ಪ್ರಿಯಾ ಕೆರ್ವಾಶೆ

‘ನಂಗೆ ವಯಸ್ಸಾಗ್ತಾ ಇದೆ ಅಂತ ಭಯ ಆಗ್ತಿದೆ. ಮುಖ ನೆರಿಗೆಗಟ್ಟೋದು, ದೇಹ ದುರ್ಬಲ ಆಗೋದು ನಂಗಿಷ್ಟಇಲ್ವೇ ಇಲ್ಲ. ಬಾತ್‌ರೂಂಗೆ ಹೋಗುವಾಗ ಎಲ್ಲಿ ಬಿದ್ದುಬಿಡ್ತೀನೋ ಅಂತ ಭಯ. ನಿಯಂತ್ರಣವಿಲ್ಲದ ಶರೀರ... ಇದನ್ನೆಲ್ಲ ನೆನೆಸಿಕೊಂಡರೆ ದುಃಸ್ವಪ್ನ ಅನಿಸುತ್ತಿದ್ದೆ. ನಾನು ಮಾತ್ರ ಅಲ್ಲ, ನಾನು ಇಷ್ಟಪಡುವ ಯಾರಿಗೂ ವಯಸ್ಸಾಗಲೇ ಬಾರದು. ದಯಮಾಡಿ ನನಗೆ ವಯಸ್ಸಾಗದೇ ಇರೋದು ಹೇಗೆ ಅಂತ ಹೇಳಿ..’ ಓಂ ಸ್ವಾಮಿ ಅವರ ಬಳಿ ಬಂದ ಒಬ್ಬ ವ್ಯಕ್ತಿ ಇಷ್ಟುಮಾತನಾಡಿ ತಲೆ ತಗ್ಗಿಸುತ್ತಾನೆ. ಅವನ ಮುಖದಲ್ಲಿ ನೋವಿದೆ, ಕಳವಳ ಭಯ ಇದೆ.

ಇತಿಹಾಸ ಸೃಷ್ಟಿಸಿದ ‘ಕೆಂಪುಕೋಟೆ’: ಮಂಗಳೂರು ವಿವಿ ಕಾಲೇಜಿಗೆ 150 ವರ್ಷದ ಸಂಭ್ರಮ!

‘ಇದು ಎಲ್ಲರಿಗೂ ಆಗುವಂಥಾದ್ದೇ. ಯುವಕರಾಗಿದ್ದಾಗ ನಮ್ಮ ಗಮನವೆಲ್ಲ ಕನಸುಗಳನ್ನು ಬೆನ್ನುತ್ತುವ ಕಡೆಗೇ ಇರುತ್ತದೆ. ಯಾವಾಗ ಮಧ್ಯ ವಯಸ್ಸಿಗೆ ಬರುತ್ತೇವೋ ಆಗ ಭಯ ಶುರುವಾಗುತ್ತೆ. ಮೂಳೆಗಳು ಸೌಂಡ್‌ ಮಾಡೋದು ಕೇಳುತ್ತೆ. ಕೆಳಗ್ಗೆ ಬಗ್ಗಿ ಮೇಲೇಳುವಾಗ ಬೆನ್ನುಮೂಳೆ ಕಳಕ್‌ ಅನ್ನುತ್ತೆ. ಬಿಪಿ ಹೆಚ್ಚಾಗಿದೆ, ಡಯಾಬಿಟೀಸ್‌ ಹಾಯ್‌ ಅಂತಿದೆ. ತಲೆತುಂಬ ಸೇವಿಂಗ್ಸ್‌ ಎಷ್ಟಿದೆ, ಎಷ್ಟುಇನ್‌ವೆಸ್ಟ್‌ ಮಾಡಿದ್ದೀನಿ ಇತ್ಯಾದಿ ಯೋಚನೆ. ಆದರೆ ನಿಮಗೆಲ್ಲರಿಗೂ ಗೊತ್ತಿದೆ. ನೀವೆಷ್ಟೇ ಬೇಡ ಅಂದರೂ ವಯಸ್ಸು ಆಗೇ ಆಗುತ್ತೆ. ಗಾಬರಿ ಕಡಿಮೆ ಮಾಡ್ಕೊಳ್ಳಿ, ಮನಸ್ಸಿನಲ್ಲಿ ಸಿಕ್ಕು ಸಿಕ್ಕಾಗಿರುವ ವಿಚಾರಗಳನ್ನು ಬಿಡಿಸಿ, ಸರಿ ಮಾಡಿ. ಹೊರಗಿನ ಸೌಂದರ್ಯಕ್ಕೆ ಈ ವಯಸ್ಸಾಗುವ ಮಿತಿ, ಹೃದಯಕ್ಕೆ ಇಲ್ಲವಲ್ಲಾ, ಅದನ್ನ ಕಂಡುಕೊಳ್ಳಿ..’ ಹೀಗಂತ ಆತನನ್ನು ಸಮಾಧಾನ ಮಾಡಿದರು ಸ್ವಾಮಿ.

