Asianet Suvarna News Asianet Suvarna News

ಕೋವಿಡ್-19 ಲಸಿಕಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ, 'ವಿಶ್ವಕ್ಕೆ ಭಾರತ ಮಾಡಿದ ಪಾಠ' ಎಂದ ಬಿಲ್ ಗೇಟ್ಸ್!

ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಲಸಿಕಾ ಕಾರ್ಯಕ್ರಮದಲ್ಲಿ ಭಾರತ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಆ ಮೂಲಕ ಆರೋಗ್ಯ ಕ್ಷೇತ್ರದ ಫಲಿತಾಂಶಗಳನ್ನು ಕಂಡಿರುವುದು ವಿಶ್ವಕ್ಕೆ ಒಂದು ಪಾಠ ಎಂದು ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಹೇಳಿದ್ದಾರೆ.
 

Bill Gates Praises Indias Vaccine Drive in Davos says Offers Many Lessons For World san
Author
Bengaluru, First Published May 29, 2022, 2:21 PM IST

ದಾವೋಸ್ (ಮೇ.29): ಮೈಕ್ರೊಸಾಫ್ಟ್ (Microsoft) ಸಹ-ಸಂಸ್ಥಾಪಕ ಬಿಲ್ ಗೇಟ್ಸ್  (Bill Gates)ಅವರು ಶನಿವಾರ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ (Davos) ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲ್ಯುಇಎಫ್) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರೊಂದಿಗೆ ನಡೆದ ಸಭೆಯ ವೇಳೆ ಭಾರತದ ಲಸಿಕೆ ಅಭಿಯಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಲು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುವುದು ಅದ್ಭುತವಾದ ವಿಚಾರ. ವ್ಯಾಕ್ಸಿನೇಷನ್ ಡ್ರೈವ್‌ನೊಂದಿಗೆ ಭಾರತದ ಯಶಸ್ಸು ಮತ್ತು ಆರೋಗ್ಯ ಫಲಿತಾಂಶಗಳನ್ನು ಪ್ರಮಾಣದಲ್ಲಿ ಹೆಚ್ಚಿಸಲು ತಂತ್ರಜ್ಞಾನದ ಬಳಕೆಯು ಜಗತ್ತಿಗೆ ಅನೇಕ ಪಾಠಗಳನ್ನು ನೀಡುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

ಮೇ 25 ರಂದು, ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಬಿಲ್ ಗೇಟ್ಸ್ ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಲ್ಲದೆ, ಟ್ವಿಟರ್ ನಲ್ಲಿ "#WEF22 ನಲ್ಲಿ ಬಿಲ್ ಗೇಟ್ಸ್ ಅವರೊಂದಿಗೆ ಸಂವಹನ ನಡೆಸಿದ್ದರಿಂದ ಸಂತೋಷವಾಗಿದೆ. ಅವರು ಕೋವಿಡ್-19 ನಿರ್ವಹಣೆ ಮತ್ತು ಬೃಹತ್ ವ್ಯಾಕ್ಸಿನೇಷನ್ ಪ್ರಯತ್ನಗಳಲ್ಲಿ ಭಾರತದ ಯಶಸ್ಸನ್ನು ಶ್ಲಾಘಿಸಿದರು' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.


"ಡಿಜಿಟಲ್ ಆರೋಗ್ಯ, ರೋಗ ನಿಯಂತ್ರಣ ನಿರ್ವಹಣೆ, ಎಂಆರ್‌ಎನ್‌ಎ ಪ್ರಾದೇಶಿಕ ಕೇಂದ್ರಗಳ ರಚನೆ ಮತ್ತು ಕೈಗೆಟುಕುವ ಮತ್ತು ಗುಣಮಟ್ಟದ ರೋಗನಿರ್ಣಯ ಮತ್ತು ವೈದ್ಯಕೀಯ ಸಾಧನಗಳ ಅಭಿವೃದ್ಧಿಯನ್ನು ಬಲಪಡಿಸುವುದು ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ವಿಷಯಗಳನ್ನು ನಾವು ಚರ್ಚಿಸಿದ್ದೇವೆ" ಎಂದು ಮಾಂಡವಿಯಾ ಬರೆದುಕೊಂಡಿದ್ದರು.

