MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Papaya Risks: ಪಪ್ಪಾಯಿ ಕೆಲವರಿಗೆ ಅಪಾಯಕಾರಿ.. ನೀವು ತಿನ್ಬಹುದೋ ಇಲ್ವೋ ತಿಳಿದುಕೊಳ್ಳಿ..

Papaya Risks: ಪಪ್ಪಾಯಿ ಕೆಲವರಿಗೆ ಅಪಾಯಕಾರಿ.. ನೀವು ತಿನ್ಬಹುದೋ ಇಲ್ವೋ ತಿಳಿದುಕೊಳ್ಳಿ..

ಪಪ್ಪಾಯದ ಆರೋಗ್ಯ ಲಾಭಗಳನ್ನು ಆಗಾಗ ಓದುತ್ತಿರುತ್ತೇವೆ. ಅದು ಬಹಳ ಒಳ್ಳೆಯದೆಂದೇ ನಂಬಿದ್ದೇವೆ. ಆದರೆ, ಎಲ್ಲರಿಗೂ ಪಪ್ಪಾಯ ಒಳ್ಳೆಯದಲ್ಲ. ಕೆಲ ಆರೋಗ್ಯ ಸಮಸ್ಯೆ ಇರುವವರಿಗೆ ಪಪ್ಪಾಯ ಅಪಾಯಕಾರಿಯಾಗಬಲ್ಲದು. ನೀವಿದನ್ನು ತಿನ್ನಬಹುದೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ.

2 Min read
Suvarna News | Asianet News
Published : Jan 03 2022, 03:56 PM IST
Share this Photo Gallery
  • FB
  • TW
  • Linkdin
  • Whatsapp
111

ಹಣ್ಣುಗಳನ್ನು ಪೋಷಕಾಂಶಗಳ ನಿಧಿಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಒಂದು ಪಪ್ಪಾಯಿ. ಪಪ್ಪಾಯಿ ವಿಟಮಿನ್‌ಗಳು, ನಾರುಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಪಪ್ಪಾಯಿ ಹಣ್ಣು ಎಲ್ಲಾ ಋತುಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಪಪ್ಪಾಯಿಯನ್ನು ಸಲಾಡ್ ಆಗಿಯೂ ತಿನ್ನಬಹುದು. ಇದು ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಬಲ್ಲದು. 

211
Fights Inflammation: Papaya is a fruit that is rich in antioxidants, papain, which fights inflammation in the body. Scientific studies have concluded that inflammation may hamper weight loss.

Fights Inflammation: Papaya is a fruit that is rich in antioxidants, papain, which fights inflammation in the body. Scientific studies have concluded that inflammation may hamper weight loss.

ಅಲ್ಲದೆ ಪಪ್ಪಾಯಿಯಲ್ಲಿರುವ ಫೈಬರ್ (fiber)ನಿಮ್ಮ ಹೊಟ್ಟೆಯನ್ನು ದೀರ್ಘ ಕಾಲದವರೆಗೆ ತುಂಬುವಂತೆ ಮಾಡುತ್ತದೆ. ಇದರಿಂದ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ. ಆದರೆ ಪಪ್ಪಾಯಿಗೆ ಅದರ ಅನುಕೂಲಗಳು ಮಾತ್ರ ಇದೆ ಎಂದಲ್ಲ. ಕೆಲವರಿಗೆ ಪಪ್ಪಾಯಿ ಅಪಾಯಕಾರಿಯೂ ಆಗಬಲ್ಲದು. ಯಾರೆಲ್ಲ ಪಪ್ಪಾಯಿಯನ್ನು ಸೇವಿಸಬಾರದು ಎಂದು ನಾವು ತಿಳಿಸುತ್ತೇವೆ. 

