Pedicure: ಬಾಳೆಹಣ್ಣಿನ ಸಿಪ್ಪೆಯಿಂದ ಪಾದಗಳ ಕಾಳಜಿ
ಕಾಲಿಗೆ ಹೊಸ ಚಪ್ಪಲಿಗಳನ್ನು ಧರಿಸಿ ನೋಡಿಕೊಳ್ಳುವಾಗ ಎಷ್ಟು ಖುಷಿ ಪಡುತ್ತೀವೆ. ಆದರೆ ಅದನ್ನು ಧರಿಸುವ ಪಾದಗಳ ಕಾಳಜಿ ಮಾಡಬೇಕಾದವರು ನಾವೇ ಎಂಬುದನ್ನು ಮರೆತೇ ಬಿಟ್ಟಿರುತ್ತೀವಿ. ಬೇಸಿಗೆ ಕಾಲ, ಮಳೆಗಾಲ ಹಾಗೂ ಚಳಿಗಾಲ ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ವಾತವರಣ ಇರುತ್ತದೆ. ಹಾಗೆ ಆ ಕಾಲಗಳಿಗೆ ಅನುಗುಣವಾಗಿ ಕಾಲುಗಳ ಆರೈಕೆಯೂ ಮಾಡಬೇಕು.
ಶೂ(Shoe) ಧರಿಸಿ ಸೆಖೆ ಹೆಚ್ಚಾದಾಗ ಏನು ಮಾಡುತ್ತೀರ ಹೇಳಿ, ಯಾವಾಗ ಮನೆಗೆ ಹೋಗಿ ಈ ಶೂ ತೆಗೆದಿಟ್ಟು ಕಾಲನ್ನು ತಂಪು ಮಾಡಿಕೊಳ್ಳುತ್ತೇನೋ ಎಂದು ಯೋಚಿಸುತ್ತಿರುತ್ತೀರಿ ಅಲ್ಲವೇ. ಚಪ್ಪಲಿ, ಶೂ ಧರಿಸಿ ಕಾಲಿನ ಪಾದಗಳು ಬೆಂದು ಹೋದಂತೆ ಅನಿಸಿದರೆ ಆಗ ಹೆಚ್ಚು ಎಂದರೆ ಕಾಲಿಗೆ ಧರಿಸಿರುವ ಸಾಕ್ಸ್, ಶೂ ಅಥವಾ ಚಪ್ಪಲಿಯನ್ನು (Slippers) ತೆಗೆದಿಟ್ಟು ಬರಿಕಾಲಿನಲ್ಲಿ ನಿಲ್ಲುತ್ತೀವಿ ಆದರೂ ಕಾಲುಗಳು ಬಿಸಿ ಬಿಸಿ ಅನಭವ ನೀಡಿದರೆ ತಣ್ಣನೆಯ ನೀರಿನಲ್ಲಿ ಕಾಲನ್ನು ತೊಳೆದುಕೊಳ್ಳುತ್ತೇವೆ. ಆಗ ಎಂತಹ ತಂಪು ಅನುಭವ ಆಗುತ್ತದೆ ಅಲ್ಲವೇ. ಅದಕ್ಕಿಂತ ಹಿತ ಕೊಡುವುದು ಎಂದರೆ ಬಾಳೆಹಣ್ಣಿನ ಸಿಪ್ಪೆಯಿಂದ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪೆಡಿಕ್ಯೂರ್!
ಬಾಳೆಹಣ್ಣಿನಿಂದ (Banana) ಆರೋಗ್ಯ
ಪ್ರತಿದಿನ ಕನಿಷ್ಟ ಎರೆಡು ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಹಲವಾರು ಒಳ್ಳೆಯ ಬದಲಾವಣೆಗಳಾಗುತ್ತವೆ. ಬಾಳೆಹಣ್ಣಿನಲ್ಲಿ ಸಕ್ಕರೆಯ ಅಂಶ ಹೆಚ್ಚು ಇದೆ ಹಾಗಾಗಿ ನಿಮಗೆ ಡಯಾಬಿಟಿಸ್ ಸಮಸ್ಯೆ ಇದ್ದರೆ ಬಾಳೆಹಣ್ಣಿನಿಂದ ದೂರ ಇರುವುದು ಒಳ್ಳೆಯದು. ಡಯಾಬಿಟೀಸ್ ಇಲ್ಲ ಎಂದಾದರೆ ಬಾಳೆಹಣ್ಣು ಒಂದು ವರವಾಗಬಹುದು. ನೀವು ಆಗಾಗ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ದೇಹದಲ್ಲಿ (Body) ಎನರ್ಜಿ ಹೆಚ್ಚು ಉತ್ಪಾದನೆಯಾಗುತ್ತದೆ, ಮೂಳೆಗಳು ಗಟ್ಟಿಯಾಗುತ್ತವೆ, ಹೊಟ್ಟೆನೋವಿನಂತ ಸಮಸ್ಯೆಗಳು ಕಡಿಮೆಯಾಗುತ್ತದೆ. ಇದಿಷ್ಟೇ ಅಲ್ಲ ಕಬ್ಬಿಣಾಂಶದ ಕೊರತೆ ಇದ್ದರೆ ಅದೂ ಕೂಡಾ ನಿವಾರಣೆಯಾಗುತ್ತದೆ.
Pineapple Health Benefits: ಅನಾನಸ್ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ ?
ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದನ್ನು ಈಗಾಗಲೇ ತಿಳಿದುಕೊಡಿಂದ್ದೀವಿ. ಆದರೆ ಅದರ ಸಿಪ್ಪೆಯಿಂದಲೂ ಇಷ್ಟೊಂದು ಉಪಯೋಗ (Use) ಇದೆ ಎಂದು ಹಲವರಿಗೆ ಗೊತ್ತಿರುವುದಿಲ್ಲ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಮೊದಲು ಅದರ ಉಪಯೋಗಗಳ ಬಗ್ಗೆ ತಿಳಿಯೋಣ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಕಂಡುಬರುವ ಬಿಳಿಯ ದಾರದಂತಹ ಪದಾರ್ಥದಿಂದ ಚರ್ಮಕ್ಕೆ ಹೆಚ್ಚು ಕಾಂತಿ ನೀಡುವ ಶಕ್ತಿ ಇದೆ. ಮುಖಕ್ಕೆ (Face) ಬಾಳೆ ಹಣ್ಣಿನ ಸಿಪ್ಪೆಯನ್ನು ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ ಜೊತೆಗೆ ಮೊಡವೆ ಕಲೆಗಳು ನಿವಾರಣೆಯಾಗುತ್ತದೆ. ಬಾಳೆಹಣ್ಣು ಹಾಗೂ ಅದರ ಸಿಪ್ಪೆಯ ಮಹತ್ವ ತಿಳಿದಮೇಲೆ ಕಾಲು ಹಾಗೂ ಪಾದಗಳಿಗೆ ಅದರಿಂದಾಗುವ ಉಪಯೋಗದ ಬಗ್ಗೆ ನೀವು ತಿಳಿಯಲೇ ಬೇಕು.
ಪೆಡಿಕ್ಯೂರ್ (Pedicure)
ಸ್ವಲ್ಪ ಸಮಯ ಬಿಸಿಲಿನಲ್ಲಿ ನಿಂತು ಬಳಿಕ ನಿಮ್ಮ ಕಾಲುಗಳು (Feet) ಹೇಗೆ ಕಾಣುತ್ತವೆ ಎಂದು ನೋಡಿರುತ್ತೀರಿ, ನಿಮ್ಮ ಚಪ್ಪಲಿಯ ಆಕಾರ ಕಾಲಿನ ಮೇಲೆ ಕಾಣಿಸಿತ್ತೆ, ಇದು ಸರಿಯಾಗಬೇಕು ಅಂದರೆ ಕೆಲವು ದಿನಗಳೇ ಬೇಕಾಗುತ್ತದೆ, ಆದರೆ ಅದಕ್ಕೆ ಇಲ್ಲೊಂದು ಸುಲಭ ಉಪಾಯ ಇದೆ. ಪೆಡಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಈ ಕಲೆಯಿಂದ ಮುಕ್ತಿ ಪಡೆಯಬಹುದು ಆದರೆ ಪ್ರತಿ ಭಾರಿಯೂ ಪಾರ್ಲರ್‌ಗೆ ಹೋಗಿ ಪೆಡಿಕ್ಯೂರ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೂ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪರಿಹಾರವಿದೆ. ಬಾಳೆಹಣ್ಣಿನಲ್ಲಿರುವ ಅಮೀನೋ ಆಸಿಡ್ ಹಾಗೂ ವಿಟಮಿನ್‌ಗಳ ಸಹಾಯದಿಂದ ಒರಾಟದ ಕಾಲುಗಳು ಬೇಗನೆ ಮೃದುವಾಗುತ್ತದೆ.
Hair Fall Remedies: ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ
ಮಾಡುವ ವಿಧಾನ
ಬಾಳೆಹಣ್ಣನ್ನು ತೆಗೆದುಕೊಳ್ಳಿ ಅದರ ಸಿಪ್ಪೆ ಸುಲಿದು ಹಣ್ಣನ್ನು ತಿಂದು ಸಿಪ್ಪೆ ಬದಿಗಿಟ್ಟುಕೊಳ್ಳಿ, ಕಾಲನ್ನು ಸ್ವಚ್ಛವಾಗಿ ತೊಳೆದು ಒಣಗಿದ ಬಟ್ಟೆಯಲ್ಲಿ ಒರೆಸಿಕೊಳ್ಳಿ. ಈಗ ತೆಗೆದಿಟ್ಟುಕೊಂಡಿದ್ದ ಸಿಪ್ಪೆಯಿಂದ ಪಾದಗಳನ್ನು ತಿಕ್ಕಿ ಹಾಗು ಪಾದದ ಮೇಲ್ಬಾಗದಲ್ಲಿ ಟ್ಯಾನ್ (Tan) ಅಗಿದ್ದರೆ ಅಲ್ಲಿಗೂ ಕೂಡ ಸಿಪ್ಪೆಯ ಒಳಬಾಗವನ್ನು ಹಚ್ಚಿ. ಸ್ವಲ್ಪ ಹೊತ್ತಿನ ಬಳಿಕ ಉಗುರು ಬೆಚ್ಚಗಿನ ನೀರಿನಿಂದ (Water) ತೊಳೆದು, ಒಂದು ಬಾತ್ ಟಬ್ ನಲ್ಲಿ ಬೆಚ್ಚಗಿನ ನೀರುಹಾಕಿ ಜೊತೆಗೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ ಕಾಲನ್ನು ಅದರಲ್ಲಿ ಸ್ವಲ್ಪ ಸಮಯದ ಕಾಲ ಇಟ್ಟುಕೊಳ್ಳಿ. ಇದಾದ ಬಳಿಕ ನಿತ್ಯ ಬಳಸುವ ಬಾಡಿಲೋಷನ್ ಅನ್ನು ಪಾದಗಳಿಗೆ ಲೇಪಿಸಿಕೊಳ್ಳಿ