ಪ್ರತಿ ದಿನ ಊಟದ ಜೊತೆ ಹಸಿ ಈರುಳ್ಳಿ ಬೇಕೇಬೇಕು ಅನ್ನೋರಿಗೆ ಇಲ್ಲಿದೆ ಹ್ಯಾಪಿ ನ್ಯೂಸ್

ಆಹಾರದ ರುಚಿ ಹೆಚ್ಚಿಸುವ ಈರುಳ್ಳಿಯನ್ನು ಹಸಿಯಾಗಿ ತಿನ್ನುವ ಜನರ ಸಂಖ್ಯೆ ಸಾಕಷ್ಟಿದೆ. ಅದನ್ನು ಪ್ರತಿ ದಿನ ತಿಂದ್ರೆ ಏನಾಗುತ್ತೆ? ಲಾಭವೆಷ್ಟು ನಷ್ಟವೆಷ್ಟು ಎನ್ನುವ ಮಾಹಿತಿ ಇಲ್ಲಿದೆ.
 

health benefits of eating raw onion roo

ಅಡುಗೆ ಮನೆ (kitchen ) ಯಲ್ಲಿ ಈರುಳ್ಳಿ ಇಲ್ಲ ಅಂದ್ರೆ ಹೇಗೆ? ಪ್ರತಿಯೊಬ್ಬರ ಮನೆಯಲ್ಲೂ ಈರುಳ್ಳಿ (onion) ಸ್ಟಾಕ್ ಇದ್ದೇ ಇರುತ್ತೆ. ಸಾಂಬಾರ್ ನಿಂದ ಹಿಡಿದು ಸಲಾಡ್ (salad) ವರೆಗೆ ಎಲ್ಲ ಕಡೆ ಈರುಳ್ಳಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರದ ರುಚಿ ಹೆಚ್ಚಿಸೋದ್ರಲ್ಲಿ ಈರುಳ್ಳಿಗೆ ಮೊದಲ ಸ್ಥಾನ. ಈರುಳ್ಳಿಯನ್ನು ಜನರು ನಾನಾ ವಿಧಗಳಲ್ಲಿ ಸೇವನೆ ಮಾಡ್ತಾರೆ. ಅದನ್ನು ಬೇಯಿಸಿ ತಿನ್ನಬಹುದು, ಹಸಿಯಾಘಿಯೂ ತಿನ್ನಬಹುದು. ಕೆಲವರು ಹಸಿ ಈರುಳ್ಳಿ ತಿನ್ನೋದನ್ನು ಇಷ್ಟಪಡೋದಿಲ್ಲ. ಅದ್ರ ಕಟು ಹಾಗೂ ವಾಸನೆ ಇದಕ್ಕೆ ಕಾರಣವಾಗಿರಬಹುದು. ನೀವು ಪ್ರತಿ ದಿನ ಸಲಾಡ್ ರೂಪದಲ್ಲಿ ಹಸಿ ಈರುಳ್ಳಿ ತಿನ್ನೋದ್ರಿಂದ ಸಾಕಷ್ಟು ಲಾಭವಿದೆ. ನಾವಿಂದು ಈರುಳ್ಳಿಯಿಂದಾಗುವ ಲಾಭಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಪ್ರತಿ ದಿನ ಈರುಳ್ಳಿ ಸೇವನೆ ಮಾಡೋದ್ರಿಂದ ಆಗುವ ಲಾಭಗಳು : 

ರೋಗನಿರೋಧಕ ಶಕ್ತಿ ಹೆಚ್ಚಳ : ಹಸಿ ಈರುಳ್ಳಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಶೀತ ಮತ್ತು ಜ್ವರದಂತಹ ಕಾಯಿಲೆಯಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಹಸಿ ಈರುಳ್ಳಿ ತಿನ್ನುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆ ಹೆಚ್ಚಾಗುತ್ತದೆ.

ರಾತ್ರಿ ಸುಖ ನಿದ್ರೆಗೆ ಸಿಂಪಲ್​ ಸಲಹೆ

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ : ಹಸಿ ಈರುಳ್ಳಿಯಲ್ಲಿ ಫೈಬರ್ ಸಮೃದ್ಧವಾಗಿದೆ.  ಪ್ರತಿದಿನ ಹಸಿ ಈರುಳ್ಳಿಯನ್ನು ನಿಂಬೆ ರಸ ಮತ್ತು ಕರಿಮೆಣಸಿನ ಪುಡಿಯೊಂದಿಗೆ ಸೇವಿಸುತ್ತ ಬಂದರೆ ಜೀರ್ಣಕ್ರಿಯೆ  ಉತ್ತಮಗೊಳ್ಳುತ್ತದೆ.  ದೇಹದ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಇದು ಸಹಕಾರಿ. ನಿತ್ಯ ನೀವು ಹಸಿ ಈರುಳ್ಳಿ ಸೇವನೆ ಮಾಡ್ತಾ ಬಂದ್ರೆ ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆಯಿಂದ ದೂರ ಇರಬಹುದು. 

