ಬೂಸ್ಟರ್ ಡೋಸ್ ಆರಂಭಕ್ಕೂ ಮುನ್ನ ಕೋವಿಶೀಲ್ಡ್, ಕೋವ್ಯಾಕ್ಸಿನ್ ಬೆಲೆಗಳಲ್ಲಿ ಭಾರಿ ಇಳಿಕೆ!

ಭಾನುವಾರದಿಂದ ದೇಶಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ ವ್ಯಕ್ತಿಗಳು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಬೆನ್ನಲ್ಲಿಯೇ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಬೆಲೆಗಳಲ್ಲಿ ಭಾರಿ ಕಡಿತ ಮಾಡಲಾಗಿದೆ.

Before Booster Drive Begins Covishield Covaxin Covid vaccine Prices slashed by more than half san

ನವದೆಹಲಿ (ಏ.9): ಕೋವಿಡ್ ಲಸಿಕೆಯ (Covid 19 Vaccine) ಬೂಸ್ಟರ್ ಡೋಸ್ ಗಳು (Booster Dose) ಎಲ್ಲಾ ಭಾರತೀಯ ವಯಸ್ಕರಿಗೆ ಲಭ್ಯವಾಗುವ ಒಂದು ದಿನದ ಮೊದಲು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ (Covishield ) ಮತ್ತು ಕೋವಾಕ್ಸಿನ್ (Covaxin ) ಬೆಲೆಗಳನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. ಎರಡೂ ಲಸಿಕೆ ಡೋಸ್‌ಗಳ ಬೆಲೆ ಈಗ ರೂ 225 ಆಗಿರುತ್ತದೆ. 

ಕೋವಿಶೀಲ್ಡ್ ಅನ್ನು 600 ರೂಪಾಯಿಯಿಂದ ಕಡಿತಗೊಳಿಸಿದ್ದರೆ, ಕೋವಾಕ್ಸಿನ್ ಪ್ರತಿ ಡೋಸ್‌ಗೆ 1,200 ರೂಪಾಯಿಗಿಂತ ಕಡಿಮೆ ಮಾಡಲಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಾಲಾ (Serum Institute of India CEO Adar Poonawalla ) ಮತ್ತು ಭಾರತ್ ಬಯೋಟೆಕ್ ಸಹ ಸಂಸ್ಥಾಪಕಿ ಸುಚಿತ್ರಾ ಎಲಾ ( Bharat Biotech cofounder Suchitra Ella) ಇಂದು ಟ್ವಿಟರ್‌ನಲ್ಲಿ ಇದನ್ನು ಘೋಷಿಸಿದ್ದಾರೆ. ಕೇಂದ್ರದ ಜತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಪೂನಾವಾಲಾ ಅವರು ಕೋವಿಡ್ ಡೋಸ್ ಖಾಸಗಿ ಕೇಂದ್ರಗಳಲ್ಲಿ 600 ರೂಪಾಯಿ ಆಗಿರಲಿದೆ ಎಂದು ತಿಳಿಸಿದ್ದರು.

"ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿದ ನಂತರ, ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆ ದರವನ್ನು ಪ್ರತಿ ಡೋಸ್‌ಗೆ ರೂ.600 ರಿಂದ 225 ರೂಪಾಯಿಗೆ ಪರಿಷ್ಕರಿಸಲು ಎಸ್ಐಐ ನಿರ್ಧರಿಸಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಬೂಸ್ಟರ್ ಡೋಸ್ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನು ನಾವೆಲ್ಲರೂ ಶ್ಲಾಘನೆ ಮಾಡುತ್ತೇವೆ' ಎಂದು ಪೊನಾವಾಲಾ ಟ್ವೀಟ್ ಮಾಡಿದ್ದಾರೆ.

ಕೋವ್ಯಾಕ್ಸಿನ್ ಬೆಲೆಯನ್ನು ಪ್ರಕಟಿಸಲಾಗುತ್ತಿದೆ. ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್ ಲಭ್ಯವಾಗುವಂತೆ ಮಾಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಕೋವಾಕ್ಸಿನ್ ಬೆಲೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 1200 ರೂಪಾಯಿಯಿಂದ 225 ರೂಪಾಯಿಗೆ ಪರಿಷ್ಕರಿಸಲು ನಿರ್ಧರಿಸಿದ್ದೇವೆ," ಎಂದು ಸುಚಿತ್ರಾ ಎಲಾ ಟ್ವೀಟ್ ಮಾಡಿದ್ದಾರೆ.

