ವಿಶ್ವದಲ್ಲೇ ಮೊದಲ ಪ್ರಕರಣ! ಕಾರು ಚಲಾಯಿಸುವಾಗ ನಡೀತು ಘಟನೆ, ಶ್ವಾಸಕೋಶದಲ್ಲಿ ರಂಧ್ರ!
ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆಯಿಂದ ಇದ್ರೂ ಸಾಲೋದಿಲ್ಲ. ಕೆಲವೊಂದು ನಾವೇ ಮಾಡುವ ತಪ್ಪು ನಮಗೆ ತಿರುಗೇಟು ನೀಡುತ್ತದೆ. ಈ ವ್ಯಕ್ತಿ ಕೂಡ ಸೀನು ತಡೆದು ಯಡವಟ್ಟು ಮಾಡ್ಕೊಂಡಿದ್ದಾನೆ.
ಜಗತ್ತಿನಲ್ಲಿ ವಿಚಿತ್ರ ರೋಗಗಳು ಕಾಣಿಸಿಕೊಳ್ತಿವೆ. ಕೆಲವೊಂದನ್ನು ನಂಬೋದು ಕಷ್ಟ. ಆರೋಗ್ಯವಾಗಿರುವ ವ್ಯಕ್ತಿ ಅಚಾನಕ್ ಅನಾರೋಗ್ಯಕ್ಕೆ ಈಡಾಗ್ತಿದ್ದಾನೆ. ಕುಳಿತು ಮಾತನಾಡ್ತಿದ್ದವನು ಅರೆ ಕ್ಷಣದಲ್ಲಿ ಜೀವ ಬಿಡ್ತಿದ್ದಾನೆ. ಈಗಿನ ದಿನಗಳಲ್ಲಿ ಇಂಥ ಸಮಸ್ಯೆಗಳು ಹೆಚ್ಚಾಗಿವೆ. ಈಗ ಇನ್ನೊಬ್ಬ ವ್ಯಕ್ತಿ ಖಾಯಿಲೆ ಸುದ್ದಿಗೆ ಬಂದಿದೆ. ಆರೋಗ್ಯವಂತ ವ್ಯಕ್ತಿ ಏನೂ ತಿನ್ನದೆ, ಕುಡಿಯದೆ ಇದ್ದರೂ ಆತನ ಶ್ವಾಸಕೋಶದಲ್ಲಿ ರಂಧ್ರವಾದ್ರೆ ಹೇಗಾಗಬೇಡ. ಇಂಥ ಅಪರೂಪದ ಘಟನೆಯೊಂದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಜಗತ್ತಿನಲ್ಲಿ ನಡೆದ ಮೊದಲ ಪ್ರಕರಣ ಇದಾಗಿದ್ದು, ಬಿಎಂಜೆ ಜರ್ನಲ್ ಈ ಸುದ್ದಿ ನೀಡಿದೆ.
ಕೆಮ್ಮು (Cough), ವಾಂತಿ, ಮಲ, ಮೂತ್ರ ವಿಸರ್ಜನೆ ನೈಸರ್ಗಿಕ (Natural) ಸಂಗತಿಗಳು. ನಿಮಗೆ ಕೆಮ್ಮು ಬಂದಾಗ ಅದನ್ನು ತಡೆ ಹಿಡಿಯುವ ಪ್ರಯತ್ನಕ್ಕೆ ಹೋಗ್ಬಾರದು. ಮಲ ವಿಸರ್ಜನೆಯನ್ನು ಕಟ್ಟಿಕೊಳ್ಳೋದ್ರಿಂದ ಅದು ಕ್ಯಾನ್ಸರ್ ನಂತಹ ದೊಡ್ಡ ಖಾಯಿಲೆಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳ್ತಾರೆ. ಕೆಮ್ಮು, ಮಲ, ಮೂತ್ರ ವಿರ್ಜಸನೆ ಎಲ್ಲವೂ ನಮ್ಮ ದೇಹದ ಕೊಳಕನ್ನು, ವಿಷವನ್ನು ಹೊರಗೆ ಹಾಕುತ್ತದೆ. ಇದ್ರಲ್ಲಿ ಸೀನು ಕೂಡ ಸೇರಿದೆ. ಅನೇಕರು ಸೀನು (Sneeze) ಬಂದಾಗ ಅದನ್ನು ತಡೆಯುವ ಪ್ರಯತ್ನ ನಡೆಸುತ್ತಾರೆ. ಈ ವ್ಯಕ್ತಿ ಕೂಡ ಸೀನು ತಡೆಹಿಡಿದು ಯಡವಟ್ಟು ಮಾಡಿಕೊಂಡಿದ್ದಾನೆ.
