Asianet Suvarna News Asianet Suvarna News

ಡಾರ್ಕ್ ಸರ್ಕಲ್‌ ಅನ್ನುವ ಹುಡುಗೀರ ಶತ್ರು; ಸೈತಾನ್‌ನ ಮಣಿಸೋದು ಹೇಗೆ?

ಛೇ, ನನ್ನ ಮುಖದಲ್ಲಿ ಆ ಡಾರ್ಕ್ ಸರ್ಕಲ್‌ ಒಂದು ಇಲ್ಲದೇ ಹೋಗಿದ್ರೆ ಎಷ್ಟುಚೆನ್ನಾಗಿರ್ತಿತ್ತು! ಹೀಗಂತ ಕೊರಗುವವರು ಬಹಳ ಜನ. ಇದಕ್ಕೆ ವಯಸ್ಸು, ಲಿಂಗದ ಹಂಗಿಲ್ಲ. ಕಣ್ಣ ಕೆಳಗಿನ ಕಪ್ಪು ವರ್ತುಲ ಬರೋದಾದ್ರೂ ಯಾಕೆ, ಇದನ್ನು ಹೇಗೆ ನಿವಾರಿಸೋದು?

Best Routines for Getting Rid of Dark Circles
Author
Bangalore, First Published Feb 17, 2020, 11:30 AM IST

ಮಂಜುನಾಥ ಗದಗಿನ ಬೆಳಗಾವಿ

ಅವಳು ಅಥವಾ ಆತ ನೋಡಲು ತುಂಬಾ ಸುಂದರ. ಆದರೆ, ಅವರ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತೆ ಕಣ್ಣಿನ ಸುತ್ತ ಕಪ್ಪು ವರ್ತುಲ. ಇದರಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳಲು ತುಸು ಹಿಂಜರಿಯುತ್ತಿದ್ದಾರೆ. ಯಾಕೆಂದರೆ ಅವರ ಕಣ್ಣಿನ ಸುತ್ತಲ ಕಪ್ಪು ಅವರನ್ನು ಕಳಾಹೀನರನ್ನಾಗಿಸಿದೆ. ಇದರಿಂದ ಅವರು ರೋಸಿ ಹೋಗಿದ್ದಾರೆ. ಈ ಪ್ರಾಬ್ಲೆಂಗೆ ಪರಿಹಾರ ಸಿಗುತ್ತಿಲ್ಲ.

ಈ ಕಣ್ಣಿನ ಸುತ್ತಲೂ ಕಪ್ಪು ವರ್ತುಲ ನಿರ್ಮಾಣವಾಗುವುದಕ್ಕೆ ನಾನಾ ಕಾರಣಗಳಿವೆ. ಈ ವರ್ತುಲ ನಿಧಾನವಾಗಿ ಕಣ್ಣುಗಳ ಸುತ್ತ ಆವರಿಸುತ್ತಾ ಮುಖದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಅದಕ್ಕೆ ಈ ವರ್ತುಲಗಳು ನಮ್ಮನ್ನು ಆವರಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು.

ಮುಖದ ತುಂಬ ಮೊಡವೆಗಳಿದ್ದ ಹುಡುಗಿ ಮನೋವೈದ್ಯರ ಬಳಿ ಬಂದದ್ಯಾಕೆ?

ಏನೇನು ಕಾರಣಗಳು?

- ಕಣ್ಣಿನ ಸುತ್ತ ಕಪ್ಪನೆಯ ವರ್ತುಲ ಆಗಲು ಮುಖ್ಯ ಕಾರಣ ಸರಿಯಾದ ವೇಳೆಗೆ ನಿದ್ದೆ ಮಾಡದೇ ಇರುವುದು ಹಾಗೂ ಕಡಿಮೆ ನಿದ್ದೆ ಮಾಡುವುದು. ಹೀಗಾಗಿ ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಈ ಕಪ್ಪು ವರ್ತುಲ ಎಲ್ಲರನ್ನು ಆವರಿಸಿಕೊಂಡು ಬಿಟ್ಟಿದೆ. ಹೀಗಾಗಿ ನಮಗೆ ಎಷ್ಟೇ ಒತ್ತಡ ಇದ್ದರೂ ಸರಿಯಾಗಿ ನಿದ್ದೆ ಮಾಡಲೇಬೇಕು. ಇದರಿಂದ ಮನಸ್ಸಿಗೂ ಹಾಗೂ ದೇಹಕ್ಕೂ ಉತ್ತಮ. ಒಂದು ವೇಳೆ ಸರಿಯಾಗಿ ನಿದ್ದೆ ಮಾಡದೇ ಹೋದರೆ ಕಣ್ಣಿನ ಸುತ್ತ ಕಪ್ಪು ವರ್ತುಲವಾದೀತು ಜೋಕೆ.

