Covid Effect: ಕೋವಿಡ್‌ನಿಂದ ಸೆನ್ಸ್ ಆಫ್ ಸ್ಮೆಲ್ ಕಳೆದುಕೊಂಡಿದ್ದೀರಾದ್ರೆ ಹೀಗ್ ಮಾಡಿ
ಎರಡನೇ ಅಲೆಯಲ್ಲಿ ಹೋದ ವಾಸನೆ ಗ್ರಹಣಾ ಶಕ್ತಿ ಮೂರನೇ ಅಲೆ ಸದ್ದು ಮಾಡುವ ಹೊತ್ತಿಗೂ ಬಹಳಷ್ಟು ಜನರಿಗೆ ಮರಳಿಲ್ಲ. ಹೀಗೆ ಸ್ಮೆಲ್ ಮಾಡಲಾಗದ್ದಕ್ಕೆ ದೈನಂದಿನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸ್ಮೆಲ್ ಟ್ರೇನಿಂಗ್ ಟ್ರೈ ಮಾಡ್ ನೋಡಿ.
ಕೋವಿಡ್(Covid) ಬಂದು ಹೋಗಿ 8 ತಿಂಗಳೇ ಕಳೆಯಿತು. ಇನ್ನೂ ಯಾವ ಸ್ಮೆಲ್ ಕೂಡಾ ಮೂಗಿಗೆ ಬಡಿಯುತ್ತಿಲ್ಲ. ಕೆಲವೊಮ್ಮೆ ಬಂದಂತಾದರೂ ಅದು ಅದರ ಸುಗಂಧವೇ ಆಗಿರುವುದಿಲ್ಲ. ನೀಲಗಿರಿ ಎಣ್ಣೆ ಮೂಸಿದರೆ, ಏನೋ ಮುಗ್ಗಲು ವಾಸನೆ ಬಂದಂತಾಗುತ್ತದೆ. ಉಳಿದಂತೆ ಸ್ಟ್ರಾಂಗ್ ಸುಗಂಧ ಅಥವಾ ದುರ್ಗಂಧ ಇಲ್ಲದ ಯಾವೊಂದು ಕೂಡಾ ಮೂಗಿಗೆ ಸ್ವಲ್ಪವೂ ಬಡಿಯುವುದಿಲ್ಲ.
ಇದೇನಂಥ ದೊಡ್ಡ ಸಮಸ್ಯೆ ಎಂದು ಸಾಕಷ್ಟು ಸಯಮ ಅನಿಸಲೇ ಇಲ್ಲ. ಹಾಗಾಗಿ, ಯಾವ ವೈದ್ಯರ ಬಳಿ ಹೋಗಲೂ ಮನಸ್ಸು ಮಾಡಲಿಲ್ಲ. ಆದರೆ, ಮಾಡುವ ಅಡುಗೆಯೆಲ್ಲವೂ ಹಳ್ಳ ಹತ್ತಲು ಶುರುವಾದ ಮೇಲೆ ಸ್ಮೆಲ್ ನೋಡೋ ಸಾಮರ್ಥ್ಯ ಬೇಕು ಅನ್ನಿಸೋಕೆ ಶುರುವಾಯ್ತು. ಅಡುಗೆ ಮಾಡುವಾಗ ಸ್ಮೆಲ್ ಬರಲಿಲ್ಲವೆಂದರೆ ಯಾವ ಟೈಮಿಗೆ ಏನು ಹಾಕಬೇಕೆಂಬುದು ಸರಿಯಾಗಿ ತಿಳಿಯುವುದಿಲ್ಲ. ಇನ್ನು ನಮ್ಮದೇ ಮೈ ದುರ್ಗಂಧ ಬೀರುತ್ತಿದ್ದರೂ ಅದರ ಅರಿವಿರದೆ ಯಾರ ಬಳಿಯಾದರೂ ಆರಾಮಾಗಿ ನಿಂತು ಮಾತಾಡುತ್ತೇವಲ್ಲ... ಪಾಪ, ಅವರಿಗೆ ಹೇಳುವ ಹಾಗಿಲ್ಲ, ನಮಗೆ ತಿಳಿಯುವುದಿಲ್ಲ!
