ಬಿಳಿ ಎಳನೀರು ಕುಡಿದರೆ ಕ್ಯಾನ್ಸರ್‌ ಗುಣವಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಸಂದೇಶದಲ್ಲಿ ಹೀಗಿದೆ, ‘ಹಾಟ್‌ ಕೊಕನಟ್‌ ವಾಟರ್‌ ನಿಮ್ಮನ್ನು ಜೀವನಪೂರ್ತಿ ಕಾಪಾಡುತ್ತದೆ. ಅದಕ್ಕೆ ಮಾಡಬೇಕಿರುವುದಿಷ್ಟೆ, ಎಳನೀರಿನಲ್ಲಿರುವ ತೆಳುಗಂಜಿಗೆ ಬಿಸಿ ನೀರನ್ನು ಹಾಕಿ. ಅದು ‘ಅಲ್ಕೇನ್‌ ವಾಟರ್‌’ ಆಗುತ್ತದೆ. ಇದನ್ನು ಪ್ರತಿ ದಿನ ಕುಡಿದಲ್ಲಿ ಕ್ಯಾನ್ಸರ್‌ ಗುಣಮುಖವಾಗುತ್ತದೆ. ಜೊತೆಗೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇದು ಕ್ಯಾನ್ಸರ್‌ ಸೆಲ್‌ಗಳನ್ನು ಕೊಲ್ಲುತ್ತದೆ. ಎಳನೀರು ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಈ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸಿ’ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಬಿಸಿ ಎಳನೀರಿಗೆ ಕ್ಯಾನ್ಸರ್‌ ಗುಣಪಡಿಸುವ ಶಕ್ತಿ ನಿಜಕ್ಕೂ ಸಾಬೀತಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಬಗ್ಗೆ ಕ್ವಿಂಟ್‌ ಸುದ್ದಿಸಂಸ್ಥೆಯು ದೆಹಲಿಯ ಅಪೋಲೋ ಆಸ್ಪತ್ರೆ ಕ್ಯಾನ್ಸರ್‌ ತಜ್ಞರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು ಅವರು, ‘ ಬಿಸಿ ಎಳನೀರಿನಿಂದ ಕ್ಯಾನ್ಸರ ಮತ್ತು ಟ್ಯೂಮರ್‌ ಗುಣವಾಗುತ್ತದೆ ಎಂಬ ಯಾವ ಸಂಶೋಧನೆಗಳೂ ನಡೆದಿಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ’ಎಂದಿದ್ದಾರೆ.

ಎಳನೀರಿನಿಂದ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಸೋಂಕನ್ನು ತಡೆಗಟ್ಟುವ ಶಕ್ತಿ ಇದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೆಲ್ಲಕ್ಕಿಂತಾ ಹೆಚ್ಚಾಗಿ ಪೌಷ್ಟಿಕಾಂಶವಿರುವ ಉತ್ತರ ಆಹಾರಗಳಲ್ಲಿ ಒಂದು. ಅದರ ಹೊರತಾಗಿ ಎಳನೀರಿನಲ್ಲಿ ಕ್ಯಾನ್ಸರ್‌ ಅಥವಾ ಟ್ಯೂಮರ್‌ ಅನ್ನು ಗುಣಪಡಿಸುವ ಅಂಶಗಳಿಲ್ಲ.

- ವೈರಲ್ ಚೆಕ್