- ಇನ್ನೂ ಕೆಲವರಿಗೆ ಕಣ್ಣಿನ ಸುತ್ತ ವರ್ತುಲಗಳು ಅನುವಂಶೀಯತೆಯಿಂದ ಬರುತ್ತವೆ. ಕುಟುಂಬದಲ್ಲಿ ಯಾರಿಗಾದರೂ ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಇದ್ದರೆ, ಅವುಗಳು ಮುಂದಿನ ಪೀಳಿಗೆಗೆ ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಕಣ್ಣಿನ ಸುತ್ತಲೂ ಕಪ್ಪು ವರ್ತುಲ ಆಗುವುದಕ್ಕೆ ಹೆಚ್ಚು ನಿದ್ರಾಹೀನತೆಯೇ ಕಾರಣ. ಅಷ್ಟೇ ಅಲ್ಲದೇ ಒತ್ತಡದಲ್ಲಿ ಕೆಲಸ ಮಾಡುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ದಣಿವು ಕಡಿಮೆಯಾದಾಗ ಈ ಸಮಸ್ಯೆ ತನ್ನಿಂದತಾನಾಗಿಯೇ ನಿವಾರಣೆಯಾಗುವುದು. -ಡಾ.ಸಿದ್ದು ಭಜಂತ್ರಿ

- ಯಾವುದೇ ರೀತಿಯ ಸೋಂಕಿನಿಂದಲೂ ಈ ರೀತಿ ಕಪ್ಪು ವರ್ತುಲ ಬರಬಹುದು. ಜ್ವರ, ಮಲೇರಿಯಾದಂಥ ಕಾಯಿಲೆಗಳಿಂದ ಒಂದು ಕಾಲಕ್ಕೆ ನೀವು ಬಳಲಿದವರಾಗಿದ್ದರೆ ಈ ರೀತಿಯ ಕಪ್ಪು ಸರ್ಕಲ್‌ ಕಾಣಿಸಿಕೊಳ್ಳಬಹುದು. ಅಸಮರ್ಪಕ ಪಥ್ಯದಿಂದಾಗಿ, ಪೌಷ್ಟಿಕಾಂಶ ಕೊರತೆಯಿಂದಾಗಿ ಈ ರೀತಿಯ ಕಪ್ಪು ವರ್ತುಲ ಸೃಷ್ಟಿಯಾಗುತ್ತದೆ. ಜೊತೆಗೆ ದೇಹದಲ್ಲಿ ರಕ್ತದ ಕೊರತೆಯಿದ್ದರೂ ಇದು ಕಾಣಿಸಿಕೊಳ್ಳಬಹುದು.

ಕಣ್ಣು ಸುತ್ತ ಕಪ್ಪಿದ್ಯಾ? ಹೀಗ್ ಮಾಡಿದ್ರೆ ಸರಿ ಹೋಗುತ್ತೆ

- ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಎಂಬ ಹಂಬಲಕ್ಕೆ ಸಿಕ್ಕ ಸಿಕ್ಕ ಕ್ರೀಂಗಳನ್ನು ಬಳಸುತ್ತಾರೆ. ಹೀಗೆ ಬಳಸುವುದರಿಂದ ಡಾರ್ಕ್ ಸರ್ಕಲ್‌ ಬರಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