ಇದೆಲ್ಲ ಯೋಚನೆ ಬಂದ ಮೇಲೆ ಇಎನ್‌ಟಿ ಸ್ಪೆಶಲಿಸ್ಟ್ ಹತ್ತಿರ ಹೋಗಿ ಬಂದೆ. ನೋಡಿದರೆ, ನನ್ನಂತ ಪೇಶೆಂಟ್ಸ್ ಅವರಿಗೆ ಪ್ರತಿ ದಿನ ಬರುತ್ತಲೇ ಇರುತ್ತಾರಂತೆ! ಕರೋನಾದ ಡೆಲ್ಟಾ ವೇರಿಯೆಂಟ್ ಜೀವ ಉಳಿಸಿದ್ದೇ ಹೆಚ್ಚು ಎಂದು ಸಮಾಧಾನ ತಂದುಕೊಂಡು ಸುಮ್ಮನಿದ್ದವರಿಗೆಲ್ಲ ಈಗದರ ಉಳಿದ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗಿ ಕಾಣಿಸುತ್ತಿವೆ. ಹಾಗಾಗಿ, ಈಗೀಗ ಆಫ್ಟರ್ ಕೋವಿಡ್ ಎಫೆಕ್ಟ್(After covid effect) ಹಾಗೂ ಇಂಥ ಸಮಸ್ಯೆಗಳನ್ನು ಹೊತ್ತು ವೈದ್ಯ(doctor)ರನ್ನು ಕಾಣುವವರ ಸಂಖ್ಯೆ ಹೆಚ್ಚಾಗಿದೆ.
ಕರೋನಾದ ಅತಿ ಸಾಮಾನ್ಯ ಲಕ್ಷಣವೇ ಲಾಸ್ ಆಫ್ ಸ್ಮೆಲ್ ಆಗಿತ್ತು. ಸಾರ್ಸ್- ಕೋವಿಡ್- 2 ವೈರಸ್ ಮೂಗಿನೊಳಗಿನ ನ್ಯೂರಾನ್‌ಗಳಿಗೆ ಸಪೋರ್ಟ್ ಮಾಡುವ ಕೋಶಗಳನ್ನು ಹಾಳುಗೆಡವುದರಿಂದ ವಾಸನೆ ಗ್ರಹಿಕಾ ಶಕ್ತಿ ಹೋಗುತ್ತದೆ(smell loss)ಎಂದು ನಂಬಲಾಗಿದೆ. ಬಹಳಷ್ಟು ಜನರಿಗೆ ಕೋವಿಡ್ನಿಂದ ರಿಕವರ್ ಆದ ಒಂದೆರಡು ವಾರಗಳಲ್ಲಿ ವಾಸನೆ ಗ್ರಹಿಕೆ ಶಕ್ತಿ ಮರಳಿದೆಯಾದರೂ, ಮತ್ತಷ್ಟು ಜನರು ವಾಸನೆ ಗ್ರಹಿಕಾ ಸಾಮರ್ಥ್ಯ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಅಧ್ಯಯನಗಳು ಕಂಡುಕೊಂಡಂತೆ ಕೇವಲ ಅಮೆರಿಕವೊಂದರಲ್ಲೇ 7ರಿಂದ 16 ಲಕ್ಷ ಕೋವಿಡ್ ರಿಕವರ್ ಪೇಶೆಂಟ್‌ಗಳಿಗೆ 6 ತಿಂಗಳಾದರೂ ಸೆನ್ಸ್ ಆಫ್ ಸ್ಮೆಲ್ ವಾಪಸ್ ಬಂದಿಲ್ಲ. ಅಥವಾ ಸೆನ್ಸ್ ಆಫ್ ಸ್ಮೆಲ್ ಮುಂಚಿನಂತಿಲ್ಲದೆ ಬದಲಾಗಿದೆ. ಭಾರತ(India)ದಲ್ಲಿನ್ನೂ ಈ ಸಂಖ್ಯೆಯ ಕುರಿತ ಅಧ್ಯಯನಗಳಾಗಿಲ್ಲ.
