Asianet Suvarna News Asianet Suvarna News

Health Tips : ನಗ್ತಾ ನಗ್ತಾ ಇದ್ದಾನೆಂದ್ರೆ ಆತ ಸುಖಿ ಅಲ್ಲ..! ಸ್ಮೈಲಿಂಗ್ ಡಿಪ್ರೆಶನ್ ಆಗಿರ್ಬಹುದು!

ನೋವು ಕಾಣ್ಬಾರದು, ಮುಖದಲ್ಲಿ ನಗು ಇರ್ಬೇಕು ಅಂತಾ ನಾವು ದೊಡ್ಡದಾಗಿ ಹೇಳ್ತೇವೆ. ಆದ್ರೆ ನೋವು ಮುಚ್ಚಿಡೋದು ಅಪಾಯಕಾರಿ. ದುಃಖ ಹೇಳದೆ ಮನಸ್ಸಿನಲ್ಲಿ ಅದುಮಿಟ್ಟು, ಮೇಲಿಂದ ನಗ್ತಿರುವ ವ್ಯಕ್ತಿ ಅಪಾಯವನ್ನು ಆಹ್ವಾನಿಸುತ್ತಾನೆ. 
 

Health Tips What Is Smiling Depression Its Symptoms And Prevention And Treatment
Author
First Published Mar 13, 2023, 3:34 PM IST

ಕೆಲವರು ಸದಾ ನಗ್ತಿರುತ್ತಾರೆ. ಅವರ ಮುಖದಲ್ಲೊಂದು ನಗುವಿರುತ್ತದೆ. ಅವರನ್ನು ನೋಡಿದ ನಮಗೆ ಖುಷಿಯಾಗುತ್ತೆ. ಅವರೆಷ್ಟು ಸಂತೋವಾಗಿದ್ದಾರೆ, ಯಾವಾಗ್ಲೂ ನಗ್ತಿರುತ್ತಾರೆ, ಅವರ ಜೀವನದಲ್ಲಿ ದುಃಖವೇ ಇಲ್ವಾ, ಅವರು ಸದಾ ಸಂತಸದಿಂದ ಇರಲು ಕಾರಣವೇನು ಎಂದು ನಮ್ಮನ್ನು ನಾವು ಪ್ರಶ್ನೆ ಮಾಡ್ತಿರುತ್ತೇವೆ. 

ನಾವು ಅಂದುಕೊಂಡಂತೆ ಎಲ್ಲವೂ ಇರೋದಿಲ್ಲ. ಅವರು ಸಂತೋಷ (Happiness) ವಾಗಿದ್ದಾರೆಂದು ನಾವು ಭಾವಿಸ್ತೇವೆ. ಆದ್ರೆ ಕೆಲವರ ಸ್ಮೈಲ್‌ (Smile) ಹಿಂದಿನ ಸತ್ಯವೇ ಬೇರೆ ಆಗಿರುತ್ತದೆ. ಅವರು ಒಳಗೊಂದು ಹೊರಗೊಂದು ಸ್ವಭಾವ ಹೊಂದಿರುತ್ತಾರೆ. ಈ ರೀತಿಯ ಸಮಸ್ಯೆಯನ್ನು ಸ್ಮೈಲಿಂಗ್ ಡಿಪ್ರೆಶನ್ (Depression) ಎಂದು ಕರೆಯಲಾಗುತ್ತದೆ. ನಾವಿಂದು ಸ್ಮೈಲಿಂಗ್ ಡಿಪ್ರೆಶನ್ ಅಂದ್ರೆ ಏನು ಎಂಬುದನ್ನು ನಮಗೆ ಹೇಳ್ತೇವೆ. 