- ಹೆಚ್ಚು ಬಿಸಿಲಿನಲ್ಲಿ ಓಡಾಡಿದರೆ ಕೆಲವರಿಗೆ ಈ ಸಮಸ್ಯೆ ಬರುತ್ತದೆ. ಅತೀ ಬಿಸಿಲಿಗೆ ಮುಖ, ಮೈ ಒಡ್ಡುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ ಬಳಲಿಕೆ ಉಂಟಾಗುತ್ತದೆ. ಆಗ ಕಣ್ಣಿನ ಕೆಳಭಾಗದ ಚರ್ಮ ಹೆಚ್ಚು ಕಪ್ಪಗಾಗಿ ಮುಖದ ಚರ್ಮದ ಬಣ್ಣಕ್ಕಿಂತ ಭಿನ್ನವಾಗಿ ಕಾಣಬಹುದು.

ಸರ್ಜರಿ ಹಾಗೂ ಫೇಷಿಯಲ್‌

ಈ ಸಮಸ್ಯೆಗೆ ಆಧುನಿಕ ಸೌಂದರ್ಯ ಚಿಕಿತ್ಸೆಗಳಿವೆ. ಇದಕ್ಕಾಗಿಯೇ ಈಗ ಲೇಸರ್‌ ಚಿಕಿತ್ಸೆಗಳು ಬಂದಿವೆ. ಇನ್ನೊಂದು ವಿಧಾನವೆಂದರೆ ಬ್ಲೆಫರೋಪ್ಲಾಸ್ಟಿ. ಇದು ಚರ್ಮವನ್ನು ಟ್ರಿಮ್‌ ಮಾಡುತ್ತದೆ. ಬೇಡದ ಚರ್ಮವನ್ನು ತೆಗೆಯುತ್ತದೆ. ಆದರೆ ಈ ಚಿಕಿತ್ಸೆ ಕೊಂಚ ದುಬಾರಿ. ಜನಸಾಮಾನ್ಯರಿಗೆ ಅಷ್ಟುಸುಲಭಕ್ಕೆ ಎಟುಕುವಂಥದ್ದಲ್ಲ.

ಸಿಂಪಲ್‌ ಟ್ರಿಕ್‌ ಬಳಸಿ ಡಾರ್ಕ್ ಸರ್ಕಲ್‌ ಇಳಿಸಿ

- ಬದುಕಿನ ಜಂಟಾಟಗಳಿಂದ ಮುಕ್ತರಾಗಿ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿ.

- ಹೆಚ್ಚೆಚ್ಚು ಹಸಿರು ತರಕಾರಿಗಳನ್ನು ಸೇವನೆ ಮಾಡಿ.

- ಮದ್ಯಪಾನ, ಧೂಮಪಾನದಂತಹ ಚಟಗಳನ್ನು ತ್ಯಜಿಸಿ.

- ಅತಿಯಾಗಿ ಸೌಂದರ್ಯ ವರ್ಧಕಗಳನ್ನು ಬಳಸಬೇಡಿ.

- ಪೌಷ್ಟಿಕಾಂಶಯುಕ್ತ ಕಾಳುಗಳನ್ನು ಸೇವನೆ ಮಾಡಿ.

- ಆಲೂಗಡ್ಡೆ ಅಥವಾ ಸೌತೆಕಾಯಿ ರಸವನ್ನು ಕಪ್ಪು ವರ್ತುಲದ ಸುತ್ತ ಹಚ್ಚಿ.

- ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಿ.

ಇಂದಿನ ಒತ್ತಡ ಬದುಕಿನಲ್ಲಿ ಈ ಕಪ್ಪು ವರ್ತುಲ ಬಡವ, ಶ್ರೀಮಂತ ಎನ್ನದೇ ಎಲ್ಲರನ್ನು ಆವರಿಸಿಕೊಳ್ಳುತ್ತಿದೆ. ಇದರಿಂದ ವ್ಯಕ್ತಿ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಕಪ್ಪು ವರ್ತುಲದ ಬಗ್ಗೆ ಹೆಚ್ಚು ಗಮನ ಹರಿಸುವುದು ಅವಶ್ಯ. ಹೀಗಾಗಿ ನಮ್ಮ ಜೀವನ ಕ್ರಮದಲ್ಲಿ ಹಾಗೂ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ.

Follow Us:
Download App:
  • android
  • ios