Asianet Suvarna News Asianet Suvarna News

'ಆ ದಿನಗಳ' ಹೊಟ್ಟೆನೋವಿಗೆ ಪಪ್ಪಾಯ ಬೀಜೌಷಧ

ಸಾಮಾನ್ಯವಾಗಿ ಪಪ್ಪಾಯ ಹಣ್ಣನ್ನು ಕತ್ತರಿಸಿದ ಬಳಿಕ ಅದರೊಳಗಿರುವ ಬೀಜಗಳನ್ನು ಎಸೆಯಲಾಗುತ್ತದೆ. ಆದರೆ, ಅವನ್ನು ಎಸೆಯದಿರಲು ಎಷ್ಟೆಲ್ಲ ಕಾರಣಗಳಿವೆ ಗೊತ್ತಾ?

Do you know the health benefits of papaya seeds
Author
Bangalore, First Published May 25, 2020, 2:59 PM IST

ಪಪ್ಪಾಯ ಹಣ್ಣನ್ನು ಇಷ್ಟ ಪಡುವಷ್ಟೇ, ದೂರ ತಳ್ಳುವವರೂ ಇದ್ದಾರೆ. ಎಷ್ಟೋ ಜನ ಹಣ್ಣು ಇಷ್ಟವಿಲ್ಲದಿದ್ದರೂ ತ್ವಚೆಗೆ ಒಳ್ಳೆಯದೆಂದು ಸೇವಿಸುತ್ತಾರೆ. ಆದರೆ, ಪಪ್ಪಾಯದ ಪಾಪದ ಬೀಜಗಳು ಮಾತ್ರ ಅನುಪಯುಕ್ತ ಎಂದು ಹಸಿಕಸದ ಬುಟ್ಟಿ ಸೇರುತ್ತವೆ. ಆದರೆ, ಪಪ್ಪಾಯದ ಆರೋಗ್ಯ ಲಾಭಗಳು ಎಷ್ಟಿವೆಯೋ ಅದಕ್ಕೆ ಸಮನಾಗಿ ಪಪ್ಪಾಯ ಬೀಜಗಳ ಆರೋಗ್ಯ ಲಾಭಗಳಿವೆ. ಇವುಗಳಲ್ಲಿರುವ ಹಲವಾರಿ  ಮೈಕ್ರೋನ್ಯೂಟ್ರಿಯೆಂಟ್ಸ್‌ಗಳು ದೇಹದ ಸಣ್ಣಪುಟ್ಟ ಕೊರತೆಗಳನ್ನು ನೀಗಿಸುತ್ತವೆ. ಆ್ಯಂಟಿಆಕ್ಸಿಡೆಂಟ್ಸ್ ಹಾಗೂ ಫೈಬರ್ ಹೇರಳವಾಗಿವೆ. ಹಾಗಂಥ  ಅತಿಯಾಗಿ ಸೇವಿಸದೆ ಒಂದು ಮಿತಿಯಲ್ಲಿ ಸೇವಿಸುವುದನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಹಾಗಿದ್ದರೆ, ಪಪ್ಪಾಯದ ಆರೋಗ್ಯ ಲಾಭಗಳೇನು ನೋಡೋಣ. 

ಈ ವಯಸ್ಸಲ್ಲೂ ಕರಿಷ್ಮಾ ಕಪೂರ್‌ ಹೊಳೆಯುವ ಚರ್ಮದ ರಹಸ್ಯ ಗೊತ್ತಾ?

ಅಜೀರ್ಣ ಸಮಸ್ಯೆ
ಅಜೀರ್ಣ, ಮಲಬದ್ಧತೆ ಸಮಸ್ಯೆಗಳಿದ್ದಲ್ಲಿ ಪಪ್ಪಾಯದ ಬೀಜ ಸೇವಿಸಿ ನೋಡಿ. ಇವುಗಳಲ್ಲಿರುವ ಪ್ರೋಟಿಯೋಲಿಟಿಕ್ ಎಂಜೈಮ್ ಕರುಳಿನ ಆರೋಗ್ಯ ಕಾಪಾಡುವ ಜೊತೆಗೆ ಕರುಳಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ, ಪ್ಯಾರಾಸೈಟ್‌ಗಳನ್ನು ದೇಹದಿಂದ ಹೊರದಬ್ಬಿ ಅಜೀರ್ಣ ಸಮಸ್ಯೆಗಳಾಗದಂತೆ ನೋಡಿಕೊಳ್ಳುತ್ತದೆ. 

ಪೀರಿಯಡ್ಸ್ ಪೇನ್
ಮುಟ್ಟಿನ ಹೊಟ್ಟೆನೋವನ್ನು ಹೋಗಿಸುವ ತಾಕತ್ತು ಪಪ್ಪಾಯ ಬೀಜಗಳಿಗಿದೆ. ಪ್ರತಿ ತಿಂಗಳು ಅತಿಯಾದ ಹೊಟ್ಟೆ ನೋವು ನಿಮ್ಮನ್ನು ಬಾಧಿಸುತ್ತಿದ್ದಲ್ಲಿ ಪಪ್ಪಾಯ ಬೀಜಗಳ ಸೇವನೆ ಮಾಡಿ ನೋಡಿ. ಸ್ನಾಯುಸೆಳೆತವನ್ನೂ ತಗ್ಗಿಸುತ್ತವೆ. 

