Asianet Suvarna News Asianet Suvarna News

Tulsi Tea Health Benefits: ತುಳಸಿ ಚಹಾ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಚಹಾ (Tea) ಸೇವನೆ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಟೀ ಫೇವರಿಟ್ ಆಗಿರುತ್ತದೆ. ಬ್ಯ್ಲಾಕ್ ಟೀ, ಮಿಲ್ಕ್ ಟೀ, ಜಿಂಜರ್ ಟೀ ಹೀಗೆ ಬೇರೆ ಬೇರೆ ರೀತಿಯ ಚಹಾವನ್ನು ಇಷ್ಟಪಟ್ಟು ಕುಡಿಯುತ್ತಾರೆ. ಅದೇ ರೀತಿ ತುಳಸಿ (Basil)ಯನ್ನು ಬಳಸಿಕೊಂಡು ತುಳಸಿ ಚಹಾವನ್ನು ತಯಾರಿಸಲಾಗುತ್ತದೆ. ತುಳಸಿ ಟೀ ಸೇವನೆಯಿಂದ ಆರೋಗ್ಯ (Health)ಕ್ಕೆ ಎಷ್ಟೊಂದು ಪ್ರಯೋಜನವಿದೆ ಗೊತ್ತಾ ?

DrinkTulsi Tea For Amazing Health Benefits
Author
Bengaluru, First Published Jan 17, 2022, 5:22 PM IST

ಭಾರತೀಯ ಸಂಸ್ಕೃತಿಯಲ್ಲಿ ತುಳಸಿ (Basil)ಗೆ ಹೆಚ್ಚಿನ ಮಹತ್ವವಿದೆ. ಹಿಂದೂಗಳಾಗಿರುವ ಪ್ರತಿಯೊಬ್ಬರ ಮನೆಯೆದುರೂ ತುಳಸಿ ಗಿಡವಿರುತ್ತದೆ. ಪವಿತ್ರ ಗಿಡವಾಗಿರುವ ತುಳಸಿಗಾಗಿ ವಿಶೇಷವಾಗಿ ತುಳಸಿ ಪೂಜೆಯೇ ನಡೆಯುತ್ತದೆ. ಆರ್ಯುವೇದ (Ayurveda) ಪದ್ಧತಿಯಲ್ಲಿಯೂ ತುಳಸಿಗೆ ಹೆಚ್ಚಿನ ಪರಿಗಣನೆಯಿದೆ. ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿ ಸೇವನೆ ಪರಿಹಾರವಾಗಿದ. ಆಯುರ್ವೇದಿಕ್ ಔಷಧಿಯಲ್ಲಿ ತುಳಸಿಯನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಸೋಂಕುಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಧುಮೇಹ ನಿಯಂತ್ರಣಕ್ಕೆ ತುಳಸಿಯ ಬಳಕೆ ಅತ್ಯುತ್ತಮವಾಗಿದೆ,

ಜ್ವರ, ಕೆಮ್ಮಿಗೆ ಅತ್ಯುತ್ತಮ ಔಷಧ
ಜ್ವರ, ಕೆಮ್ಮು, ನೆಗಡಿ, ಶೀತ ಮೊದಲಾದ ಸಮಸ್ಯೆಗಳಿಗೆ ತುಳಸಿ ಚಹಾ ಸೇವನೆ ಅತ್ಯುತ್ತಮ ಪರಿಹಾರವಾಗಿದೆ. ಬಿಸಿ ಬಿಸಿ ತುಳಸಿ ಚಹಾ (Tea) ಕುಡಿಯುವುದರಿಂದ ಈ ಸಮಸ್ಯೆಗಳು ಫಟಾಫಟ್ ಕಡಿಮೆಯಾಗುತ್ತವೆ. ನಿಯಮಿತವಾಗಿ ತುಳಸಿ ಚಹಾ ಕುಡಿಯುತ್ತಿರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸುಲಭವಾಗಿ ಜ್ವರ, ಶೀತ ಕಾಣಿಸಿಕೊಳ್ಳುವುದಿಲ್ಲ.

