ವೈದ್ಯರ ವಿರುದ್ಧ ಕೂಗಾಡಿದ್ರೆ ನಿಮಗೆ ನಷ್ಟ.. ಡಾಕ್ಟರ್ ರಕ್ಷಣೆಗೆ ಹೊಸ ನಿಯಮ
ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ, ರೋಗಿ ಸಾವಿಗೆ ವೈದ್ಯ ಕಾರಣ ಎಂಬೆಲ್ಲ ದೂರಿನ ಮೇಲೆ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸೋದನ್ನು ನಾವು ನೋಡಿದ್ದೇವೆ. ಆದ್ರೆ ಇನ್ಮುಂದೆ ಇದೆಲ್ಲ ನಡೆಯೋದಿಲ್ಲ. ನೀವು ಕಿರಿಕ್ ಮಾಡಿದ್ರೆ ರೋಗಿಗೆ ಚಿಕಿತ್ಸೆ ಕೊಡಿಸೋದು ಕಷ್ಟವಾಗ್ಬಹುದು.
ವೈದ್ಯರನ್ನು ನಮ್ಮಲ್ಲಿ ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಮರು ಜೀವ ನೀಡಿದ್ರೆ ವೈದ್ಯರನ್ನು ದೇವರಂತೆ ಕಾಣುವ ಜನರು ರೋಗಿ ಸಾವನ್ನಪ್ಪಿದ್ರೆ ವೈದ್ಯರನ್ನೇ ವಿಲನ್ ರೀತಿಯಲ್ಲಿ ನೋಡ್ತಾರೆ. ಕಾರಣ, ಪರಿಣಾಮಗಳನ್ನು ಸರಿಯಾಗಿ ತಿಳಿಯದೆ, ರೋಗಿ ಸಾವಿಗೆ ವೈದ್ಯರೇ ಕಾರಣವೆಂದು ದೂರುತ್ತಾರೆ. ಇದೇ ವಿಷ್ಯಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸುವ, ಕೆಟ್ಟ ಶಬ್ಧಗಳಿಂದ ನಿಂದಿಸುವ ಅನೇಕ ಜನರಿದ್ದಾರೆ. ರೋಗಿಗಳು ಹಾಗೂ ಸಂಬಂಧಿಕರ ಈ ವರ್ತನೆಯಿಂದ ವೈದ್ಯರು ಭಯದಲ್ಲಿ ಜೀವನ ನಡೆಸುವಂತಾಗಿದೆ. ರೋಗಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೆ ರಕ್ಷಣೆ ನೀಡುವ ಸ್ಥಿತಿ ಇದೆ.
ಎನ್ ಎಂಸಿ (NMC) ಯಿಂದ ಮಹತ್ವದ ಅಧಿಸೂಚನೆ : ವೈದ್ಯರ ಈ ಪರಿಸ್ಥಿತಿಯನ್ನು ಅವಲೋಕಿಸಿರುವ ಎನ್ ಎಂಸಿ ಅಂದರೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳುವ ರೋಗಿಗಳು ಮತ್ತು ಅವರ ಸಂಬಂಧಿಕರು ವೈದ್ಯ (Doctor ) ರ ಮೇಲೆ ಅನುಚಿತ ವರ್ತನೆ ಮತ್ತು ಹಿಂಸಾಚಾರ ನಡೆಸದಂತೆ ಎನ್‌ಎಂಸಿ ಅಧಿಸೂಚನೆ ಹೊರಡಿಸಿದೆ. ವೈದ್ಯರ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಮಾಡಲಾಗಿದೆ. ಯಾವುದೇ ರೋಗಿ (Patient) ಅಥವಾ ಆತನ ಸಂಬಂಧಿ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸುವುದು, ಜಗಳವಾಡುವುದು ಅಥವಾ ನಿಂದನೆ ಮಾಡುವುದು ಮಾಡಿದ್ರೆ ಅವರ ವಿರುದ್ಧ ವೈದ್ಯರು ನೇರವಾಗಿ ಕ್ರಮ ಕೈಗೊಳ್ಳಬಹುದು. ರೋಗಿಗೆ ಚಿಕಿತ್ಸೆ ನೀಡಲು ಸಹ ನಿರಾಕರಿಸಬಹುದು ಎಂದು ಇದ್ರಲ್ಲಿ ಹೇಳಲಾಗಿದೆ.
ಸ್ತನಪಾನ ಮಾಡೋದ್ರಿಂದ ನಿಜಕ್ಕೂ ತೂಕ ಇಳಿಯುತ್ತಾ?
