Asianet Suvarna News Asianet Suvarna News

Home Remedies : ಪುರುಷರ ಕಾಡುವ ಬೆನ್ನು ನೋವಿಗೆ ಇಲ್ಲಿವೆ ಮನೆ ಮದ್ದು

ನೋವು..ನೋವು.. ಇತ್ತೀಚಿನ ದಿನಗಳಲ್ಲಿ ಜನರಿಗೆ ಒಂದಲ್ಲ ಒಂದು ನೋವು ಕಾಮನ್ ಆಗಿದೆ. ಬೆನ್ನು ನೋವು, ಸೊಂಟ ನೋವು,ಹೊಟ್ಟೆ ನೋವು ಹೀಗೆ ಅನೇಕ ನೋವುಗಳಿಂದ ಜನರು ಯಾತನೆ ಅನುಭವಿಸ್ತಿದ್ದಾರೆ. ಜೀವ ಹಿಂಡುವ ಈ ನೋವಿಗೆ ಅನೇಕ ಮನೆ ಮದ್ದುಗಳು ಪರಿಹಾರ ನೀಡುತ್ತವೆ.
 

Home Remedies To Get Relief From Back Pain In Men
Author
First Published Aug 25, 2022, 1:30 PM IST

ಹಿಂದೆ ಬೆನ್ನು ನೋವು ಅಥವಾ ಮೊಣಕಾಲು ನೋವು ಕಾಡ್ತಿದೆ ಅಂದ್ರೆ ವಯಸ್ಸಾಯ್ತು ಎಂದು ಭಾವಿಸ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಯುವಜನರಲ್ಲಿಯೂ ಹೆಚ್ಚಾಗಿ ಬೆನ್ನು ಹಾಗೂ ಮೊಣಕಾಲು ನೋವು ಕಾಡುತ್ತಿದೆ. ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೆಲಸ ಮಾಡುವುದು ಮತ್ತು ತಪ್ಪಾಗಿ ಕುಳಿತುಕೊಳ್ಳುವುದರಿಂದ ಅನೇಕ ಬಾರಿ ಪುರುಷರಿಗೆ ಬೆನ್ನುನೋವಿನ ಸಮಸ್ಯೆ ಪ್ರಾರಂಭವಾಗುತ್ತವೆ. ಬೆನ್ನು ನೋವಿನಿಂದಾಗಿ ಅವರು ಸರಿಯಾಗಿ ಕೆಲಸ ಮಾಡಲು ಅಥವಾ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಬೆನ್ನು ನೋವಿನಿಂದ ಪರಿಹಾರ ಪಡೆಯಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಔಷಧಿಗಳನ್ನು ತೆಗೆದುಕೊಳ್ತಾರೆ. ಮಸಾಜ್ ಮಾಡಿಕೊಳ್ತಾರೆ. ಔಷಧಿ ತೆಗೆದುಕೊಂಡ್ರೆ  ಸ್ವಲ್ಪ ಸಮಯದವರೆಗೆ ನೋವು ಕಡಿಮೆಯಾದಂತೆ ಭಾಸವಾಗುತ್ತದೆ. ಆದ್ರೆ ಇದ್ರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ. ಕೆಲವು ಮನೆಮದ್ದುಗಳ ಸಹಾಯದಿಂದ ಬೆನ್ನು ನೋವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಬೆನ್ನುನೋವಿನಿಂದ ಪರಿಹಾರ ಪಡೆಯಲು ಮನೆಮದ್ದುಗಳು ಯಾವುವು ಎಂಬುದು ಇಲ್ಲಿದೆ.

ಪುರುಷ (Male) ರ ಬೆನ್ನು ನೋವಿ (Back Pain) ಗೆ ಮನೆ ಮದ್ದು (Home Remedy) : 

ಬೆಳ್ಳುಳ್ಳಿ (Garlic) : ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಂದಾಗಿ ಬೆನ್ನು ನೋವನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.  ಒಂದು ಬಟ್ಟಲಿನಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಬೇಕು. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿದ ನಂತರ  ಬೆಳ್ಳುಳ್ಳಿ ಮೊಗ್ಗು ಹಾಗೂ ಕೆಲವು ಲವಂಗವನ್ನು ಹಾಕಬೇಕು. ಬೆಳ್ಳುಳ್ಳಿ ಎಣ್ಣೆಯಲ್ಲಿ ಚೆನ್ನಾಗಿ ಹುರಿದ ನಂತರ ಗ್ಯಾಸ್ ಬಂದ್ ಮಾಡ್ಬೇಕು. ಎಣ್ಣೆ ತಣ್ಣಗಾದ ನಂತರ  ಈ ಎಣ್ಣೆಯನ್ನು ನೋವಿರುವ ಭಾಗಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ಬೆನ್ನುನೋವಿಗೆ ಪರಿಹಾರ ಸಿಗುತ್ತದೆ. ನೋವಿನ ಪರಿಹಾರಕ್ಕಾಗಿ ನೀವು ಪ್ರತಿದಿನ ಬೆಳಿಗ್ಗೆ 3-4 ಬೆಳ್ಳುಳ್ಳಿಯನ್ನು ತಿನ್ನಬಹುದು. ಇದರಿಂದ ಬೆನ್ನು ನೋವಿಗೂ ಪರಿಹಾರ ಸಿಗುತ್ತದೆ. ನಿಮಗೆ ಬೇರೆ ಯಾವುದೇ ಖಾಯಿಲೆ ಇದ್ದರೆ ವೈದ್ಯರ ಸಲಹೆಯ ಮೇರೆಗೆ ಬೆಳ್ಳುಳ್ಳಿಯನ್ನು ಸೇವಿಸಲು ಪ್ರಾರಂಭಿಸಿ.

