Health Tips: ಅಲರಾಂ ಸ್ನೂಜ್ ಬಟನ್ ಒತ್ತೋ ಮುನ್ನ ಇದನ್ನೋದಿ

ಬಹುತೇಕರಿಗೆ ಬೆಳಿಗ್ಗೆ ಹಾಸಿಗೆಯಿಂದ ಏಳೋಕೆ ಸೋಮಾರಿತನ. ಅಲರಾಂ ಹೊಡೆದುಕೊಳ್ತಿದ್ದರೂ ಅದನ್ನು ಸ್ನೂಜ್ ಮಾಡಿ ಮತ್ತೆ ಮಲಗ್ತಾರೆ. ನೀವೂ ಇವ್ರಲ್ಲಿ ಒಬ್ಬರಾಗಿದ್ರೆ ನಾಳೆನಿಂದ ಅಲರಾಂ ಹೊಡೆದ ತಕ್ಷಣ ಎದ್ಕೊಳ್ಳಿ. 
 

Health Tips Alarm Snoozing Could Be Dangerous For Health Know Why

ಬೆಳಗಿನ ನಿದ್ರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಬೆಳಕು ಹರಿಯುತ್ತಿದ್ದಂತೆ ಹೊದ್ದು ಮಲಗುವ ಆಸೆ ಮತ್ತಷ್ಟು ಹೆಚ್ಚಾಗುತ್ತದೆ. ವಾರಾಂತ್ಯಕ್ಕಿಂತ ವಾರದ ದಿನಗಳಲ್ಲಿ ಎಷ್ಟು ನಿದ್ರೆ ಮಾಡಿದ್ರೂ ಸಾಲೋದಿಲ್ಲ. ಬೆಳಿಗ್ಗೆ ಏಳೋದೇ ಕಷ್ಟ ಎನ್ನುವ ಮಾತನ್ನು ನೀವು ಕೇಳಿರ್ತೀರಿ. ರಾತ್ರಿ ತಡವಾಗಿ ಮಲಗುವ ಅಥವಾ ಬೆಳಗಿನ ನಿದ್ರೆಯನ್ನು ಹೆಚ್ಚು ಇಷ್ಟಪಡುವ ಜನರು ನಿದ್ರೆಯಿಂದ ಹೊರಬರಲು ಅಲರಾಂ ಇಟ್ಟು ಮಲಗ್ತಾರೆ.  

ಸರಿಯಾದ ಸಮಯಕ್ಕೆ ಅಲರಾಂ (Alarm) ಹೊಡೆದುಕೊಳ್ಳುತ್ತದೆ. ಅಲರಾಂ ಶಬ್ಧಕ್ಕೆ ಕೈ ಮಾತ್ರ ಹೊರಗೆ ಹಾಕುವ ಜನರು ಸ್ನೂಜ್ (Snooze) ಮಾಡಿ ಮತ್ತೆ ಮಲಗ್ತಾರೆ. ಕೆಲವರು ಸ್ನೂಜ್ ಮಾಡಿ ಮಾಡಿ, 10, 20, 30 ನಿಮಿಷ ನಿದ್ರೆ (Sleep) ಮುಂದುವರೆಸ್ತಾರೆ. ಒಂದೇ ಅಲರಾಂಗೆ ಏಳೋರ ಸಂಖ್ಯೆ ಬಹಳ ಅಪರೂಪ. ನೀವು ಕೂಡ ಸ್ನೂಜ್ ಮಾಡಿ ಏಳುವ ಸಮಯವನ್ನು ಮುಂದೂಡ್ತಾ, ನಿದ್ರೆ ಮಾಡ್ತಿದ್ದರೆ ಇಂದೇ ಈ ಹವ್ಯಾಸ ಬಿಡಿ. ಯಾಕೆಂದ್ರೆ ಸ್ನೂಜ್ ಮಾಡಿ ಮಲಗುವ ನಿಮ್ಮ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವಿಂದು ಅಲರಾಂ ಸ್ನೂಜ್ ಗೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೇವೆ.

Healthy Food : ಹಲಸಿನ ಹಿಟ್ಟಿನಿಂದ ಎಷ್ಟು ಲಾಭವಿದೆ ಗೊತ್ತಾ?

