Women Health: ಹಾಲಿಷ್ಟವಿಲ್ಲವೆಂದ್ರೆ ಟೆನ್ಷನ್ ಬೇಡ, ಕ್ಯಾಲ್ಶಿಯಂ ಇರುವ ಈ ಆಹಾರ ಸೇವಿಸಿ

ಹಾಲು ಅಂದ್ರೆ ವಾಕರಿಕೆ ಬರುತ್ತೆ ಎನ್ನುವ ಕೆಲ ಮಹಿಳೆಯರಿದ್ದಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಇದೆ ಎಂಬುದು ಗೊತ್ತಿದ್ದೂ ಅವರು ಹಾಲು ಕುಡಿಯೋದಿಲ್ಲ. ಅಂತವರು ಕ್ಯಾಲ್ಸಿಯಂ ಕೊರತೆ ಬರಬಾರದೆಂದ್ರೆ ಡಯಟ್ ಪ್ಲಾನ್ ಬದಲಿಸಬೇಕು.
 

calcium rich foods for your bones

ಮಹಿಳೆ (Women) ಅಂದ್ರೆ ಶಕ್ತಿ, ಬಲ, ಸಹನೆ, ಮಮತೆ, ದೇವತೆ. ಮಹಿಳೆಯನ್ನು ನಾನಾ ರೂಪದಲ್ಲಿ ನಾವು ನೋಡಬಹುದು. ಶಿಕ್ಷಕಿ, ಗೃಹಿಣಿ, ತಾಯಿ, ಪೊಲೀಸ್, ಗಡಿ ಕಾಯುವ ಸೈನಿಕ ಹೀಗೆ ಅನೇಕ ರೂಪದಲ್ಲಿ ಮಹಿಳೆಯನ್ನು ನೋಡಬಹುದು. ಉದ್ದದ ರೈಲಿನಿಂದ ಮೇಲೆ ಹಾರಾಡುವ ವಿಮಾನ (Flight)ದವರೆಗೆ ಎಲ್ಲವನ್ನೂ ಓಡಿಸಬಲ್ಲಳು ಮಹಿಳೆ. ಒಂದು ಕಂಪನಿ, ಒಂದು ದೇಶದ ನಾಯಕತ್ವ ವಹಿಸುವ ಬುದ್ಧಿವಂತಿಕೆ ಮಹಿಳೆಯಲ್ಲಿದೆ. ಇದೆಲ್ಲವೂ ಎಷ್ಟು ಸತ್ಯವೋ ಮಹಿಳೆ ಆರೋಗ್ಯ (Health)ವನ್ನು ನಿರ್ಲಕ್ಷ್ಯಿಸುತ್ತಾಳೆ ಎಂಬುದು ಕೂಡ ಅಷ್ಟೇ ಸತ್ಯ. ದೇಶ (Country)ದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಮಹಿಳೆಯರು ತಮ್ಮ ಕೆಲಸ,ಜವಾಬ್ದಾರಿಯ ಮಧ್ಯೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ದೇಶದಲ್ಲಿ ಅರ್ಧದಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅನೇಕ ಮಹಿಳೆಯರು ಕ್ಯಾಲ್ಸಿಯಂ ಕೊರತೆ ಎದುರಿಸುತ್ತಿದ್ದಾರೆ. ವರದಿಯ ಪ್ರಕಾರ, ಭಾರತದಲ್ಲಿ ಶೇಕಡಾ 85 ರಷ್ಟು ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ದೊಡ್ಡ ಕಾರಣ ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆ.  

ಭಾರತ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿದ್ದರೂ, ಹಾಲು ಸೇವಿಸುವವರ ಸಂಖ್ಯೆ ಕಡಿಮೆ ಎನ್ಬಹುದು. ಹಾಲು ದೇಹಕ್ಕೆ ಸೇರದೆ ಕ್ಯಾಲ್ಸಿಯಂ ಸಮಸ್ಯೆ ಕಾಡುತ್ತದೆ. ಇದರ ಕೆಟ್ಟ ಪರಿಣಾಮವು ಮೂಳೆಯ ಆರೋಗ್ಯದ ಮೇಲಾಗುತ್ತದೆ. ಕ್ಯಾಲ್ಸಿಯಂ ಒಂದು ಖನಿಜವಾಗಿದ್ದು, ಅದು ಮೂಳೆಗಳು ಮತ್ತು ಹಲ್ಲುಗಳಿಗೆ ಅವಶ್ಯಕವಾಗಿದೆ. ಅನೇಕ ಮಹಿಳೆಯರು ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಹಾಲು ಹಾಗೂ ಹಾಲಿನ ಉತ್ಪನ್ನದಿಂದ ದೂರವಿರುವ ಮಹಿಳೆಯರ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಾಣಿಸುತ್ತದೆ. ಒಂದು ವೇಳೆ ನಿಮಗೆ ಹಾಲು ಇಷ್ಟವಿಲ್ಲವೆಂದಾದ್ರೆ ಕ್ಯಾಲ್ಸಿಯಂ ಇರುವ ಬೇರೆ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಇಂದು ಕ್ಯಾಲ್ಸಿಯಂ ಇರುವ ಆಹಾರಗಳ ಬಗ್ಗೆ ಮಾಹಿತಿ ನೀಡ್ತೇವೆ.

ಕ್ಯಾಲ್ಸಿಯಂ ಆಹಾರ 

ಬೀನ್ಸ್ : ಬೀನ್ಸ್ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ ನಿಂದ ಸಮೃದ್ಧವಾಗಿದೆ. ಅರ್ಧ ಕಪ್ ಬೇಯಿಸಿದ ಬೀನ್ಸ್ ನಲ್ಲಿ 40 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಸಿಗುತ್ತದೆ. ಅರ್ಧ ಕಪ್ ಬಿಳಿ ಬೀನ್ಸ್ ನಲ್ಲಿ 81 ಮಿಗ್ರಾಂ ಕ್ಯಾಲ್ಸಿಯಂ ಸಿಗುತ್ತದೆ. ಬಿಳಿ ಬೀನ್ಸ್ ನಲ್ಲಿಯೂ ಕಬ್ಬಿಣದ ಅಂಶ ಸಮೃದ್ಧವಾಗಿದೆ.

Health Tips: ತಲೆಗೆ ಗಾಯವಾದಾಗ ಲಘುವಾಗಿ ತೆಗೆದುಕೊಳ್ಳದಿರಿ, ಜೀವಕ್ಕೇ ಅಪಾಯ !

ಬಾದಾಮಿ : ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಅರ್ಧ ಕಪ್ ಬಾದಾಮಿಯು 130 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಹಾಲು ಇಷ್ಟಪಡುವವರು ಬಾದಾಮಿ ಹಾಲಿನ ಸೇವನೆ ಮಾಡಬಹುದು. ಪ್ರತಿದಿನ ಒಂದು ಗ್ಲಾಸ್ ಬಾದಾಮಿ ಹಾಲು ಅತ್ಯಂತ ಪೌಷ್ಟಿಕವಾಗಿರುತ್ತದೆ.

ಓಟ್ಸ್ ಮೀಲ್ : ಓಟ್ಸ್ ಮೀಲ್ ಕೂಡ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಸಕ್ಕರೆಯ ಬದಲಿಗೆ ಉಪ್ಪನ್ನು ನೀವು ಸೇವಿಸಬಹುದು. ಒಂದು ಬೌಲ್ ಓಟ್ಸ್ ಮೀಲ್ ನಲ್ಲಿ 100 ಮಿಲಿಗ್ರಾಂಗಿಂತ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ.

ಕಿತ್ತಳೆ : ಕಿತ್ತಳೆ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಕಿತ್ತಳೆ ಹಣ್ಣಿನಲ್ಲಿ ಲಭ್ಯವಿದೆ. ಒಂದು ಕಿತ್ತಳೆ ಹಣ್ಣಿನಲ್ಲಿ ಸುಮಾರು 60 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಉಗ್ರಾಣ ಎಂದು ಕಿತ್ತಳೆ ಹಣ್ಣನ್ನು ಕರೆಯುತ್ತಾರೆ. ಒಂದು ಸಣ್ಣ ಗ್ಲಾಸ್ ಕಿತ್ತಳೆ ರಸವನ್ನು ಕುಡಿಯುವುದು ಅತ್ಯುತ್ತಮ ಎನ್ನಬಹುದು.

Health care: ಫೋನನ್ನು ಜೇಬಲ್ಲಿಟ್ಟುಕೊಂಡು ತಿರುಗುತ್ತೀರಾ? ಆರೋಗ್ಯ ಕೆಡುವುದು ಎಚ್ಚರ!

ಸೋಯಾ ಮಿಲ್ಕ್ : ಸೋಯಾ ಮಿಲ್ಕ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಸೋಯಾ ಹಾಲು ಸಾಮಾನ್ಯ ಹಾಲಿಗಿಂತ ಹೆಚ್ಚು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಹೊಂದಿರುತ್ತದೆ. ಹಸುವಿನ ಹಾಲಿನಲ್ಲಿರುವಷ್ಟೇ ಪ್ರಮಾಣದ ಕ್ಯಾಲ್ಸಿಯಂ ಸೋಯಾ ಹಾಲಿನಲ್ಲಿದೆ.

ಹಸಿರು ತರಕಾರಿ,ಸೊಪ್ಪು : ಹಸಿರು ಸೊಪ್ಪು ಹಾಗೂ ತರಕಾರಿಗಳಲ್ಲಿ 100 ಮಿಗ್ರಾಂಗಿಂತ ಹೆಚ್ಚು ಕ್ಯಾಲ್ಸಿಯಂ ಕಂಡುಬರುತ್ತದೆ. ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ತಿನ್ನುವುದು ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ. 

ಎಳ್ಳು : ಒಂದು ಟೀ ಚಮಚ ಎಳ್ಳು 88 ಮಿಲಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಕೂಡ ಅಧಿಕವಾಗಿದ್ದು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು

Latest Videos
Follow Us:
Download App:
  • android
  • ios