ಯಾವಾಗಲೂ ಚುಯಿಂಗ್ ಗಮ್ ಜಗೀತಾರಾ? ಬರಬಾರದ ರೋಗ ಬರ್ಬಹುದು, ಹುಷಾರು
ಚೂಯಿಂಗ್ ಗಮ್ ಬಾಯಲ್ಲಿ ಜಗಿತಿದ್ರೆ ಅದೇನೋ ರಿಲೀಫ್. ಬಾಯಿ ಫ್ರೆಶ್ ಆಗುವ ಜೊತೆಗೆ ಮೂಡ್ ಕೂಡ ಫ್ರೆಶ್ ಆಗುತ್ತೆ. ಹಾಗಂತ ದಿನಗಟ್ಟಲೆ ಬಾಯಲ್ಲಿ ಚೂಯಿಂಗ್ ಗಮ್ ಓಡಾಡ್ತಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು.
ಬಾಯಿ ವಾಸನೆ ಬರಬಾರದು ಎಂದಾಗ ಜನರು ಮೊದಲು ಮಾಡುವ ಕೆಲಸ ಚೂಯಿಂಗ್ ಗಮ್ ಅಗೆಯೋದು. ಇಡೀ ದಿನ ಬಾಯಲ್ಲಿರುವ ಗಮ್ ಮುಖಕ್ಕೆ ವ್ಯಾಯಾಮ ನೀಡುತ್ತೆ ಎನ್ನುವ ಕಾರಣಕ್ಕೆ ಅನೇಕರು ಚೂಯಿಂಗ್ ಗಮ್ ಮೊರೆ ಹೋಗ್ತಾರೆ. ಬೆಳಿಗ್ಗೆ ಉಪಹಾರ ಮುಗಿಸಿ ಕಚೇರಿಗೆ ಹೋಗುವ ಮುನ್ನ ಚೂಯಿಂಗ್ ಗಮ್ ಬಾಯಿಗೆ ಹೋದ್ರೆ ಅದನ್ನು ಮಧ್ಯಾಹ್ನ ಊಟದ ಸಮಯದಲ್ಲಿ ಎಸೆಯೋರಿದ್ದಾರೆ. ಅಲ್ಲಿಯವರೆಗೆ ಈ ಚೂಯಿಂಗ್ ಗಮ್ ಬಾಯಲ್ಲಿ ಅತ್ತ – ಇತ್ತ ಓಡಾಡ್ತಿರುತ್ತದೆ. ಜಗಿದಷ್ಟು ಚೂಯಿಂಗ್ ಗಮ್ ರುಚಿ ಹೆಚ್ಚು ಎನ್ನುವ ಜನರನ್ನೂ ನೀವು ಕೇಳಿರಬಹುದು. ನೀವೂ ಅತಿ ಹೆಚ್ಚು ಸಮಯ ಚೂಯಿಂಗ್ ಗಮ್ ಜಗಿಯೋರಾಗಿದ್ದರೆ ಇಂದೇ ಈ ಅಭ್ಯಾಸ ಬಿಡಿ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ ಎನ್ನುತ್ತಾರೆ ವೈದ್ಯರು.
ವರದಿ (Report) ಒಂದರ ಪ್ರಕಾರ ಅಮೆರಿಕಾ (America) ದಲ್ಲಿ 1.8 ಪೌಂಡ್ ಚೂಯಿಂಗ್ ಗಮ (Chewing Gum) ನ್ನು ಪ್ರತಿ ವರ್ಷ ಜಗಿಯಲಾಗುತ್ತದೆ. ಪ್ರೌಢಾವಸ್ಥೆಯ ಮಕ್ಕಳು ಹಾಗೂ ಯುವಕರು ಇದನ್ನು ಹೆಚ್ಚಾಗಿ ಇಷ್ಟಪಡ್ತಾರೆ. ಸಕ್ಕರೆಯುಕ್ತ ಚೂಯಿಂಗ್ ಗಮ್ ತಿನ್ನುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಚೂಯಿಂಗ್ ಗಮ್ ನಿಮಗೆ ಪ್ರಯೋಜನಕಾರಿ ಆಗ್ಬೇಕು ಅಂದ್ರೆ ನೀವು ಸಕ್ಕರೆ ರಹಿತ ಚೂಯಿಂಗ್ ಗಮ್ ಅಗೆಯಬೇಕು. ಇದು ಒತ್ತಡ (stress) ನಿವಾರಕವಾಗಿ ಕೆಲಸ ಮಾಡುತ್ತದೆ. ಒಸಡಿಗೂ ಚೂಯಿಂಗ್ ಗಮ್ ಒಳ್ಳೆಯದು.