ತುಳಸಿ ಹಾಲು ಸೇವಿಸೋ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

ನೈಸರ್ಗಿಕ ರೋಗ ನಿರೋಧಕ
ಕೊರೋನಾ, ಓಮಿಕ್ರಾನ್ ಹರಡುವಿಕೆಯ ಮಧ್ಯೆ, ಒಂದು ಕಪ್ ಬಿಸಿ ತುಳಸಿ ಚಹಾ ಸೇವನೆ ದಿನದ ಉಲ್ಲಾಸಕರ ಆರಂಭವನ್ನು ನೀಡುವುದು. ಮಾತ್ರವಲ್ಲ, ಸೋಂಕು ಎಲ್ಲೆಡೆ ಹರಡುತ್ತಿರುವ ಈ ದಿನಗಳಲ್ಲಿ ತುಳಸಿ ಚಹಾದ ಸೇವನೆ ರೋಗ ನಿರೋಧಕ ಶಕ್ತಿ (Immunity Power)ಯನ್ನು ಹೆಚ್ಚಿಸುತ್ತದೆ. ಅತ್ಯುತ್ತಮ ಆ್ಯಂಟಿ ವೈರಲ್ ಮತ್ತು ಆ್ಯಂಟಿ ಕೊಲೆಸ್ಟ್ರಾಲ್ ಮೂಲಿಕೆಗಳಲ್ಲಿ ಒಂದಾಗಿರುವ ತುಳಸಿ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ. ತುಳಸಿ ಎಲೆಗಳು ವಿಟಮಿನ್ ಎ, ಸಿ, ಕೆ ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿಂದ ತುಂಬಿವೆ. ಇದು ಸಾಕಷ್ಟು ಪ್ರೋಟೀನ್ ಮತ್ತು ಫೈಬರ್‌ನ್ನು ಸಹ ಹೊಂದಿದೆ. ಹೀಗಾಗಿ ಸೋಂಕಿನ ವಿರುದ್ಧ ದೇಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ
ತುಳಸಿ ಚಹಾ (Tulsi Tea)ದ ಸೇವನೆ ಮನಸ್ಸಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಅತ್ಯುತ್ತಮ ಸ್ಟ್ರೆಸ್‌ಬಸ್ಟರ್ ಆಗಿ, ತುಳಸಿ ಚಹಾ ಕಾರ್ಯ ನಿರ್ವಹಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಮಾತ್ರವಲ್ಲ ಇದನ್ನು ಕುಡಿಯುವುದರಿಂದ ಖಿನ್ನತೆಯ ಸಮಸ್ಯೆಯೂ ಇಲ್ಲವಾಗುತ್ತದೆ. ತುಳಸಿಯಲ್ಲಿರುವ ಪೊಟ್ಯಾಶಿಯಮ್ ಅಂಶವು ಮೆದುಳಿನಲ್ಲಿರುವ ಸಿರೋಟೋನಿಕ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಸಹಜವಾಗಿಯೇ ಮನುಷ್ಯನ ಖಿನ್ನತೆ ಅಥವಾ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. 

Tulsi Seeds and Health: ತುಳಸಿ ಎಲೆ ಅಲ್ಲ, ಬೀಜ ಸೇವನೆಯಿಂದ ಅರೋಗ್ಯ ಸಮಸ್ಯೆ ದೂರ

ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು 
ತುಳಸಿ ಚಹಾವನ್ನು ಸಕ್ಕರೆ ಸೇರಿಸದೆ ಹಾಗೆಯೇ ಕುಡಿಯುವುದು ಮಧುಮೇಹ (Diabetes) ನಿಯಂತ್ರಣಕ್ಕೂ ಒಳ್ಳೆಯದು. ಈ ರೀತಿಯ ಚಹಾ ಸೇವನೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

ಹೃದ್ರೋಗಗಳನ್ನು ತಡೆಯುತ್ತದೆ
ತುಳಸಿಯಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಮತ್ತು ಬೀಟಾ ಕ್ಯಾರೋಟಿನ್ ಅಂಶವಿರುವುದರಿಂದ ಇದು ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ತುಳಸಿ ಚಹಾವನ್ನು ಕುಡಿಯುವುದರಿಂದ ಆರೋಗ್ಯ (Health)ಕ್ಕೆ ರಕ್ತದ ಪರಿಚಲನೆಯು ಸುಗಮವಾಗುತ್ತದೆ. ಇದರಿಂದ ಹೃದಯ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಕಡಿಮೆಯಾಗಿರುತ್ತದೆ. 

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ
ಅಜೀರ್ಣ ಸಮಸ್ಯೆಗಳಿದ್ದಾಗ ತುಳಸಿ ಚಹಾ ಅತ್ಯುತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳನ್ನು ಹೋಗಲಾಡಿಸಲು ತುಳಸಿ ಚಹಾ ಸೇವನೆ ಒಳ್ಳೆಯದು. ತುಳಸಿಯಲ್ಲಿರುವ ಉತ್ತಮ ಅಂಶಗಳು ಜಠರದ ಸಮಸ್ಯೆಯನ್ನೂ ನಿವಾರಣೆ ಮಾಡುತ್ತದೆ.

ತುಳಸಿ ಚಹಾವನ್ನು ಪ್ರತಿದಿನ ಕುಡಿಯುವುದು ಸಂಧಿವಾತದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿಯಲ್ಲಿರುವ ತೈಲದ ಅಂಶ ಬ್ಯಾಕ್ಟೀರಿಯಾ ವಿರೋಧಿಯಾಗಿದೆ ಮತ್ತು ಇದು ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ. ಕ್ಷಯರೋಗ ಮತ್ತು ಧೂಮಪಾನದಿಂದ ಶ್ವಾಸಕೋಶಕ್ಕೆ ಉಂಟಾಗುವ ಹಾನಿಯನ್ನು ನಿಲ್ಲಿಸಲು ತುಳಸಿ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

Follow Us:
Download App:
  • android
  • ios