Asianet Suvarna News Asianet Suvarna News

ಫಿಟ್ ಆಗಿರುವ ಜನರನ್ನೂ ಕಾಡುತ್ತೆ Heart Disease!

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ದಿನಚರಿ, ವ್ಯಾಯಾಮ, ಫಿಟ್ನೆಸ್ ಎಲ್ಲರನ್ನೂ ಆಕರ್ಷಿಸುತ್ತದೆ. ಫಿಟ್ ಆಗಿರುವ ನಟರ ಪಟ್ಟಿ ಸೇರಿದ್ದ ನೆಚ್ಚಿನ ಅಪ್ಪುಗೆ ಹೃದಯಾಘಾತವಾಗಿದ್ದು ದೊಡ್ಡ ಆಘಾತ. ಎಷ್ಟೇ ಫಿಟ್ ಆಗಿದ್ರೂ ಇನ್ನೂ ಕೆಲ ಕಾರಣಕ್ಕೆ ಹೃದಯ ಸಮಸ್ಯೆ ಕಾಡುತ್ತದೆ.   
 

Even ultra fit person can have heart disease
Author
Bangalore, First Published Jan 3, 2022, 5:38 PM IST

ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಉತ್ತಮ ದಿನಚರಿ ನಂತರವೂ  ಅನೇಕ ಬಾರಿ ಜನರು ಹೃದ್ರೋಗದಿಂದ ಬಳಲುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಜನರು ಗೊಂದಲಕ್ಕೀಡಾಗುತ್ತಾರೆ. ಎರಡು ರೀತಿಯ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿರುತ್ತದೆ.  ತುಂಬಾ ಎಚ್ಚರಿಕೆಯಿಂದ ಆಹಾರ ಸೇವನೆ ಮಾಡಿ, ಫಿಟ್ನೆಸ್ ಕಾಯ್ದುಕೊಂಡರೂ ಹೃದಯ ಸಮಸ್ಯೆ ಕಾಡಿದೆ ಅಂದ್ಮೇಲೆ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕಾದ ಅಗತ್ಯವೇನು ಎಂಬ ಪ್ರಶ್ನೆ ಕಾಡುತ್ತದೆ. ಮತ್ತೆ ಕೆಲವರಿಗೆ  ತುಂಬಾ ಎಚ್ಚರಿಕೆಯಿಂದಿರುವ ಹಾಗೂ ಫಿಟ್ ಆಗಿರುವ ವ್ಯಕ್ತಿಗೇ ಸಮಸ್ಯೆ ಎದುರಾಗಿದೆ ಅಂದ್ಮೇಲೆ ನಾವೇನು ಮಾಡ್ಬೇಕು  ಎಂಬ ಪ್ರಶ್ನೆ ಶುರುವಾಗುತ್ತದೆ.

ಇದ್ರ ಬಗ್ಗೆ ಆಲೋಚನೆ ಮಾಡುವ ಕೆಲವರು ಫಿಟ್ನೆಸ್ ಸುದ್ದಿಗೆ ಹೋಗುವುದಿಲ್ಲ. ವ್ಯಾಯಾಮ ಸೇರಿದಂತೆ ಯಾವುದೇ ವರ್ಕ್ ಔಟ್ ಮಾಡುವುದಿಲ್ಲ. ಸಮತೋಲಿತ ಆಹಾರ ಸೇವನೆ ಬಿಟ್ಟುಬಿಡ್ತಾರೆ. ಇನ್ನೊಂದು ವರ್ಗದವರು  ಅಗತ್ಯಕ್ಕಿಂತ ಹೆಚ್ಚಿನ ಪ್ರಯತ್ನವನ್ನು ಪ್ರಾರಂಭಿಸುತ್ತಾರೆ. ಪ್ರತಿ ದಿನ, ಪ್ರತಿ ಕ್ಷಣ ಫಿಟ್ನೆಸ್ ಗೆ ಗಮನ ನೀಡುತ್ತಾರೆ. ಆದರೆ ಈ ಎರಡೂ ವಿಧಾನಗಳು ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಕೊರೊನರಿ ಆರ್ಟರಿ ಕಾಯಿಲೆ (ಸಿಎಡಿ) ಕಾಡಬಹುದು.

