Beauty Tips : ಸೌಂದರ್ಯ ಹಾಳು ಮಾಡುವ ಹುಬ್ಬಿನ ಹೊಟ್ಟಿಗೆ ಇಲ್ಲಿದೆ ಮನೆ ಮದ್ದು

ತಲೆ ಹೊಟ್ಟಿನಂತೆ ಹುಬ್ಬಿನ ಹೊಟ್ಟು ಅನೇಕರನ್ನು ಕಾಡುತ್ತದೆ. ಇದು ಮುಖದ ಅಂದ ಕೆಡಿಸುವುದಲ್ಲದೆ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಕಿರಿಕಿರಿ ಎನ್ನಿಸುವ ಇದಕ್ಕೆ ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ.

Causes Of Eyebrow Dandruff And Home Remedies To Cure It

ಶುಷ್ಕತೆ (Dryness) ಸೇರಿದಂತೆ ಅನೇಕ ಕಾರಣ (Reason)ಗಳಿಗೆ ತಲೆ ಹೊಟ್ಟು (Head Dandruff) ಈಗ ಸಾಮಾನ್ಯ ಎನ್ನುವಂತಾಗಿದೆ. ಬಹುತೇಕರು ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಾರೆ. ಈ ಹೊಟ್ಟು ತಲೆಯಲ್ಲಿ ಮಾತ್ರವಲ್ಲ ಕೆಲವರ ಹುಬ್ಬಿ (eyebrow)ನ ಮೇಲೂ ಕಾಣಿಸಿಕೊಳ್ಳುತ್ತದೆ. ಈ ಹುಬ್ಬಿನ ಹೊಟ್ಟುಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಹುಬ್ಬಿನ ಹೊಟ್ಟು ಮುಜುಗರವನ್ನುಂಟು ಮಾಡುತ್ತದೆ. ಚಳಿಗಾಲದಲ್ಲಿ ಕೆಲವರಿಗೆ ಇದು ಸಾಮಾನ್ಯ. ಹುಬ್ಬಿನ ಮೇಲೆ ಬಿಳಿ ಹೊಟ್ಟು ಕಾಣಿಸಿಕೊಂಡಿದ್ದರೆ ಆತಂಕಪಡುವ ಅಗತ್ಯವಿಲ್ಲ. ಇದು ಗಂಭೀರ ಸಮಸ್ಯೆಯೇನಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ನೀವು ಈ ಹೊಟ್ಟನ್ನು ಗುಣಪಡಿಸಿಕೊಳ್ಳಬಹುದು. ಹುಬ್ಬಿನ ಮೇಲೆ ಕಾಣಿಸಿಕೊಳ್ಳುವ ಹೊಟ್ಟು ಹಾಗೂ ಅದಕ್ಕೆ ಪರಿಹಾರವನ್ನು ನಾವಿಂದು ತಿಳಿದುಕೊಳ್ಳೋಣ. 

ಹುಬ್ಬಿನ ಹೊಟ್ಟಿನ ಕಾರಣಗಳು : ಹುಬ್ಬುಗಳಲ್ಲಿ ಹೊಟ್ಟು ಕಾಣಿಸಿಕೊಳ್ಳಲು ಒಣ ಚರ್ಮ, ಎಸ್ಜಿಮಾ, ಸೋರಿಯಾಸಿಸ್, ಕಾಂಟ್ಯಾಕ್ಟ್ ಡರ್ಮಟೈಟಿಸ್, ಸೆಬೊರ್ಹೆಕ್ ಡರ್ಮಟೈಟಿಸ್ ಇತ್ಯಾದಿಗಳು ಕಾರಣವೆಂದು ತಜ್ಞರು ಹೇಳ್ತಾರೆ.  ಹುಬ್ಬುಗಳಲ್ಲಿ ಈ ಕಾರಣಕ್ಕೆ ಹೊಟ್ಟು ಕಾಣಿಸಿಕೊಂಡರೆ ಅದನ್ನು ನಿಯಂತ್ರಿಸಬಹುದು. ಹೊಟ್ಟಿಗೆ ಮುಖ್ಯ ಕಾರಣ ಮತ್ತು ರೋಗಲಕ್ಷಣಗಳನ್ನು ಪರೀಕ್ಷಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.  
ಹುಬ್ಬುಗಳಲ್ಲಿ ಕಾಣಿಸಿಕೊಳ್ಳು ಹೊಟ್ಟುಗಳೂ ತಲೆಹೊಟ್ಟಿನ ಲಕ್ಷಣಗಳನ್ನೇ ಹೋಲುತ್ತವೆ. ಹುಬ್ಬುಗಳ ಸುತ್ತ ಬಿಳಿ, ಬೂದು, ಹಳದಿ ಹುರುಪು, ಉರಿ, ತುರಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಹುಬ್ಬುಗಳ ಹೊಟ್ಟಿಗೆ ಇಲ್ಲಿದೆ ಚಿಕಿತ್ಸೆ : ಹುಬ್ಬುಗಳಿಗೆ ವಿಶೇಷ ಆರೈಕೆ ಮಾಡುವ ಮೂಲಕ ನೀವು ಈ ಸಮಸ್ಯೆಯಿಂದ ಹೊರ ಬರಬಹುದು. 

ಮಾಯಿಶ್ವರೈಸರ್ ಕ್ರೀಂ : ಪ್ರತಿದಿನ ಹುಬ್ಬುಗಳ ಮೇಲೆ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಕ್ರೀಮ್ ಅನ್ವಯಿಸಬೇಕು. ನಿಯಮಿತವಾಗಿ ಇದರ ಬಳಕೆಯಿಂದ ಹೊಟ್ಟು ಕಡಿಮೆಯಾಗುತ್ತದೆ. ಕೆಲವೊಮ್ಮೆ ವೈದ್ಯರು ಕಾರಣಗಳಿಗೆ ಅನುಗುಣವಾಗು ಚಿಕಿತ್ಸೆ ನೀಡುತ್ತಾರೆ. ಕಾಂಟ್ಯಾಕ್ಟ್ ಡರ್ಮಟೈಟಿಸ್‌ನ ಸಂದರ್ಭದಲ್ಲಿ ಶಾಂಪೂ, ಔಷಧಿ ಇತ್ಯಾದಿಗಳನ್ನು ವೈದ್ಯರ ಸಲಹೆ ಮೇರೆಗೆ ಪಡೆದು,ಅನ್ವಯಿಸಬೇಕಾಗುತ್ತದೆ.

ಹುಬ್ಬುಗಳ ಹೊಟ್ಟಿಗೆ  ಮನೆಮದ್ದುಗಳು : ಹುಬ್ಬುಗಳ ಹೊಟ್ಟನ್ನು ನೀವು ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು.

ಆಯಿಲ್ ಬಳಕೆ : ಒಣ ತ್ವಚೆಯಿಂದ ಹುಬ್ಬುಗಳ ಮೇಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಂಡರೆ  ತೆಂಗಿನಕಾಯಿ, ಆವಕಾಡೊ, ಟೀ ಟ್ರೀ ಎಣ್ಣೆಯಂತಹ ಕೆಲವು ನೈಸರ್ಗಿಕ ತೈಲಗಳನ್ನು ಹಚ್ಚಬೇಕಾಗುತ್ತದೆ. ಟೀ ಟ್ರೀ ಆಯಿಲ್ ಆಂಟಿಆಕ್ಸಿಡೆಂಟ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದು ಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

Kidney Health: ಬರಲಿದೆ ಬೇಸಿಗೆ, ಕಿಡ್ನಿ ಕಾಪಾಡಿಕೊಳ್ಳಿ ಹೀಗೆ...

ಸನ್ ಸ್ಕ್ರೀನ್ : ಕೆಲವರಿಗೆ ಸೂರ್ಯನ ಹಾನಿಕಾರಕ ಕಿರಣಗಳಿಂದ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮಕ್ಕೆ ರಕ್ಷಣೆ ನೀಡಬೇಕಾಗುತ್ತದೆ. ಇದ್ರಿಂದ ರಕ್ಷಿಸಿಕೊಳ್ಳಲು ಸನ್‌ಸ್ಕ್ರೀನ್ ಬಳಕೆ ಮಾಡಿ. ಮನೆಯಿಂದ ಹೊರಗೆ ಹೋಗುವ ಪ್ರತಿ ಬಾರಿಯೂ ಸನ್ ಸ್ಕ್ರೀನ್ ಬಳಸುವುದನ್ನು ಮರೆಯಬೇಡಿ.

ನಿಂಬೆ ರಸ : ತಲೆ ಹೊಟ್ಟನ್ನು ಹೋಗಲಾಡಿಸಲು ನಿಂಬೆ ರಸ ನೆರವಾಗುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ತಲೆ ಹೊಟ್ಟಿನಂತೆ ಹುಬ್ಬಿನ ಹೊಟ್ಟನ್ನು ಕೂಡ ನಿಂಬೆ ರಸದಿಂದ ಕಡಿಮೆ ಮಾಡಬಹುದು. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಶಿಲೀಂಧ್ರಗಳ ಸೋಂಕನ್ನು ಕಡಿಮೆ ಮಾಡುತ್ತದೆ. ಹತ್ತಿಯ ಮೇಲೆ ನಿಂಬೆ ರಸವನ್ನು ಅನ್ವಯಿಸಿ, ಹುಬ್ಬುಗಳ ಮೇಲೆ ಇರಿಸಿ. 5 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ನಿಯಮತಿವಾಗಿ ಇದನ್ನು ಮಾಡುತ್ತ ಬಂದಲ್ಲಿ,ಕೆಲವೇ ದಿನಗಳಲ್ಲಿ ಫಲಿತಾಂಶವನ್ನು ನೋಡಬಹುದು.

Health Tips: ಊಟ ಮಾಡಿದ್ಮೇಲೆ ನಡೀಬೇಕಾ ? ಎಕ್ಸ್‌ಪರ್ಟ್ಸ್ ಏನ್ ಹೇಳ್ತಾರೆ ಕೇಳಿ

ಮುಖ ಸ್ಪರ್ಶ ಬೇಡ : ಅನೇಕರು ಪದೇ ಪದೇ ಮುಖ,ಕಣ್ಣುಗಳನ್ನು ಮುಟ್ಟಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಕೈಗಳಿಂದ  ಪದೇ ಪದೇ ಮುಖ ಅಥವಾ ಹುಬ್ಬುಗಳನ್ನು ಸ್ಪರ್ಶಿಸುವುದನ್ನು ಸಾದ್ಯವಾದಷ್ಟು ತಪ್ಪಿಸಿ. ಕೈಯಲ್ಲಿರುವ ಕೊಳೆ, ಬ್ಯಾಕ್ಟೀರಿಯಾ ಕೂಡ ಚರ್ಮದ ಮೇಲೆ ಮೊಡವೆಗಳು,  ಹೊಟ್ಟಿಗೆ ಕಾರಣವಾಗುತ್ತದೆ ಎಂಬುದು ನೆನಪಿರಲಿ. 

Latest Videos
Follow Us:
Download App:
  • android
  • ios