Asianet Suvarna News Asianet Suvarna News

Health Tips: ಸ್ನಾನ ಮಾಡುವಾಗ ಮೂತ್ರ ಕಟ್ಟಿಕೊಂಡರೆ ಅಪಾಯ

ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಒಳ್ಳೆಯ ಅಭ್ಯಾಸವಲ್ಲ. ಇದು  ಮೂತ್ರಕೋಶದ ಮೇಲೆ ಹಾನಿಯುಂಟು ಮಾಡುತ್ತದೆ. ಇದ್ರಿಂದ ಅನೇಕ ರೋಗ ನಮ್ಮನ್ನು ಕಾಡುತ್ತದೆ. ಹಾಗೆ ಎಲ್ಲೆಂದರಲ್ಲಿ ಮೂತ್ರವಿಸರ್ಜನೆ ಮಾಡೋದು ಕೂಡ ಒಳ್ಳೆಯದಲ್ಲ. 

Holding Urine Pressure In Shower Can Cause Uti And Bladder Problem Know Important Health Tips
Author
First Published Apr 28, 2023, 7:00 AM IST

ನಮ್ಮ ಶರೀರದ ಕಲ್ಮಶಗಳನ್ನು ಹೊರಹಾಕುವಲ್ಲಿ ಮಲ, ಮೂತ್ರಗಳ ಪಾಲು ದೊಡ್ಡದು. ಅನೇಕ ಖಾಯಿಲೆಗಳನ್ನು ಕಂಡುಹಿಡಿಯಲು ಮೂತ್ರ ಪರೀಕ್ಷೆ ಮಾಡಲಾಗುತ್ತದೆ. ಅನೇಕ ಬಾರಿ ಮೂತ್ರ ವಿಸರ್ಜನೆಯ ಏರುಪೇರಿನಿಂದಲೇ ನಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸೂಚನೆ ನಮಗೆ ಸಿಗುತ್ತದೆ.

ಮೂತ್ರ (Urine) ವನ್ನು ಕಟ್ಟಿಕೊಳ್ಳುವುದು ಕಷ್ಟ. ಮೂತ್ರ ವಿಸರ್ಜನೆ ಸರಿಯಾಗಿ ಆಗದೇ ಇದ್ದಾಗ ಶರೀರದಲ್ಲಿ ನೋವು (Pain) ಕಾಣಿಸಿಕೊಳ್ಳುತ್ತದೆ. ಮತ್ತೆ ಮತ್ತೆ ಮೂತ್ರ ಕಟ್ಟಿಕೊಳ್ಳುವುದು ಆರೋಗ್ಯ (Health) ಕ್ಕೂ ಒಳ್ಳೆಯದಲ್ಲ. ಮಕ್ಕಳು ಹಾಗೂ ವೃದ್ಧರಿಗೆ ಕೆಲವೊಮ್ಮೆ ಮೂತ್ರ ವಿಸರ್ಜನೆಯ ಮೇಲೆ ಹಿಡಿತವಿರುವುದಿಲ್ಲ. ಹಾಗೆಯೇ ಕೆಲವರಿಗೆ ಸ್ನಾನ (Bath) ಮಾಡುವಾಗ ಮೂತ್ರ ವಿಸರ್ಜನೆ ಆಗುತ್ತದೆ. ಸ್ನಾನದ ಟಬ್ ನಲ್ಲೋ ಅಥವಾ ಸ್ವಿಮಿಂಗ್ ಫೂಲ್ ಗಳಲ್ಲೋ ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಅನೇಕ ಜನರು ಮೂತ್ರವನ್ನು ತಡೆಹಿಡಿಯುತ್ತಾರೆ. ಹೀಗೆ ಮಾಡುವುದರಿಂದ ಮುಂದೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ತೊಂಡೆಕಾಯಿ ಇಷ್ಟಾನೇ ಇಲ್ಲ ಅನ್ಬೇಡಿ… ಆರೋಗ್ಯ ಪ್ರಯೋಜನಗಳು ಎಷ್ಟಿವೆ ನೋಡಿ…

ಸ್ನಾನ ಮಾಡುವಾಗಲೇ ಏಕೆ ಮೂತ್ರದ ಪ್ರೆಶರ್ ಹೆಚ್ಚಿರುತ್ತೆ? : ಬಹಳ ಸಮಯದ ತನಕ ಸ್ನಾನ ಮಾಡುವಾಗ ಹೆಚ್ಚು ಹೊತ್ತು ನೀರನ್ನು ಬಳಸಬೇಕಾಗುತ್ತದೆ. ಬಹಳ ಸಮಯದ ತನಕ ನೀರಿನ ಸಂಪರ್ಕದಲ್ಲಿದ್ದಾಗ ಶರೀರದ ತಾಪಮಾನ ಕಡಿಮೆಯಾಗುತ್ತದೆ. ಇದರಿಂದ ಶರೀರದ ಉಷ್ಣತೆ ಕೂಡ ಕಡಿಮೆಯಾಗುತ್ತದೆ. ಇಂತಹ ಸಮಯದಲ್ಲಿ ಶರೀರ ಸಮತೋಲನ ಕಾಪಾಡಿಕೊಳ್ಳಲು ಮೂತ್ರ ವಿಸರ್ಜನೆಯ ಮೂಲಕ ದ್ರವವನ್ನು ಹೊರಹಾಕುತ್ತದೆ. ಈ ಪ್ರಕ್ರಿಯೆಯನ್ನು ವಾಟರ್ ಡೈರೆಸಿಸ್ ಎಂದು ಕರೆಯುತ್ತಾರೆ.

ಮೂತ್ರವನ್ನು ಕಟ್ಟಿಕೊಳ್ಳುವುದರಿಂದ ಏನಾಗುತ್ತೆ? : ದೇಹದ ಕಲ್ಮಶಗಳು ಮೂತ್ರದ ಮೂಲಕ ಹೊರಹೋಗುತ್ತದೆ. ಹಾಗಾಗಿ ಇದರಲ್ಲಿ ಅನೇಕ ಬ್ಯಾಕ್ಟೀರಿಯಾಗಳು ಇರುತ್ತವೆ. ಒಬ್ಬ ವ್ಯಕ್ತಿ ಮೂತ್ರವನ್ನು ತಡೆಹಿಡಿದಾಗ ಮೂತ್ರಕೋಶದಲ್ಲಿ ಹೆಚ್ಚಿನ ಪ್ರಮಾಣದ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತದೆ. ಈ ಕಾರಣದಿಂದ ಮೂತ್ರದ ಸೋಂಕು ಉಂಟಾಗುತ್ತದೆ ಮತ್ತು ಅದರಿಂದ ಮೂತ್ರಕೋಶ ಹಾನಿಗೊಳಗಾಗುತ್ತದೆ. ತಣ್ಣನೆಯ ತಾಪಮಾನದಲ್ಲಿ ಬಹಳ ಸಮಯವಿದ್ದಾಗ ಶರೀರ ಮೂತ್ರ ವಿಸರ್ಜಿಸುತ್ತದೆ. ಹಾಗಾಗಿಯೇ ಸ್ನಾನ ಮಾಡುವಾಗ ಮೂತ್ರವನ್ನು ತಡೆಹಿಡಿಯುವುದು ಶರೀರದ ಪ್ರಕ್ರಿಯೆಗೆ ವಿರುದ್ಧವಾಗಿದೆ. ಇದರಿಂದ ಹೈಪೋಥರ್ಮಿಯಾ ಉಂಟಾಗುವ ಸಾಧ್ಯತೆ ಇರುತ್ತದೆ.

Summer Food : ಚಯಾಪಚಯ ಬೂಸ್ಟ್ ಮಾಡುತ್ತೆ ಈ ಆಹಾರ

ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದು ಸರಿಯೇ? : 
ಬಹಳ ಮಂದಿಗೆ ಸ್ನಾನ ಮಾಡುವಾಗ ಮೂತ್ರ ವಿಸರ್ಜನೆಯಾಗುತ್ತದೆ. ಸ್ನಾನ ಮಾಡುವಾಗ ಮೂತ್ರ ಮಾಡುವುದು ಕೆಲವು ರೀತಿಯಲ್ಲಿ ಹಾನಿಕಾರಿಯಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಇದರಿಂದ ಮೂತ್ರನಾಳದ ಸೋಂಕು ಸಂಭವಿಸುತ್ತದೆ. ಇಂತಹ ಸಮಯದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
• ಮೂತ್ರ ವಿಸರ್ಜನೆಯಲ್ಲಿ ನೋವು/ಉರಿ
• ವಿಪರೀತ ವಾಸನೆಯಿಂದ ಕೂಡಿದ ಮೂತ್ರ
• ಮೂತ್ರದಲ್ಲಿ ರಕ್ತ (Blood in Urine)
• ಪೆಲ್ವಿಕ್ ಸ್ನಾಯುಗಳಲ್ಲಿ ನೋವು (Pain in Pelvic Muscle)
• ಮತ್ತೆ ಮತ್ತೆ ಮೂತ್ರ ವಿಸರ್ಜನೆಯಾಗುವುದು

ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸಲು ಹೀಗೆ ಮಾಡಿ : 
ಸ್ನಾನ ಮಾಡುವ ಸಮಯದಲ್ಲಿ ಮೂತ್ರವನ್ನು ತಡೆಹಿಡಿದುಕೊಂಡು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು ಸ್ನಾನಕ್ಕೆ ಹೋಗುವ ಮುಂಚೆಯೇ ಮೂತ್ರವನ್ನು ವಿಸರ್ಜಿಸುವುದು ಒಳ್ಳೆಯದಾಗಿದೆ. ಸ್ನಾನಕ್ಕೆ ಹೋಗುವ ಮೊದಲೇ ಬ್ಲೆಡರ್ ಅನ್ನು ಖಾಲಿ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ಕೆಲವೊಮ್ಮೆ ಇಂತಹ ಸಣ್ಣ ಸಣ್ಣ ತಪ್ಪುಗಳು ನಮ್ಮ ಗಮನಕ್ಕೆ ಬರದೇ ಅದರಿಂದ ಮುಂದೆ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ. ಸ್ನಾನದ ಕೋಣೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಕೂಡ ಅನೇಕರು ಅದೊಂದು ಸಾಮಾನ್ಯ ಪ್ರಕ್ರಿಯೆ ಎಂದೇ ಭಾವಿಸುತ್ತಾರೆ. ಇಂತಹ ಮನೋಭಾವ ತಪ್ಪು. ಏಕೆಂದರೆ ಹೀಗೆ ಮಾಡುವುದರಿಂದ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಅಥವಾ ಖಾಯಿಲೆಗಳು ನಮ್ಮ ಶರೀರವನ್ನು ಪ್ರವೇಶಿಸಬಹುದು. ಆ ಕಾರಣಕ್ಕಾಗಿ ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡದೇ ಇರುವುದು ಒಳಿತು.
 

Follow Us:
Download App:
  • android
  • ios