18 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 2ನೇ ಡೋಸ್ ಪಡೆದುಕೊಂಡು 9 ತಿಂಗಳು ಪೂರ್ತಿಯಾಗಿರುವ ವ್ಯಕ್ತಿಗಳು ಬೂಸ್ಟರ್ ಡೋಸ್ ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚವಾಲಯ ಶುಕ್ರವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಪೂನಾವಾಲಾ ಕೇಂದ್ರದ ಘೋಷಣೆಯನ್ನು ಮುಕ್ತವಾಗಿ ಸ್ವಾಗತ ಮಾಡಿದ್ದರು. ಇದನ್ನು ನಿರ್ಣಾಯಕ ಮತ್ತು ಸಮಯೋಚಿತ ನಿರ್ಧಾರ ಎಂದು ಕರೆದ ಅವರು, ಹಲವಾರು ದೇಶಗಳು ಬೂಸ್ಟರ್ ಡೋಸ್ ತೆಗೆದುಕೊಳ್ಳದವರ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಹಾಗಾಗಿ ಹೊರ ದೇಶಗಳಿಗೆ ಪ್ರಯಾಣ ಮಾಡಲು ಬಯಸುವ ಜನರು ಮೂರನೇ ಡೋಸ್ ಪಡೆದುಕೊಳ್ಳಬೇಕು ಎಂದು ಹೇಳಿದರು.

18 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್‌ 10 ರಿಂದ ಬೂಸ್ಟರ್ ಡೋಸ್, ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯ!

"ಪ್ರಥಮ ಮತ್ತು ಎರಡನೇ ಡೋಸ್‌ಗಾಗಿ ಸರ್ಕಾರಿ ಲಸಿಕೆ ಕೇಂದ್ರಗಳ ಮೂಲಕ ನಡೆಯುತ್ತಿರುವ ಉಚಿತ ಲಸಿಕೆ ಕಾರ್ಯಕ್ರಮ ಮತ್ತು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಮುಂದುವರಿಯುತ್ತದೆ ಮತ್ತು ಅದನ್ನು ಇನ್ನಷ್ಟು ತೀವ್ರ ಮಾಡಲಾಗುವುದು" ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೂಸ್ಟರ್ ವ್ಯಾಕ್ಸಿನ್ ಹಾಕಿದ್ರೆ Omicron ಭಯದ ಅಗತ್ಯವಿಲ್ಲ

ಇಲ್ಲಿಯವರೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ 2.4 ಕೋಟಿಗೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ. ಕೊರೋನಾ ವೈರಸ್‌ನ ಹೊಸ ರೂಪಾಂತರದ (ಎಕ್ಸ್‌ಇ ರೂಪಾಂತರ) ಸೋಂಕಿನ ಪ್ರಕರಣವು ಬೆಳಕಿಗೆ ಬಂದ ನಂತರ, ಆತಂಕವು ಮತ್ತೊಮ್ಮೆ ಹೆಚ್ಚಾಗಿದೆ. ಏಪ್ರಿಲ್ 6 ರಂದು, ಮುಂಬೈನ ನಾಗರಿಕ ಸಂಸ್ಥೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಕೊರೋನಾ ವೈರಸ್‌ನ ಹೊಸ XE ರೂಪಾಂತರದ ಒಂದು ಪ್ರಕರಣವು ನಗರದಲ್ಲಿ ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ.  ಭಾರತದಲ್ಲಿ ಕೊರೋನಾ ಲಸಿಕೆಗಳ ಸಂಖ್ಯೆ 185.38 ಕೋಟಿ ದಾಟಿದೆ. ಏಪ್ರಿಲ್ 8 ರ ಹೊತ್ತಿಗೆ ಭಾರತದ COVID-19 ವ್ಯಾಕ್ಸಿನೇಷನ್ ಕವರೇಜ್ 185.38 ಕೋಟಿಗಳನ್ನು ದಾಟಿದೆ. 12 ರಿಂದ 14 ವರ್ಷ ವಯಸ್ಸಿನ ಹದಿಹರೆಯದವರಿಗೆ COVID-19 ಲಸಿಕೆಯನ್ನು ಮಾರ್ಚ್ 16, 2022 ರಂದು ಪರಿಚಯಿಸಲಾಯಿತು. ಇದುವರೆಗೆ 2.11 ಕೋಟಿಗೂ ಹೆಚ್ಚು ಹದಿಹರೆಯದವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

Latest Videos
Follow Us:
Download App:
  • android
  • ios