Baby Health: ಮಕ್ಕಳನ್ನು ಕಾಡುವ ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮಕ್ಕಳಿಗೆ ಎಷ್ಟೇ ಎಚ್ಚರಿಕೆಯಿಂದ ಆಹಾರ ನೀಡಿದ್ರೂ ಗ್ಯಾಸ್ ಸಮಸ್ಯೆ ಕಾಡುತ್ತದೆ. ಹೊಟ್ಟೆ ಊದಿಕೊಳ್ಳುತ್ತದೆ. ರಾತ್ರಿ ಮಕ್ಕಳು ಒಂದೇ ಸಮನೆ ಅಳಲು ಶುರು ಮಾಡ್ತಾರೆ. ಈ ಸಂದರ್ಭದಲ್ಲಿ ಪಾಲಕರು ಮನೆ ಮದ್ದಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.
 

Home Remedies To Relieve Gas In Kids

ದೊಡ್ಡ ಮಕ್ಕಳಿಗೆ ಮಾತ್ರವಲ್ಲ ಚಿಕ್ಕ ಮಕ್ಕಳಿಗೂ ಗ್ಯಾಸ್ ಸಮಸ್ಯೆ ಎದುರಾಗುತ್ತದೆ. ಮಕ್ಕಳಿಗೆ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳಲು ಅನೇಕ ಕಾರಣವಿದೆ. ಮಕ್ಕಳು ಸ್ವಲ್ಪ ದೊಡ್ಡವರಾಗಿದ್ರೆ ಎಲ್ಲಿ ನೋವಾಗ್ತಿದೆ, ಏನಾಗ್ತಿದೆ ಎಂಬುದನ್ನು ಹೇಳ್ತಾರೆ. ಆದ್ರೆ ಶಿಶುಗಳಿಗೆ ಮಾತನಾಡಲು ಬರುವುದಿಲ್ಲ. ಇದ್ದಕ್ಕಿದ್ದಂತೆ ಶಿಶು ಅಳಲು ಶುರು ಮಾಡುತ್ತದೆ. ಏನಾಯ್ತು ಎಂಬುದು ಪಾಲಕರಿಗೆ ತಿಳಿಯೋದಿಲ್ಲ. ಗ್ಯಾಸ್ ಸಮಸ್ಯೆ ಹೆಚ್ಚಾಗಿದ್ದರೆ ಕಿರಿಕಿರಿಯುಂಟಾಗುತ್ತದೆ. ಹಾಲು ಹೆಚ್ಚಾಗಿ ಕುಡಿಯುವುದ್ರಿಂದಲೂ, ಸರಿಯಾಗಿ ಆಹಾರ ಸೇವನೆ ಮಾಡದಿರುವ ಕಾರಣಕ್ಕೂ ಹೊಟ್ಟೆಯೊಳಗೆ ಗಾಳಿ ತುಂಬುತ್ತದೆ. ಇದ್ರಿಂದ ಹೊಟ್ಟೆ ಊದಿಕೊಂದು ಗ್ಯಾಸ್ ಸಮಸ್ಯೆ ಕಾಡುತ್ತದೆ. ಮಕ್ಕಳಿಗೆ ಕಾಡುವ ಗ್ಯಾಸ್ ಸಮಸ್ಯೆಯನ್ನು ಮನೆ ಮದ್ದಿನ ಮೂಲಕವೂ ಕಡಿಮೆ ಮಾಡಬಹುದು. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಈ ಮದ್ದನ್ನು ಬಳಸಬಹುದು.

ಮಕ್ಕಳಿಗೆ ಕಾಡುವ ಗ್ಯಾಸ್ ಗೆ ಮನೆ ಮದ್ದು : 

ಓಂಕಾಳು ( ಅಜ್ವೈನ) : ಓಂಕಾಳು ದೇಹಕ್ಕೆ ತುಂಬಾ ಪ್ರಯೋಜನಕಾರಿ.  ಅಜ್ವೈನ, ಆಹಾರ (Food)ವನ್ನು ಸುಲಭವಾಗಿ ಜೀರ್ಣ (Digestion)ಗೊಳಿಸುತ್ತದೆ. ಇದ್ರಿಂದ ಬೇಗ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಅಜ್ವೈನವನ್ನು ಮಕ್ಕಳಿಗೆ ಹಾಗೆ ನೀಡಲು ಸಾಧ್ಯವಿಲ್ಲ. ಅಜ್ವೈನದ ನೀರನ್ನು ಮಾಡಿ ನೀವು ಮಕ್ಕಳಿಗೆ ನೀಡ್ಬೇಕು. ಅದಕ್ಕಾಗಿ 1/4 ಕಪ್ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚ ಅಜ್ವೈನ್ ಹಾಕಿ ಚೆನ್ನಾಗಿ ಕುದಿಸಿ. ನೀರು ಚೆನ್ನಾಗಿ ಕುದಿದ ನಂತರ  ಅದನ್ನು ಫಿಲ್ಟರ್ ಮಾಡಿ ಮತ್ತು ಮಗುವಿಗೆ (Baby) ಉಗುರು ನೀರನ್ನು ನೀಡಿ. ಅಜ್ವೈನ್ ಟೀಯನ್ನು ಕೂಡ ಮಗುವಿಗೆ ನೀಡಬಹುದು. ಅಜ್ವೈನ ದೇಹದ ಉಷ್ಣತೆ ಹೆಚ್ಚಿಸುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಅಜ್ವೈನ ನೀರನ್ನು ಮಕ್ಕಳಿಗೆ ನೀಡಬಾರದು. ಸ್ವಲ್ಪ ಪ್ರಮಾಣದಲ್ಲಿ ಅಜ್ವೈನ ನೀರನ್ನು ನೀಡಬೇಕು.

