Kids' Health : ಮಗು ಓದಿದ್ದು ತಲೆ ಹೋಗುತ್ತಿಲ್ಲ ಎನ್ನುತ್ತಿದ್ಯಾ ಮಗು, ಈ ಫುಡ್ ಕೊಡಿ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಎಷ್ಟು ಬುದ್ಧಿವಂತರಾಗಿದ್ರೂ ಸಾಲೋದಿಲ್ಲ. ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಮುಂದಿರಬೇಕೆಂದು ಬಯಸುವ ಪಾಲಕರು ಮಕ್ಕಳಿಗೆ ಅದೇ ರೀತಿಯ ಆಹಾರ ನೀಡ್ಬೇಕು. ಅನೇಕರು ಜಂಕ್ ಫುಡ್ ನೀಡಿ ಮಕ್ಕಳ ಆರೋಗ್ಯ ಹಾಳು ಮಾಡ್ತಾರೆ.
ಮಕ್ಕಳು (Children) ಚುರುಕಾಗ್ಲಿ ಅಂತಾ ಎಲ್ಲ ಪೋಷಕರೂ ಬಯಸ್ತಾರೆ. ಮಕ್ಕಳ ಮೆದುಳ (Brain) ನ್ನು ಚುರುಕುಗೊಳಿಸುವಲ್ಲಿ ಆಹಾರ (Food) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆದುಳಿನ ಶಕ್ತಿ (Energy) ಯನ್ನು ಹೆಚ್ಚಿಸುವ ಕೆಲಸವನ್ನು ಆಹಾರಗಳು ಮಾಡ್ತವೆ. ಮಗು ಚುರುಕಾಗಬೇಕೆಂದು ನೀವು ಬಯಸಿದ್ರೆ ಆಹಾರದ ಬಗ್ಗೆ ವಿಶೇಷ ಗಮನ ನೀಡ್ಬೇಕು. ಕೆಲವು ಆಹಾರಳನ್ನು ಮಕ್ಕಳಿಗೆ ನಿಯಮಿತವಾಗಿ ನೀಡ್ಬೇಕು. ಇದ್ರಿಂದ ಮಕ್ಕಳ ಮನಸ್ಸ ದೃಢವಾಗುತ್ತದೆ ಮತ್ತು ಆರೋಗ್ಯಕರವಾಗುತ್ತದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರಯೋಜನಕಾರಿಯಾದ ಆರೋಗ್ಯಕರ ಆಹಾರವನ್ನು ನೀಡುವುದು ಅತ್ಯಗತ್ಯ. ಮಕ್ಕಳಿಗೆ ಜಂಕ್ ಫುಡ್ ನೀಡಿದ್ರೆ ಅದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ. ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ (Mental Health) ಮೇಲೂ ಜಂಕ್ ಫುಡ್ ಪ್ರಭಾವ ಬೀರುತ್ತದೆ. ಹಾಗಾಗಿ ಮಕ್ಕಳಿಗೆ ಜಂಕ್ ಫುಡ್ ನೀಡ್ಬಾರದು. ಮಕ್ಕಳ ಮೆದುಳಿನ ಶಕ್ತಿ ಹೆಚ್ಚು ಮಾಡ್ಬೇಕೆಂದ್ರೆ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಸಣ್ಣ ಪ್ರಯತ್ನದ ಮೂಲಕ ನಿಮ್ಮ ಕೆಲಸ ಶುರು ಮಾಡಿ. ಮಗುವಿನ ಆಹಾರದಲ್ಲಿ ಬೀಜಗಳನ್ನು ಸೇರಿಸಿ. ಮಗುವಿನ ಆಹಾರವನ್ನು ಸುಧಾರಣೆ ಅವರ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಬೀಜಗಳು ವಿವಿಧ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಅವು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತವೆ ಮತ್ತು ಅನಾರೋಗ್ಯಕರ ಕೊಬ್ಬು ಕಡಿಮೆಯಿರುತ್ತದೆ.
ಬೀಜಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬೀಜಗಳನ್ನು ಸೂಪರ್‌ಫುಡ್ ಎಂದೂ ಕರೆಯಬಹುದು. ಏಕೆಂದರೆ ಅವು ಮೆದುಳಿಗೆ ಶಕ್ತಿ, ಏಕಾಗ್ರತೆ, ಮನಸ್ಥಿತಿ, ನಿದ್ರೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಮೆಮೊರಿ ನಷ್ಟವನ್ನು ತಡೆಯುತ್ತದೆ. ಬೀಜಗಳು ಮಗುವಿನ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮಾತ್ರವಲ್ಲದೆ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಮಾನಸಿಕ ಕಾಯಿಲೆಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಮಕ್ಕಳಿಗೆ ಅವಶ್ಯಕವಾಗಿ ನೀಡಬೇಕಾದ ಬೀಜಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.
ಕರ್ಬೂಜದ ಬೀಜಗಳು : ಬೇಸಿಗೆ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಕರ್ಬೂಜ ಒಂದಾಗಿದೆ. ಇದರಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಮಕ್ಕಳ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕರ್ಬೂಜ ಸಹಕಾರಿ. ಅದರಲ್ಲಿರುವ ವಿಟಮಿನ್ ಸಿ ಆರೋಗ್ಯಕ್ಕೆ ಒಳ್ಳೆಯದು. ಇದು ಮೆದುಳಿಗೆ ಲಾಭಕರ. ಮೆದುಳಿಗೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮೆದುಳಿನ ಅಂಗಾಂಶವು ಸ್ವಯಂಚಾಲಿತವಾಗಿ ಶಾಂತವಾಗುತ್ತದೆ ಮತ್ತು ಒತ್ತಡ ಮುಕ್ತವಾಗುತ್ತದೆ.
HEALTH EMERGENCY: ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಏನೆಲ್ಲಾ ಇರಬೇಕು ?
ಅಗಸೆ ಬೀಜಗಳು : ಅಗಸೆ ಬೀಜಗಳು ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ. ಇದು ಮನಸ್ಸು ಮತ್ತು ಸ್ಮರಣೆಯನ್ನು ನಿಯಂತ್ರಿಸುವ ಮೆದುಳಿನ ಭಾಗಗಳು ಉತ್ತಮ ಕೆಲಸ ಮಾಡಲು ಸಹಾಯ ಮಾಡುತ್ತದೆ. ಓಟ್ಸ್, ಸಲಾಡ್ ಅಥವಾ ಸಿಹಿತಿಂಡಿಗಳಲ್ಲಿ ಅಗಸೆಬೀಜದ ಪುಡಿಯನ್ನು ಸೇರಿಸ ಮಕ್ಕಳಿಗೆ ನೀಡಬಹುದು.
ಕುಂಬಳಕಾಯಿ ಬೀಜಗಳು : ಕುಂಬಳಕಾಯಿ ಬೀಜಗಳು ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ತಾಮ್ರದಲ್ಲಿ ಸಮೃದ್ಧವಾಗಿವೆ. ಇದು ನರಮಂಡಲ ಮತ್ತು ಮೆದುಳಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಈ ಬೀಜಗಳು ಮನಸ್ಸನ್ನು ಚುರುಕುಗೊಳಿಸುತ್ತವೆ. ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜಗಳು ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತವೆ. ಇದು ಮೆದುಳು ಮತ್ತು ನರಮಂಡಲದ ಆರೋಗ್ಯಕರ ಬೆಳವಣಿಗೆಗೆ ಮುಖ್ಯವಾಗಿದೆ.
ತೆಳ್ಳಗೆ ಅಂತ ಬೇಜಾರಾ? ದಪ್ಪ ಆಗಬೇಕು ಅಂದ್ರೆ ಹೀಗ್ ಮಾಡಿ
ಸೂರ್ಯಕಾಂತಿ ಹೂವಿನ ಬೀಜಗಳು : ಈ ಬೀಜಗಳು ಕಬ್ಬಿಣ ಮತ್ತು ಫೈಬರ್ ನಿಂದ ಸಮೃದ್ಧವಾಗಿವೆ. ಅವು ವಿಟಮಿನ್ ಇ, ಮೆಗ್ನೀಸಿಮ್, ರಂಜಕ ಮತ್ತು ಸತುವನ್ನು ಹೊಂದಿವೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸೂರ್ಯಕಾಂತಿ ಬೀಜಗಳು ಮೆದುಳಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೆದುಳನ್ನು ಶಾಂತವಾಗಿಡುತ್ತದೆ.