ಮಾಂಡವಿಯಾ ಅವರ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ ಬಿಲ್ ಗೇಟ್ಸ್, "ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಲು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನವನ್ನು ವಿನಿಮಯ ಮಾಡಿಕೊಂಡಿದ್ದು ಅದ್ಭುತ ಎನಿಸಿದೆ. ಲಸಿಕೆ ಅಭಿಯಾನ ಮತ್ತು ಆರೋಗ್ಯದ ಫಲಿತಾಂಶಗಳನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆಯಿಂದ ಭಾರತದ ಯಶಸ್ಸಿನಿಂದ ಜಗತ್ತಿಗೆ ಕಲಿಯಲು ಹಲವು ಪಾಠಗಳಿವೆ' ಎಂದು ಟ್ವೀಟ್ ಮಾಡಿದ್ದಾರೆ. 

ದಾವೋಸ್‌ನಿಂದ ವಾಪಸಾಗುತ್ತಿದ್ದಂತೆಯೇ ಸಿಎಂ ದಿಢೀರ್ ಸುದ್ದಿಗೋಷ್ಠಿ, ಏನು ಹೇಳಿದ್ರು ಕೇಳಿ

ಭಾರತವು ಕಳೆದ ವರ್ಷ ಜನವರಿಯಲ್ಲಿ ಕೋವಿಡ್ ವಿರುದ್ಧ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, ಸುಮಾರು 88 ಪ್ರತಿಶತ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ಆರೋಗ್ಯ ಸಚಿವರು ಶನಿವಾರ ಈ ಮಾಹಿತಿ ನೀಡಿದರು. ವೈರಸ್ ವಿರುದ್ಧ ವ್ಯಾಕ್ಸಿನೇಷನ್ ಮಾಡಲು ದೇಶವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಸ್ಥಳೀಯ ಕೋವಾಕ್ಸಿನ್ ಅನ್ನು ಹೆಚ್ಚಾಗಿ ಅವಲಂಬಿಸಿದೆ. ಏತನ್ಮಧ್ಯೆ, ಬಿಲ್ ಗೇಟ್ಸ್‌ನ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ 2003 ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅವರ ಅಧಿಕೃತ ವೆಬ್‌ಸೈಟ್‌ಗಳ ಪ್ರಕಾರ, ಫೌಂಡೇಶನ್ ಯುನೈಟೆಡ್ ಸ್ಟೇಟ್ಸ್ ಹೊರತುಪಡಿಸಿ ಬೇರೆ ಯಾವುದೇ ದೇಶಗಳಿಗಿಂತ ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡಿದೆ.

Davos 2022: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸಿಎಂ ಬೊಮ್ಮಾಯಿ ಆಹ್ವಾನ

ದಾವೋಸ್‌ನಲ್ಲಿ ನಡೆದ WEFನ ವಾರ್ಷಿಕ ಸಮ್ಮೇಳನದಲ್ಲಿ ಭಾರತದಿಂದ ಸುಮಾರು 100 ಉದ್ಯಮ ಪ್ರತಿನಿಧಿಗಳು ಮತ್ತು 10 ಕ್ಕೂ ಹೆಚ್ಚು ಸಚಿವರು ಮತ್ತು ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಭಾರತದ ಅಧಿಕೃತ ನಿಯೋಗವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವ ವಹಿಸಿದ್ದರು. ಅವರಲ್ಲದೆ ಪೆಟ್ರೋಲಿಯಂ ಮತ್ತು ನಗರ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಸಮಾವೇಶದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಬೊಮ್ಮಾಯಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಸೇರಿದಂತೆ ಹಲವು ರಾಜ್ಯಗಳ ನಾಯಕರು ಸಭೆಯ ಅಧಿವೇಶನಗಳಲ್ಲಿ ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಭಾರತದ ಸುಮಾರು 100 ಕೈಗಾರಿಕೋದ್ಯಮಿಗಳೂ ಭಾಗವಹಿಸಿದ್ದರು. ಆದರೆ, ಈ ಬಾರಿ ನಿಯಮಿತವಾಗಿ ಹಾಜರಾಗುತ್ತಿದ್ದ ಕೆಲವು ದೊಡ್ಡಕೆಲವು ದೊಡ್ಡ ಮುಖಗಳು ಸಮ್ಮೇಳನಕ್ಕೆ ಹಾಜರಾಗಿಲ್ಲ.

Follow Us:
Download App:
  • android
  • ios