ಮಕ್ಕಳಿಗೂ ಕಾಣಿಸಿಕೊಳ್ಳುತ್ತೆ ಡಾರ್ಕ್ ಸರ್ಕಲ್…ಕಾರಣ ತಿಳ್ಕೊಂಡು ಬಿಡಿ!
ದೊಡ್ಡವರಂತೆ ಮಕ್ಕಳಿಗೂ ಅನೇಕ ಸಮಸ್ಯೆಗಳು ಕಾಡ್ತಿರುತ್ತವೆ. ಸಣ್ಣ ವಯಸ್ಸಿನಲ್ಲೇ ಕಣ್ಣು ಸುತ್ತ ಕಪ್ಪು ಕಲೆಯಾಗಿರುತ್ತದೆ. ಮಕ್ಕಳ ಮುಖ ನೋಡಿ ಪಾಲಕರು ಕಂಗಾಲಾಗ್ತಾರೆ. ಮಕ್ಕಳ ಈ ಡಾರ್ಕ್ ಸರ್ಕಲ್ ಗೆ ಉಪಚಾರ ಹೇಗೆ ಅಂತಾ ನಾವು ಹೇಳ್ತೇವೆ.
ವಯಸ್ಸಾದಂತೆ ಕಣ್ಣುಗಳ ಕೆಳಗೆ ಕಪ್ಪು ಕಲೆ ಕಾಣಿಸಿಕೊಳ್ಳೋದು ಸಾಮಾನ್ಯ ವಿಷಯವಾಗಿದೆ. ಆದರೆ ಚಿಕ್ಕ ಮಕ್ಕಳಲ್ಲೂ ಈ ಸಮಸ್ಯೆ ಕಾಣಿಸಿಕೊಳ್ತಿದೆ. ಮಕ್ಕಳ ಡಾರ್ಕ್ ಸರ್ಕಲ್ ತುಂಬಾ ದಿನ ಇರೋದಿಲ್ಲ. ಕೆಲವೇ ದಿನಗಳಲ್ಲಿ ಸಮಸ್ಯೆ ಮಾಯವಾಗುತ್ತದೆ. ಮಕ್ಕಳ ಡಾರ್ಕ್ ಸರ್ಕಲ್ ಗೆ ಹಲವು ಕಾರಣಗಳಿದೆ. ತಡ ರಾತ್ರಿಯವರೆಗೆ ಎಚ್ಚರವಾಗಿರುವುದು, ಪೋಷಕಾಂಶಗಳ ಕೊರತೆ ಮತ್ತು ಟಿವಿ,ಮೊಬೈಲ್ ಪರದೆಗಳನ್ನು ಹೆಚ್ಚಾಗಿ ವೀಕ್ಷಣೆ ಮಾಡುವುದ್ರಿಂದ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಮಕ್ಕಳಿಗೆ ಕಾಣಿಸಿಕೊಳ್ಳುತ್ತದೆ.
ಮಕ್ಕಳ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದಾಗಿ ನೀಲಿ ರಕ್ತನಾಳಗಳು ಕಣ್ಣುಗಳ ಕೆಳಗೆ ಹೆಚ್ಚು ಗೋಚರಿಸುತ್ತವೆ. ಇದು ನಿಖರವಾಗಿ ಡಾರ್ಕ್ ವಲಯಗಳಂತೆ ಕಾಣುತ್ತದೆ. ಡಾರ್ಕ್ ಸರ್ಕಲ್ (Dark circle) ಗೆ ಕಾರಣವೇನು, ಹಾಗೆ ಅದ್ರ ನಿಯಂತ್ರಣ ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.
ಮಕ್ಕಳ (Children) ಲ್ಲಿ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಗೆ ಕಾರಣ :
ಗೊರಕೆ (Snoring) ಹೊಡೆಯುವುದು : ನಿಮ್ಮ ಮಗು ಮಲಗಿರುವಾಗ ಗೊರಕೆ ಹೊಡೆಯುತ್ತಿದ್ದರೆ, ಆಗ ಡಾರ್ಕ್ ಸರ್ಕಲ್ ಸಮಸ್ಯೆ ಕಾಡುತ್ತದೆ. ಗೊರಕೆಯು ಸಾಮಾನ್ಯವಾಗಿ ಅಡೆನಾಯ್ಡ್ಸ್ (Adenoids) ಎಂದು ಕರೆಯಲ್ಪಡುವ ಸಾಮಾನ್ಯ ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆಯಿಂದ ಉಂಟಾಗುತ್ತದೆ. ಟಾನ್ಸಿಲ್‌ಗಳ ಮೇಲೆ ಮೂಗಿನ ಹಿಂಭಾಗದಲ್ಲಿ ನೋಡ್‌ಗಳು ದೊಡ್ಡದಾಗಿರುತ್ತವೆ. ಇದು ಕಪ್ಪು ವಲಯಗಳಿಗೆ ಕಾರಣವಾಗುತ್ತದೆ. ಗೊರಕೆಯಿಂದ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಮಗುವಿಗೆ ನಿದ್ರೆ ಬರುವುದಿಲ್ಲ. ಇದರಿಂದಾಗಿ ಅವರು ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಅನುಭವಿಸುತ್ತಾರೆ.
