ಕಳೆದ 63 ದಿನಗಳಲ್ಲಿ ಭಾರತದಲ್ಲಿ ಅತ್ಯಂತ ಕಡಿಮೆ ಕೊರೋನಾ ಕೇಸುಗಳು ಪತ್ತೆಯಾಗಿದ್ದು, ಕಳೆದ 77 ದಿನದಲ್ಲಿ ಕನಿಷ್ಠ ಸಾವು ಸಂಭವಿಸಿದೆ. ಸೆಪ್ಟೆಂಬರ್‌ನಲ್ಲಿ ತಾರಕಕ್ಕೇರಿಸ ಕೊರೋನಾ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ.

ಆಗಸ್ಟ್ 10ರಿಂದ ನೋಡಿದಂತೆ ಅಕ್ಟೋಬರ್ 12 ಸೋಮವಾರ 53,082 ಪ್ರಕರಣಗಳು ಕಂಡು ಬಂದಿವೆ. 51,296 ಪ್ರಕರಣ ಪತ್ತೆಯಾಗಿದೆ. ಜುಲೈನಲ್ಲಿ 638 ಸಾವು ಸಂಭವಿಸಿದ ನಂತರ ಇದೇ ಮೊದಲ ಬಾರಿ 696 ಸಾವು ಸಂಭವಿಸಿದೆ.

ಹೆರಿಗೆಯಾಗಿ 14 ದಿನಕ್ಕೆ ಕರ್ತವ್ಯಕ್ಕೆ ಮಗುವಿನ ಜೊತೆ ಹಾಜರಾಗ್ತಿದ್ದಾರೆ IAS ಅಧಿಕಾರಿ

ಸಾಂಕ್ರಾಮಿಕ ರೋಗ ಹರಡಿದ ನಂತರ ಸೋಮವಾರವೇ ಅತ್ಯಂದ ಕಡಿಮೆ ಅಂಕಿ ಅಂಶಗಳು ಕಂಡು ಬಂದಿದ್ದರೂ ಭಾನುವಾರದಂದು ಕಡಿಮೆ ಪರೀಕ್ಷೆ ನಡೆಯುವುದರಿಂದ ಹೀಗಾಗಿರಬಹುದು ಎಂದಿದ್ದಾರೆ ತಜ್ಞರು. ಅಕ್ಟೋಬರ್ 11 ಭಾನುವಾರ ದೇಶಾದ್ಯಂರ 9,94,851 ಜನ ಕೊರೋನಾ ತಪಾಸಣೆಗೊಳಪಟ್ಟಿದ್ದಾರೆ ಎನ್ನುತ್ತದೆ covid19.org.

ಹಲವಾರು ರಾಜ್ಯಗಳಲ್ಲಿ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಕರ್ನಾಟಕ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೊರೋನಾ ಸಂಖ್ಯೆ ಅಪಾಯಮಟ್ಟದಲ್ಲಿದೆ.

 

ಕರ್ನಾಟಕದಲ್ಲಿ 7,606 ಹೊಸ ಪ್ರಕರಣಗಳು ಕಂಡು ಬಂದಿದ್ದು, ಮಹಾರಾಷ್ಟ್ರದಲ್ಲಿ 7,089ಕ್ಕಿಂತಲೂ ಹೆಚ್ಚಾಗಿದೆ. ಕರ್ನಾಟಕ ಕಳೆದ ಕೆಲವು ತಿಂಗಳಲ್ಲಿ ಇದೇ ಮೊದಲ ಬಾರಿ ಮಹಾರಾಷ್ಟ್ರಕ್ಕಿಂತ ಹೆಚ್ಚು ಪ್ರಕರಣಗಳನ್ನು ಕಂಡಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರದ ಸ್ಥಾನದಲ್ಲಿದೆ ಕರ್ನಾಟಕ.

ಕೇರಳದಲ್ಲಿ ಸೋಮವಾರ 5,930 ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಭಾನುವಾರ 9 ಸಾವಿರ ಪ್ರಕರಣ ಪತ್ತೆಯಾಗಿದ್ದು ಇದಕ್ಕಿಂತ ಕಡಿಮೆ ಸೋಮವಾರ ಕಂಡು ಬಂದಿದೆ. ಎರಡು ತಿಂಗಳಿಂದ ಐದಂಕೆಯಲ್ಲಿ ಕೇಸುಗಳು ಪತ್ತೆಯಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಇದೇ ಮೊದಲು 7,089 ಪ್ರಕರಣ ಪತ್ತೆಯಾಗಿತ್ತು. ಮುಂಬೈಯಲ್ಲಿಯೂ ಕೊರೋನಾ ಸಂಖ್ಯೆ 1620ರಷ್ಟು ಇಳಿಕೆಯಾಗಿದೆ. ಸೋಮವಾರ ಕಡಿಮೆ ಸಿಬ್ಬಂದಿ ಇರುವುದರಿಂದ ಡಾಟಾ ಅಪ್‌ಡೇಟ್ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು