ಕಂಪ್ಯೂಟರ್‌, ಮೊಬೈಲ್‌ ಎಲ್ಲವೂ ಇಂದಿನ ಆಧುನಿಕ ಕಚೇರಿ ಕೆಲಸದಲ್ಲಿ ಅಗತ್ಯ. ದಿನಕ್ಕೆ ಎಂಟು- ಒಂಬತ್ತು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಕಂಪ್ಯೂಟರ್‌ ನೋಡುತ್ತೀರಿ. ಜೊತೆಗೆ ಯಾವುದಾದ್ರೂ ಇಂಪಾರ್ಟೆಂಟ್‌ ಮೆಸೇಜ್‌ ಬಂತಾ ಅಂತ ಮೊಬೈಲ್‌ ನೋಡುವುದು ಇದ್ದದ್ದೇ. ಇದೆಲ್ಲದರಿಂದ ಕಣ್ಣು ಉರಿಯಲು ಶುರುವಾಗಬಹುದು, ನೀರು ಬರಬಹುದು, ತಲೆನೋವು ಉಂಟಾಗಬಹುದು.

ಸ್ಕ್ರೀನ್ ನೋಡಿ ನೋಡಿ ಕಣ್ಣಿಗೆ ಆಯಾಸ? ನಿಮ್ಮ ಮೊಬೈಲ್‌ನಲ್ಲೇ ಇದೆ ಪರಿಹಾರ!

ಒಂದು ಬದಿ ಮೈಗ್ರೇನ್‌ ಅಂತೂ ಕಚೇರಿ ಕೆಲಸದ ಒತ್ತಡಕ್ಕೇ ಸಂಬಂಧಪಟ್ಟದ್ದು. ಇದೆಲ್ಲದರ ಮೂಲ ಇರೋದು ನೀವು ಕಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕೋದರಿಂದ. ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲೇಬೇಕು. ಒಂದು ದಿನ ಕಂಪ್ಯೂಟರ್‌ ವರ್ಕ್‌ನಿಂದ ಬ್ರೇಕ್‌ ತಗೊಳ್ಳಿ, ಒಂದಿನ ಆಫ್‌ ತಗೊಳ್ಳಿ. ಅಥವಾ ಅರ್ಧ ಗಂಟೆಗೊಮ್ಮೆ ಬ್ರೇಕ್‌ ಕೊಡಿ. ಕಣ್ಣಿಗೆ ನೀರು ಚಿಮುಕಿಸಿಕೊಳ್ಳಿ.

ಇದೆಲ್ಲದರ ಜೊತೆಗೆ, ಕಣ್ಣಿನ ಆರೋಗ್ಯಕ್ಕೆ ಉತ್ತಮ ಪೋಷಕಾಂಶ ಹೊಂದಿರುವ ಆಹಾರವನ್ನೂ ನೀವು ಸೇವಿಸಬೇಕು.

- ಕ್ಯಾರೆಟ್‌ ಕಣ್ಣಿನ ಆರೋಗ್ಯæ್ಕ ಅತ್ಯುತ್ತಮ. ಇದರಲ್ಲಿ ಬೀಟಾ ಕೆರೋಟಿನ್‌ ಇರುತ್ತದೆ. ಇದು ಇದು ವಿಟಮಿನ್‌ ಎ ಹಾಗೂ ಕಣ್ಣಿನ ಆರೋಗ್ಯ ಕಾಪಾಡುವ ಲ್ಯುಟೇನ್‌ಗಳನ್ನು ಸೃಷ್ಟಿಸುತ್ತದೆ.ದಿನದಲ್ಲಿ ಒಂದು ಹೊತ್ತಾದರೂ ಕ್ಯಾರೆಟ್‌ ಜಗಿಯುವುದು ಒಳ್ಳೆಯದು.

- ಪ್ರತಿದಿನ ಮೂರು ಅಥವಾ ನಾಲ್ಕು ಸಲ ಕಾಫಿ ಕುಡಿಯುವವರಾದರೆ ಒಂದು ಹೊತ್ತು ಅದನ್ನು ಬಿಟ್ಟುಬಿಡಿ. ಆ ಹೊತ್ತಿನಲ್ಲಿ ಕ್ಯಾರೆಟ್‌, ಮ್ಯಾಂಗೋ ಅಥವಾ ಆರೆಂಜ್‌ ಜ್ಯೂಸ್‌ ಕುಡಿಯಿರಿ.

- ಕ್ಯಾರೆಟ್‌ಬಂತೆಯೇ ಕಣ್ಣಿಗೆ ಒಳ್ಳೆಯದಾದ ಇನ್ನೆರಡು ತರಕಾರಿಗಳು ಬೀಟ್‌ರೂಟ್‌ ಮತ್ತು ಎಲೆಕೋಸು. ಇವುಗಳನ್ನು ಹೊಂದಿರುವ ಪಾಸ್ತಾ ಮಾಡಿಕೊಂಡು ಸೇವಿಸಬಹುದು.

ಕಾಂಟ್ಯಾಕ್ಟ್ ಲೆನ್ಸ್ ಹಾಕಿದ್ರೆ ನೋಡಕೇನೋ ಚೆಂದ; ಕಣ್ಣಿನ ಆರೋಗ್ಯಕ್ಕೆ ಒಳ್ಳೆದಲ್ಲ!

