Asianet Suvarna News Asianet Suvarna News

Healthy Food : ಬೇಸಿಗೆಯಲ್ಲಿ ಕೊರೊನಾದಿಂದ ದೂರವಿರಬೇಕೆಂದ್ರೆ ಸೇವಿಸಿ ಈ ಆಹಾರ

ಕೊರೊನಾ ಇನ್ನೂ ಕಡಿಮೆಯಾಗಿಲ್ಲ. ಜನರು ಕೊರೊನಾ ಮರೆತು ಓಡಾಡ್ತಿದ್ದಾರೆ. ಇದ್ರಿಂದ ಮತ್ತೆ ಸೋಂಕು ಹೆಚ್ಚಾಗುವ ಅಪಾಯವಿದೆ. ರೋಗ ನಮ್ಮ ಹತ್ತಿರ ಬರಬಾರದೆಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಅದನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಗೊತ್ತಾ?
 

Boost Immunity Against XE Corona Virus Variant With These 7 Summer Foods
Author
Bangalore, First Published Apr 18, 2022, 6:44 PM IST

ಕೊರೊನಾ (Corona) ಮತ್ತೆ ತನ್ನ ಅಬ್ಬರವನ್ನು ಶುರು ಮಾಡ್ತಿದೆ. ಕೆಲ ದಿನಗಳ ಹಿಂದಷ್ಟೆ ಭಾರತ (India) ದಲ್ಲಿ ಕೊರೊನಾದ ಹೊಸ ರೂಪಾಂತರ ಎಕ್ಸ್ ಇ (X e) ಎರಡು ರಾಜ್ಯಗಳಲ್ಲಿ ಪತ್ತೆಯಾಗಿದೆ. ಕೊರೊನಾದ ನಾಲ್ಕನೇ ಅಲೆ ಭಾರತದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಭಯ ವ್ಯಕ್ತಪಡಿಸಿದ್ದಾರೆ. ಕೊರೊನಾ ಎರಡನೇ ಅಲೆಯಂತೆ ಸಾವಿನ ಸಂಖ್ಯೆ ಹೆಚ್ಚಾಗ್ಬಾರದು ಎಂಬ ಕಾರಣಕ್ಕೆ ತಜ್ಞರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡ್ತಿದ್ದಾರೆ. ಈಗಾಗಲೇ ಬೇಸಿಗೆ ಶುರುವಾಗಿದ್ದು, ಅನೇಕ ರೋಗಗಳು ದೇಹವನ್ನು ಆಕ್ರಮಿಸಲಿವೆ. ಕೊರೊನಾ ಮಾತ್ರವಲ್ಲದೆ ಬೇರೆ ರೋಗಗಳಿಂದ ದೇಹ ರಕ್ಷಣೆ ಪಡೆಯಬೇಕೆಂದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೀವು ಏನೇನು ತಿನ್ಬಹುದು ಎಂಬುದನ್ನು ನಾವಿಂದು ಹೇಳ್ತೇವೆ.

ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇದನ್ನು ಸೇವಿಸಿ : 

ಮಾವಿನ ಹಣ್ಣು : ಹಣ್ಣುಗಳ ರಾಜ ಮಾವು. ಈಗಾಗಲೇ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಲಗ್ಗೆಯಿಟ್ಟಿವೆ. ಮಾವಿನ ಹಣ್ಣಿನಲ್ಲಿ ವಿಟಮಿನ್-ಎ, ಸಿ ಮತ್ತು ಕೆ ನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಮಾವಿನ ಹಣ್ಣಿನಲ್ಲಿರುವ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ರುಚಿಯ ಮೂಲಕವೇ ಎಲ್ಲರನ್ನು ಸೆಳೆಯುವ ಮಾವಿನ ಹಣ್ಣಿನಲ್ಲಿ ಇನ್ನೂ ಅನೇಕ ಆರೋಗ್ಯದ ಗುಣವಿದ್ದು, ಈ ಸಂದರ್ಭದಲ್ಲಿ ಮಾವಿನ ಹಣ್ಣನ್ನು ಅವಶ್ಯವಾಗಿ ಸೇವನೆ ಮಾಡಿ.

ಶ್ರವಣ ಸಾಧನಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ

ತುಳಸಿ ಬೀಜ : ತುಳಸಿಯ ಬೀಜ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಲ್ಲರಿಗೂ ತಿಳಿದ ವಿಷ್ಯ. ತುಳಸಿ ಬೀಜದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪ್ರಯೋಜನಕಾರಿ ಅಂಶಗಳಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಬಹಳ ಪರಿಣಾಮಕಾರಿಯಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ.  ಸ್ನಾಯುಗಳ ಕಾರ್ಯವನ್ನು ಚುರುಕುಗೊಳಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. 

