ಮನುಷ್ಯ ಆರೋಗ್ಯವಾಗಿರಲು ಅಗತ್ಯ ಪೋಷಕಾಂಶಗಳು ದೇಹಕ್ಕೆ ಬೇಕು. ಅದರಲ್ಲಿಯೂ ಪಿರಿಯಡ್ಸ್ ಅನುಭವಿಸುವ ಹೆಣ್ಣು ಮಕ್ಕಳಿಗೆ ಕೆಲವು ಪೋಷಕಾಂಶಗಳು ಅನಿವಾರ್ಯವಾಗಿ ಬೇಕು. ಹೆಣ್ಣಿನ ಆರೋಗ್ಯ ಕಾಪಾಡಲು ಏನು ಬೇಕು, ಏನು ಬೇಡ?
ಪ್ರೊಟೀನ್ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕು. ಇದು ಅಂಗಾಂಗಳಿಗೆ, ಮಾಂಸ, ತ್ವಚೆ, ಎಂಜಾಮೈನ್, ಹಾರ್ಮೋನ್ ಬೆಳವಣಿಗೆಗೆ ಅತ್ಯಗತ್ಯ. ಇದು ಮಾನವ ದೇಹದಲ್ಲಿ ಹಲವು ಮಹತ್ವದ ಕಾರ್ಯ ನಿರ್ವಹಿಸುತ್ತದೆ. ಎಲ್ಲ ವಯಸ್ಸಿನವರಿಗೂ ಪ್ರೊಟೀನ್ ಅತ್ಯವಶ್ಯಕ. ಅದರಲ್ಲೂ ಮಹಿಳೆಯರ ತೂಕ ನಿಯಂತ್ರಿಸಲು ಪ್ರೊಟೀನ್ ಬಹಳ ಮುಖ್ಯ.
ಮಹಿಳೆಯರಿಗೆ ಪ್ರೊಟೀನ್ ಏಕೆ ಮುಖ್ಯ?
ಆಹಾರ ಜೀರ್ಣವಾಗಲು ದೇಹಕ್ಕೆ ಹೆಚ್ಚಿನ ಶಕ್ತಿ ಬೇಕು. ಇದನ್ನು ಪ್ರೊಟೀನ್ ಮೂಲಕವೇ ದೇಹ ಪಡೆದುಕೊಳ್ಳೂತ್ತದೆ. ಇದರಿಂದ ಕ್ಯಾಲೋರಿ ಬರ್ನ್ ಆಗಲು ಸಹಕರಿಸುತ್ತದೆ. ಈ ರೀತಿಯ ಪ್ರೊಟೀನ್ ಸೇವಿಸಿದರೆ ತೂಕ ಸಮತೋಲನದಲ್ಲಿರುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ಶರೀರಕ್ಕೂ ಬೇರೆ ಬೇರೆ ಪ್ರಮಾಣದಲ್ಲಿ ಪ್ರೊಟೀನ್ ಬೇಕು. ಇದು ವ್ಯಕ್ತಿಯ ಎತ್ತರ ಮತ್ತು ತೂಕದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಎಷ್ಟು ಕ್ರಿಯಾತ್ಮವಾಗಿದ್ದೀರಿ. ವಯಸ್ಸು, ಬಿಎಂಎಸ್, ಅರೋಗ್ಯ ಎಲ್ಲವುದರ ಮೇಲೆ ನಮ್ಮ ದೇಹಕ್ಕೆ ಎಷ್ಟು ಪ್ರೊಟೀನ್ ಬೇಕೆಂಬುವುದು ಅವಲಂಬಿತವಾಗಿದೆ.
ನಿಮ್ಮ ತೂಕ ಸಾಮಾನ್ಯವಾಗಿದ್ದರೆ ವ್ಯಾಯಾಮ ಸರಿಯಾಗಿ ಮಾಡದಿದ್ದರೆ 0.36 ನಿಂದ 0.6 ಗ್ರಾಂ ಪ್ರೊಟೀನ್ ಒಂದೊಂದು ಕೆಜಿಗೆ ಬೇಕಾಗುತ್ತದೆ. ಪುರುಷರಿಗೆ 56 ರಿಂದ 91 ಗ್ರಾಂ ಬೇಕು. ಸ್ಟ್ರಾಂಗ್ ಆಗಿರುವ ಮಹಿಳೆಯರಿಗೆ 46 ರಿಂದ 75 ಗ್ರಾಂ ಬೇಕು. ದೇಹದ ಕೆಲವೊಂದು ಭಾಗ ಪ್ರೊಟೀನ್‌ನಿಂದಲೇ ಮಾಡಲ್ಪಟ್ಟಿರುತ್ತದೆ. ಆದುದರಿಂದ ಪ್ರೊಟೀನ್ ಅಂಶ ಕಡಿಮೆಯಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 1, 2019, 3:20 PM IST