ಉರಿಯೂತ ಸಮಸ್ಯೆಯಿಂದ ಮುಕ್ತಿ : ಹಸಿ ಈರುಳ್ಳಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ದೇಹದಲ್ಲಿನ ಉರಿಯೂತ  ಮಟ್ಟವನ್ನು ಕಡಿಮೆ ಮಾಡುತ್ತದೆ. ಸಂಧಿವಾತ, ಆಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ  ತಡೆಯಲು ನೆರವಾಗುತ್ತದೆ. 

ಬಲಗೊಳ್ಳುವ ಮೂಳೆಗಳು : ಈರುಳ್ಳಿಯಲ್ಲಿ ಸಾಕಷ್ಟು ಪ್ರಮಾಣದ ಗಂಧಕವಿದೆ. ಇದು ಮೂಳೆಗಳ ಆರೋಗ್ಯ ಸುಧಾರಿಸುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯ ತಡೆಯಲು ಸಹಾಯ ಮಾಡುತ್ತದೆ.

ನೆನಪಿನ ಶಕ್ತಿ ಹೆಚ್ಚಳ : ಹಸಿ ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಿದ್ದು, ಇದು ಮೆದುಳಿಗೆ ಪ್ರಯೋಜನಕಾರಿ. ಇದು ಸ್ಮರಣಶಕ್ತಿ, ಗಮನ ಮತ್ತು ಏಕಾಗ್ರತೆಯ ಮಟ್ಟವನ್ನು ಸುಧಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ : ಹಸಿ ಈರುಳ್ಳಿಯಲ್ಲಿ ಕ್ರೋಮಿಯಂ ಇದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹದ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. 

ಚರ್ಮಕ್ಕೆ ಪ್ರಯೋಜನಕಾರಿ : ಪ್ರತಿ ದಿನ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ನಿಮ್ಮ ಚರ್ಮದ ಆರೋಗ್ಯ ಸುಧಾರಿಸುತ್ತದೆ.  ಸುಕ್ಕು ಮತ್ತು ಇತರ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುತ್ತದೆ. 

ಕಾಫಿ ಕುಡಿಯೋದಕ್ಕೆ ಮಾತ್ರ ಅಂದುಕೊಂಡ್ರಾ? ಸೊಂಪಾದ ಕೂದಲಿಗೆ ಹೇರ್ ಮಾಸ್ಕ್ ತಯಾರಿಸಿ

ಹೃದಯದ ಆರೋಗ್ಯ : ಈರುಳ್ಳಿಯನ್ನು ನೀವು ಪ್ರತಿ ದಿನ ಸೇವನೆ ಮಾಡ್ತಾ ಬಂದ್ರೆ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ. 

ಹಸಿರು ಈರುಳ್ಳಿಯನ್ನು ಯಾರು ತಿನ್ನಬಾರದು ? : ಪ್ರತಿಯೊಂದು ಆಹಾರದಲ್ಲೂ ಕೆಲವು ದೋಷಗಳಿರುತ್ತವೆ. ಪ್ರತಿಯೊಬ್ಬರೂ ಪ್ರತಿ ನಿತ್ಯ ಹಸಿ ಈರುಳ್ಳಿ ಸೇವನೆ ಮಾಡೋದು ಯೋಗ್ಯವಲ್ಲ. ಕೆಲವರಿಗೆ ಹಸಿ ಈರುಳ್ಳಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದು ಹೊಟ್ಟೆ ಉಬ್ಬರ, ಆಸಿಡಿಟಿಯನ್ನು ಹೆಚ್ಚಿಸುತ್ತದೆ. ಹಸಿ ಈರುಳ್ಳಿ ರಕ್ತವನ್ನು ತೆಳುಗೊಳಿಸುತ್ತದೆ. ಆದ್ರೆ ಇದು ಎಲ್ಲರಿಗೂ ಸೂಕ್ತವಲ್ಲ. ರಕ್ತ ತೆಳ್ಳಗಾಗುವ ಮಾತ್ರೆ ಸೇವನೆ ಮಾಡ್ತಿದ್ದರೆ ಹಸಿ ಈರುಳ್ಳಿ ಸೇವನೆ ಮಾಡುವಾಗ ಎಚ್ಚರಿಕೆವಹಿಸಿ. ವೈದ್ಯರ ಸಲಹೆಯಂತೆ ಪ್ರತಿ ದಿನ ಅರ್ಧ ಅಥವಾ ಒಂದು ಈರುಳ್ಳಿಯನ್ನು ಮಾತ್ರ ನೀವು ಸೇವನೆ ಮಾಡಬೇಕು.
 

Latest Videos
Follow Us:
Download App:
  • android
  • ios