ಬ್ರೇಕ್‌ಫಾಸ್ಟ್‌ ಸ್ಕಿಪ್ ಮಾಡೋ ಮಕ್ಕಳ ಅಭ್ಯಾಸ ಖಿನ್ನತೆಗೆ ಕಾರಣವಾಗ್ಬೋದು!

ಅರಿಶಿನ : ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಅರಿಶಿನವು ದೇಹದ ನೋವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬೆನ್ನು ನೋವು ನಿಮ್ಮನ್ನು ತುಂಬಾ ಕಾಡುತ್ತಿದ್ದರೆ ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಿರಿ. ಇದು ನಿಮ್ಮನ್ನು ಆರೋಗ್ಯವಾಗಿಡುವ  ಜೊತೆಗೆ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.

ತೆಂಗಿನ ಎಣ್ಣೆ (Coconut Oil) ಮತ್ತು ಕರ್ಪೂರ : ಬೆನ್ನು ನೋವನ್ನು ಕಡಿಮೆ ಮಾಡಲು ಪುರುಷರು ತೆಂಗಿನ ಎಣ್ಣೆ ಮತ್ತು ಕರ್ಪೂರವನ್ನು ಸಹ ಬಳಸಬಹುದು. ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಕರ್ಪೂರವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವು ತಣ್ಣಗಾದ ನಂತರ ಸೊಂಟವನ್ನು ವಾರಕ್ಕೆ 2 ರಿಂದ 3 ಬಾರಿ ಮಸಾಜ್ ಮಾಡಿ. ಈ ಮಿಶ್ರಣವು ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ ಮತ್ತು ಬೆನ್ನು ನೋವನ್ನು ಹೋಗಲಾಡಿಸುತ್ತದೆ.

ನೀಲಗಿರಿ ಎಣ್ಣೆ(Eucalyptus oil): ನೀಲಗಿರಿಯಲ್ಲಿರುವ ನೋವು ನಿವಾರಕ ಗುಣ  ಬೆನ್ನುನೋವಿನಿಂದ ಉಪಶಮನ ನೀಡಲು ಸಹಕಾರಿಯಾಗಿದೆ. ಉಗುರು ಬೆಚ್ಚಗಿನ ಸ್ನಾನದ ನೀರಿಗೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಬೆನ್ನುನೋವಿನ ಜೊತೆಗೆ ದೇಹದ ಇತರ ನೋವು ನಿವಾರಣೆಯಾಗುತ್ತದೆ.

ಕಲ್ಲುಪ್ಪು (Rock Salt) :  ಕಲ್ಲು ಉಪ್ಪಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆನ್ನು ನೋವಿಗೆ ಇದನ್ನು ಬಳಸಬಹುದು. ಕಲ್ಲು ಉಪ್ಪಿನಲ್ಲಿ ಸ್ವಲ್ಪ ನೀರನ್ನು ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ನೋವು ಇರುವ ಭಾಗಕ್ಕೆ ಹಚ್ಚಿ. 10 ರಿಂದ 15 ನಿಮಿಷಗಳ ನಂತರ ಈ ಪೇಸ್ಟ್ ಅನ್ನು ತೆಗೆಯಿರಿ.  

ದಿನಾ ಸಕ್ಕರೆ ಸೇರಿಸಿದ ಹಾಲು ಕುಡಿಯೋ ಅಭ್ಯಾಸ ಒಳ್ಳೆಯದಾ ?

ಪುರುಷರಿಗೆ  ಕೆಲವು ಮುನ್ನೆಚ್ಚರಿಕೆಗಳು : ಬೆನ್ನು ನೋವು ಬರಬಾರದೆಂದ್ರೆ ಕೆಲಸ ಮಾಡುವಾಗ  ನೀವು ಕುಳಿತುಕೊಳ್ಳುವ ಭಂಗಿಯ ಬಗ್ಗೆ ಗಮನ ನೀಡಿ. ಸರಿಯಾಗಿ ಕುಳಿತುಕೊಳ್ಳದೆ ಹೋದ್ರೆ ಬೆನ್ನು ನೋವು ಕಾಡುತ್ತದೆ. ಕಾರಿನ ಸೀಟ್ ಕೂಡ ನಿಮ್ಮ ಬೆನ್ನು ನೋವಿಗೆ ಕಾರಣವಾಗುತ್ತದೆ. ಒಂದೆಡೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವ ಬದಲು ಮಧ್ಯೆ ಬಿಡುವು ಮಾಡಿಕೊಳ್ಳುವುದು ಒಳ್ಳೆಯದು.  ತೂಕ ಹೆಚ್ಚಾದ್ರೆ ಬೆನ್ನು ನೋವು ಕಾಡುತ್ತದೆ. ಹಾಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಆರೋಗ್ಯಕರ ಆಹಾರವನ್ನು ಸೇವಿಸಿ.
 

Follow Us:
Download App:
  • android
  • ios