ಮಕ್ಕಳಲ್ಲಿ ಗ್ಯಾಸ್ ಸಮಸ್ಯೆ: ಮಸಾಜ್ ಮಾಡೋ ಮೂಲಕ ಸಮಸ್ಯೆ ನಿವಾರಿಸಿ

ಏಲಕ್ಕಿ : ಗ್ಯಾಸ್ ಸಮಸ್ಯೆಗೆ ಏಲಕ್ಕಿ (Cardamom)ಯನ್ನು ಕೂಡ ಸೇವನೆ ಮಾಡಬಹುದು. ಏಲಕ್ಕಿ ಔಷಧಿ ಗುಣಗಳಿಂದ ಸಮೃದ್ಧವಾಗಿದೆ.  ಏಲಕ್ಕಿಯಲ್ಲಿ ಕಬ್ಬಿಣ, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಗ್ಯಾಸ್ ಸಮಸ್ಯೆ ಇರುವ ಮಕ್ಕಳಿಗೆ ಏಲಕ್ಕಿ ಪುಡಿ ಬೆರೆಸಿದ ಹಾಲನ್ನು ನೀಡಬಹುದು. ಇಲ್ಲವೆ ಆಹಾರದಲ್ಲಿ ಒಂದರಿಂದ ಎರಡು ಏಲಕ್ಕಿ ಬೆರೆಸಿ ನೀಡಬಹುದು.  ಏಲಕ್ಕಿಯನ್ನು ಮಕ್ಕಳಿಗೆ ನೀಡುವುದರಿಂದ ವಾಂತಿ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆ ಕಡಿಮೆಯಾಗುತ್ತದೆ. 

ಗ್ಯಾಸ್ ಸಮಸ್ಯೆಗೆ ಶುಂಠಿ : ಆರೋಗ್ಯಕ್ಕೆ ಶುಂಠಿ (Ginger) ಒಳ್ಳೇಯದು. ಶುಂಠಿ ಸ್ವಲ್ಪ ಖಾರದ ಅನುಭವ ನೀಡುವ ಕಾರಣ ಮಕ್ಕಳು ಅದನ್ನು ನೇರವಾಗಿ ತಿನ್ನುವುದಿಲ್ಲ. ಹಾಗಾಗಿ ಶುಂಠಿಯನ್ನು ತುರಿದು ಅದರ ರಸ ತೆಗೆದು ನೀವು ನೀಡಬೇಕು. ಶುಂಠಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಮಗುವಿಗೆ ಅರ್ಧ ಚಮಚ ನೀಡಬೇಕು. ಶುಂಠಿ ಮಕ್ಕಳ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಶುಂಠಿಯನ್ನು ಕೂಡ ಮಕ್ಕಳಿಗೆ ಸೀಮಿತ ಪ್ರಮಾಣದಲ್ಲಿ ನೀಡ್ಬೇಕು. 

ಮಕ್ಕಳಿಗೆ ನೀಡಿ ಕಪ್ಪು ಉಪ್ಪು, ನಿಂಬೆ ರಸ : ಗ್ಯಾಸ್ ಸಮಸ್ಯೆ ಇರುವ ಮಕ್ಕಳಿಗೆ ನೀವು ನಿಂಬೆ (Lemon) ರಸ ನೀಡಬಹುದು. ನಿಂಬು ಹಾಗೂ ಉಪ್ಪು ಬೆರೆಸಿ ನೀಡಬೇಕು. ನಿಂಬೆ ಹುಳಿ ಎನ್ನಿಸಿದ್ರೆ ಅದಕ್ಕೆ ನೀರನ್ನು ಬೆರೆಸಿ ನೀಡಿ. ಇದ್ರಿಂದ ಗ್ಯಾಸ್ ಬೇಗ ಕಡಿಮೆಯಾಗುತ್ತದೆ. 

ಎದೆಹಾಲು ಕುಡಿಯದೆ ಅಳ್ತಿತ್ತು ಮಗು, ಎಕ್ಸ್‌ರೇ ತೆಗೆದ್ರೆ ಶ್ವಾಸಕೋಶದಲ್ಲಿತ್ತು ಕಾಲುಂಗುರ !

ಗ್ಯಾಸ್ ಸಮಸ್ಯೆಯಿಂದ ಹೊಟ್ಟೆ (Stomach) ಊದಿಕೊಂಡಿದ್ದರೆ ನೀವು ಹೊಟ್ಟೆಗೆ ಮಸಾಜ್ ನೀಡಬಹುದು. ಹೊಟ್ಟೆಯನ್ನು ನಿಧಾನವಾಗಿ ಮಸಾಜ್ ಮಾಡ್ಬೇಕು. ಟವೆಲ್ ಒಂದನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ, ಅದನ್ನು ಮಕ್ಕಳ ಹೊಟ್ಟೆ ಮೇಲೆ ಇಡಬೇಕು. ಹೀಗೆ ಮಾಡಿದ್ರೆ ಮಕ್ಕಳಿಗೆ ಸ್ವಲ್ಪ ಆರಾಮದ ಅನುಭವವಾಗುತ್ತದೆ. 

Latest Videos
Follow Us:
Download App:
  • android
  • ios