ಕ್ಯಾನ್ಸರ್‌ಗೆ ಬರೋಕೆ ಐದು ಮುಖ್ಯ ಕಾರಣಗಳಿವು
ಎಷ್ಟು ಸಮಯ ಚೂಯಿಂಗ್ ಗಮ್ ಬಾಯಲ್ಲಿರಬೇಕು? : ಹಾಗಂತ ಇಡೀ ದಿನ ನೀವು ಒಂದೇ ಚೂಯಿಂಗ್ ಗಮ್ ಬಾಯಿಗೆ ಹಾಕಿಕೊಂಡ್ರೆ ಅದು ಯೋಗ್ಯವಲ್ಲ. ಅದ್ರಲ್ಲೂ ಸಕ್ಕರೆಯುಕ್ತ ಚೂಯಿಂಗ್ ಗಮ್ ಅನ್ನು ಸ್ವಲ್ಪೇ ಸ್ವಲ್ಪ ಸಮಯದಲ್ಲಿ ನೀವು ಬಾಯಿಂದ ಹೊರಗೆ ಹಾಕ್ಬೇಕು. ಒಂದು ಚೂಯಿಂಗ್ ಗಮ್ 15 ನಿಮಿಷ ಬಾಯಲ್ಲಿದ್ರೆ ಸಾಕು ಎನ್ನುತ್ತಾರೆ ತಜ್ಞರು. ಅದಕ್ಕಿಂತ ಹೆಚ್ಚು ಸಮಯ ನೀವು ಚೂಯಿಂಗ್ ಗಮ್ ಅಗೆಯುವುದ್ರಿಂದ ಲಾಭಕ್ಕಿಂತ ನಷ್ಟವುಂಟಾಗಬಹುದು. ನಿತ್ಯ ಚೂಯಿಂಗ್ ಗಮ್ ಸೇವನೆ ಮಾಡೋದು ಸೂಕ್ತವಲ್ಲ. ಪ್ರತಿ ದಿನ ಚೂಯಿಂಗ್ ಗಮ್ ತಿನ್ನುತ್ತೇವೆ ಎನ್ನುವವರು ದಿನಕ್ಕೆ ಒಂದು ಚೂಯಿಂಗ್ ಗಮ್ ಮಾತ್ರ ತಿನ್ನಿ. ಪರ್ಯಾಯ ದಿನಗಳಲ್ಲಿ ಒಂದು ಗಮ್ ಜಗಿಯೋದು ಪ್ರಯೋಜನಕಾರಿಯಾಗಿದೆ.
ದೀರ್ಘ ಸಮಯ ಚೂಯಿಂಗ್ ಗಮ್ ಅಗೆಯೋದ್ರಿಂದ ಆಗುವ ನಷ್ಟ : ಸಕ್ಕರೆಯುಕ್ತ ಚೂಯಿಂಗ್ ಗಮ್ ಬಾಯಲ್ಲಿದ್ರೆ ಅದು ಹಲ್ಲಿನ ಆರೋಗ್ಯವನ್ನು ಕೆಡಿಸುತ್ತದೆ. ಹಲ್ಲು ಹಾಳಾಗಲು (Tooth Decay), ಹಲ್ಲು ನೋವಿಗೆ (Tooth Ache) ಕಾರಣವಾಗುತ್ತದೆ. ಸಕ್ಕರೆಯುಕ್ತ ಚೂಯಿಂಗ್ ಗಮ್ (Chewing Gum) ಅಗೆಯುವುದು ಕರುಳಿಗೂ ಒಳ್ಳೆಯದಲ್ಲ. ದವಡೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಚೂಯಿಂಗ್ ಗಮ್ ನಿಂದ ದೂರ ಇರುವುದು ಒಳ್ಳೆಯದು. ಒಂದ್ವೇಳೆ ಚೂಯಿಂಗ್ ಗಮ್ ಜಗಿಯುವ ಆಸಕ್ತಿ ಇದ್ದಲ್ಲಿ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.
ಊಟಕ್ಕೆ 30 ನಿಮಿಷಗಳ ಮೊದಲು ಚೂಯಿಂಗ್ ಗಮ್ ಜಗಿದ್ರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದ್ರಿಂದ ನಾವು ಕಡಿಮೆ ಸೇವನೆ ಮಾಡುತ್ತೇವೆ. ನಮ್ಮ ದೇಹಕ್ಕೆ ಇದರಿಂದ ಕಡಿಮೆ ಕ್ಯಾಲೋರಿ ಹೋಗುವ ಕಾರಣ ತೀವ್ರ ತೂಕ ನಷ್ಟಕ್ಕೆ ಇದು ಕಾರಣವಾಗುತ್ತದೆ.
ಬಿಸಿಲಿನಿಂದ ಚರ್ಮ ಟ್ಯಾನ್ ಆಗುತ್ತೇಂತ ಸನ್‌ಸ್ಕ್ರೀನ್ ಯೂಸ್ ಮಾಡ್ತೀರಾ, ಅಪ್ಲೈ ಮಾಡೋ ರೀತಿ ಬಗ್ಗೆಯೂ ಗೊತ್ತಿರ್ಲಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಚೂಯಿಂಗ್ ಗಮ್ ಒಸಡನ್ನು ಬಿಳಿಗೊಳಿಸುತ್ತದೆ. ಅದರಲ್ಲಿರುವ ಟೈಟಾನಿಯಂ ಆಕ್ಸೈಡ್ ಇದಕ್ಕೆ ಕಾರಣ. ಇನ್ನು ಸಿಹಿಕಾರಕ ಚೂಯಿಂಗ್ ಗಮ್, ಹಲ್ಲುಗಳನ್ನು ಹೆಚ್ಚು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ. ನೀವು ದಿನದಲ್ಲಿ ಅತಿ ಹೆಚ್ಚು ಗಂಟೆಗಳ ಕಾಲ ಗಮ್ ಅಗೆಯುತ್ತಿದ್ದರೆ ದವಡೆ ನೋವು, ತಲೆನೋವು, ಅತಿಸಾರದಂತಹ ಸಮಸ್ಯೆ ಕಾಣಿಸುತ್ತದೆ.