Health Tips: ಅತಿಯಾಗಿ ಹಗಲುಗನಸು ಕಾಣೋದು ಕೂಡ ಒಂದು ಖಾಯಿಲೆ ಗೊತ್ತಾ?
ಕಣ್ಣು ಮಾತ್ರ ಪಿಳಿಪಿಳಿ ಎನ್ನುತ್ತಿರುತ್ತೆ, ಮನಸ್ಸು ಎಲ್ಲೂ ತೇಲಾಡ್ತಿರುತ್ತೆ. ಆ ಹಗಲುಗನಸಿನ ಸುಖವೇ ಬೇರೆ. ಕೆಲಸ ಬಿಟ್ಟು ಕನಸು ಕಾಣುವವರು ಸಾಕಷ್ಟು ಮಂದಿಯಿದ್ದಾರೆ. ಆದ್ರೆ ಕನಸು ಅತಿಯಾದ್ರೆ ರೋಗ ಕಾಡಲು ಶುರುವಾಗುತ್ತೆ ಎಚ್ಚರ.
ಕೆಲಸದಲ್ಲಿ ಅದೆಷ್ಟೇ ಬ್ಯುಸಿ ಇರಿ ನೀವು ಹಗಲುಗನಸು ಕಾಣೋದು ಮಾತ್ರ ಬಿಡೋದಿಲ್ಲ. ಹಗಲುಗನಸು ಕಾಣೋದ್ರಲ್ಲಿ ಒಂದು ರೀತಿಯ ಸಂತೋಷ, ನೆಮ್ಮದಿ ಸಿಗುತ್ತದೆ. ಕೆಲವರು ಬಾತ್ ರೂಮಿಗೆ ಹೋದ್ರೆ ಪ್ರಪಂಚ ಮರೆತಿರುತ್ತಾರೆ. ಅಲ್ಲಿಯೇ ಕನಸು ಕಾಣ್ತಾ ಕಾಲ ಕಳೆಯುತ್ತಿರುತ್ತಾರೆ. ಬರೀ ಬಾತ್ ರೂಮಿನಲ್ಲಿ ಮಾತ್ರವಲ್ಲ ಕಚೇರಿಯಲ್ಲಿ, ಅಡುಗೆ ಮಾಡುವ ಸಂದರ್ಭದಲ್ಲಿ, ದೇವರ ಪೂಜೆ ವೇಳೆ, ಟಿವಿ ನೋಡುವಾಗ ಹೀಗೆ ಎಲ್ಲೆಂದರಲ್ಲಿ ಹಗಲುಗನಸು ಕಾಣುವ ಜನರಿದ್ದಾರೆ. ಈ ಹಗಲುಗನಸಿಗೆ ಯಾವುದೇ ಗಡಿ, ಮಿತಿಯಿಲ್ಲ. ಎಲ್ಲೆಂದರಲ್ಲಿ, ಯಾವಾಗ ಬೇಕಾದ್ರೂ ಕಾಣುವ ಸ್ವಾತಂತ್ರ್ಯ ನಮಗಿದೆ. ಆದ್ರೆ ಇದಕ್ಕೂ ಒಂದು ಮಿತಿಯಿದೆ. ನೀವು ಮಿತಿ ಮೀರಿ ಹಗಲುಗನಸು ಕಾಣ್ತಿದ್ದೀರಿ ಎಂದಾದ್ರೆ ನಿಮಗೆ ಅಸ್ವಸ್ಥತೆ ಕಾಡ್ತಿದೆ ಎಂದರ್ಥ.