ಕಲ್ಲಂಗಡಿ : ಕಲ್ಲಂಗಡಿ ಹಣ್ಣನ್ನು ಬೇಸಿಗೆಯಲ್ಲಿ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಿದ್ರೆ ಬಾಯಾರಿಕೆ ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ.  ಇದರಲ್ಲಿರುವ ಫೈಬರ್ ನಮ್ಮ ಕರುಳಿಗೆ ತುಂಬಾ ಒಳ್ಳೆಯದು. ಫೈಬರ್, ವಿಟಮಿನ್-ಸಿ ಮತ್ತು ವಿಟಮಿನ್-ಬಿ6 ದೇಹಕ್ಕೆ ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುವುದಲ್ಲದೆ, ಸೋಂಕಿನಿಂದ ರಕ್ಷಿಸುತ್ತದೆ.

ಬೇಸಿಗೆಯಲ್ಲಿ ಈ ಹಣ್ಣನ್ನೂ ಸೇವಿಸಿ : ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಪಪ್ಪಾಯಿ, ಕಿತ್ತಳೆ, ಸ್ಟ್ರಾಬೆರಿ, ನಿಂಬೆ ಸೇರಿದಂತೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಸೇವನೆ ಮಾಡಬಹುದು. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಬೀಟಾ ಕ್ಯಾರೋಟಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೈಬರ್, ಫೋಲೇಟ್ ಮತ್ತು ವಿಟಮಿನ್-ಸಿ, ಇ, ಕೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಂತೆ ರೋಗಗಳಿಂದ ರಕ್ಷಿಸುವಲ್ಲಿ ಪರಿಣಾಮಕಾರಿ.

ಪ್ರೋಟೀನ್ : ಪ್ರೋಟೀನ್ ನಮ್ಮ ಸ್ನಾಯುಗಳನ್ನು ಬಲಪಡಿಸುವುದಲ್ಲದೆ ಇದು ದೇಹದಲ್ಲಿ ಪ್ರತಿಕಾಯಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಮೊಟ್ಟೆ, ಹಾಲು, ಚೀಸ್, ಬೇಳೆ, ಮೀನು ಮತ್ತು ಸೋಯಾಬೀನ್‌ಗಳನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲಗಳು ಎಂದು ಪರಿಗಣಿಸಲಾಗುತ್ತದೆ. ಕೊರೊನಾದಿಂದ ಚೇತರಿಸಿಕೊಳ್ಳಲು ಮತ್ತು ಚೇತರಿಸಿಕೊಂಡ ನಂತರ ರೋಗಿಗಳಿಗೆ ಈ ಆಹಾರ ತಿನ್ನುವಂತೆ ವೈದ್ಯರೇ ಸಲಹೆ ನೀಡುತ್ತಾರೆ.

Health Tips: ಹಲಸಿನ ಹಣ್ಣು ಥೈರಾಯ್ಡ್ ಸಮಸ್ಯೆ ಹೇಗೆ ನಿವಾರಿಸುತ್ತೆ ಗೊತ್ತಾ?

ಪ್ರೋಬಯಾಟಿಕ್‌ಗಳು : ಮೊಸರು ಮತ್ತು ಮಜ್ಜಿಗೆಯಲ್ಲಿ ಪ್ರೊಬಯಾಟಿಕ್ ಗುಣವಿರುತ್ತದೆ. ಇದು ಕರುಳಿಗೆ ಒಳ್ಳೆಯದು. ಇಮ್ಯುನಿಟಿ ಬೂಸ್ಟರ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ನೀರು : ಬೇಸಿಗೆಯಲ್ಲಿ ನೀರು ನಿರ್ಜಲೀಕರಣವನ್ನು ತಡೆಯುವುದಲ್ಲದೆ ಸೋಂಕಿನ ಅಪಾಯವನ್ನೂ ಕಡಿಮೆ ಮಾಡುತ್ತದೆ. ದೇಹದಲ್ಲಿರುವ ವಿಷ ಪದಾರ್ಥವನ್ನು ಅದು ಹೊರಗೆ ಹಾಕಲು ನೆರವಾಗುತ್ತದೆ.

Follow Us:
Download App:
  • android
  • ios