ಮಧುಮೇಹಿಗಳು ಧೂಮಪಾನ ಮಾಡಿದರೆ ಶೇ.100 ಹೃದಯ ಸಮಸ್ಯೆ ಖಚಿತ; ಡಾ. ಭಾನುಪ್ರಕಾಶ್
ಬೀಡಿ, ಸಿಗರೇಟ್ ಸೇರಿದಂತೆ ಧೂಮಪಾನ ಮಾಡುವ ಎಲ್ಲರಿಗೂ ಹೃದಯ ಸಮಸ್ಯೆ ಬರುತ್ತದೆ. ಆದರೆ, ಮಧುಮೇಹಿಗಳು (ಸಕ್ಕರೆ ಕಾಯಿಲೆ) ಧೂಮಪಾನ ಮಾಡಿದರೆ ಹೃದ್ರೋಗ ಸಮಸ್ಯೆ ಶೇ.100 ಖಚಿತವೆಂದು ಡಾ. ಭಾನು ಪ್ರಕಾಶ್ ತಿಳಿಸಿದ್ದಾರೆ.
ಬೆಂಗಳೂರು (ಆ.18): ಸಾಮಾನ್ಯವಾಗಿ ಸಿಗರೇಟ್ ಆರೋಗ್ಯಕ್ಕೆ ಹಾನಿಕರ. ಆದರೆ, ಸಕ್ಕರೆ ಕಾಯಿಲೆ ಇರುವವರು ಸಿಗರೇಟ್ ಸೇದಿದರೆ ಶೇ.100 ಹೃದಯ ಸಮಸ್ಯೆ ಬರುತ್ತದೆ ಎಂದು ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಮಾಹುತಿ ನೀಡಿದ್ದಾರೆ.
ತುಮಕೂರು ಸಿದ್ದಗಂಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಭಾನು ಪ್ರಕಾಶ್ ಅವರು ಹೃದ್ರೋಗದ ಬಗ್ಗೆ ಮಾಹಿತಿ ನೀಡುತ್ತಾ, ಧೂಮಪಾನ ಮಾಡುವವರ ಪೈಕಿ ಶೇ.90ಕ್ಕಿಂತ ಅಧಿಕವಾಗಿ ಹೃದ್ರೋಗ ಬರುವ ಸಾಧ್ಯತೆಯಿದೆ. ಒಂದು ವೇಳೆ ಸಕ್ಕರೆ ಕಾಯಿಲೆ ಇದ್ದವರು ಧೂಮಪಾನ ಮಾಡಿದರೆ ಶೇ.99 ಮಾತ್ರವಲ್ಲ ಶೇ.100 ಹೃದ್ರೋಗ ಸಮಸ್ಯೆ ಬರುತ್ತದೆ. ಇಂದು ಅಥವಾ ನಾಳೆ ಹೃದಯಕ್ಕೆ ಯಾವುದೇ ಸಮಸ್ಯೆ ಆಗದಿರಬಹುದು, ಶೀಘ್ರವೇ ಒಂದು ದಿನ ಹೃದ್ರೋಗಕ್ಕೆ ಒಳಗಾಗಿ ತೊಂದರೆ ಅನುಭವಿಸುವುದು ಖಚಿತ. ಒಂದು ವೇಳೆ ರಾತ್ರಿ ಮಲಗಿದವರು ಬೆಳಗ್ಗೆ ಎದ್ದೇಳದೇ ಹಾಸಿಗೆಯಲ್ಲಿಯೂ ಜೀವ ಬಿಡುವ ಸ್ಥಿತಿಯೂ ಕಂಡುಬರಬಹುದು. ಹೀಗಾಗಿ, ಯಾರೂ ಧೂಮಪಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಟ ದರ್ಶನ್ ವಿರೋಧಿ ಸುದ್ದಿ ಹಂಚಿಕೆಗೆ ಸುಶ್ಮಿತಾ ಪ್ರಭು ಹೆಸರಲ್ಲಿ ಫೇಕ್ ಐಡಿ ಕ್ರಿಯೇಟ್!
ಇನ್ನು ಡಾ.ಭಾನುಪ್ರಕಾಶ್ ಅವರು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ, ಪೊರ್ಟೀಸ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿ ನಂತರ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಎಲ್ಲ ಸಾರ್ವಜನಿಕರಿಗೂ ಈ ಮಾಹಿತಿ ತಿಳಿಸಬೇಕು ಎಂಬ ಉದ್ದೇಶವಿದ್ದರೆ, ಅಂತಹ ಚಿಕಿತ್ಸೆಯ ವೇಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ರೋಗಿಯ ಮುಖವನ್ನು ಅಥವಾ ಬೇರಾವುದೇ ಅವರು ತೋರಿಸದೇ ಚಿಕಿತ್ಸೆ ನೀಡುವ ವೇಳೆ ನೀಡುವ ಸಲಹೆಗಳನ್ನು ಮಾತ್ರ ಅಪ್ಲೋಡ್ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹೃದ್ರೋಗದ ಬಗ್ಗೆ ಮಾಹಿತಿ ನೀಡುವುದಲ್ಲದೇ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳನ್ನೂ ನೀಡುತ್ತಿದ್ದಾರೆ.