311

ಗರ್ಭಿಣಿ ಮಹಿಳೆಯರು (pregnant women)
ಗರ್ಭಿಣಿಯರು ತಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.  ಅವರು ಪಪ್ಪಾಯಿಯನ್ನು ಸಂಪೂರ್ಣವಾಗಿ ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಪಪ್ಪಾಯಿ ಸಿಹಿಯಾಗಿದ್ದು ಲ್ಯಾಟೆಕ್ಸ್ ಅನ್ನು ಹೊಂದಿರುತ್ತದೆ. ಇದು ಗರ್ಭಾಶಯದ ಸಂಕೋಚನಗಳನ್ನು ಪ್ರಚೋದಿಸಬಹುದು. ಇದು ಅವಧಿಪೂರ್ವ ಹೆರಿಗೆಗೆ ಕಾರಣವಾಗಬಹುದು.

411

ಪಪ್ಪಾಯಿ ಪಾಪನ್ ಅನ್ನು ಒಳಗೊಂಡಿದೆ. ಇದರಿಂದ ದೇಹವು ಪ್ರೊಸ್ಟಾಗ್ಲಾಂಡಿನ್ ಅನ್ನು ಅರ್ಥ ಮಾಡಿಕೊಳ್ಳಲು ಮರೆಯಬಹುದು.  ಜೊತೆಗೆ ಪಪ್ಪಾಯಿಯ ಸೇವನೆಯಿಂದ ಭ್ರೂಣಕ್ಕೆ ಬೆಂಬಲ ನೀಡುವ ಪೊರೆಯೂ ದುರ್ಬಲಗೊಳ್ಳುತ್ತದೆ. ಆದರೆ, ಇದು ಹೆಚ್ಚಾಗಿ ಹಸಿ ಪಪ್ಪಾಯಿಯಲ್ಲಿ ಕಂಡುಬರುತ್ತದೆ.

511

ಅನಿಯಂತ್ರಿತ ಹೃದಯ ಬಡಿತ ಹೊಂದಿರುವ ಜನರು
ಪಪ್ಪಾಯಿ ಸೇವನೆಯಿಂದ ಹೃದ್ರೋಗದ ಅಪಾಯವನ್ನು  (heart problem)ಕಡಿಮೆ ಮಾಡಬಹುದು. ಆದರೆ ನೀವು ಈಗಾಗಲೇ ಅನಿಯಮಿತ ಹೃದಯ ಬಡಿತ(heart beat irregularity)ದಿಂದ ಬಳಲುತ್ತಿದ್ದರೆ, ನೀವು ಪಪ್ಪಾಯಿಯಿಂದ ಅಂತರವನ್ನು ಇಟ್ಟುಕೊಳ್ಳಬೇಕು. ಇತ್ತೀಚಿನ ಅಧ್ಯಯನಗಳು ಪಪ್ಪಾಯಿಯಲ್ಲಿ ಸಿನೋಜೆನಿಕ್ ಗ್ಲೈಕೋಸೈಡ್ ಎಂಬ ಅಮೈನೋ ಆಮ್ಲವಿದೆ ಎಂದು ತೋರಿಸುತ್ತವೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೈಡ್ರೋಜನ್ ಸೈನೈಡ್ ಅನ್ನು ಉತ್ಪಾದಿಸುತ್ತದೆ. 

611
Hypothyroidism

Hypothyroidism

ನೀವು ಈಗಾಗಲೇ ಅನಿಯಮಿತ ಹೃದಯ ಬಡಿತ (heart beat) ಸಮಸ್ಯೆಯಿಂದ ಬಳಲುತ್ತಿದ್ದರೆ ಪಪ್ಪಾಯಿಯಲ್ಲಿರುವ ಹೈಡ್ರೋಜನ್ ಸೈನೈಡ್ ನಿಮಗೆ ಅಪಾಯಕಾರಿಯಾಗಬಹುದು. ಇದಲ್ಲದೆ, ಒಬ್ಬ ವ್ಯಕ್ತಿಯು ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿದ್ದರೂ ಪಪ್ಪಾಯಿ ನಿಮಗೆ ಹಾನಿ ಮಾಡಬಹುದು.