HEALTHY FOOD : ಖಾಲಿ ಹೊಟ್ಟೇಲಿ ಅಪ್ಪಿ ತಪ್ಪಿಯೂ ಈ ಆಹಾರ ತಿನ್ನಬೇಡಿ

ಸ್ಮೈಲಿಂಗ್ ಡಿಪ್ರೆಶನ್ ಅಂದ್ರೇನು? : ಆರೋಗ್ಯ (Health) ತಜ್ಞರ ಪ್ರಕಾರ, ಸ್ಮೈಲಿಂಗ್ ಡಿಪ್ರೆಶನ್ ನಲ್ಲಿ ಒಬ್ಬ ವ್ಯಕ್ತಿ ಹೊರಗಿನಿಂದ ಸಂತೋಷವಾಗಿರುತ್ತಾನೆ. ಆದರೆ ಒಳಗಿನಿಂದ ನೋವು ಆತನನ್ನು ಕಾಡ್ತಿರುತ್ತದೆ. ಯಾವುದೇ ವ್ಯಕ್ತಿ ನಗುವಿನ ಹಿಂದೆ ಖಿನ್ನತೆಯನ್ನು ಮರೆ ಮಾಚಲು ಮುಂದಾಗಿದ್ರೆ ಅದನ್ನು ನಗುವಿನ ಖಿನ್ನತೆ ಎಂದು ಕರೆಯಲಾಗುತ್ತದೆ.  

ಸ್ಮೈಲಿಂಗ್ ಡಿಪ್ರೆಶನ್ ಲಕ್ಷಣಗಳು : ಸ್ಮೈಲಿಂಗ್ ಡಿಪ್ರೆಶನ್ ಗುರುತಿಸುವುದು ಕಷ್ಟ. ಆದ್ರೆ ದೀರ್ಘಕಾಲದಿಂದ ನೋವಿನಲ್ಲಿರುವ ವ್ಯಕ್ತಿ ಈ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಇದ್ರ ಜೊತೆ ಆಯಾಸ, ನಿದ್ರಾಹೀನತೆ, ತೂಕ ಮತ್ತು ಹಸಿವಿನಲ್ಲಿ ಬದಲಾವಣೆ, ಅಸಹಾಯಕತೆ, ಆಸಕ್ತಿ ಕಳೆದುಕೊಳ್ಳುವುದು, ಸ್ವಯಂ ಗೌರವ ಕಳೆದುಕೊಳ್ಳುವುದು ಸೇರಿದಂತೆ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅನೇಕರು ಇದನ್ನು ದೈಹಿಕ ಸಮಸ್ಯೆಯೆಂದು ಭಾವಿಸ್ತಾರೆಯೇ ವಿನಃ ಇದನ್ನು ಮಾನಸಿಕ ಸಮಸ್ಯೆ ಎಂದು ಒಪ್ಪಿಕೊಳ್ಳೋದಿಲ್ಲ. 

Thin Fat Obesity: ಸಣ್ಣಗೆ ಫಿಟ್ ಆಗಿದ್ದೇನೆಂದು ಬೀಗಬೇಡಿ, ನಿಮ್ಮ ದೇಹದಲ್ಲೂ ಥಿನ್‌ ಫ್ಯಾಟ್‌ ಇರಬಹುದು ಹುಷಾರ್!

ಸ್ಮೈಲಿಂಗ್ ಡಿಪ್ರೆಶನ್ ಕಾಡಲು ಕಾರಣವೇನು? : ಈಗಾಗಲೇ ಖಿನ್ನತೆ ಹೊಂದಿರುವ ವ್ಯಕ್ತಿಗೆ ಸ್ಮೈಲಿಂಗ್ ಡಿಪ್ರೆಶನ್ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ತಜ್ಞರ ಪ್ರಕಾರ, ಜೀವನದಲ್ಲಿ ವೈಫಲ್ಯ ಕಂಡಾಗ, ಸಂಗಾತಿ ದೂರವಾದಾಗ, ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ, ಕೆಲಸ ಕಳೆದುಕೊಂಡಾಗ ಅಥವಾ ಕೆಲಸದ ಬಗ್ಗೆ ತೃಪ್ತಿಯಿಲ್ಲದೆ ಹೋದ ಸಂದರ್ಭದಲ್ಲಿ, ಆರ್ಥಿಕ ಮುಗ್ಗಟ್ಟು ಈ ಖಿನ್ನತೆಗೆ ಕಾರಣವಾಗುತ್ತದೆ. ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಸಕ್ರಿಯವಾಗಿರುವುದು ಕೂಡ ಸ್ಮೈಲಿಂಗ್ ಡಿಪ್ರೆಶನ್ ಹೆಚ್ಚಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ. 

ಸ್ಮೈಲಿಂಗ್ ಡಿಪ್ರೆಶನ್ ಅಪಾಯವೇ? : ಸ್ಮೈಲಿಂಗ್ ಡಿಪ್ರೆಶನ್ ಬಗ್ಗೆ ನೀವು ಸರಿಯಾಗಿ ತಿಳಿಯುವ ಅವಶ್ಯಕತೆಯಿದೆ. ನೀವು ಸ್ಮೈಲಿಂಗ್ ಡಿಪ್ರೆಶನ್ ಗೆ ಒಳಗಾದಾಗ ನೀವು ಅದನ್ನು ಆದಷ್ಟು ಬೇಗ ಗುರುತಿಸಿ ಚಿಕಿತ್ಸೆ ಪಡೆಯಬೇಕು. ಇದರ ನಕಾರಾತ್ಮಕ ಪರಿಣಾಮ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲಾಗುತ್ತದೆ. ಸ್ಮೈಲಿಂಗ್ ಡಿಪ್ರೆಶನ್ ಗೆ ಒಳಗಾದ ವ್ಯಕ್ತಿ ಆತ್ಮಹತ್ಯೆ ಬಗ್ಗೆ ಹೆಚ್ಚು ಆಲೋಚನೆ ಮಾಡ್ತಾನೆ. ನೋವಿನಿಂದ ಮುಕ್ತಿಪಡೆಯಲು ಅವರು ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. 

ಸ್ಮೈಲಿಂಗ್ ಡಿಪ್ರೆಶನ್ ಗೆ ಚಿಕಿತ್ಸೆ ಇದ್ಯೆ? : ಮೊದಲೇ ಹೇಳಿದಂತೆ ಅದನ್ನು ಆರಂಭದಲ್ಲಿಯೇ ಗುರುತಿಸುವುದು ಬಹಳ ಮುಖ್ಯ. ನಿಮಗೆ ಅಥವಾ ನಿಮ್ಮ ಆಪ್ತರಿಗೆ ಈ ಸ್ಮೈಲಿಂಗ್ ಡಿಪ್ರೆಶನ್ ಕಾಡ್ತಿದೆ ಎಂದಾದ್ರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅವರು ನೀಡುವ ಮಾತ್ರೆ ಸೇವನೆ ಮಾಡ್ಬೇಕು. ಅದ್ರ ಜೊತೆಗೆ ನೀವು ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಬೇಕು. ನಿಮ್ಮ ಆಪ್ತರ ಜೊತೆ ಮಾತನಾಡಿ, ನೋವು ಹಂಚಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಇದ್ರಿಂದ ಗುಣಮುಖರಾಗಲು ವೈದ್ಯರು ಕೆಲ ಸಲಹೆಗಳನ್ನು ನಿಮಗೆ ನೀಡ್ತಾರೆ. ಅದನ್ನು ನೀವು ಚಾಚುತಪ್ಪದೆ ಪಾಲಿಸಿದಾಗ ನೀವು ಈ ಸ್ಮೈಲಿಂಗ್ ಡಿಪ್ರೆಶನ್ ನಿಂದ ಮುಕ್ತಿ ಹೊಂದಬಹುದು.  
 

Follow Us:
Download App:
  • android
  • ios