ ಕಳ್ಕೊಬೇಕಲ್ವಾ?
• ಮಾಂಸಖಂಡಗಳ ಮೆಟಬಾಲಿಸಂ (Muscles Metabolism) ಸರಿಯಾಗಿರಲು ಸೂಕ್ತ ತರಬೇತಿ ಅಗತ್ಯ. ಮಾಂಸಖಂಡಗಳನ್ನು ಕಡಿಮೆ ಮಾಡುವುದು ಕ್ಯಾಲರಿ ಕಳೆದುಕೊಳ್ಳಲು ಅಗತ್ಯ. ನಿಯಮಿತ ವ್ಯಾಯಾಮದಿಂದ ಹೀಗೆ ಮಾಡಬಹುದು.
• ಕ್ಯಾಲರಿ ಬೇಕು
ಕ್ಯಾಲರಿ ಸೇವನೆ ಮೇಲೆ ಸಿಕ್ಕಾಪಟ್ಟೆ ನಿರ್ಬಂಧ ಹಾಕಿಕೊಂಡಿದ್ದರೆ ಅದನ್ನು ಈಗಲೇ ಸಡಲಿಸಿ. ದೇಹದ ಬಿಎಂಎಸ್ (ಬೇಸಲ್ ಮೆಟಬಾಲಿಕ್ ರೇಟ್) ಗೆ ಎಷ್ಟು ಅಗತ್ಯವೋ ಅಷ್ಟು ಕ್ಯಾಲರಿ ಸೇವನೆ ಮಾಡಬೇಕು. ಆಗಲೇ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಶಕ್ತಿ (Energy) ದೊರೆಯುತ್ತದೆ.
Health Tips: ಆಫೀಸ್ ಕೆಲ್ಸ ಮಾಡ್ತಾನೇ ಯೋಗ ಮಾಡಿ, ಸ್ಟ್ರೆಸ್ ಕಡಿಮೆ ಮಾಡ್ಕೊಳ್ಳಿ
• ಪ್ರೊಟೀನ್ ಸೇವನೆ (Proteins)
ಪ್ರೊಟೀನ್ ಭರಿತ ಆಹಾರ ಸೇವನೆ ಮಾಡುವುದಕ್ಕೆ ಆದ್ಯತೆ ನೀಡಬೇಕು. ಇದರಿಂದ ಮಾಂಸಖಂಡಗಳು ಆರೋಗ್ಯವಾಗಿರುತ್ತವೆ ಹಾಗೂ ದೀರ್ಘಕಾಲ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಪ್ರೊಟೀನ್ ಸೇವನೆ ಮಾಡುತ್ತಿರುವುದರಿಂದ ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿ ಸುಸ್ತು ಕಾಡುವುದಿಲ್ಲ.
• ಒಟ್ಟಾರೆ ಎನರ್ಜಿ ಎಷ್ಟು ಬೇಕು?
ಪರಿಣಾಮಕಾರಿಯಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದರೆ ದೈನಂದಿನ ಕೆಲಸಕಾರ್ಯಗಳಿಗೆ (Daily Works) ದೇಹಕ್ಕೆ ಎಷ್ಟು ಎನರ್ಜಿ ಬೇಕೆಂದು ಲೆಕ್ಕ ಹಾಕಬೇಕು. ವ್ಯಾಯಾಮ, ವೃತ್ತಿ ಹಾಗೂ ಜೀವನಶೈಲಿಯನ್ನು (Lifestyle) ಪರಿಗಣಿಸಿ ಕ್ಯಾಲರಿ ಅಗತ್ಯತೆಯನ್ನು ಪರಿಗಣಿಸಬೇಕು. ವ್ಯಾಯಾಮದ ಅವಧಿಯಲ್ಲಿ ಎಷ್ಟು ಕ್ಯಾಲರಿ ಕರಗುತ್ತದೆ ಎಂದು ನೋಡಿಕೊಳ್ಳುವುದು ಉತ್ತಮ. ಹಾಗೆಯೇ ತಿನ್ನುವ ಆಹಾರದಲ್ಲಿ ಎಷ್ಟು ಕ್ಯಾಲರಿ ಇರುತ್ತದೆ ಎನ್ನುವ ಲೆಕ್ಕಾಚಾರ ನಿಮಗಿದ್ದರೆ ಅನುಕೂಲ.