ವಿದೇಶದಲ್ಲಿ ಮತ್ತೆ ಕೋವಿಡ್ ಅಬ್ಬರ, ಮಾಸ್ಕ್ ಕಡ್ಡಾಯ; ಭಾರತಕ್ಕೂ ವಕ್ಕರಿಸುತ್ತಾ ಮಹಾಮಾರಿ?
ಘಟನೆ ನಡೆಯುವ ಸಮಯದಲ್ಲಿ ವ್ಯಕ್ತಿ ಕಾರು ಚಲಾಯಿಸುತ್ತಿದ್ದ. ಆಗ ಸೀನು ಬಂದಿದೆ. ಸೀನುವ ಬದಲು ಮೂಗನ್ನು ಕೈಗಳಿಂದ ಮುಚ್ಚಿದ್ದಲ್ಲದೆ, ಬಾಯಿಯನ್ನೂ ಮುಚ್ಚಿಕೊಂಡಿದ್ದಾನೆ. ಅವನ ಈ ಅಸಂಬದ್ಧ ಪ್ರಯತ್ನ ಮತ್ತು ಮೂರ್ಖತನ ಅವನ ಮೇಲೆ ಭಾರಿ ಪರಿಣಾಮ ಬೀಡಿದೆ. ಸೀನನ್ನು ತಡೆಹಿಡಿದ ಕಾರಣ ಶ್ವಾಸನಾಳದಲ್ಲಿ ಸಣ್ಣ ರಂದ್ರವಾಗಿದೆ. ಆತ ತಕ್ಷಣ ಆಸ್ಪತ್ರೆಗೆ ಬಂದಿದ್ದಾನೆ. ಅಷ್ಟರಲ್ಲಾಗ್ಲೇ ಕುತ್ತಿಗೆಯ ಎರಡೂ ಭಾಗಗಳು ಊದಿಕೊಂಡಿದ್ದು, ಆತನಿಗೆ ವಿಪರೀತ ನೋವುಂಟಾಗ್ತಾಯಿತ್ತು.
ಶ್ವಾಸಕೋಶದಲ್ಲಿ ರಂಧ್ರವಾದ್ರೂ, ಉಸಿರಾಡಲು ಯಾವುದೇ ಸಮಸ್ಯೆ ಆಗಿರಲಿಲ್ಲ. ಎಲ್ಲರ ಜೊತೆ ಆರಾಮವಾಗಿ ಆತ ಮಾತನಾರುತ್ತಿದ್ದ. ಆಹಾರ ಸೇವನೆ ಮಾಡಲೂ ಆತನಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆಸ್ಪತ್ರೆಗೆ ಬಂದ ವ್ಯಕ್ತಿಗೆ ಎಕ್ಸ್ ರೇ ಮಾಡಿದ್ದಾರೆ ವೈದ್ಯರು. ಈ ವೇಳೆ ಆತನಿಗೆ ಸರ್ಜಿಕಲ್ ಎಂಫಿಸೆಮಾ ಎಂಬ ಕಾಯಿಲೆ ಇತ್ತು ಎಂಬುದು ಗೊತ್ತಾಗಿದೆ. ಅಲ್ಲಿ ಗಾಳಿಯು ದೇಹದ ಆಳವಾದ ಅಂಗಾಂಶಗಳ ಕೆಳಗೆ ಸಿಕ್ಕಿಹಾಕಿಕೊಳ್ಳುತ್ತದೆ. ಸೀನನ್ನು ಆತ ತಡೆದಿದ್ದ ಕಾರಣ, ಗಾಳಿ ಎದೆ ಮತ್ತು ಶ್ವಾಸಕೋಶದ ನಡುವೆ ಸಿಕ್ಕಿತ್ತು. ವೈದ್ಯರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಲ್ಲದೆ ಯಾವುದೇ ಶಸ್ತ್ರಚಿಕಿತ್ಸೆಗೆ ಮುಂದಾಗಿಲ್ಲ. ಅವನಿಗೆ ಪೇನ್ ಕಿಲ್ಲರ್ ಮಾತ್ರೆ ನೀಡಿದ್ದಾರೆ. ಎರಡು ದಿನಗಳ ನಂತ್ರ ವ್ಯಕ್ತಿ ಆರೋಗ್ಯ ಸುಧಾರಿಸಿದೆ. ಎರಡು ವಾರಗಳ ಕಾಲ ಯಾವುದೇ ಭಾರವಾದ ವಸ್ತುಗಳನ್ನು ಎತ್ತುವ ಕೆಲಸ ಮಾಡದಂತೆ ವೈದ್ಯರು ಆತನಿಗೆ ಸಲಹೆ ನೀಡಿದ್ದಾರೆ.