Do you know the health benefits of papaya seeds

ಅನಾರೋಗ್ಯ
ಪಪ್ಪಾಯ ಬೀಜಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಶ್ರೀಮಂತವಾಗಿರುವುದರಿಂದ ಅವು ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡಬಲ್ಲವು. ಹಾಗಾಗಿ, ಶೀತ, ಕೆಮ್ಮು ಹಾಗೂ ಅಂಥ ಸಣ್ಣಪುಟ್ಟ ಅನಾರೋಗ್ಯಗಳನ್ನು ತಡೆದು ನಿಮ್ಮನ್ನು ಹೆಚ್ಚು ಆರೋಗ್ಯದಲ್ಲಿರಿಸುತ್ತವೆ. 

ತೂಕ 
ಮೊದಲೇ ಹೇಳಿದಂತೆ ಪಪ್ಪಾಯ ಬೀಜದಲ್ಲಿ ಫೈಬರ್ ಅಧಿಕವಾಗಿರುತ್ತದೆ.  ಹಾಗಾಗಿ, ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ. ಅವು ರಕ್ತದೊತ್ತಡವನ್ನು ಸರಿಯಾಗಿ ನಿಭಾಯಿಸಿ ಹೃದಯದ ಆರೋಗ್ಯ ನೋಡಿಕೊಳ್ಳುತ್ತವೆ.  

ವೀರ್ಯ ಹೆಚ್ಚಳ
ಪಪ್ಪಾಯ ಬೀಜವು ಫಲವತ್ತತೆ ಹೆಚ್ಚಿಸುತ್ತದೆ, ಅದರಲ್ಲೂ ವಿಶೇಷವಾಗಿ ಪುರುಷರಲ್ಲಿ ವೀರ್ಯ ಉತ್ಪಾದನೆ ಹೆಚ್ಚಿಸುತ್ತದೆ. ಇನ್ನು ಮಹಿಳೆಯರಲ್ಲಿ ಎಗ್ ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತವೆ. 

ಧ್ಯಾನದಿಂದ ಆರೋಗ್ಯ, ನೆಮ್ಮದಿ: ಇಂದು ವಿಶ್ವ ಧ್ಯಾನ ದಿನ

ಡೆಂಘೆಗೆ ಔಷಧ
ಡೆಂಘೆ  ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಪಪ್ಪಾಯ ಬೀಜಗಳು ಈ ಜ್ವರ ಬೇಗ ಶಮನವಾಗಲು ಸಹಾಯ ಮಾಡುತ್ತವೆ. ಪಪ್ಪಾಯ ಬೀಜಗಳು ಹಾಗೂ ಎಲೆ ಸೇವನೆಯಿಂದ ರಕ್ತದಲ್ಲಿ ಪ್ಲೇಟ್‌ಲೆಟ್ಸ್ ಹೆಚ್ಚಾಗಿ ಬೇಗ ಗುಣಮುಖರಾಗಲು ಕಾರಣವಾಗುತ್ತವೆ. 

Do you know the health benefits of papaya seeds

ತಿನ್ನುವುದು ಹೇಗೆ ?
ಪಪ್ಪಾಯ ಬೀಜದಿಂದ ಇಷ್ಟೆಲ್ಲ ಆರೋಗ್ಯ ಲಾಭಗಳುಂಟು ಸಮ, ಆದರೆ ಅವನ್ನು ಸೇವಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಏಕೆಂದರೆ ಈ ಬೀಜ ಕಹಿಯಿರುತ್ತದೆ. ಹಾಗಾಗಿ, ಅವನ್ನು ನೇರವಾಗಿ ತಿನ್ನುವುದು ಸಾಧ್ಯವಿಲ್ಲ. ಬದಲಿಗೆ ಪಪ್ಪಾಯ ಬೀಜಗಳನ್ನು ಮಿಕ್ಸರ್‌ನಲ್ಲಿ ಬ್ಲೆಂಡ್ ಮಾಡಿ ಜ್ಯೂಸ್, ಸ್ಮೂತೀಸ್ ಜೊತೆ ಸೇರಿಸಿ ಸೇವಿಸಬಹುದು. ಕಹಿಯನ್ನು ಹೊಡೆಯಲು ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು. ಇಲ್ಲದಿದ್ದಲ್ಲಿ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ರೊಟ್ಟಿ, ಚಪಾತಿ, ಕಷಾಯ ಮುಂತಾದವಕ್ಕೆ ಸೇರಿಸಿ ಸೇವಿಸಿ. 

Follow Us:
Download App:
  • android
  • ios