Asianet Suvarna News Asianet Suvarna News

ಯುವಕನ ಎದೆಯಿಂದ ಫುಟ್‌ಬಾಲ್ ಗಾತ್ರದ ಗಡ್ಡೆ ತೆಗೆದ ಫೋರ್ಟಿಸ್ ಆಸ್ಪತ್ರೆ ವೈದ್ಯರು

* ಯುವಕನ ಎದೆಯಿಂದ ಬೃಹತ್ ಗಾತ್ರದ ಗಡ್ಡೆಯನ್ನು ತೆಗೆದ ಫೋರ್ಟಿಸ್ ಆಸ್ಪತ್ರೆ ವೈದ್ಯರು
* ಯುವಕನ ಎದೆಯೊಳಗೆ ಫುಟ್‌ಬಾಲ್ ಗಾತ್ರದಷ್ಟಿದ್ದ ಗಡ್ಡೆ
 * ಇದು ವಿಶ್ವದಲ್ಲೇ ಅತಿ ದೊಡ್ಡ ಗಡ್ಡೆ 

Bengaluru Fortis Hospital doctors removed world largest tumor from Youth chest rbj
Author
Bengaluru, First Published Oct 21, 2021, 5:18 PM IST
  • Facebook
  • Twitter
  • Whatsapp

ಬೆಂಗಳೂರು, (ಅ.21): ವಿಶ್ವದಲ್ಲೇ ಮೊದಲ ಬಾರಿಗೆ 25 ವರ್ಷ ಯುವಕನ ಎದೆಯಲ್ಲಿ ಬೆಳೆದಿದ್ದ 13.85 ಕೆ.ಜಿ. ಬೃಹತ್ ಗಡ್ಡೆಯನ್ನು ಬೆಂಗಳೂರಿನ(Bengaluru)  ಫೋರ್ಟಿಸ್ ಆಸ್ಪತ್ರೆ (Fortis Hospital) ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.  ಇದು ವಿಶ್ವದಲ್ಲೇ ಅತಿ ದೊಡ್ಡ ಗಡ್ಡೆ ಎನ್ನಲಾಗಿದೆ.

ಈ ಬಗ್ಗೆ ವರ್ಚುವಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಿಟಿವಿಎಸ್ ನಿರ್ದೇಶಕ ಡಾ. ಉದ್ದೀತ್ ಧೀರ್, 2015ರಲ್ಲಿ 9.5 ಕೆ.ಜಿ ತೂಕದ ಚೆಸ್ಟ್‌ ಗಡ್ಡೆಯನ್ನು (Tumor) ಗುಜರಾತ್ ಆಸ್ಪತ್ರೆಯೊಂದರಲ್ಲಿ ತೆಗೆಯಲಾಗಿತ್ತು. ಇದೇ ದೊಡ್ಡ ಟ್ಯೂಮರ್ ಎನ್ನಲಾಗಿತ್ತು.  ಆದರೀಗ, 13.85 ಕೆ.ಜಿ. ತೂಕದ ಟ್ಯೂಮರ್‌ನನ್ನು ತೆಗೆಯಲಾಗಿದ್ದು, ಇದು ವಿಶ್ವದಲ್ಲೇ ದೊಡ್ಡ ಟ್ಯೂಮರ್ ಎನ್ನಲಾಗಿದೆ. ಅಲ್ಲದೆ ಇದು ಫುಟ್‌ಬಾಲ್ ಗಾತ್ರದಷ್ಟಿದೆ ಎಂದು ವೈದ್ಯರು ವಿವರಿಸಿದರು.

ಮಹಿಳೆಯ ದೇಹದಿಂದ 54 ಕೇಜಿ ತೂಕದ ಗಡ್ಡೆ ಹೊರಕ್ಕೆ!

ಪ್ರಕರಣದ ವಿವರ: 
ದೇವೇಶ್ ಶರ್ಮಾ ಎಂಬ 25 ವರ್ಷದ ಯುವಕ ಕಳೆದ 2-3 ತಿಂಗಳಿನಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಸಿಟಿ ಸ್ಯಾನ್ ಮಾಡಿಸಿದ ಬಳಿಕ ಎದೆಗೂಡಿನಲ್ಲಿ ಶೇ.90ರಷ್ಟು ಭಾಗ ಬೃಹತ್  ಗಾತ್ರದ ಟ್ಯೂಮರ್ ಬೆಳೆದಿರುವುದು ಗಮನಕ್ಕೆ ಬಂದಿತ್ತು. ಇದು ವೈದ್ಯ ಲೋಕಕ್ಕೆ ಸವಾಲಾಗಿತ್ತು. 

ಇಷ್ಟು ದೊಡ್ಡ ಪ್ರಮಾಣದ ಟ್ಯೂಮರ್ ತೆಗೆಯುವುದು ಅಸಾಧ್ಯ. ಏಕೆಂದರೆ, ಟ್ಯೂಮರ್ ತೆಗೆಯಲು ಅರಿವಳಿಕೆ ನೀಡುವುದರಿಂದ ಟ್ಯೂಮರ್‌ನ ಭಾರ ಹೆಚ್ಚಾಗಿ ಹೃದಯ ಸಂಕುಚಿತಗೊಂಡು ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅರಿವಳಿಕೆ ನೀಡುವ ಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಮ್ಮ ತಂಡ ನಿರ್ವಹಿಸಿತು. 

ಮತ್ತೊಂದು ಸವಾಲಿನ ವಿಷಯ ಎಂದರೆ, ರೋಗಿಯ ರಕ್ತದ ಗುಂಪು ಎಬಿ ನೆಗೆಟಿವ್, ಇದು ಅಪರೂಪದ ರಕ್ತದ ಗುಂಪು ಆಗಿದ್ದರಿಂದ ರಕ್ತದ ಹರಿವಿನ ಬಗ್ಗೆ ಹೆಚ್ಚು ಜಾಗರೂಕತೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. 4 ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆ ಬಳಿಕ ಅತಿದೊಡ್ಡ ಟ್ಯೂಮರ್‌ನನ್ನು ಹೊರ ತೆಗೆಯಲಾಗಿದ್ದು, ರೋಗಿಯೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

Follow Us:
Download App:
  • android
  • ios