ಕೆಲವು ಸೆಕೆಂಡುಗಳ ಕಾಲ ಆಲೋಚನೆ(Thought) ಅಥವಾ ಹಗಲುಗನಸಿ (Daydream) ನಲ್ಲಿ ಕಳೆದುಹೋಗುವುದು ಕೆಟ್ಟದ್ದಲ್ಲ. ಆದರೆ ನಮ್ಮಲ್ಲಿ ಹೆಚ್ಚಿನವರು ಹಗಲುಗನಸಿನಲ್ಲಿ ಸಮಯ ಮರೆತು ಗಂಟೆಗಟ್ಟಲೆ ಸಮಯ ಹಾಳು ಮಾಡ್ತಾರೆ. ಇದನ್ನು ತಜ್ಞರು ಅಸ್ವಸ್ತತೆ ಎನ್ನುತ್ತಾರೆ. ನಾವಿಂದು ಈ ಹಗಲುಗನಸಿನ ಡಿಸಾರ್ಡರ್ (Disorder) ಅಂದ್ರೇನು ಎನ್ನುವುದನ್ನು ನಿಮಗೆ ಹೇಳ್ತೇವೆ.
ಹಗಲುಗನಸಿನ ರೋಗ : ದಿನಪೂರ್ತಿ ಕಲ್ಪನಾ ಲೋಕದಲ್ಲೆ ಕಳೆದು ಹೋಗುವುದನ್ನು ಹಗಲುಗನಸಿನ ರೋಗ ಎನ್ನಬಹುದು.
ಜಾಯಿಂಟ್ ಪೆಯಿನ್‌ಗೆ Cold Vs Heat Treatment ಯಾವುದು ಒಳ್ಳೇದು ?
ಪ್ರಪಂಚದಲ್ಲಿ ಇಷ್ಟು ಜನರನ್ನು ಕಾಡ್ತಿದೆ ಸಮಸ್ಯೆ: ನೀವು ನಂಬಿ, ಬಿಡಿ ವಿಶ್ವದಾದ್ಯಂತ ಶೇಕಡಾ 2.5 ರಷ್ಟು ಜನರು ಅಂದರೆ 200 ಮಿಲಿಯನ್ ಜನರು ಹಗಲುಗನಸಿನ ಸಮಸ್ಯೆಗೆ ಬಲಿಯಾಗಿದ್ದಾರೆ. ಬ್ರಿಟನ್ ಸಂಶೋಧನೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಅದ್ರಲ್ಲಿ ಈ ವಿಷ್ಯ ಬಹಿರಂಗವಾಗಿದೆ. ಇದನ್ನು ಮಲಾಡಾಫ್ಟಿವ್ ಡೇ ಡ್ರೀಮಿಂಗ್ ಎಂದೂ ಕರೆಯಲಾಗುತ್ತದೆ. ಸರಳ ಭಾಷೆಯಲ್ಲಿ ಆಲೋಚನೆಯಲ್ಲಿ ಕಳೆದು ಹೋಗುವುದು ಎಂದು ನೀವು ಹೇಳ್ಬಹುದು.
ಇದ್ರ ಬಗ್ಗೆ ಇನ್ನೊಂದು ಸಂಶೋಧನೆ ಕೂಡ ನಡೆದಿದೆ. ಅದ್ರ ಪ್ರಕಾರ, ಯಾರು ಮಲಾಡಾಫ್ಟಿವ್ ಡೇ ಡ್ರೀಮಿಂಗ್ ಗೆ ಬಲಿಯಾಗಿರುತ್ತಾರೋ ಅವರು ಅನೇಕ ರೀತಿಯ ಫ್ಯಾಂಟಸಿಯಲ್ಲಿ ಕಳೆದು ಹೋಗ್ತಾರಂತೆ. ಈ ಫ್ಯಾಂಟಸಿ ಹುಚ್ಚಿನಲ್ಲಿ ತಮ್ಮ ಇಡೀ ದಿನವನ್ನು ಅವರು ಹಾಳು ಮಾಡ್ತಾರಂತೆ. ಹಗಲುಗನಸಿನ ಸಮಸ್ಯೆಗೆ ಒಳಗಾದ ಜನರು ಇಂದಿನ ಕೆಲಸವನ್ನು ಇಂದಿಗೆ ಮಾಡುವುದಿಲ್ಲ. ಅದನ್ನು ನಾಳೆಗೆ ಮುಂದೂಡಲು ಶುರು ಮಾಡ್ತಾರೆ. ಇದ್ರಿಂದ ಕೆಲ ತೊಂದರೆ ಎದುರಿಸುತ್ತಾರೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಜನರಿಗೆ ಯಾಕೆ ಕಾಡುತ್ತೆ ಈ ಸಮಸ್ಯೆ?: ಈ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರು ಹೆಚ್ಚು ಕಲ್ಪನೆ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ನಂಬುತ್ತಾರೆ. ಅನೇಕ ಜನರು ಬಾಲ್ಯದಲ್ಲಿ ಈ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಒತ್ತಡವನ್ನು ಕಡಿಮೆ ಮಾಡಲು ಅವರು ಕಲ್ಪನೆಯ ಸಹಾಯ ಪಡೆಯುತ್ತಾರೆ. ಆರಾಮದಾಯಕ ಆಂತರಿಕ ಪ್ರಪಂಚವನ್ನು ರಚಿಸುವ ಮೂಲಕ ಅವರು ವಾಸ್ತವದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆಂದು ಸಂಶೋಧನೆಗಳು ಹೇಳಿವೆ. ಬಾಲ್ಯದಿಂದಲೇ ಇದು ಬರಬೇಕೆಂದೇನೂ ಇಲ್ಲ. ಅನೇಕರು ಒತ್ತಡದಲ್ಲಿದ್ದಾಗ ಕಲ್ಪನೆಯ ಜಗತ್ತಿಗೆ ಧುಮುಕುತ್ತಾರೆ. ದಿನ ಕಳೆದಂತೆ ಇದು ಅವರಿಗೆ ವ್ಯಸನವಾಗುತ್ತದೆ. ವಾಸ್ತವಕ್ಕಿಂತ ಕಲ್ಪನಾ ಜಗತ್ತು ಹೆಚ್ಚು ಸಂತೋಷ (Happiness) ನೀಡಲು ಶುರುವಾಗಿರುತ್ತದೆ. ಹಾಗಾಗಿ ಅವರು ಇದರಲ್ಲಿಯೇ ಸಮಯ ಕಳೆಯಲು ಶುರು ಮಾಡ್ತಾರೆ.
Plasma Exchange Therapy : ಕಸಿ ಮಾಡದೇ ಲಿವರ್ ಫೇಲ್ಯೂರ್‌ಗೆ ಚಿಕಿತ್ಸೆ
ಹಗಲುಗನಸು ಕಾಣುವುದ್ರಿಂದ ಕಾಡಬಹುದು ಈ ಸಮಸ್ಯೆ: ಮೊದಲೇ ಹೇಳಿದಂತೆ ಪ್ರತಿಯೊಬ್ಬರೂ ಹಗಲುಗನಸು ಕಾಣ್ತಾರೆ. ಕೆಲ ಕ್ಷಣ ಕಲ್ಪನಾ ಲೋಕಕ್ಕೆ ಹೋಗಿ ಬರುವುದು ತಪ್ಪಲ್ಲ. ಆದ್ರೆ ದಿನವಿಡಿ ಅದ್ರಲ್ಲಿಯೇ ಇದ್ದರೆ ಇದು ನಿಮ್ಮನ್ನು ಅನಾರೋಗ್ಯಗೊಳಿಸುತ್ತದೆ. ಇದ್ರಿಂದ ಡಿಎಚ್‌ಡಿ, ಒಸಿಡಿ, ಆತಂಕ, ಖಿನ್ನತೆಯ ಅಪಾಯ ಹೆಚ್ಚಾಗುತ್ತದೆ. ಮಲಾಡಾಫ್ಟಿವ್ ಡೇ ಡ್ರೀಮಿಂಗ್ ಡಿಸಾರ್ಡರ್ ಹೊಂದಿರುವ ಜನರಲ್ಲಿ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಲಕ್ಷಣ ಕೂಡ ಕಾಣಿಸಿಕೊಳ್ಳುತ್ತದೆಯಂತೆ.