711

ಅಲರ್ಜಿಯಿಂದ ಬಳಲುತ್ತಿರುವ ಜನರಿಗೆ
ಲ್ಯಾಟೆಕ್ಸ್ ಅಲರ್ಜಿಯಿಂದ ಬಳಲುತ್ತಿರುವ ಜನರಿಗೆ ಪಪ್ಪಾಯಿ ತಿನ್ನುವುದು ಹಾನಿಕಾರಕ. ಪಪ್ಪಾಯಿಯಲ್ಲಿ ಚಿಟಿನೇಜ್ ಎಂಬ ಕಿಣ್ವವಿದೆ. ಈ ಕಿಣ್ವವು ಲ್ಯಾಟೆಕ್ಸ್ ಗೆ ಕ್ರಾಸ್ ರಿಯಾಕ್ಟ್ ಮಾಡಬಹುದು. ಇದರಿಂದ ಸೀನುವಿಕೆ, ಉಸಿರಾಟಕ್ಕೆ ತೊಂದರೆ (breathing prooblem), ಕೆಮ್ಮು, ಕಣ್ಣಲ್ಲಿ ನೀರು ವರುವ ಸಾಧ್ಯತೆ ಯಿದೆ. ಅಲರ್ಜಿ ಇದ್ದರೆ ಪಪ್ಪಾಯಿ ತಿನ್ನುವುದನ್ನು ತಪ್ಪಿಸಿ.

811
ಬ್ಲ್ಯಾಡರ್ ಬಳಿ ಇರುವ ಕಲ್ಲುಗಳು ನಿಮಗೆ ಹೆಚ್ಚು ಮೂತ್ರ ವಿಸರ್ಜಿಸಲು ಕಾರಣವಾಗಬಹುದು. ಇವು ಹೆಚ್ಚಾಗಿ ತಮ್ಮದೇ ಆದ ಔಷಧಿಗಳೊಂದಿಗೆ ಮತ್ತು ನೀರಿನ ಸೇವನೆಯನ್ನು ಹೆಚ್ಚಿಸುವುದರಿಂದ ತೆರವುಗೊಳ್ಳುತ್ತವೆ ಆಗಲೂ ಹೋಗದಿದ್ದಲ್ಲಿ, ನಿಮ್ಮ ವೈದ್ಯರು ಬ್ಲ್ಯಾಡರ್ ಕಲ್ಲುಗಳನ್ನು ಸಣ್ಣ ತುಂಡುಗಳಾಗಿ ಒಡೆಯಲು ಬಳಸುವ ಸಿಸ್ಟೊಲಿಥೋಲಾಪಾಕ್ಸಿ ಎಂಬ ವಿಧಾನದ ಮೂಲಕ ಅದನ್ನು ತೆಗೆದುಹಾಕಬೇಕಾಗಬಹುದು.

ಬ್ಲ್ಯಾಡರ್ ಬಳಿ ಇರುವ ಕಲ್ಲುಗಳು ನಿಮಗೆ ಹೆಚ್ಚು ಮೂತ್ರ ವಿಸರ್ಜಿಸಲು ಕಾರಣವಾಗಬಹುದು. ಇವು ಹೆಚ್ಚಾಗಿ ತಮ್ಮದೇ ಆದ ಔಷಧಿಗಳೊಂದಿಗೆ ಮತ್ತು ನೀರಿನ ಸೇವನೆಯನ್ನು ಹೆಚ್ಚಿಸುವುದರಿಂದ ತೆರವುಗೊಳ್ಳುತ್ತವೆ ಆಗಲೂ ಹೋಗದಿದ್ದಲ್ಲಿ, ನಿಮ್ಮ ವೈದ್ಯರು ಬ್ಲ್ಯಾಡರ್ ಕಲ್ಲುಗಳನ್ನು ಸಣ್ಣ ತುಂಡುಗಳಾಗಿ ಒಡೆಯಲು ಬಳಸುವ ಸಿಸ್ಟೊಲಿಥೋಲಾಪಾಕ್ಸಿ ಎಂಬ ವಿಧಾನದ ಮೂಲಕ ಅದನ್ನು ತೆಗೆದುಹಾಕಬೇಕಾಗಬಹುದು.

ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರಿಗೆ
ಪಪ್ಪಾಯಿಯ ಒಳಗೆ ಪೋಷಕಾಂಶಗಳು ಮತ್ತು ಇತರ ಗುಣಗಳು ಇದೆ. ಇವುಗಳಲ್ಲಿ ವಿಟಮಿನ್ ಸಿ ಒಂದು. ಪಪ್ಪಾಯಿಯಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ಸಮೃದ್ಧ ಆಂಟಿ ಆಕ್ಸಿಡೆಂಟ್ ಕೂಡ ಆಗಿದೆ. ಈ ಸಂದರ್ಭದಲ್ಲಿ ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದರಿಂದ ಕಿಡ್ನಿಕಲ್ಲುಗಳ (kidney stone)ಸಮಸ್ಯೆ ಹೆಚ್ಚಾಗಬಹುದು.

911

ವಾಸ್ತವವಾಗಿ, ಪಪ್ಪಾಯಿ ಸೇವನೆಯು ಕ್ಯಾಲ್ಸಿಯಂ ಆಕ್ಸಲೇಟ್ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಇದರಲ್ಲಿ ವ್ಯಕ್ತಿಯ ಮೂತ್ರಪಿಂಡದಲ್ಲಿ ದೊಡ್ಡ ಕಲ್ಲಿನ ರೂಪ ಪಡೆಯುತ್ತದೆ. ಈ ಅಪೆಂಡಿಸೈಟಿಸ್ ನಂತರ ಮೂತ್ರದಿಂದ ಹೊರಬರಲು ಕಷ್ಟವಾಗುತ್ತದೆ. ಆದುದರಿಂದ ವೈದ್ಯರಿಂದ ಪರೀಕ್ಷೆ ನಡೆಸುವುದು ಉತ್ತಮ, 
 

1011

ಹೈಪೋಗ್ಲಿಸೀಮಿಯಾ ಹೊಂದಿರುವ ಜನರು

ಮಧುಮೇಹದಿಂದ (diabetes)ಬಳಲುತ್ತಿರುವ ರೋಗಿಗಳಿಗೆ ಪಪ್ಪಾಯಿ ಸೇವನೆ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಅಥವಾ ನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಈಗಾಗಲೇ ರಕ್ತದಲ್ಲಿನ ಸಕ್ಕರೆ ಮಟ್ಟಕಡಿಮೆ ಇರುವ ಅಥವಾ ಹೈಪೋಗ್ಲಿಸೀಮಿಯಾದಿಂದ ಬಳಲುತ್ತಿರುವ ಜನರಿಗೆ ಇದು ಉತ್ತಮ ಆಯ್ಕೆಯಲ್ಲ. 

1111
Hypoglycemia

Hypoglycemia

ಪಪ್ಪಾಯಿ ಸಿಹಿಯಾಗಿದೆ ಮತ್ತು ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಕೆಲಸ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈಗಾಗಲೇ ಈ ಸಮಸ್ಯೆಯಿಂದ ಬಳಲುತ್ತಿರುವ ಜನರು. ಪಪ್ಪಾಯಿ ಅವರ ಗ್ಲುಕೋಸ್ ಮಟ್ಟವನ್ನು ಅಪಾಯಕಾರಿ ಸ್ಥಿತಿಗೆ ಕರೆದೊಯ್ಯಬಹುದು. ಇದು ಹೃದಯ ಬಡಿತದ ತೀಕ್ಷ್ಣತೆ, ಗೊಂದಲ ಮತ್ತು ಕಂಪನದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

About the Author

SN
Suvarna News
ಆರೋಗ್ಯ
ಜೀವನಶೈಲಿ
ಮಹಿಳೆಯರು
ಆಹಾರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved