ಇಂದು ಚಾಕಲೇಟ್ ಡೇ. ನಿಮ್ಮ ಗೆಳೆಯ/ತಿಗೆ ಚಾಕೋಲೇಟ್ ನೀಡಿ ವಿಶ್ ಮಾಡಿ. ಯಾಕೆ ಚಾಕಲೇಟ್ ತಿನ್ನಬೇಕು? ಚಾಕಲೇಟ್‌ನಲ್ಲಿ ಯಾವೆಲ್ಲ ಆರೋಗ್ಯಕರ ವಿಷಯಗಳು ಅಡಗಿವೆ ತಿಳಿಯೋಣ ಬನ್ನಿ.
'ಚಾಕಲೇಟ್ ಡೇ' ಹೆಸರು ಕೇಳಿದರೇನೇ ಎಷ್ಟು ಸ್ವೀಟ್ ಅನಿಸುತ್ತದೆ. ಪ್ರೇಮಿಗಳಿಗೆ ಚಾಕಲೇಟ್ ಡೇ ಬಹಳ ವಿಶೇಷ ದಿನ. ಸಾಮಾನ್ಯವಾಗಿ ಹೆಚ್ಚಿನ ಜನರು ಚಾಕಲೇಟ್ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ನೀವು ಸಣ್ಣವರಿರುವಾಗ ಹಿರಿಯರು ಹೇಳಿರುವ ಮಾತುಗಳನ್ನು ಕೇಳಿರುತ್ತೀರಿ. ಹೆಚ್ಚು ಚಾಕಲೇಟ್ ತಿಂದರೆ ಹಲ್ಲುಗಳು ಹುಳುಕಾಗಬಹುದು ಎಂದು. ಆದರೆ ಚಾಕಲೇಟ್ ತಿನ್ನುವುದರಿಂದ ಆರೋಗ್ಯ ಹೆಚ್ಚುತ್ತದೆ.
ಚಾಕಲೇಟು (Chocolate)
ಚಾಕಲೇಟು ಹೆಸರು ಕೇಳಿದರೇ ಬಾಯಲ್ಲಿ ನೀರೂರುತ್ತದೆ ಅಲ್ಲವೆ? ಚಾಕೊಲೇಟ್ಗೆ ಬಹಳ ಹಿಂದಿನ ಇತಿಹಾಸವಿದೆ. ಆಗ ಚಾಕಲೇಟ್ ಅಂದಕೂಡಲೇ ಅದು ಸಣ್ಣ ಮಕ್ಕಳು ತಿನ್ನುವ ತಿನಿಸು ಎಂದು ಭಾವಿಸಲಾಗುತ್ತಿತ್ತು. ಆದರೆ, ಇದೀಗ ಇದೊಂದು ಬಹಳ ಸಾಮಾನ್ಯ ಸಿಹಿತಿಂಡಿ ಆಗಿದೆ. ಚಾಕಲೇಟ್ ಅನ್ನು ಕೋಕೋ ಬೀನ್ಸ್‌ನಿಂದ ತಯಾರಿಸಲಾಗುತ್ತದೆ. ಇದು ಶ್ರೀಮಂತರು ಮಾತ್ರ ತಿನ್ನುವ ತಿನಿಸು ಎಂದಾಗಿತ್ತು. ಆದರೆ ಇದೀಗ ಸಾಮಾನ್ಯರು ಕೂಡ ಇಷ್ಟಪಟ್ಟು ಕೈಗೆ ಎಟಕುವ ಬೆಲೆಯಲ್ಲಿ ಖರೀದಿಸಿ (Buy) ತಿನ್ನಬಹುದು. ಹಿಂದೆ ತಿನ್ನುತ್ತಿದ್ದ ಚಾಕಲೇಟುಗಳಲ್ಲಿ ಸಿಹಿಯಾಗಿ ಹೆಚ್ಚಿರುತ್ತಿತ್ತು. ಆದರೆ ಇದೀಗ ಡಾರ್ಕ್ ಚಾಕಲೇಟ್ ಟ್ರೆಂಡ್ ನಲ್ಲಿದೆ. ಇನ್ನೂ ಹೇಳಬೇಕೆಂದರೆ ಚಾಕಲೇಟ್ ತಮ್ಮ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಯ (Gift) ಸಂಕೇತವಾಗಿದೆ. ಇದೆಲ್ಲವನ್ನು ಹೊರತುಪಡಿಸಿ ಚಾಕಲೇಟ್ ಮಾನಸಿಕ ಆರೋಗ್ಯ ವೃದ್ಧಿಸುವುದಕ್ಕೂ ಕೂಡ ಸಹಕಾರಿಯಾಗಿದೆ.
Food Tips: ಬೆಣ್ಣೆ ನೋಡಿದ್ರೇನೆ ಬೆಚ್ಚಿ ಬಿಳ್ತಾರೆ, ಇದು ಪೀನಟ್ ಬಟರ್ ಫೋಬಿಯಾ !
ಚಾಕಲೇಟ್ ನಲ್ಲಿ ಆಂಟಿಆಕ್ಸಿಡೆಂಟ್ಸ್(Antioxidant)
ತಜ್ಞರು ಹೇಳುವ ಪ್ರಕಾರ, ಚಾಕಲೇಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಬೇರೆಲ್ಲ ಆಹಾರಗಳಿಗೆ ಹೋಲಿಸಿದರೆ ಹೆಚ್ಚಿರುತ್ತದೆ. ಈ ಕಾರಣದಿಂದಾಗಿ ಚಾಕಲೇಟ್ ನಿಮ್ಮ ದೇಹದಲ್ಲಿರುವ ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಚಾಕಲೇಟಿನಿಂದಾಗಿ ಮಧುಮೇಹದ ಸಮಸ್ಯೆ ಕೂಡ ನಿಧಾನವಾಗಿ ಕಡಿಮೆಯಾಗುತ್ತದೆ. ಸಿಹಿ ಚಾಕಲೇಟುಗಳಿಗಿಂತ ಡಾರ್ಕ್ ಚಾಕಲೇಟ್ ಗಳು ಆರೋಗ್ಯವನ್ನು ವೃದ್ಧಿಸುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ (Cholestrol)
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಚಾಕಲೇಟ್ ಒಂದು ಒಳ್ಳೆಯ ಮಾರ್ಗ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಕೋಕೋ ಬಟರ್ ನಲ್ಲಿ ಮೋನುಸ್ಯಾಚುರೇಟೆಡ್ ಕೊಬ್ಬಿನ ಅಂಶ ಇರುವುದರಿಂದ ಇದು ಆಲಿವ್ ಆಯಿಲ್ ನಂತೆ ಕೆಲಸ ಮಾಡುತ್ತದೆ. ಅನಾವಶ್ಯಕ ಕೊಲೆಸ್ಟ್ರಾಲ್ ನಿಯಂತ್ರಣ ಮಾಡಲು ಚಾಕಲೇಟ್ ಸಹಾಯ ಮಾಡುತ್ತದೆ. ಆದರೆ ಅದಕ್ಕಾಗಿ ನೀವು ಡಾರ್ಕ್ ಚಾಕಲೇಟ್ ಹೆಚ್ಚಾಗಿ ಬಳಸಬೇಕು. ಸಿಹಿ ಚಾಕಲೇಟ್ ನಲ್ಲಿ ಈ ಅಂಶ ಕಡಿಮೆ ಇರುತ್ತದೆ.
ಮೂಡ್ ಚಿಲ್ ಮಾಡುತ್ತದೆ (Mood chilling)
ನೀವು ಗಮನಿಸಿರಬಹುದು, ನೀವು ಬೇಸರದಲ್ಲಿದ್ದಾಗ ಚಾಕಲೇಟ್ ತಿನ್ನುವುದರಿಂದ ಮನಸ್ಸಿಗೆ ಸ್ವಲ್ಪ ಹಿತ ಅನಿಸುತ್ತದೆ. ಅದರ ಪೇಸ್ಟ್ ನಿಂದಾಗಿ ಮಾತ್ರ ನಿಮಗೆ ಈ ಸಂತೋಷ ಸಿಗುವುದಿಲ್ಲ. ಜೊತೆಗೆ ಚಾಕಲೇಟ್ ನಲ್ಲಿರುವ ನ್ಯೂಟ್ರಿಯೆಂಟ್ಸ್ ನಿಂದಾಗಿ ಕೂಡ ನಿಮ್ಮ ಮೂಡ್ ಪೋಸಿಟಿವ್ (Positive) ರೀತಿಯಲ್ಲಿ ಬದಲಾಗುತ್ತದೆ. ನಿಮ್ಮ ಸಂಗಾತಿಯ ಮೂಡನ್ನು ಸರಿ ಹೋಗಿಸಲು ಚಾಕಲೇಟ್ ಒಳ್ಳೆಯ ಪರಿಹಾರವಾಗುತ್ತದೆ.
