ಉಸಿರಾಟ ಕಾಯಿಲೆ ಹೆಚ್ಚುವ ಸಂಭವ: ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಚೀನಿ ಜ್ವರ ಸಂಬಂಧಿ ಎಚ್ಚರಿಕೆ
ಕರ್ನಾಟಕವೂ ಸೇರಿ 6 ರಾಜ್ಯಗಳಲ್ಲಿ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹೆಚ್9ಎನ್2 ಸೋಂಕು ಸಂಬಂಧ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ.
ಬೆಂಗಳೂರು: ಕರ್ನಾಟಕವೂ ಸೇರಿ 6 ರಾಜ್ಯಗಳಲ್ಲಿ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹೆಚ್9ಎನ್2 ಸೋಂಕು ಸಂಬಂಧ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ರಾಜಸ್ಥಾನ, ಕರ್ನಾಟಕ, ಗುಜರಾತ್, ಉತ್ತರಾಖಂಡ, ಹರ್ಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಎಚ್ಚರಿಕೆ ಘೋಷಿಸಲಾಗಿದ್ದು, ಆಸ್ಪತ್ರೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ.
ಉಸಿರಾಟ ಸಂಬಂಧಿ ಖಾಯಿಲೆ ಇದಾಗಿರುವುದರಿಂದ ಸೀನುವಾಗ ಮತ್ತು ಕೆಮ್ಮುವಾಗ ಜನರು ಆದಷ್ಟು ಬಾಯಿ ಅಡ್ಡವಿಟ್ಟುಕೊಳ್ಳಬೇಕು, ದಟ್ಟಣೆಯಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು, ಕರದಿಂದ ಮುಖವನ್ನು ಮುಟ್ಟಿಕೊಳ್ಳಬಾರದು ಹಾಗೂ ಆಗಾಗ್ಗೆ ಹಸ್ತ ತೊಳೆಯುತ್ತಿರಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲದಿರುವುದರಿಂದ ಜನತೆ ಆತಂಕ ಪಡಬೇಕಿಲ್ಲ ಎಂದೂ ಸಹ ತಿಳಿಸಲಾಗಿದೆ.
ಮಕ್ಕಳ ಆಯಾಸ ಹೋಗಿಸಲು ಹೊಸ ಟ್ರೆಂಡ್, ಶಾಲೆಯಲ್ಲೇ ಮಲಗಲು ಅವಕಾಶ!
ಇನ್ನು 3 ದಿನದಲ್ಲಿ ಆಂಧ್ರ-ಒಡಿಶಾ ಕರಾವಳಿಗೆ ಮೈಚುಂಗ್ ಚಂಡಮಾರುತ ಭೀತಿ
ಭುವನೇಶ್ವರ: ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಬಂಗಾಳಕೊಲ್ಲಿಯ ನಡುವಿನ ಪ್ರದೇಶದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನು 3 ದಿನದಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದು ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ನಡುವೆ ಅಪ್ಪಳಿಸುವ ಸಾಧ್ಯತೆ ಇದ್ದು, ಭಾರಿ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚೀನಾದಲ್ಲಿ ಆತಂಕ ಹುಟ್ಟಿಸಿದ ಮತ್ತೊಂದು ಮಹಾಮಾರಿ; ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ
ವಾಯುಭಾರ ಕುಸಿತವು ವಾಯವ್ಯದತ್ತ ತಿರುಗಿದ್ದು, ಡಿ.2ರಂದು ‘ಮೈಚುಂಗ್’ ಹೆಸರಿನ ಚಂಡಮಾರುತವಾ ಪರಿವರ್ತನೆಗೊಳ್ಳುವ ಲಕ್ಷಣಗಳಿವೆ. ಹೀಗಾಗಿ ಒಡಿಶಾದ 7 ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇ ಕರಾವಳಿಯಲ್ಲಿ ಕಟ್ಟೆಚ್ಚರ ಸಾರಲಾಗಿದೆ. ‘ಮೈಚುಂಗ್’ ಹೆಸರನ್ನು ಮ್ಯಾನ್ಮಾರ್ ಇರಿಸಿದೆ