ಸರ್ಜಿಕಲ್ ಎಂಫಿಸೆಮಾ ಅಂದರೇನು? : ಸರ್ಜಿಕಲ್ ಎಂಫಿಸೆಮಾ ಎಂಬುದು ಸಬ್ಕ್ಯುಟೇನಿಯಸ್ ಎಂಫಿಸೆಮಾಕ್ಕೆ ಮತ್ತೊಂದು ಪದವಾಗಿದೆ. ಗಾಳಿ ಅಥವಾ ಅನಿಲವು ಚರ್ಮದ ಆಳವಾದ ಪದರವಾದ ಸಬ್ಕ್ಯುಟೇನಿಯಸ್ ಅಂಗಾಂಶವನ್ನು ತೂರಿಕೊಂಡಾಗ ಇದು ಸಂಭವಿಸುತ್ತದೆ.
ಮುಟ್ಟು ವೈಕಲ್ಯವಲ್ಲ; ಅದಕ್ಯಾಕೆ ಬೇಕು ಪೇಯ್ಡ್ ಲೀವ್?
2013 ರ ಸಂಶೋಧನೆಯ ಪ್ರಕಾರ, ಗಾಳಿಯು ಎದೆಯ ಮೂಲಕ ದೇಹವನ್ನು ಪ್ರವೇಶಿಸಿದರೆ, ಅದು ಭುಜಗಳು, ಕುತ್ತಿಗೆ ಮತ್ತು ಮುಖದವರೆಗೆ ಚಲಿಸಬಹುದು. ಇದು ಸಂಭವಿಸಿದಾಗ, ಒಬ್ಬ ವ್ಯಕ್ತಿಯು ತನ್ನ ಮುಖದ ನೋಟದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಅನುಭವಿಸಬಹುದು. ಕೆಲವೊಮ್ಮೆ ಇದು ಜೀವಕ್ಕೆ ಅಪಾಯಕಾರಿ ತೊಡಕುಗಳನ್ನು ಉಂಟುಮಾಡಬಹುದು. ಇದಕ್ಕೆ ಪರಿಹಾರ ಏನು? : ಸರ್ಜಿಕಲ್ ಎಂಫಿಸೆಮಾ ಸೌಮ್ಯ ಪ್ರಕರಣಗಳಲ್ಲಿ ಆರೋಗ್ಯ ವೃತ್ತಿಪರರು ವ್ಯಕ್ತಿಯ ರೋಗಲಕ್ಷಣಗಳನ್ನು ಗಮನಿಸುತ್ತಾರೆ. ಊತ ತಾನಾಗಿಯೇ ಕಡಿಮೆಯಾಗುತ್ತದೆ. ಇದಕ್ಕೆ ಹತ್ತು ದಿನಗಳ ಬೇಕು. ಗಂಭೀರ ಸ್ಥಿತಿಯಲ್ಲಿ ಗಾಳಿಯನ್ನು ತೆಗೆಯಲು ವೈದ್ಯರು ಮುಂದಾಗ್ತಾರೆ.