ಹಳಸದಿರಲಿ ಬಂಧ, ಕಡೇವರೆಗೂ ಉಳಿದುಕೊಳ್ಳಲಿ ಸಂಬಂಧ!
ಎನರ್ಜಿ ಬೂಸ್ಟರ್ (Energy)
ವರ್ಕೌಟ್ ಮಾಡುವ ಮುಂಚೆ ಅಥವಾ ವರ್ಕೌಟ್ ಮಾಡಿ ಆದ ಮೇಲೆ ಯಾವುದೇ ಸಮಯದಲ್ಲೂ ಕೂಡ ಚಾಕಲೇಟ್ ಸೇವಿಸಬಹುದು. ಇದು ನಿಮ್ಮ ಎನರ್ಜಿಯನ್ನು ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ. ಚಾಕಲೇಟ್ ಸೇವಿಸಲು ಹಲವಾರು ಮಾರ್ಗಗಳಿವೆ. ನೀವು ಹಾಲಿನೊಂದಿಗೆ ಸೇರಿಸಿ ಕೂಡ ಸೇವಿಸಬಹುದು, ಇಲ್ಲವೆಂದರೆ ಚಾಕಲೇಟ್ ತಿನ್ನಬಹುದು, ಬೇರೆ ಯಾವುದಾದರೂ ಆಹಾರದೊಂದಿಗೆ ಮಿಶ್ರಣ ಮಾಡಿ ಸೇವಿಸಬಹುದು. ಅಥವಾ ಚಾಕಲೇಟ್ ಬಿಸ್ಕೆಟ್ ಗಳು ಕೂಡ ದೊರೆಯುತ್ತದೆ. ಡಾರ್ಕ್ ಚಾಕಲೇಟ್ ಗೆ ಸಂಬಂಧಿಸಿದ ಯಾವುದೇ ಚಾಕಲೇಟ್ ಗಳನ್ನು ಸೇವಿಸುವುದರಿಂದ ಎನರ್ಜಿ ಹೆಚ್ಚುತ್ತದೆ. ಹಾಗೂ ನೀವು ದಿನವಿಡಿ ಚೈತನ್ಯದಿಂದಿರುವಂತೆ ನೋಡಿಕೊಳ್ಳುತ್ತದೆ.
ನೆನಪಿನ ಶಕ್ತಿ ಹೆಚ್ಚುತ್ತದೆ (Memory Power)
ಚಾಕಲೇಟ್ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಮೆದುಳಿನ ಗ್ರಹಿಕಾ ಶಕ್ತಿಯನ್ನು ಚಾಕಲೇಟ್ ಹೆಚ್ಚಿಸುತ್ತದೆ. ಇದರಿಂದಾಗಿ ಓದುವ ಸಂದರ್ಭದಲ್ಲಿಯೂ ಕೂಡ ಚಾಕಲೇಟ್ ಸೇವಿಸಿ ಓದಲು ಕುಳಿತುಕೊಳ್ಳಬಹುದು. ಓದುವ ಆಸಕ್ತಿ ಹೆಚ್ಚುವುದರ ಜೊತೆಗೆ ನೀವು ಓದಿದ ವಿಷಯಗಳು ನೆನಪಿನಲ್ಲಿ ಉಳಿಯುತ್ತದೆ. ಚಾಕಲೇಟ್ ನಿಂದ ಮೆದುಳಿನಲ್ಲಿ ರಕ್ತ ಸಂಚಾರ ಸುಗಮವಾಗುವ ಕಾರಣದಿಂದಾಗಿ ಮೆಮೊರಿ ಪವರ್ ಹೆಚ್ಚುತ್ತದೆ.