ಇದುವರೆಗೂ ನೀವು ಚೆನ್ನಾಗಿದ್ದೀರಿ ಎಂದರೆ ಈ ಹಿಂದೆ ನೀವು ಸೇವನೆ ಮಾಡಿರುವ ಗುಣಮಟ್ಟದ ಆಹಾರ ಅದಕ್ಕೆ ಕಾರಣವಾಗಿರುತ್ತದೆ. ಆದರೆ, ಬೀಡಿ, ಸಿಗರೇಟ್‌ಗಳನ್ನು ನಿರಂತರವಾಗಿ ಮೂರ್ನಾಲ್ಕು ವರ್ಷಗಳು ಸೇದಿದಲ್ಲಿ ಶ್ವಾಸಕೋಶದಲ್ಲಿ ಕಪ್ಪಾದ ಗಸೆ ಕಟ್ಟಿಕೊಳ್ಳಲು ಆರಂಭಿಸಿರುತ್ತದೆ. ಅದು ಕ್ರಮೇಣ ಹೆಚ್ಚಾಗುತ್ತಾ ಹೋಗಿ ಉಸಿರಾಟದ ಸಮಸ್ಯೆ ಕಾಡುತ್ತದೆ. ನಂತರ ಶುದ್ಧಗಾಳಿ ಹೃದಯಕ್ಕೆ ಸಿಗದೇ ಜೀವವೇ ಹೋಗುವ ಸಾಧ್ಯತೆ ತೀವ್ರ ಹೆಚ್ಚಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ರೈತರಿಗೆ ಸಮಸ್ಯೆಗಳು ಹೆಚ್ಚಳ: ಮತ್ತೊಂದು ವಿಡಿಯೋದಲ್ಲಿ ರೈತರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದಕ್ಕೆ ಕಾರಣ ಯಾವುದೇ ರೈತರು ಸರಿಯಾಗಿ ಹೊಲದಲ್ಲಿ ಕೆಲಸ ಮಾಡುತ್ತಿಲ್ಲ. ತರಹೇವಾರಿ ತಿಂಡಿ, ಊಟವನ್ನು ಮಾಡುತ್ತಾ ದೈಹಿಕ ಶ್ರಮವಹಿಸದೇ ಸೂಪರ್‌ವೈಸರ್ ಕೆಲಸಗಳನ್ನು ಮಾಡುತ್ತಿದ್ದಾರೆ. ನಮ್ಮ ಹಿಂದಿನ ಕಾಲದ ಯಾವುದೇ ರೈತರು 65 ಕೆ.ಜಿ.ಗಿಂತ ಹೆಚ್ಚು ತೂಕವಿರಲಿಲ್ಲ. ಕಾರಣ ಪೌಷ್ಠಿಕ ಸಮತೋಲಿತ ಆಹಾರ ತಿಂದು ದಣಿಯುವಂತೆ ಕೆಲಸ ಮಾಡಿಕೊಂಡು ಬರುತ್ತಿದ್ದರು. ಆದರೆ, ಈಗಿನ ಎಲ್ಲ ರೈತರು ಕನಿಷ್ಠ 80 ಕೆ.ಜಿ. ತೂಕವನ್ನು ಹೊಂದಿದ್ದಾರೆ. ಬೈಕ್ ಟ್ಯಾಂಕ್ ತುಂಬಾ ಪೆಟ್ರೋಲ್ ಹಾಕಿಸಿ ಹೊಲಕ್ಕೆ ಹೋಗಿ ಬಂದು ಮೋಟರ್ ಆನ್ ಮಾಡಿ, ವಾಲ್ ತಿರಿವಿ ನೀರನ್ನು ಬಿಟ್ಟು ಬರುವುದು ಹಾಗೂ ತೆಂಗಿನ ಕಾಯಿ ಎತ್ತಿ ಹಾಕಿ ಬಂದರೆ ಅದರು ಪೂರ್ಣ ರೈತರ ಕೆಲಸವಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಸ್ಟಾರ್‌ಗಳಾಗಿ ಮೆರೆದು, ಧಾರಾವಾಹಿಗೆ ಬಂದ ಖ್ಯಾತ ನಟಿಯರು.!
ನಮ್ಮ ಹಿರಿಯರು ರೈತರೆಂದರೆ ಎಷ್ಟೇ ಶ್ರೀಮಂತರಾಗಿದ್ದರೂ ಹೊಲದಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದರು. ಆದರೆ, ಅವರು ವರ್ಷಕ್ಕೆ ಮೂರ್ನಾಲ್ಕು ಹಬ್ಬದಲ್ಲಿ ಮಾತ್ರ ತರಹೇವಾರಿ ತಿಂಡಿ ಮತ್ತು ಒಳ್ಳೆಯ ಭಕ್ಷ್ಯ ಭೋಜನ ಮಾಡುತ್ತಿದ್ದರು. ಜೊತೆಗೆ, ಈಗಿನ ರೈತರು ಕೆಲಸ ಮಾಡದಿದ್ದರೂ ದಿನಕ್ಕೆ ಮೂರ್ನಾಲ್ಕು ಬಾರಿ ಟೀ, ಕಾಫಿ, ಮೂರು ಬಾರಿ ಹೊಟ್ಟೆ ತುಂಬಾ ಊಟ, ತಿಂಡಿ ಸೇವನೆ ಮಾಡುತ್ತಾರೆ. ಜೊತೆಗೆ, ಧೂಮಪಾನ, ಮದ್ಯಪಾನ ಮಾಡುವ ಚಟಗಳನ್ನು ಬೆಳೆಸಿಕೊಳ್ಳುತ್ತಿರುವುದರಿಂದ ರೈತರಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯ ಭಾನುಪ್ರಕಾಶ್ ಸಲಹೆ ನೀಡಿದ್ದಾರೆ.