ಅಧ್ಯಯನ(study)
ಜಮ ಒಟೋಲ್ಯಾರಿಂಗಾಲಜಿ ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ಜನವರಿಯಿಂದ 2020ರಿಂದ 2021ರ ಮಾರ್ಚ್‌ವರೆಗೆ ಅಮೆರಿಕ(US)ದಲ್ಲಿ ವರದಿಯಾದ ಕೋವಿಡ್ ಕೇಸ್‌ಗಳನ್ನು ಈ ಸ್ಟಡಿಗಾಗಿ ಬಳಸಿಕೊಳ್ಳಲಾಗಿದೆ. ಅದರಂತೆ ಕರೋನಾದಿಂದ ಬಳಲಿದ ಒಟ್ಟು ರೋಗಿಗಳಲ್ಲಿ ಶೇ.52.7ರಷ್ಟು ಪೇಶೆಂಟ್‌ಗಳು ಸೆನ್ಸ್ ಆಫ್ ಸ್ಮೆಲ್ ಕಳೆದುಕೊಂಡಿದ್ದರು. ಅವರಲ್ಲಿ ಶೇ.95ರಷ್ಟು ಜನರಿಗೆ ವಾಸನೆ ಗ್ರಹಿಕಾ ಶಕ್ತಿ ಮರಳಿದೆ. ಉಳಿದ ಶೇ.5ರಷ್ಟು ಪೇಶೆಂಟ್‌ಗಳು ಇನ್ನೂ ಸ್ಮೆಲ್ ಗ್ರಹಿಸಲಾಗದೆ ಬಳಲುತ್ತಿದ್ದಾರೆ. ತಜ್ಞರು ಹೇಳುವಂತೆ ಇದು ನೋಡಲು ಸಣ್ಣ ಸಮಸ್ಯೆಯಂತೆ ಕಂಡರೂ ಅನುಭವಿಸುವವರ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಬಹುದು. ಸೆನ್ಸ್ ಆಫ್ ಸ್ಮೆಲ್ ಕಳೆದುಕೊಂಡವರು ಮುಂಚಿನಂತೆ ಆಹಾರ(food)ವನ್ನು ಇಷ್ಟಪಡಲಾಗದೆ, ತೂಕ(weight) ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಜೀವನದ ಬಹಳಷ್ಟು ಸಣ್ಣ ಸಣ್ಣ ಸಂತೋಷಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದು ಕಡೆಗಣಿಸುವ ವಿಷಯವೇನಲ್ಲ ಎನ್ನುತ್ತಾರೆ ತಜ್ಞರು.
ಚಿಕಿತ್ಸೆ(treatment)
ಇದುವರೆಗೂ ಈ ಮೂಗಿನ(chronic olfactory dysfunction) ಸಮಸ್ಯೆಗೆ ಯಾವುದೇ ಚಿಕಿತ್ಸೆಗಳಿಲ್ಲ. ಯಾವುದೇ ಥೆರಪಿಯಾಗಲೀ, ಔಷಧವಾಗಲೀ ಪರಿಣಾಮಕಾರಿ ಎನಿಸಿಲ್ಲ. ಬದಲಿಗೆ ಸ್ಮೆಲ್ ಟ್ರೇನಿಂಗ್ ಟ್ರೈ ಮಾಡಿ ನೋಡಬಹುದು ಎಂದು ಸಲಹೆ ನೀಡುತ್ತಾರೆ ವೈದ್ಯರು. ಅಂದರೆ, ಪ್ರತಿದಿನ ನಾಲ್ಕೈದು ವೆರೈಟಿಯ ಅತಿ ಹೆಚ್ಚು ಪರಿಮಳ ಹೊಂದಿರುವ ಎಣ್ಣೆ, ಸೆಂಟ್ ಇತ್ಯಾದಿಯನ್ನು 20 ಸೆಕೆಂಡ್‌ಗಳ ಕಾಲ ಆಗಾಗ ಮೂಸುತ್ತಿರುವುದರಿಂದ ನಿಧಾನವಾಗಿ ಫಲಿತಾಂಶ ಕಾಣಬಹುದು ಎನ್ನಲಾಗುತ್ತಿದೆ.