ಹಸಿವು, ಮೂರ್ಖತನ ಎರಡೂ ಬೇಕು

‘ಸ್ಟೇ ಹಂಗ್ರೀ, ಸ್ಟೇ ಫäಲಿಶ್‌’ ಅಂತಾನೆ ಸ್ಟೀವ್‌ ಜಾಬ್ಸ್‌. ಹಸಿವು ಸೋಮಾರಿಯಾಗಲು ಬಿಡೋದಿಲ್ಲ. ಮೂರ್ಖತನ ಅಹಂಕಾರ ಬೆಳೆಯದ ಹಾಗೆ ನೋಡಿಕೊಳ್ಳುತ್ತದೆ. ಇದರಿಂದ ಸತ್ಯದ ಹಾದಿ ನಿಚ್ಚಳವಾಗುತ್ತದೆ. ಇದನ್ನೇ ಇನ್ನೊಂದು ಮಾತಿನಲ್ಲಿ ಹೇಳೋದಾದರೆ ಕುತೂಹಲಿಗಳಾಗಿರಿ, ಸತ್ಯದ ಬದುಕು ನಿಮ್ಮದಾಗಿರಲಿ.

ಕನ್ಫ್ಯೂಷನ್ನೇ ಜಾಸ್ತಿ, ಸೊಲ್ಯೂಷನ್ನು ನಾಸ್ತಿ;ಗರ್ಲ್ ಫ್ರೆಂಡಾ, ಬೆಸ್ಟ್‌ ಫ್ರೆಂಡಾ!

ಅವರು ಹೇಳಿದ್ದರಲ್ಲಿ ಒಂಚೂರಾದ್ರೂ ಅತಿಶಯೋಕ್ತಿ ಇದೆಯಾ ಗಮನಿಸಿ. ಕೂದಲು ಬಿಳಿಯಾಯ್ತು ಅನ್ನೋದು ಯಾರಿಗಾದ್ರೂ ಗೊತ್ತಾಗಿಬಿಟ್ರೆ ನನ್‌ ಕತೆಯೇ ಮುಗೀತು ಅನ್ನೋ ಭಾವದಲ್ಲಿ ಕೂದಲಿಗೆ ಕಪ್ಪು ಹಚ್ಚುತ್ತೇವೆ. ಮುಖದ ನೆರಿಗೆ ಹೋಗಲಾಡಿಸಲು ಎಂತೆಂಥದ್ದೋ ಕ್ರೀಮ್‌ಗಳು. ಈ ಮೂಲಕ ಕೃತಕವಾಗಿ ಯೌವನ ಕಟ್ಟಟ್ಟಿಕೊಳ್ಳತ್ತೇವೆ. ಹಾಗೆ ಕಟ್ಟಿಕೊಳ್ಳುವ ಯೌವನಕ್ಕೆ ವೆಲಿಡಿಟಿ ಎಷ್ಟು? ಈ ನಿಮ್ಮ ಕೃತಕ ಯೌವನವನ್ನು ನೋಡಿ ಮಾತನಾಡಿಸುವವರು ಎಂಥಾ ವ್ಯಕ್ತಿಗಳು, ಅವರಿಂದ ನಿಮಗೆ ಏನು ಒಳ್ಳೆಯದಾಗುತ್ತೆ ಯೋಚಿಸಿ.