ರಕ್ತ (Blood) ಮತ್ತು ನೀರಿ (Water) ನ ಕೊರತೆ : ಮಕ್ಕಳ ನೀರಿನ ಬಳಕೆ ವಯಸ್ಕರಿಗಿಂತ ತುಂಬಾ ಕಡಿಮೆ. ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವಾಗ ಸ್ವಲ್ಪ ಪ್ರಮಾಣದಲ್ಲಿ ನೀರಿನ ಸೇವನೆ ಮಾಡ್ತಾರೆ. ದೇಹದಲ್ಲಿ ಕಡಿಮೆ ನೀರಿರುವ ಕಾರಣ ಹಾಗೂ ರಕ್ತದ ಕೊರತೆಯಿಂದ ಕಣ್ಣಿನ ಕೆಳಗಿನ ಚರ್ಮವು ತುಂಬಾ ಒಣಗುತ್ತದೆ ಮತ್ತು ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮಕ್ಕಳು ಡಾರ್ಕ್ ಸರ್ಕಲ್ ಸಮಸ್ಯೆಯಿಂದ ದೂರವಿರಬೇಕೆಂದ್ರೆ ಮಕ್ಕಳು ದಿನಕ್ಕೆ ಕನಿಷ್ಠ 5 ರಿಂದ 6 ಗ್ಲಾಸ್ ನೀರನ್ನು ಕುಡಿಯುವಂತೆ ಪಾಲಕರು ಗಮನ ಹರಿಸಬೇಕು.
ಇದನ್ನೂ ಓದಿ: ಸುಡು ಬಿಸಿಲಿಗೆ ಸೌಂದರ್ಯ ಹಾಳಾಗುತ್ತೆ ಅನ್ನೋ ಭಯ ಬೇಡ, ಅಲೋವೆರಾ ಹೀಗೆ ಬಳಸಿ ನೋಡಿ
ನಿದ್ರೆಯ ಕೊರತೆ : ಕೆಲ ಮಕ್ಕಳು ತಡರಾತ್ರಿಯಾದ್ರೂ ನಿದ್ರೆ ಮಾಡುವುದಿಲ್ಲ. ಮಧ್ಯೆ ಮಧ್ಯೆ ನಿದ್ರೆಯಿಂದ ಏಳುವ ಮಕ್ಕಳಿವೆ. ಇದರಿಂದ ಮಕ್ಕಳಿಗೆ ಸರಿಯಾದ ನಿದ್ರೆಯಾಗುವುದಿಲ್ಲ. ಇದು ಮಕ್ಕಳ ಡ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಉಂಟಾಗಲು ಕಾರಣವಾಗುತ್ತದೆ. ಮಕ್ಕಳಿಗೆ ಸಾಮಾನ್ಯವಾಗಿ 7 ರಿಂದ 8 ಗಂಟೆಗಳ ನಿದ್ದೆ ಬೇಕು. ಸರಿಯಾಗಿ ನಿದ್ರೆ ಮಾಡುವ ಮಕ್ಕಳಿಗೆ ಈ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಬೇಗ ಮಲಗಿ ಬೇಗ ಏಳುವ ಜೀವನ ಶೈಲಿಯನ್ನು ಮಕ್ಕಳು ರೂಢಿಸಿಕೊಳ್ಳಬೇಕಾಗುತ್ತದೆ.
ಆನುವಂಶಿಕ ಸಮಸ್ಯೆ : ಮಕ್ಕಳಲ್ಲಿ ಡಾರ್ಕ್ ಸರ್ಕಲ್ ಇರುವುದು ಆನುವಂಶಿಕ ಸಮಸ್ಯೆಯೂ ಆಗಿರಬಹುದು. ಅನೇಕ ಬಾರಿ ಕುಟುಂಬದ ಸದಸ್ಯರು ಡಾರ್ಕ್ ಸರ್ಕಲ್ ಸಮಸ್ಯೆ ಹೊಂದಿರುತ್ತಾರೆ. ಇದು ಕಾಲಾನಂತರದಲ್ಲಿ ಮಕ್ಕಳಿಗೂ ವರ್ಗಾವಣೆಯಾಗುತ್ತದೆ. ಇದನ್ನು ಆನುವಂಶಿಕ ಸಮಸ್ಯೆ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಈ ಮನೆಮದ್ದುಗಳಿಂದ ಡಾರ್ಕ್ ಸರ್ಕಲ್‌ಗೆ ಬಾಯ್ ಬಾಯ್ ಹೇಳಿ!
ಡಿಜಿಟಲ್ ಮಾಧ್ಯಮ : ಮೊದಲೇ ಹೇಳಿದಂತೆ ಡಿಜಿಟಲ್ ಮಾಧ್ಯಮಗಳು ಮಕ್ಕಳ ಕಣ್ಣಿನ ನರದ ಮೇಲೆ ಪರಿಣಾಮ ಬೀರುತ್ತದೆ. ಎರಡು – ಮೂರು ಗಂಟೆಗಳ ಕಾಲ ಮೊಬೈಲ್ , ಲ್ಯಾಬ್ ಟಾಪ್, ಟಿವಿ ಪರದೆ ಮುಂದೆ ಕುಳಿತುಕೊಳ್ಳುವ ಮಕ್ಕಳಿದ್ದಾರೆ. ಇದು ಅವರ ಕಣ್ಣಿನ ಮೇಲೆ ಪರಿಣಾಮ ಬೀರುವ ಜೊತೆಗೆ ಡಾರ್ಕ್ ಸರ್ಕಲ್ ಗೆ ಕಾರಣವಾಗುತ್ತದೆ. ಹಾಗಾಗಿ ಮಕ್ಕಳಿಗೆ ಅರ್ಧ ಗಂಟೆಗಿಂತ ಹೆಚ್ಚು ಕಾಲ ಟಿವಿ ನೋಡಲು, ಮೊಬೈಲ್ ವೀಕ್ಷಿಸಲು ಬಿಡಬಾರದು.