ಕಳೆದ ಕೆಲ ದಿನಗಳಿಂದ ವೈದ್ಯರ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರ್ತಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಅಧಿಸೂಚನೆ ಪ್ರಕಾರ, ರೋಗಿಗಳು ಅಥವಾ ಅವರ ಸಂಬಂಧಿಕರ ವರ್ತನೆಯ ಬಗ್ಗೆ ವೈದ್ಯರು ರಾಷ್ಟ್ರೀಯ ಆಯೋಗಕ್ಕೂ ದೂರು ನೀಡಬಹುದು. ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ರೋಗಿಗೆ ಹೇಳ್ಬಹುದು. ಈ ನಿಯಮಗಳನ್ನು ಭಾರತೀಯ ವೈದ್ಯಕೀಯ ಮಂಡಳಿಯ (MCI) ವೈದ್ಯಕೀಯ ನೀತಿ ಸಂಹಿತೆ 2002 ರಲ್ಲಿ ಬದಲಾಯಿಸಲಾಗುತ್ತದೆ. ಈ ನಿಯಮದ ಅಡಿಯಲ್ಲಿ, ವೈದ್ಯರಿಗೆ ಇನ್ನೊಂದು ಸೌಲಭ್ಯ ನೀಡಲಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಹಕ್ಕನ್ನು ವೈದ್ಯರು ಪಡೆಯುತ್ತಾರೆ. ಈ ಹಕ್ಕನ್ನು ಇದೆ ಮೊದಲಬಾರಿ ವೈದ್ಯರಿಗೆ ನೀಡಲಾಗ್ತಾ ಇದೆ.
Health Tips: ವಾಯುಮಾಲಿನ್ಯದಿಂದ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾ ಬರೋದು ಎಲ್ಲಿಂದ?
ವೈದ್ಯರಿಗಿದೆ ಸಂಪೂರ್ಣ ಅಧಿಕಾರ : ಅಧಿಸೂಚನೆಯ ಪ್ರಕಾರ, ಇನ್ಮುಂದೆ ವೈದ್ಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ರೋಗಿಯನ್ನು ಆಯ್ಕೆ ಮಾಡಬಹುದು. ಯಾವ ರೋಗಿಗೆ ಚಿಕಿತ್ಸೆ ನೀಡಬೇಕೆ ಮತ್ತು ಯಾವ ರೋಗಿಗೆ ಚಿಕಿತ್ಸೆ ನೀಡಬಾರದು ಎಂಬುದನ್ನು ವೈದ್ಯರು ಸ್ವತಃ ನಿರ್ಧರಿಸಬಹುದು. ತುರ್ತು ಸಂದರ್ಭಗಳಲ್ಲಿ ಮಾತ್ರ ರೋಗಿ ಯಾರೇ ಆಗಿರಲಿ, ವೈದ್ಯರು ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ವೈದ್ಯರಿಗೆ ಈ ನಿಯಮ : ವೈದ್ಯರು ಸರಿಯಾದ ವರದಿಯನ್ನು ರೋಗಿಯ ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಕು ಎಂದು ರಾಷ್ಟ್ರೀಯ ಆಯೋಗ ಹೇಳಿದೆ. ರೋಗಿಯ ನಿಖರವಾದ ಸ್ಥಿತಿಯ ಬಗ್ಗೆ ಅವರಿಗೆ ತಿಳಿಸಬೇಕು. ಚಿಕಿತ್ಸೆಗೆ ತಗಲುವ ವೆಚ್ಚದ ಸಂಪೂರ್ಣ ಮಾಹಿತಿಯನ್ನು ರೋಗಿ ಹಾಗೂ ರೋಗಿ ಸಂಬಂಧಿಗೆ ನೀಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಮೇ 11, 2023 ರಂದು, ಕೇರಳದಲ್ಲಿ ಮಹಿಳಾ ವೈದ್ಯೆಯೊಬ್ಬರ ಹತ್ಯೆ ನಡೆದಿತ್ತು. ರೋಗಿ, ವೈದ್ಯೆಯ ಹತ್ಯೆಗೈದಿದ್ದ. ಇದಕ್ಕೂ ಮುನ್ನವೂ ವೈದ್ಯರ ಮೇಲೆ ಅನುಚಿತವಾಗಿ ವರ್ತಿಸಿದ, ರೋಗಿ ಹಾಗೂ ಆತನ ಸಂಬಂಧಿಕರು ಹಲ್ಲೆ ನಡೆಸಿದ ಅನೇಕ ಘಟನೆಗಳು ನಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿಸೂಚನೆ ಹೊರಡಿಸಿದೆ.