ಇಂಥಾ ಕಳಪೆ ಕೆಲಸ ಮಾಡುವ ಬದಲು ನಿಜಕ್ಕೂ ನಿಮ್ಮಲ್ಲಿ ಪಾಸಿಟಿವ್‌ ಬದಲಾವಣೆ ತರುವ ಕೆಲಸ ಯಾಕೆ ಮಾಡಬಾರದು. ನಿತ್ಯ ವ್ಯಾಯಾಮ, ಯೋಗ ಮಾಡುತ್ತಿದ್ದರೆ ದೇಹ ಆರೋಗ್ಯಕರವಾಗಿರುತ್ತದೆ. ನೆರಿಗೆ ಕಡಿಮೆ ಮಾಡೋ ಕ್ರೀಂ ಬದಲು ಅದೇ ಹಣದಲ್ಲಿ ತರಕಾರಿ, ಹಣ್ಣು ಚೆನ್ನಾಗಿ ತಿನ್ನುತ್ತಾ, ಮನಸ್ಸನ್ನು ಖುಷಿಯಾಗಿಟ್ಟುಕೊಂಡರೆ ನೆರಿಗೆ ಬರೋದು ಪೋಸ್ಟ್‌ಪೋನ್‌ ಆಗುತ್ತೆ.

ನಿಮ್ಮ ಹುರುಪಿನ ಚಾವಿ ಕುತೂಹಲ

ಕುತೂಹಲವನ್ನು ಎರಡು ವಿಧವಾಗಿ ವಿಂಗಡಿಸಿದ್ದಾರೆ, ಒಳ್ಳೆಯ ಕುತೂಹಲ, ಕೆಟ್ಟಕುತೂಹಲ. ಆದರೆ ಈ ಚೌಕಟ್ಟನ್ನು ಮೀರಿ ಪ್ರತಿಯೊಂದರಲ್ಲೂ ಕುತೂಹಲ ತೋರಿ. ಇದು ನಿಮ್ಮನ್ನು ಕಲಿಕೆಯತ್ತ ಮುನ್ನಡೆಸುತ್ತದೆ. ಕಲಿಕೆ ನಿಮ್ಮ ಉತ್ಸಾಹ ಹೆಚ್ಚಿಸುತ್ತದೆ. ಉತ್ಸಾಹ ವಯಸ್ಸಾಗುವಾಗ ಬರುವ ಎಲ್ಲ ಸಮಸ್ಯೆಯನ್ನೂ ನಿವಾರಿಸಿ ಖುಷಿ ಕೊಡುತ್ತದೆ.

ಇದೆಲ್ಲಕ್ಕಿಂತ ಮುಖ್ಯವಾದದ್ದು ಬೇರೆ ಇದೆ.

- ಒಳಗಿನ ಸೌಂದರ್ಯವನ್ನು ಚೆನ್ನಾಗಿಟ್ಟುಕೊಳ್ಳುವುದು. ಇದರ ವ್ಯಾಲಿಟಿಡಿ ಹೆಚ್ಚು.

- ಕನಸಿನ ಹಿಂದೆ ಹೋಗುವುದಕ್ಕಿಂತ ವಾಸ್ತವವನ್ನು ಆಸ್ವಾದಿಸುವುದು ಜಾಣತನ.

- ಧಾವಂತ, ಸ್ಪರ್ಧೆ, ಸ್ಟೆ್ರಸ್‌ಗಿಂತ ಶಾಂತತೆ ನೀಡುವ ಆನಂದ ದೊಡ್ಡದು.

- ನಾನಿದನ್ನು ಯಾರಿಗಾಗಿ ಯಾತಕ್ಕೋಸ್ಕರ ಮಾಡುತ್ತಿದ್ದೇನೆ ಅಂತ ಆಲೋಚಿಸಿ ಮುನ್ನಡೆದರೆ ನಿಮ್ಮ ಕೆಲಸಕ್ಕೆ ಉದ್ದೇಶ, ಅರ್ಥ ಸಿಗುತ್ತದೆ.

- ಕನಸು, ಗುರಿ ಅನ್ನೋದಕ್ಕೆಲ್ಲ ಕೊನೆಯಿಲ್ಲ. ಬದಲು ವಾಸ್ತವ ಅರಿತು ಮುನ್ನಡೆದರೆ ಅರ್ಥಪೂರ್ಣ.