Asianet Suvarna News Asianet Suvarna News

Kidney Stone ಬದಲಾಗಿ ಕಿಡ್ನಿಯನ್ನೇ ತೆಗೆದಿದ್ದ ವೈದ್ಯ: ಕುಟುಂಬಕ್ಕೆ 11.23 ಲಕ್ಷ ಪರಿಹಾರ!

-ಕಿಡ್ನಿ ಕಲ್ಲುಗಳ ಬದಲಾಗಿ ಕಿಡ್ನಿಯನ್ನೇ ತೆಗೆದಿದ್ದ ವೈದ್ಯ
-ಪತ್ನಿಗೆ 11.23 ಲಕ್ಷ ಪರಿಹಾರ ನೀಡುವಂತೆ ಆಸ್ಪತ್ರೆಗೆ ಆದೇಶ
-ವೈದ್ಯರ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯೇ ನೇರ ಹೊಣೆ

Doctors removed kidney instead of kidney stone in Gujarats Ahmadabad
Author
Bengaluru, First Published Oct 19, 2021, 5:27 PM IST

ಅಹಮದಾಬಾದ (ಅ. 19) : ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು (Kidney Stones) ತೆಗೆಯಲೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬನ ಮೂತ್ರಪಿಂಡವನ್ನೇ ತೆಗೆದಿರುವ ಘಟನೆ ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ ನಡೆದಿತ್ತು. ಶಸ್ರ್ತ ಚಿಕಿತ್ಸೆಯ ನಾಲ್ಕು ತಿಂಗಳ ನಂತರ ವ್ಯಕ್ತಿ ಮೃತಪಟ್ಟಿದ್ದ. 2011 ರಲ್ಲಿ ಅಹಮದಾಬಾದ್‌ನ ಬಲಸಿನೋರ್‌ನ (Balasinor) ಕೆಎಮ್‌ಜಿ ಜನರಲ್‌ ಆಸ್ಪತ್ರೆಯಲ್ಲಿ (KMG General hospital) ಈ ಘಟನೆ ನಡೆದಿದ್ದು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ತೆಗೆಯಲೆಂದು ದಾಖಲಾಗಿದ್ದ ವ್ಯಕ್ತಿಯ ಎಡಭಾಗದ ಮೂತ್ರಪಿಂಡವನ್ನೆ ತೆಗೆದ ದಾರುಣ ಘಟನೆ ನಡೆದಿತ್ತು. ಈ ಬೆನ್ನಲ್ಲೆ ಗುಜರಾತ್‌ ರಾಜ್ಯದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ( Gujarat state consumer disput redressal commission) ವ್ಯಕ್ತಿಯ ಕುಟುಂಬಕ್ಕೆ 11.23 ಲಕ್ಷ ಪರಿಹಾರ ನೀಡುವಂತೆ ಈಗ ಆದೇಶಸಿದೆ. 

Fatty Liver Disease : ನಿಮ್ಮ ಲಿವರ್ ಸಮಸ್ಯೆಗೆ ಮೂಲ ಕಾರಣವೇ ದುಶ್ಚಟ

ಕಿಡ್ನಿಯಲ್ಲಿರುವ ಕಲ್ಲು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದರು!

2011ರ ಮೇ ತಿಂಗಳಲ್ಲಿ, ಖೇಡಾ (Kheda) ಜಿಲ್ಲೆಯ ವಂಘ್ರೋಲಿ ಎಂಬ ಊರಿನ ದೇವೆಂದ್ರಭಾಯಿ ರಾವಲ್‌ (Devendrabhai Raval) ಮೂತ್ರವನ್ನು ಹೊರಹಾಕಲು ಕಷ್ಟವಾಗುತ್ತಿದ್ದು, ತೀವ್ರ ಬೆನ್ನು ನೋವು ಎಂದು  ಕೆಎಮ್‌ಜಿ ಜನರಲ್‌ ಆಸ್ಪತ್ರೆಯ ಡಾ. ಶಿವುಭಾಯಿ ಪಟೇಲ್‌ರ (Shivubhai patel) ಬಳಿಗೆ ಬಂದಿದ್ದರು. ಪರೀಕ್ಷೆ ಮಾಡಲಾಗಿ ದೇವೆಂದ್ರರ ಎಡಭಾಗದ ಕಿಡ್ನಿಯಲ್ಲಿ 14 mm ನಷ್ಟು ಕಲ್ಲು ಇರುವುದನ್ನು ಪತ್ತೆ ಹಚ್ಚಲಾಗಿತ್ತು.