ಇದನ್ನು ಪರಿಧಮನಿಯ ಅಪಧಮನಿ ಕಾಯಿಲೆ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಅಪಧಮನಿಗಳು  ಮೃದುವಾಗಿರುತ್ತವೆ. ಆದರೆ ಇದರಲ್ಲಿ ಪ್ಲೇಕ್ ನಿರ್ಮಾಣವಾಗುತ್ತಿದ್ದಂತೆ ಅವು ಗಟ್ಟಿಯಾಗುತ್ತವೆ ಮತ್ತು ಕಿರಿದಾಗುತ್ತವೆ. ಹೃದಯಕ್ಕೆ ಸಾಕಷ್ಟು ರಕ್ತ ಹೋಗುವುದಿಲ್ಲ. ಕೊಲೆಸ್ಟ್ರಾಲ್, ಬಿಪಿ ಮಟ್ಟ ಹೆಚ್ಚಾಗಬಹುದು. ಇದ್ರಿಂದ ಸಮಸ್ಯೆ ದೊಡ್ಡದಾಗುತ್ತದೆ. 

ಸಾಮಾನ್ಯ ದಿನಚರಿ, ವ್ಯಾಯಾಮ ಮತ್ತು ಸರಿಯಾದ ಆಹಾರ ಪದ್ಧತಿಗಳು ದೇಹದ ಉಳಿದ ಭಾಗಗಳನ್ನು ಒಳಗೊಂಡಂತೆ ಹೃದಯವನ್ನು ಆರೋಗ್ಯಕರವಾಗಿಡುತ್ತವೆ. ವ್ಯಾಯಾಮ ಮಾಡದಿರುವುದು ಮಾತ್ರವಲ್ಲ ಹೃದಯದ ಆರೋಗ್ಯ ಹಾಳು ಮಾಡುವ ಇನ್ನೂ ಕೆಲವು ಅಂಶಗಳಿವೆ. ಅವು ಯಾವವು ಎಂಬುದನ್ನು ಇಲ್ಲಿ ನೋಡೋಣ. 

ಕೊರೊನರಿ ಆರ್ಟರಿ ಕಾಯಿಲೆಗೆ ಕಾರಣ : ಫಿಟ್ನೆಸ್ ಮತ್ತು ಆಹಾರದಲ್ಲಿ  ಜಾಗರೂಕರಾಗಿದ್ದರೂ ಬೇರೆ ಸಮಸ್ಯೆಯಿಂದ ಹೃದಯ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅತಿಯಾದ ಒತ್ತಡ ಕೂಡ ಇದ್ದಕ್ಕೆ ಕಾರಣ.ಇದಲ್ಲದೆ ಕುಟುಂಬದ ಹಿನ್ನಲೆ ಕೂಡ ಮಹತ್ವ ಪಡೆಯುತ್ತದೆ. ಕುಟುಂಬಸ್ಥರದಲ್ಲಿ ಈ ಖಾಯಿಲೆಯಿದ್ದರೆ ವಂಶಪಾರಂಪರ್ಯವಾಗಿ ಇದು ಬರುತ್ತದೆ.  ಇದಲ್ಲದೆ  ಬಾಲ್ಯದಲ್ಲಿ ಅಪಧಮನಿಗಳಲ್ಲಿ ಕಾಣಿಸಿಕೊಂಡಿದ ಸಮಸ್ಯೆ ಪ್ರೌಢಾವಸ್ಥೆಯಲ್ಲಿ ಹೆಚ್ಚಾಗಬಹುದು.   

ಈ ಕಾಯಿಲೆಯಿಂದ ರಕ್ಷಣೆ ಹೇಗೆ ? 

