ಕಾಫಿನಾಡಲ್ಲಿ ವಿದೇಶಿ ವಿಂಟೇಜ್ ಕಾರುಗಳ ಕಾರ್ ಬಾರ್: ಸಂತಸಪಟ್ಟ ಜನರು
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಬೆಲ್ಜಿಯಂ, ಇಟಲಿ, ಜರ್ಮನಿ ದೇಶಗಳಿಂದ ಪೋರ್ಚೆ, ಬೆಂಜ್, ಫೆರಾರಿ, ಲ್ಯಾಂಬೋರ್ಗಿನಿ, ರೋಲ್ಸ್ ರಾಯ್ಸ್ ಸೇರಿದಂತೆ 50ರಿಂದ 90 ವರ್ಷ ಹಳೆಯ 25ಕ್ಕೂ ಹೆಚ್ಚು ವಿಂಟೇಜ್ ಕಾರುಗಳಲ್ಲಿ ವಿದೇಶಿಗರು ಪ್ರವಾಸಿಗರು ಕೈ ಗೊಂಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.18): ಕಾಫಿನಾಡು ಚಿಕ್ಕಮಗಳೂರಿನ ರಸ್ತೆಗಳಲ್ಲಿ ಅಪರೂಪದ ವಿದೇಶಿ ವಿಂಟೇಜ್ ಕಾರುಗಳು ಆಕರ್ಷಿಸುತ್ತಿವೆ. ರಸ್ತೆ ಒಂದರ ಮೇಲೆ ಒಂದರಂತೆ ವಿಂಟೇಜ್ ಕಾರ್ ಸಂಚಾರಿಸಿದಾಗ ಜನರು ಅವುಗಳನ್ನು ನೋಡಿ ಸಂತಪಟ್ಟರು.
25ಕ್ಕೂ ಹೆಚ್ಚು ಕಾರ್‌ಗಳು: ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಬೆಲ್ಜಿಯಂ, ಇಟಲಿ, ಜರ್ಮನಿ ದೇಶಗಳಿಂದ ಪೋರ್ಚೆ, ಬೆಂಜ್, ಫೆರಾರಿ, ಲ್ಯಾಂಬೋರ್ಗಿನಿ, ರೋಲ್ಸ್ ರಾಯ್ಸ್ ಸೇರಿದಂತೆ 50ರಿಂದ 90 ವರ್ಷ ಹಳೆಯ 25ಕ್ಕೂ ಹೆಚ್ಚು ವಿಂಟೇಜ್ ಕಾರುಗಳಲ್ಲಿ ವಿದೇಶಿಗರು ಪ್ರವಾಸಿಗರು ಕೈ ಗೊಂಡಿದ್ದಾರೆ.
ವಿದೇಶದಿಂದ ದಕ್ಷಿಣ ಭಾರತದ ಪ್ರವಾಸಕ್ಕೆ ಆಗಮಿಸಿರುವ ವಿದೇಶಿಗರು ರಾಜ್ಯದ ಹುಬ್ಬಳ್ಳಿ, ಹಂಪಿಯ ಪ್ರವಾಸವನ್ನು ಮುಗಿಸಿ ಕಾಫಿನಾಡಿಗೆ ಅಪರೂಪರದ ಕಾರ್ ಗಳಲ್ಲಿ ಆಗಮಿಸಿದ್ದಾರೆ..
ಪ್ರಕೃತಿಕ ಸೌಂದರ್ಯಕ್ಕೆ ಮನಸೋತ ವಿದೇಶಿಗರು: ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯಕ್ಕೆ ವಿದೇಶಿಗರು ಮಾರುಹೋಗಿದ್ದು ತುಂಬಾ ಅದ್ಭುತವಾದಂತಹ ಸ್ಥಳ ಎಂದು ಬಣ್ಣಿಸಿದ್ದಾರೆ.
ಚಿಕ್ಕಮಗಳೂರು ಪ್ರವಾಸ ಮುಗಿಸಿ ಮಡಿಕೇರಿ, ಮೈಸೂರಿನ ಮೂಲಕ ವಿದೇಶಿಗರು ತಮಿಳುನಾಡಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಟ್ರೇಲಿಯಾ ಮೂಲದ ಚಿಕ್ಕ್ ಹಾಗೂ ಮಗ್ ಭಾರತದ ರಸ್ತೆಗಳು ವಿಭಿನ್ನ ಅನುಭವವನ್ನು ನೀಡುತ್ತಿವೆ ಎತ್ತರ, ಇಳಿಜಾರಿನಿಂದ ಕೂಡಿದ್ದು ನಮಗೆ ವಿಶೇಷವಾಗಿವೆ ಎಂದಿದ್ದಾರೆ.
ಅಷ್ಟೇ ಅಲ್ಲದೇ ನನ್ನ ಹೆಸರು ಚಿಕ್ಕ್ ನನ್ನ ಪತ್ನಿಯ ಹೆಸರು ಮಗ್ ಈ ಊರಿನ ಹೆಸರು ಚಿಕ್ಕಮಗಳೂರು ಎಂದು ಹೇಳಿ ಸಂತಸಪಟ್ಟಿದ್ದಾರೆ.