ಕ್ಯಾನ್ಸರ್‌ಗೆ ಕಾರಣವಾಗೋ ಆಹಾರಗಳಿವು, ಸೇವಿಸುವಾಗ ಎಚ್ಚರಿಕೆ!

ದೇವೆಂದ್ರರಿಗೆ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿದ್ದರೂ ಕೂಡ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದ. 2011 ಸೆಪ್ಟೆಂಬರ್‌ 3 ರಂದು ಶಸ್ತ್ರಚಿಕಿತ್ಸೆ (Operation) ಮಾಡಲಾಗಿತ್ತು. ಆದರೆ ರೋಗಿಯ ಹಿತ ದೃಷ್ಟಿಯಿಂದ ಕಿಡ್ನಿಯಲ್ಲಿರುವ ಕಲ್ಲುಗಳ ಬದಲಾಗಿ ಕಿಡ್ನಿಯನ್ನೆ ತೆಗೆಯಲಾಗಿದೆ ಎಂಬ ವೈದ್ಯರ ಹೇಳಿಕೆ ಕುಟುಂಬದವರನ್ನು ಆತಂಕಕ್ಕೆ ಎಡೆ ಮಾಡಿತ್ತು. ಕಿಡ್ನಿಯಲ್ಲಿರುವ ಕಲ್ಲುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯುವ ಬದಲಾಗಿ ಎಡಭಾಗದ ಕಿಡ್ನಿಯನ್ನೇ ವೈದ್ಯರು ತೆಗೆದಿದ್ದರು.

ಆಸ್ಪತ್ರೆಯೇ ನೇರ ಹೊಣೆ!

ಈ ಘಟನೆಯ ನಂತರ ಇನ್ನಷ್ಟು ತೊಂದರೆಗೊಳಗಾದ ದೇವೆಂದ್ರರನ್ನು ನಾಂದಿಯಾಡ್‌ನ ಕಿಡ್ನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗ್ಯೂ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದ್ದರಿಂದ ಅಹಮದಾಬಾದ್‌ನ್ IKDRC ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಿಸದೆ 2012ರ ಜನವರಿ 08 ರಂದು ದೇವೆಂದ್ರ ಅಸುನೀಗಿದ್ದರು. ಇದಾದ ನಂತರ ದೇವೆಂದ್ರರ ಪತ್ನಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆಯೋಗವು ವೈದ್ಯ, ಆಸ್ಪತ್ರೆ ಮತ್ತು ವಿಮಾ ಕಂಪನಿ ಮೂವರು ಸೇರಿ ಮೃತರ ಕುಟುಂಬಕ್ಕೆ 11.23 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. 

ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತೆ ಸ್ತನ ಕ್ಯಾನ್ಸರ್

ಜಿಲ್ಲಾ ಅಯೋಗದ ಈ ನಿರ್ಧಾರದಂತೆ ವಿಮಾ ಕಂಪನಿ ಮತ್ತು ಆಸ್ಪತ್ರೆ ಇಬ್ಬರ ನಡುವೆ ಪರಿಹಾರ ನೀಡುವವರ‍್ಯಾರು ಎಂದು ನಿರ್ಧಾರವಾಗದೆ ಈ ಪ್ರಕರಣವು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಬಳಿ ಬಂದಿತ್ತು. ರಾಜ್ಯ ಆಯೋಗದ ಪ್ರಕಾರ ಇದು ವೈದ್ಯರ ನಿರ್ಲಕ್ಷ್ಯದಿಂದ ಉಂಟಾದ ಪ್ರಕರಣವಾದದ್ದರಿಂದ ಸಂಪೂರ್ಣ ಹಣವನ್ನು ಆಸ್ಪತ್ರೆಯೆ ನೀಡಬೇಕು ಎಂದು ಆದೇಶಿಸಿತು. ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಹೀಗಾಗಿದ್ದರಿಂದ ಇದಕ್ಕೆ ನೇರವಾಗಿ ಆಸ್ಪತ್ರೆಯೆ ಹೊಣೆಯಾಗುತ್ತದೆ ಎಂದು ಆಯೋಗ ತಿಳಿಸಿದೆ. ಅಲ್ಲದೇ 11.23 ಲಕ್ಷ ಪರಿಹಾರದ ಜತೆಗೆ  2012 ರಿಂದ ಇಲ್ಲಿವರೆಗಿನ 7.5% ಬಡ್ಡಿಯನ್ನು ಸೇರಿಸಿ ಪರಿಹಾರ ನೀಡುವಂತೆ ಆದೇಶಿಸಿದೆ. 

Follow Us:
Download App:
  • android
  • ios