ಫಿಟ್ನೆಸ್, ಸರಿಯಾದ ದಿನಚರಿ ಮತ್ತು ಪೌಷ್ಟಿಕ ಆಹಾರದ ಹೊರತಾಗಿಯೂ, ಹೃದಯದ ಸಮಸ್ಯೆ ಕಾಡಿದರೆ ಅದು ಸಾಮಾನ್ಯವಲ್ಲ. ಆದರೆ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಮೊದಲನೇಯದಾಗಿ ಫಿಟ್ನೆಸ್, ಡಯೆಟ್ ಮತ್ತು ಸರಿಯಾದ ದಿನಚರಿ. ಅನೇಕರು ತಾವು ಸರಿಯಾದ ದಿನಚರಿ ಪಾಲನೆ ಮಾಡುತ್ತಿದ್ದೇವೆ ಎಂದುಕೊಂಡಿರುತ್ತಾರೆ. ಆಹಾರ ಸೇವನೆಯಲ್ಲೂ ಜಾಗೃತಿ ವಹಿಸಿದ್ದೇವೆ ಎಂದು ಭಾವಿಸಿರುತ್ತಾರೆ. ಆದ್ರೆ ತಪ್ಪು ಮಾರ್ಗದಲ್ಲಿ ನಡೆದಿರುತ್ತಾರೆ. ಹಾಗಾಗಿ ಸರಿಯಾದ ಕ್ರಮದ ಬಗ್ಗೆ ತಿಳಿದಿದ್ದರೆ ಅನಾರೋಗ್ಯದಿಂದ ದೂರವಿರಬಹುದು.  
ಬಾಲ್ಯದಲ್ಲಿ ಹೃದಯದ ಸಮಸ್ಯೆ ಹೊಂದಿದ್ದು,ಅದು ಈಗ ಕಡಿಮೆಯಾಗಿದ್ದರೂ ನಿರ್ಲಕ್ಷ್ಯ ಬೇಡ. ವಯಸ್ಕರಾದ ಮೇಲೂ  ನಿಯಮಿತ ತಪಾಸಣೆಯ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಅಂತಹ ಕಾಯಿಲೆ ಮೊದಲೇ ಕಾಡಿದ್ದರೆ ನೀವು ಆಗಾಗ ಪರೀಕ್ಷಿಸಿಕೊಳ್ಳಲು ಮರೆಯಬೇಡಿ. 

Break Up : ನಿಮ್ಮ ಹುಡುಗಿ ಮುನಿಸು ಕಡಿಮೆಯಾಗ್ತಿಲ್ವಾ? ಈಗ್ಲೇ ಎಚ್ಚೆತ್ತುಕೊಳ್ಳಿ

40 ವರ್ಷ ವಯಸ್ಸಿನ ನಂತರ, ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ  ಬಿಪಿ, ಶುಗರ್ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು. ಸಾಮಾನ್ಯವಾಗಿ 40 ರ ನಂತರ, ಪುರುಷರು ಮತ್ತು ಮಹಿಳೆಯರ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ.  ಈ ಕಾರಣದಿಂದಾಗಿ, ಹಾರ್ಮೋನುಗಳ ಅಸಮತೋಲನ ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತ ತಪಾಸಣೆಯಲ್ಲಿ ಇವುಗಳು ಮೊದಲೇ ತಿಳಿಯುವುದ್ರಿಂದ ಶೀಘ್ರ ಚಿಕಿತ್ಸೆ ಪಡೆಯಬಹುದು. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಾಗ ರೋಗ ನಿಯಂತ್ರಣ ಸುಲಭ. 
ಇದಲ್ಲದೆ ವೈದ್ಯರು ನಿಮಗೆ ಯಾವುದೇ ನಿಯಮಿತ ಔಷಧವನ್ನು ಸೂಚಿಸಿದರೆ ಭಯಪಡಬೇಡಿ. ವೈದ್ಯರು ಸೂಚಿಸಿದಂತೆ ಔಷಧಿ ಸೇವನೆಯನ್ನು ಮರೆಯಬೇಡಿ. 

Papaya Risks: ಪಪ್ಪಾಯಿ ಕೆಲವರಿಗೆ ಅಪಾಯಕಾರಿ.. ನೀವು ತಿನ್ಬಹುದೋ ಇಲ್ವೋ ತಿಳಿದುಕೊಳ್ಳಿ..

ನಿಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಇರಬಹುದು. ಆದರೂ ಪ್ರತಿ ನಿತ್ಯ ಧ್ಯಾನ, ಯೋಗ ಸೇರಿದಂತೆ  ಸೃಜನಾತ್ಮಕ ಕೆಲಸದಲ್ಲಿ ತೊಡಗಿಕೊಳ್ಳಿ. ಇದು ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. 
ಅತ್ಯಂತ ಮುಖ್ಯವಾದ ವಿಷಯವೆಂದರೆ ಕುಟುಂಬ ಮತ್ತು ಸ್ನೇಹಿತರ ಬೆಂಬಲ. ನಿಮ್ಮ ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇದು ಜೀವನದ ಖುಷಿಯನ್ನು ಹೆಚ್ಚಿಸುತ್ತದೆ. ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಸಂಸ್ಥೆಗೆ  ಸೇರಬಹುದು. ಮನಸ್ಸಿಗೆ ಖುಷಿ ನೀಡುವ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಿ.

 

Follow Us:
Download App:
  • android
  • ios