ಸ್ನೂಜ್ ಬಗ್ಗೆ ಇಲ್ಲಿದೆ ಆಸಕ್ತಿಕರ ವಿಷ್ಯ : ಸ್ನೂಜ್ ಬಟನ್ ಆರಂಭಿಸುವ ಮೊದಲು ಇಂಜಿನಿಯರ್ಸ್ ಅಲರಾಂ ಅವಧಿಯನ್ನು ಹೆಚ್ಚಿಸಲು ನಿರ್ಧರಿಸಿದ್ದರು. ಆದ್ರೆ ಅಲರಾಂ ಅವಧಿಯನ್ನು ಅವರು ಹೆಚ್ಚಿಸಲಿಲ್ಲ. ಬದಲಾಗಿ ಸ್ನೂಜ್ ಬಟನ್ ಅಳವಡಿಸಿದ್ರು. ಸ್ನೂಜ್ ಬಟನ್ ಅನ್ನು 50ನೇ ದಶಕದಲ್ಲಿ ಆವಿಷ್ಕರಿಸಲಾಯಿತು. ಈ ವೇಳೆ ಗಡಿಯಾರದ ಗೇರ್ ಸೈಕಲನ್ನು 10 ನಿಮಿಷಕ್ಕೆ ಇರಿಸಲಾಗಿತ್ತು. ಉಳಿದ ಭಾಗಗಳನ್ನು ಅಳವಡಿಸಲು ಯಾವುದೇ ತೊಂದರೆಯಾಗ್ಬಾರದು ಎನ್ನುವ ಕಾರಣಕ್ಕೆ ಸ್ನೂಜ್ ಗೇರನ್ನು 10 ನಿಮಿಷ ಹೆಚ್ಚು ಅಥವಾ ಕಡಿಮೆ ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದರು. ಆದ್ರೆ ಕೊನೆಯಲ್ಲಿ ತಯಾರಕರು ಇದನ್ನು 9 ನಿಮಿಷಕ್ಕೆ ಇಳಿಸಿದ್ರು. ಇದ್ರ ಹಿಂದೂ ಮಹತ್ವದ ಕಾರಣವಿದೆ. ತಜ್ಞರ ಪ್ರಕಾರ, ಜನರು ಅಲರಾಂ ಆಫ್ ಮಾಡಿದ 10 ನಿಮಿಷಗಳ ನಂತ್ರ ಆಳವಾದ ನಿದ್ರೆಗೆ ಹೋಗ್ತಾರೆ. ಸ್ನೂಜ್ 10 ನಿಮಿಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆಳವಾದ ನಿದ್ರೆಯಲ್ಲಿರುವ ಜನರಿಗೆ ಅಲರಾಂ ಸೌಂಡ್ ಕೇಳದೆ ಇರಬಹುದು ಎಂಬ ಕಾರಣಕ್ಕೆ ಅದನ್ನು 9ಕ್ಕೆ ಇಳಿಸಲಾಯ್ತು.

Heart Attack in Women: ಹೃದಯಾಘಾತಕ್ಕಿಂತ ಮೊದಲು ಮಹಿಳೆಯರಲ್ಲಿ ಕಾಣಿಸುತ್ತೆ ಈ ಲಕ್ಷಣ

ಸ್ನೂಜ್ ಬಟನ್ ಬಳಸೋದ್ರಿಂದ ಆರೋಗ್ಯಕ್ಕೆ ಹಾನಿ : ಅಲಾರಾಂ ಆಫ್ ಮಾಡಿದ ನಂತರ ಸ್ವಲ್ಪ ಹೊತ್ತು ಮಲಗುವ ಜನರು, ದಿನವಿಡೀ ನಿದ್ದೆ ಮತ್ತು ಸುಸ್ತನ್ನು ಅನುಭವಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಅಲಾರಾಂ  ಬಾರಿಸಿದ ತಕ್ಷಣ ಏಳದೆ ಸ್ನೂಜ್ ಮಾಡ್ತಾ ಇದ್ರೆ ನಮ್ಮ ದೇಹ ದಣಿಯುತ್ತದೆ. ಅದು ನಮ್ಮ ಅರಿವಿಗೆ ಬರುವುದಿಲ್ಲ. ಸಾಮಾನ್ಯವಾಗಿ ಅಲರಾಂ ಹೊಡೆದ ನಂತ್ರ ಸ್ವಲ್ಪ ಹೊತ್ತು ಮಲಗಿದ್ರೆ ದೇಹಕ್ಕೆ ಶಕ್ತಿ ಬರುತ್ತದೆ ಎಂದು ನಾವು ಭಾವಿಸ್ತೇವೆ. ಹಾಗಾಗಿ ನಾವು ಸ್ನೂಜ್ ಬಟನ್ ಬಳಕೆ ಮಾಡ್ತೇವೆ. ಆದ್ರೆ ಅಲರಾಂ ಹೊಡೆದ ನಂತ್ರ ಬಾರಿಸುವ ಸ್ನೂಜ್ ಗೆ ದೊಡ್ಡ ಅಂತರವಿರೋದಿಲ್ಲ. 9 ನಿಮಿಷದ ನಂತ್ರ ಸ್ನೂಜ್ ಸೆಟ್ ಆಗಿರುವ ಕಾರಣ ನಮಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ.  ಅಲಾರಂನಲ್ಲಿ ಸ್ನೂಜ್ ಬಟನ್, ಮೆದುಳು ಮತ್ತು ದೇಹದ ಗಡಿಯಾರದ ನಡುವೆ ಗೊಂದಲ ಸೃಷ್ಟಿಸುತ್ತದೆ.

ಏನು ಮಾಡ್ಬೇಕು? : ತಜ್ಞರ ಪ್ರಕಾರ ನೀವು ಯಾವ ಸಮಯಕ್ಕೆ ಏಳುತ್ತೀರೋ ಆ ಸಮಯಕ್ಕೆ ಅಲರಾಂ ಸೆಟ್ ಮಾಡ್ಬೇಕು. ಬೆಳಿಗ್ಗೆ 6ಕ್ಕೆ ಏಳುತ್ತೀರಿ ಎಂದಾದ್ರೆ ಅದೇ ಸಮಯಕ್ಕೆ ಅಲರಾಂ ಸೆಟ್ ಮಾಡಿ, ಅದು ಹೊಡೆದುಕೊಂಡ ತಕ್ಷಣ ಏಳಬೇಕು. ನೀವು ಅಲರಾಂ ಹೊಡೆದ ನಂತ್ರವೂ ಎದ್ದಿಲ್ಲವೆಂದ್ರೆ ಮೆದುಳಿಗೆ ಏನು ಮಾಡ್ಬೇಕು ಎಂಬುದು ಅರ್ಥವಾಗೋದಿಲ್ಲ. ಆಗ ಅದು ವಿಚಿತ್ರ ಪ್ರತಿಕ್ರಿಯೆ ನೀಡುತ್ತದೆ. 
 

Latest Videos
Follow Us:
Download App:
  • android
  • ios