- ದಿವಸಕ್ಕೆ ಒಂದು ಹೊತ್ತು ಚಪಾತಿಯ ಜೊತೆ ಸೊಪ್ಪಿನ ಪಲ್ಯ ಒಳ್ಳೆಯದು. ಎಲೆಕೋಸು, ಪಾಲಕ್‌, ಕೊತ್ತಂಬರಿ ಹೀಗೆ ಸೊಪ್ಪುಗಳೆಲ್ಲಾ ಆರೋಗ್ಯಕರ. ಸೊಪ್ಪಿನ ತಂಬುಳಿ ಕೂಡ ಮಾಡಿಕೊಂಡು ಸೇವಿಸಬಹುದು.

- ತರಕಾರಿ ಬೀಜಗಳು ಒಳ್ಳೆಯದು. ಕುಂಬಳ- ಸಿಹಿಕುಂಬಳದ ಬೀಜಗಳು ಆರೋಗ್ಯಕಾರಿ. ಇವುಗಳನ್ನು ಹುರಿದು ಸೇವಿಸಿ. ಅಥವಾ ಇವುಗಳನ್ನು ಹೊಂದಿದ ಕಾರ್ನ್‌ಫ್ಲೇಕ್ಸ್‌ ಮಾರುಕಟ್ಟೆಯಲ್ಲಿ ಲಭ್ಯ.

- ಬಾದಾಮಿ, ಪಿಸ್ತಾ, ಗೋಡಂಬಿ, ಅಂಜೂರ, ಖರ್ಜೂರ ಮುಂತಾದ ಒಣ ಹಣ್ಣುಗಳಲ್ಲಿ ಸಾಕಷ್ಟು ಒಮೆಗಾ-3 ಮತ್ತು ವಿಟಮಿನ್‌ ಇ ಇರುತ್ತವೆ. ಇವು ಕಣ್ಣಿನ ಆರೋಗ್ಯಕ್ಕೆ ಪರಮ ಫಲಕಾರಿ.

- ಸಿಟ್ರಸ್‌ ಹಣ್ಣುಗಳಾದ ಆರೆಂಜ್‌, ಮೂಸುಂಬಿ, ನಿಂಬೆಹಣ್ಣು, ದ್ರಾಕ್ಷಿ ನಿಮ್ಮ ಡಯಟ್‌ನಲ್ಲಿರಲಿ.

- ಪ್ರೊಟೀನ್‌ ಸಾಕಷ್ಟು ಹೊಂದಿರುವ ಆಹಾರವನ್ನು ಸೇವಿಸಿ. ಉದಾಹರಣೆಗೆ- ಮೊಟ್ಟೆ.

- ಆಹಾರದಲ್ಲಿ ಸಾಕಷ್ಟು ಜಿಡ್ಡಿನ ಅಂಶವಿರಬೇಕು. ತುಪ್ಪ- ತೆಂಗಿನೆಣ್ಣೆ ಸೇವಿಸಬಹುದು. ಆದರೆ ಕರಿದ ಪದಾರ್ಥಗಳು ಅಷ್ಟು ಒಳ್ಳೆಯದಲ್ಲ.

- ಆಗಾಗ, ಸಾಕೆನಿಸುವಷ್ಟು ನೀರು ಕುಡಿಯವುದು ಕಣ್ಣುಗಳು ಒಣಗದಂತೆ ಕಾಪಾಡಿಕೊಳ್ಳಲು ತುಂಬಾ ಮುಖ್ಯ. ಕಣ್ಣು ಒಣಗಿದಂತೆನಿಸಿದರೆ, ನೀರು ಚಿಮುಕಿಸುವುದು, ಮುಚ್ಚಿ ತೆರೆಯುವುದು, ಹಸಿರನ್ನು ದಿಟ್ಟಿಸುವುದು ಮಾಡುತ್ತಿರಿ.

ಸಿಗರೇಟ್ ಸೇದಿದ್ರೆ ದೃಷ್ಟಿ ಕಳ್ಕೋಬೇಕಾಗುತ್ತೆ!

- ನೀವು ಮಲಗುವುದಕ್ಕೆ ಅರ್ಧ ಗಂಟೆ ಮೊದಲು ಕಂಪ್ಯೂಟರನ್ನಾಗಲಿ, ಮೊಬೈಲನ್ನಾಗಲಿ ನೊಡಲೇಬೇಡಿ. ಇದರಿಂದ ನಿದ್ರೆಗೆ ಹಾನಿ. ಒಳ್ಳೆಯ ನಿದ್ರೆ ಕಣ್ಣಿನ ಆರೋಗ್ಯಕ್ಕೆ ಅತ್ಯವಶ್ಯ.

- ಪ್ರತಿ ಮುಕ್ಕಾಲು ಗಂಟೆಗೊಮ್ಮೆ ಬ್ರೇಕ್‌ ಕೊಡಿ. ವಾಕ್‌ ಮಾಡಿ ಬನ್ನಿ. ಅಥವಾ ಕಣ್ಣು ಮುಚ್ಚಿ ಐದು ನಿಮಿಷ ಕೂತಿರಿ.

- ಆಗಾಗ ಕಣ್ಣು ಮುಚ್ಚಿ ತೆರೆಯಲು ಮರೆಯಬೇಡಿ. ಐದು ನಿಮಿಷಕ್ಕಿಂತಲೂ ಅಧಿಕ ಸಮಯ ಕಣ್ಣು ತೆರೆದೇ ನೋಡುತ್ತಿದ್ದರೆ ಕಣ್ಣಿನ ರೆಟಿನಾಗೆ ಹಾನಿಯಾಗುತ್ತದೆ.